ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಂದು ಎಸ್ಎಂಎಸ್ ವ್ಯವಸ್ಥೆ ಬದಲಾಯಿಸುತ್ತೆ!

By ಶ್ರೀಧರ ಕೆದಿಲಾಯ, ಉಡುಪಿ
|
Google Oneindia Kannada News

ಸಮಾಜಮುಖಿ ಹೋರಾಟಕ್ಕೆ ಹೊಸ "ದಾರಿ' ಚಳವಳಿ, ಹೋರಾಟ, ಪ್ರತಿಭಟನೆ, ಧರಣಿ, ಮುಷ್ಕರ, ಸತ್ಯಾಗ್ರಹ ಇತ್ಯಾದಿ ಮಾಡಿ ಸುಸ್ತಾದವರಿಗೆ ಹೊಸ ದಾರಿ. ಕಿಲುಬೆದ್ದು ಹೋದ ಅಧಿಕಾರ ವ್ಯವಸ್ಥೆ, ಅಧಿಕಾರಕ್ಕೆ ಆಂಟಿ ಕೊಂಡು ಗಬ್ಬೆದ್ದು ಹೋದ ರಾಜಕೀಯ ವ್ಯವಸ್ಥೆಗೆ ಬಿಸಿ ಮುಟ್ಟಿಸಲು ಹೀಗೊಂದು ಸಂಘಟನೆ ಹುಟ್ಟಿಕೊಂಡಿದೆ. ತಮ್ಮ ಎಸ್ಸೆಎಂಎಸ್ ಅಭಿಯಾನವನ್ನು 'ಕಿರಿ ಕಿರಿ' ಹೋರಾಟ ಎಂದೇ ಕರೆದುಕೊಂಡಿದ್ದಾರೆ. ಭ್ರಷ್ಟ ಅಧಿಕಾರಿಗಳಿಗೆ ಕಿರಿಕಿರಿ ಉಂಟು ಮಾಡುವುದು ಹೇಗೆ? ಇದರಿಂದ ವ್ಯವಸ್ಥೆ ಹೇಗೆ ಬದಲಾಯಿಸಬಹುದು? ಮುಂದೆ ಓದಿ...

ಸಾಮಾಜಿಕ ಕಳಕಳಿ ಇರುವ ಯುವಕ, ಯುವತಿಯರಲ್ಲಿ ಮನವಿ. ನೀವು ಕಳಿಸುವ ಒಂದು ಎಸ್ ಎಂಎಸ್ ಅಥವಾ ಕರೆಯು ನೂರಾರು ಜನರಿಗೆ ಉಪಕಾರವಾಗಬಹುದು. ಎಷ್ಟೋ ಬಡವರ ಬಹುದಿನಗಳ ಕನಸಿನ ಬೆಳಕು ಆಗಬಹುದು ಎಂದು ಪೀಠಿಕೆ ಹಾಕಿ ಮನವಿ ಮಾಡುವ ಸಂಘಟನೆಯ ಹೆಸರೇ ದಾರಿ. ಇದು ಹೋರಾಟದ ಹೊಸ ದಾರಿಯೂ ಹೌದು. ಹೋರಾಟಕ್ಕೆ ಕೇಜ್ರಿವಾಲ್ ಆಗಬೇಕಿಲ್ಲ. ಅಣ್ಣಾ ಹಜಾರೆಯೇ ಬೇಕಿಲ್ಲ. ಭಾರತದ ಯಾವನೇ ಒಬ್ಬ ಪ್ರಜೆ ಆಗಬಹುದಲ್ಲ!

ನ್ಯಾಯ ಬದ್ದ ರೀತಿಯಲ್ಲಿ ಮಾತನಾಡುವುದು ಸಂವಿದಾನ ಕೊಟ್ಟ ಹಕ್ಕು . ಕೆಲವರಿಗೆ ಅವರು ದೊಡ್ಡ ಅಧಿಕಾರಿ / ಇವರು ದೊಡ್ಡ ರಾಜಕಾರಣಿ ಎಂಬ ಭಾವನೆ . ಕೆಲವರಿಗೆ ಉದಾಸಿತನ. ಕೆಲವರಿಗೆ ಮಾತನಾಡಲು ಮುಜುಗರ, ಕೆಲವರಿಗೆ ಧೈರ್ಯ ಇಲ್ಲ .. ಅವರು ಮುಖ್ಯ ಮಂತ್ರಿ , ಇವರು ದೊಡ್ಡ I.A.S ಆಫೀಸರ್ .. ನಮಗೆ ಸಂವಿದಾನ ಕೊಟ್ಟ ಹಕ್ಕು ಕೊಟ್ಟಿದೆ ಅದನ್ನು ನಿರ್ಭಿತರಾಗಿ ಹಕ್ಕನ್ನು ಕರೆ ಅಥವಾ ಎಸ್. ಎಂ. ಎಸ್ ಮೂಲಕ ಚಲಾಹಿಸಿ ಹೆಮ್ಮೆಯ ಬಾರತೀಯ ಎನಿಸಿಕೊಳ್ಳಿ. ಇದು ಒಂದು ಸಂದೇಶ, ಕರೆಯ ಮೂಲಕ ಹೋರಾಟ. 'ಮಾತಾಡು ಇಂಡಿಯಾ' ಎನ್ನುವ ಹೊಸ ಚಳವಳಿ.

ಸಂವಿಧಾನದತ್ತ ವಾಕ್ ಸ್ವಾತಂತ್ಯ ಬಳಸಿ

ಸಂವಿಧಾನದತ್ತ ವಾಕ್ ಸ್ವಾತಂತ್ಯ ಬಳಸಿ

ಹಣ ಅಥವಾ ಸಮಯ ವ್ಯರ್ಥ ಮಾಡದೇ, ಬಡವರ ಹಾಗೂ ಶೋಷಿತ ವರ್ಗದ ಜನರಿಗೆ ಉಪಕಾರ ಮಾಡುವ ಕ್ರಿಯೆ. ಭಾರತದ ಸಂವಿಧಾನ ನೀಡಿದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ (articles 19, 20, 21 and 22, of the constitution of India)ಎಷ್ಟೋ ಜನರಿಗೆ ಪ್ರಸ್ತುತ ವ್ಯವಸ್ಥೆಯ ಬಗ್ಗೆ ಅಸಮಾಧಾನ ಇದೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ವ್ಯವಸ್ಥೆಯ ಅನ್ಯಾಯದ ವಿರುದ್ಧ ಯುವಕ ಯುವತಿಯರಿಗೆ ಬೀದಿಗೆ ಬಂದು ಪ್ರತಿಭಟನೆ ಮಾಡಲು ಸಮಯ ಇಲ್ಲ. ಆದರೆ ಎಲ್ಲರ ಕೈಯಲ್ಲೂ ಎರಡೋ, ಮೂರೋ ಮೊಬೈಲ್ ಅಂತೂ ಇದ್ದೇ ಇರುತ್ತದೆ.

ಕೆಲವರಿಗೆ ಯಾವುದೇ ಸಂಘಟನೆ, ಪಕ್ಷಗಳಲ್ಲಿ ಗುರುತಿಸಿಕೊಳ್ಳಲು ಇಷ್ಟ ಇರುವುದಿಲ್ಲ. ಆದ್ದರಿಂದ ಸಂವಿಧಾನದತ್ತ ವಾಕ್ ಸ್ವಾತಂತ್ಯ ಬಳಸಿ. ಈ ಹಕ್ಕನ್ನು ಯಾವ ಜನಪ್ರತಿನಿಧಿಗಳು, ಅಧಿಕಾರಿಗಳು ಕಸಿಯಲು ಸಾಧ್ಯವಿಲ್ಲ. ಜನಪ್ರತಿನಿಧಿಗಳನ್ನೂ ಅಧಿಕಾರಿಗಳನ್ನೂ ಒಂದು ಎಸ್ ಎಂಎಸ್ ಅಥವಾ ಕರೆಯ ಮೂಲಕ ಎಚ್ಚರಿಸಿ ಪ್ರಜಾಪ್ರಭುತ್ವದ ನೈಜ ಪ್ರಭುವಿನಂತೆ ಸ್ವಾಭಿಮಾನ ಇಟ್ಟುಕೊಂಡು ಎದೆಗಾರಿಕೆಯಿಂದ ಅಧಿಕಾರ ಚಲಾಯಿಸಬಹುದು. ನಾವೇ ರಾಜಕಾರಣಿ ಮತ್ತು ಅದಿಕಾರಿ ವರ್ಗ ದವರನ್ನು ದೊಡ್ಡ ಜನ ಮಾಡವುದು . ಮತ್ತೆ ಅವರೇ ನಮ್ಮನ್ನು ಶೋಷಣೆ ಮಾಡುವುದು ..

ಜನ ಸಾಮಾನ್ಯರಿಗಾಗಿ ದಾರಿ ಹೋರಾಟ

ಜನ ಸಾಮಾನ್ಯರಿಗಾಗಿ ದಾರಿ ಹೋರಾಟ

ಬಸ್ ‌ನಲ್ಲಿ ಸೀಟಿನ ಮಿತಿಗಿಂತ ಜಾಸ್ತಿ ಜನರನ್ನು ಹಾಕುವ ಆಗಿಲ್ಲ .ಇದು ಸಾರಿಗೆ ಕಾನೂನು ಹಾಗೂ ಸರ್ವೋಚ್ಚ ನ್ಯಾಯಾಲಯ ,ಉಚ್ಚ ನ್ಯಾಯಾಲಯದ ಆದೇಶ. ಹಾಗಿದ್ದರೂ ನಮಗೆ ಯಾಕೆ ಉಸಾಬರಿ ಎಂದು ಕೂರುವವರೇ ಹೆಚ್ಚು. ನಮಗೆ ಸೀಟ್ ‌ ಸಿಕ್ಕರೆ ಎಂಬ ಉದಾಸಿತನ. ಇದರಿಂದ ಮಹಿಳೆಯರಿಗೆ, ವೃದ್ಧರಿಗೆ, ಶಾಲಾ ಮಕ್ಕಳಿಗೆ ಅನನುಕೂಲವಾದರೂ ನಮಗ್ಯಾಕೆ ತಂಟೆ ಎನ್ನುತ್ತೇವೆ. 50 ಸೀಟ್ ‌ ಸಾಮರ್ಥ್ಯದ 1 ಬಸ್‌ ಓಡಿಸಿ 340 ಪಾಸ್ ‌ ನೀಡುವ ಇಲಾಖೆ!. ಸಾರಿಗೆ ಇಲಾಖೆಯ ನಿರ್ಲಕ್ಷ್ಯ ಧೋರಣೆಯಿಂದ ಆದ ಸಮಸ್ಯೆಗೆ ನಿಮ್ಮ ಒಂದು ಎಸ್ ‌ಎಂಎಸ್ ‌ ಅಥವಾ ಕರೆಗೆ ತೊಂದರೆ ನಿವಾರಣೆ ಮಾಡುವ ತಾಕತ್ತು ಇದೆ.

ಎಸ್ ಎಂಎಸ್ ಗ್ರಾಮಕ್ಕೆ ವಿದ್ಯುತ್ ತಂದುಕೊಟ್ಟಿದೆ

ಎಸ್ ಎಂಎಸ್ ಗ್ರಾಮಕ್ಕೆ ವಿದ್ಯುತ್ ತಂದುಕೊಟ್ಟಿದೆ

ಮಚ್ಚಿನ ಗ್ರಾಮದ ಕೋಡಿಯೇಲು ಪರಿಸರದ ಜನ ಹೀಗೇ ಪ್ರತಿದಿನ ಎಸ್ ‌ಎಂಎಸ್ ಮಾಡಿ ವಿದ್ಯುತ್ ಸಂಪರ್ಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ದಾರಿ ಸಂಘಟನೆ ಫೇಸ್ ‌ಬುಕ್ ಮೂಲಕ ದೃಶ್ಯ ಮಾಧ್ಯಮ ಪತ್ರಿಕೆಗಳಲ್ಲಿ ಬಂದ ಸಮಸ್ಯೆಗಳ ಮಾದ್ಯಮ ವರದಿಯನ್ನು ಹಾಕಿ ಅದಕ್ಕೆ ಸಂಬಂಧಪಟ್ಟ ಅಧಿಕಾರಿ, ಜನಪ್ರತಿನಿಧಿಗಳ ಮೊಬೈಲ್ ಸಂಖ್ಯೆ ಹಾಕುತ್ತಿದೆ. ಇದರಿಂದ ಸಾರ್ವಜನಿಕರು ಸುಲಭವಾಗಿ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆ ನಿವಾರಣೆಗೆ ಪ್ರಯತ್ನಿಸಬಹುದು. ಕಾರ್ಯಸಾಧನೆಗೆ ಅನೇಕ ದಾರಿ. ಪಲಾಯನಕ್ಕೆ ಒಂದೇ ದಾರಿ. ಮನಸ್ಸಿದ್ದರೆ ನೂರೆಂಟು ದಾರಿ!

ಸುಲಭವಾಗಿ ಎಚ್ಚರಿಸುವ ಕಾರ್ಯ

ಸುಲಭವಾಗಿ ಎಚ್ಚರಿಸುವ ಕಾರ್ಯ

ನಮ್ಮ ದೇಶದಲ್ಲಿ ಸುಮಾರು 30 ಕೋಟಿಗೂ ಅಧಿಕ ಮೊಬೈಲ್ ಚಂದಾದಾರರು ಒಂದು ಸರ್ವೇ ಪ್ರಕಾರ ಇದ್ದಾರೆ. ಕೈ ಯಲ್ಲಿ ಎಲ್ಲರ ಹತ್ತಿರ ಫೋನ್ ಇರುವ ಈ ಸಂದರ್ಭಗಳಲ್ಲಿ ಬಡ ವರ್ಗ ಮತ್ತು ಶೋಷಿತರ ಬಗ್ಗೆ ಕಾಳಜಿ, ಮತ್ತು ಭ್ರಷ್ಟಾಚಾರ ವಿರುದ್ಧ ಹೋರಾಟ ಹಾಗೂ ಸಾಮಾಜಿಕ ನ್ಯಾಯವನ್ನು ಎತ್ತಿ ತೋರಿಸುವ ಸಲುವಾಗಿ ಇಂತಹ ಹೋರಾಟ ಅನಿವಾರ್ಯವಾಗಿದೆ. ಇಂತಹ ಹೋರಾಟದಿಂದ ಜನಪ್ರತಿನಿಧಿ ಹಾಗೂ ಅಧಿಕಾರಿ ವರ್ಗದವರನ್ನು ಸದಾ ಜಾಗೃತಗೊಳಿಸಬಹುದು.

ಪ್ರಜಾಪ್ರಭುತ್ವದಲ್ಲಿ ಈ ಎಲ್ಲ ವ್ಯವಸ್ಥೆ ನಮ್ಮ ತೊಂದರೆಯನ್ನು ನಿವಾರಿಸಲು ತೆರಿಗೆ ರೂಪದಲ್ಲಿ ಸಂಬಳ ಕೊಟ್ಟು ಅಧಿಕಾರಿ / ರಾಜಕಾರಣಿ ಗಳನ್ನೂ ಕೆಲಸಕ್ಕೆ ಇಡುವುದು. ನಿಮ್ಮ ಮನೆಯಲ್ಲಿ ಕೆಲಸ ಮಾಡಿಸುತ್ತಿರುವಾಗ ಸಂಬಳ ಕೊಟ್ಟಷ್ಟು ಚೊಕ್ಕವಾಗಿ ಕೆಲಸ ಮಾಡಿಸುತ್ತಿಲ್ಲವೇ ?

ಪ್ರಜೆಗಳೇ ನಾವುಗಳು ಪ್ರಭುಗಳು

ಪ್ರಜೆಗಳೇ ನಾವುಗಳು ಪ್ರಭುಗಳು

ಸಾರ್ವಜನಿಕ ಅಧಿಕಾರಿ ಅಂದರೆ ಸರಕಾರಿ ನೌಕರ. ಸರಕಾರ ಪ್ರಜೆಗಳೇ ನಾವುಗಳು ಪ್ರಭುಗಳು ಎಂದು ಕರ್ತವ್ಯ ನೆನೆಪಿಸುವ ವಿಧಾನ.ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿ ಯಲ್ಲಿ 25 ಜನರ ತಂಡ ಇದ್ದರೆ ಸಾಕು. ಉದಾಹರಣೆಗೆ ತನ್ನ ಪಂಚಾಯಿತಿವ್ಯಾಪ್ತಿಯಲ್ಲಿ ಅಭಿವೃದ್ಧಿ ಅಧಿಕಾರಿಗೆ ಅರ್ಜಿ ಕೊಟ್ಟು ಅವರುಗಳು ಕೆಲಸ ಮಾಡದೆ ಇದ್ದ ಪಕ್ಷದಲ್ಲಿ . ಹಿಂಬರಹ ನೀಡುದಕ್ಕೆ ಆಲೆದಾಡಿಸುವ ಸಂದರ್ಭ ಬಂದರೆ ನೇರ ಜಿಲ್ಲಾ ಪಂಚಾಯತ್ ಮುಖ್ಯಾ ಕಾರ್ಯ ನಿರ್ವಾಣ ಅಧಿಕಾರಿ ಗಳಿಗೆ ಎಲ್ಲಾ ಸದಸ್ಯರು ಸೇರಿ ಫೋನ್ ಮೂಲಕ ಸಂಪರ್ಕಿಸಿ,

ತನ್ನ ಸಮಸ್ಯೆ ಬಗೆಯುವ ತನಕ s.m.s ಅಥವಾ call ಮಾಡುವುದು .. ಒಮ್ಮೆ ಅರ್ಜಿ ಕೊಟ್ಟರೆ ಸಾಕು .. ಉತ್ತರ ಕೊಡ ಬೇಕಾದವರು ಅಧಿಕಾರಿ / ರಾಜಕಾರಣಿಗಳು .. ತಹಶೀಲ್ದಾರರು ಕೆಲಸ ಮಾಡದಿದ್ದರೆ ನೇರ ಜಿಲ್ಲಾಧಿಕಾರಿ ಯನ್ನು ಸಂಪರ್ಕಿಸುವುದು . ಅವರು ಉತ್ತರ ಕೊಡಲೇ ಬೇಕು .

ಸಂಘಟನೆ ಮೂಲಕ ಜನಾಭಿಪ್ರಾಯ ಸಂಗ್ರಹಿಸಿ

ಸಂಘಟನೆ ಮೂಲಕ ಜನಾಭಿಪ್ರಾಯ ಸಂಗ್ರಹಿಸಿ

ದಾರಿ- ಮಂಗಳೂರಿನ ಒಂದಷ್ಟು ಗೆಳೆಯರು ಸೇರಿ 'ದಾರಿ' ಎನ್ನುವ ಸಂಘಟನೆ ಕಟ್ಟಿಕೊಂಡಿದ್ದಾರೆ. ದಾರಿ ಅಂದರೆ ''democratic ambassador for all India rural integrity". ನಿಮ್ಮ ಊರಿನಲ್ಲಿ ಸಮಸ್ಯೆ ಇದ್ದರೆ ಇಂತಹ ಸಂಘಟನೆಯ ಮೂಲಕ ಜನಾಭಿಪ್ರಾಯ ಸಂಗ್ರಹಿಸಿ. ನಿಮ್ಮ ನಿಮ್ಮ ಊರಿನ ಸಮಸ್ಯೆ ಯನ್ನು ಒಂದೇ ಒಂದು ಅಮೂಲ್ಯವಾದ ಎಸ್ ಎಂಎಸ್ ಅಥವಾ ಕರೆ ಮಾಡಿ ಬಗೆಹರಿಸಿ ಕೊಳ್ಳಿ, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :[email protected] and http://daarimangalore.blogspot.in/

ಲೋಕಾಯುಕ್ತ ಸಂಸ್ಥೆಯೂ ಕೂಡಾ ಜನರೊಡನೆ ಇದೇ ರೀತಿ ನೇರ ಸಂಪರ್ಕ ಹೊಂದುವ ಕಾರ್ಯಕ್ಕೆ ಮುಂದಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Daari (Democratic Ambassador for All India Rural Integrity, which in its abbreviated form means ‘path’ in Kannada), a Mangalore-based group have been experimenting with what they call ‘kiri-kiri horata’ (struggle of ‘irritation’) over the past year to some success. The concept takes its genesis in Machina, Beltangady
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X