ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆತಂಕ ಮೂಡಿಸಿದ ತೌಕ್ತೆ ಚಂಡಮಾರುತ: ಎಲ್ಲೆಡೆ ಹೈಅಲರ್ಟ್

|
Google Oneindia Kannada News

ತಿರುವನಂತಪುರಂ, ಮೇ 15: ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ 'ತೌಕ್ತೆ' ಚಂಡಮಾರುತ ರಚನೆ ಆಗಿದ್ದು, ಇದರ ಚಲನೆ ಕೇರಳದ ಕರಾವಳಿಗೆ ಸಮಾನಾಂತರವಾಗಿ ಉತ್ತರದ ಕಡೆಗೆ ಬೀಸುತ್ತಿದೆ.

Recommended Video

ಕೊರೊನ ಗೆದ್ದ ಕೇರಳಕ್ಕೆ ಎದುರಾಯ್ತು ತೌಕ್ತೆ ಚಂಡಮಾರುತ | Oneindia Kannada

ಉತ್ತರ ಕೇರಳ ಮತ್ತು ಉತ್ತರ ಕರ್ನಾಟಕದ ನಡುವೆ ತಲುಪುವಾಗ ಸೈಕ್ಲೋನ್​ ಚಂಡಮಾರುತವಾಗಿ ಬದಲಾಗಳಿದ್ದು, ಸಮುದ್ರ ಪರಿಸ್ಥಿತಿಗಳನ್ನು ಪರಿಗಣಿಸಿ ಕೇರಳ ಕರಾವಳಿಯ ಎಲ್ಲ ಮೀನುಗಾರಿಕೆ ಚಟುವಟಿಕೆಗಳನ್ನು ಕೇರಳ ಸರ್ಕಾರ ನಿಲ್ಲಿಸಿದೆ.

ಕೇರಳವು ಚಂಡಮಾರುತದ ನೇರ ಪಥದಲ್ಲಿ ಬರದಿದ್ದರೂ, ಕೇರಳದ ಮೇಲೆ ಇದು ಹೆಚ್ಚು ಪರಿಣಾಮ ಬೀರಲಿದೆ. ಕೇರಳದ ವಿವಿಧ ಭಾಗಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಈ ಹಿನ್ನೆಲೆ ವಿವಿಧ ಜಿಲ್ಲೆಗಳಲ್ಲಿ ರೆಡ್​ ಮತ್ತು ಆರೆಂಜ್​ ಅಲರ್ಟ್ ಘೋಷಿಸಲಾಗಿದೆ.

Cyclone Tauktae: High Alert On Western Coastal

ಚಂಡಮಾರುತ ತೀವ್ರಗೊಂಡ ನಂತರ ಗುಜರಾತ್ ಕಡೆಗೆ ಸಾಗುವಾಗ ಚಂಡಮಾರುತದ ಪಥವು ಕೇರಳ ಕರಾವಳಿಗೆ ಸಮಾನಾಂತರವಾಗಲಿದೆ. ಇನ್ನು ಈ ಚಂಡಮಾರುತದಿಂದ 24 ಗಂಟೆಗಳಲ್ಲಿ 204 ಮಿ.ಮೀ ಮಳೆಯಾಗುವ ನಿರೀಕ್ಷೆಯಿದೆ.

ಕೇರಳದ ಒಂಬತ್ತು ಜಿಲ್ಲೆಗಳಲ್ಲಿ ಸಹ ಭಾರೀ ಗಾಳಿ ಬೀಸಲಿದೆ ಎಂದು ಐಎಂಡಿ ತಿಳಿಸಿದೆ. ಗಂಟೆಗೆ 60-70 ಕಿ.ಮೀ ವೇಗದಲ್ಲಿ ಬೀಸುವ ಗಾಳಿಯು ತಿರುವನಂತಪುರಂ, ಕೊಲ್ಲಂ, ಪಥನಮತ್ತಟ್ಟ, ಆಲಪ್ಪುಳ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ, ತ್ರಿಶೂರ್ ಮತ್ತು ಮಲಪ್ಪುರಂ ಜಿಲ್ಲೆಗಳಿಗೆ ಅಪ್ಪಳಿಸಬಹುದು ಎಂದು ತಿಳಿಸಲಾಗಿದೆ.

ತಿರುವನಂತಪುರಂ, ಕೊಲ್ಲಂ, ಇಡುಕ್ಕಿ ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ ಈವರೆಗೆ 87 ಜನರನ್ನು ಸ್ಥಳಾಂತರಿಸಿ ರಾಜ್ಯದ ನಾಲ್ಕು ಶಿಬಿರಗಳಲ್ಲಿ ಇರಿಸಲಾಗಿದೆ ಎಂದು ಭೂ ಕಂದಾಯ ಆಯುಕ್ತರು ಮಾಹಿತಿ ನೀಡಿದ್ದಾರೆ.

ತಿರುವನಂತಪುರಂನಲ್ಲಿ 51 ಜನರನ್ನು ಸ್ಥಳಾಂತರಿಸಿ ಶಿಬಿರದಲ್ಲಿ ವಸತಿ ಕಲ್ಪಿಸಲಾಗಿದ್ದು, ಕೊಲ್ಲಂ ಶಿಬಿರದಲ್ಲಿ 24 ಜನರಿದ್ದಾರೆ. ಇಡುಕ್ಕಿಯಲ್ಲಿ ನಾಲ್ಕು ಮತ್ತು ಎರ್ನಾಕುಲಂ ವಿಪತ್ತು ಪರಿಹಾರ ಶಿಬಿರಗಳಲ್ಲಿ ಎಂಟು ಜನರಿದ್ದಾರೆ. ಇನ್ನು ಕರ್ನಾಟಕದ ಕರಾವಳಿ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲೂ ಈ ಚಂಡಮಾರುತ ತನ್ನ ಪ್ರಭಾವ ಬೀರಲಿದ್ದು, ಎರಡೂ ಸರ್ಕಾರಗಳು ಕೂಡ ಮುನ್ನೆಚ್ಚರಿಕೆ ನೀಡಿದೆ.

English summary
Cyclone Tauktae was created by wind depression in the Arabian Sea, which is moving north parallel to the coast of Kerala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X