ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು; ಕರ್ಫ್ಯೂ ನಡುವೆ ಬ್ರಹ್ಮರಥೋತ್ಸವ, ಎಫ್ಐಆರ್‌ಗೆ ಸೂಚನೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಏಪ್ರಿಲ್ 27; ಕೋವಿಡ್ ನಿಯಮ ಉಲ್ಲಂಘಿಸಿ ಬ್ರಹ್ಮರಥೋತ್ಸವ ನಡೆಸಿದ ಮಂಗಳೂರಿನ ಸೋಮೇಶ್ವರ ಸೋಮನಾಥೇಶ್ವರ ದೇವಾಲಯದ ಆಡಳಿತ‌ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ. ವಿ ರಾಜೇಂದ್ರ ಸೂಚಿಸಿದ್ದಾರೆ.

ಬ್ರಹ್ಮರಥೋತ್ಸವದ ವಿಡಿಯೋವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಮಂಗಳೂರು ತಹಶೀಲ್ದಾರ್‌ಗೆ ಸೂಚನೆ ‌ನೀಡಿದ್ದಾರೆ. ಅಲ್ಲದೆ ದೇವಾಲಯದ ಆಡಳಿತ ಮಂಡಳಿಯವರ ವಿರುದ್ಧ ಎಫ್‌ಐಆರ್ ದಾಖಲು ಮಾಡುವಂತೆ ನಿರ್ದೇಶನ ನೀಡಿದ್ದಾರೆ.

ಮಂಗಳೂರು; ಜಾತ್ರೆ ಮಾಡಿದ ದೇವಾಲಯದ ವಿರುದ್ಧ ಪ್ರಕರಣಮಂಗಳೂರು; ಜಾತ್ರೆ ಮಾಡಿದ ದೇವಾಲಯದ ವಿರುದ್ಧ ಪ್ರಕರಣ

ಸರ್ಕಾರದ ಕಠಿಣ ನಿಯಮದ ನಡುವೆಯೂ ಬ್ರಹ್ಮಕಲಶೋತ್ಸವ ಮತ್ತು ಬ್ರಹ್ಮರಥೋತ್ಸವ ನಡೆಸಿದ ಆಡಳಿತ ಮಂಡಳಿ ವಿರುದ್ಧ ಸುಮ್ಮನ್ನಿದ್ದ ದೇವಾಲಯದ ಕಾರ್ಯನಿರ್ವಹಣಾಧಿಕಾರಿಗೂ ಶೋಕಾಸ್ ನೋಟಿಸ್ ನೀಡಲಾಗಿದೆ. ನಿಯಮ ಪಾಲನೆ ಮಾಡದಿದ್ದರೂ ಯಾಕೆ ಕ್ರಮ ಕೈಗೊಂಡಿಲ್ಲ ಎಂಬುವುದರ ಬಗ್ಗೆ ಉತ್ತರಿಸುವಂತೆ ಸೂಚನೆ ನೀಡಲಾಗಿದೆ.

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಹೆಚ್ಚಳ: ಶಿರಡಿ ದೇವಾಲಯ ಬಂದ್ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಹೆಚ್ಚಳ: ಶಿರಡಿ ದೇವಾಲಯ ಬಂದ್

COVID Guidelines Violation FIR Against Someshwara Temple

ಸೋಮವಾರ ಮಂಗಳೂರಿನ ಸೋಮೇಶ್ವರ ಸೋಮನಾಥ ದೇವಸ್ಥಾನದಲ್ಲಿ ಬ್ರಹ್ಮರಥೋತ್ಸವ ಕಾರ್ಯಕ್ರಮ ನಡೆದಿತ್ತು. ಸರ್ಕಾರದ ಆದೇಶವನ್ನು ಮೀರಿಯೂ ದೇವಾಲಯದ ಆಡಳಿತ ಮಂಡಳಿ ಬ್ರಹ್ಮರಥೋತ್ಸವ ವನ್ನು ಮಾಡಿತ್ತು.

ಮಧ್ಯರಾತ್ರಿ ವೇಳೆ ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಿದ ಮಂಗಳೂರು ಪೊಲೀಸರುಮಧ್ಯರಾತ್ರಿ ವೇಳೆ ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಿದ ಮಂಗಳೂರು ಪೊಲೀಸರು

ಈ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದ್ದರು. ಸರ್ಕಾರದ ಕಠಿಣ ನಿಯಮಕ್ಕೆ ಕ್ಯಾರೇ ಅನ್ನದೆ ಸಾರ್ವಜನಿಕರು ಭಾರೀ ಸಂಖ್ಯೆಯಲ್ಲಿ ಸೇರಿದ್ದಲ್ಲದೆ, ಸಾಮಾಜಿಕ ಅಂತರ, ಮಾಸ್ಕ್ ಧರಿಸದೇ ನಿಯಮಗಳನ್ನು ಗಾಳಿಗೆ ತೂರಿದ್ದರು.

English summary
K.V. Rajendra deputy commissioner of Dakshina Kannada directed officials to take action and file FIR against Someshwara temple in Ullal, Mangaluru for not follow COVID guidelines and organized brahmaratosthava.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X