ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು-ಕೇರಳ ನಡುವೆ ಒಂದು ವಾರ ಸರ್ಕಾರಿ ಬಸ್ ಸಂಚಾರವಿಲ್ಲ

|
Google Oneindia Kannada News

ಮಂಗಳೂರು, ಜುಲೈ 13; ಕೇರಳ ರಾಜ್ಯದಲ್ಲಿ ಝೀಕಾ ವೈರಸ್ ಜೊತೆಗೆ ಕೋವಿಡ್ ಪ್ರಕರಣಗಳ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಇದರಿಂದಾಗಿ ಕರ್ನಾಟಕ-ಕೇರಳ ಗಡಿಯಲ್ಲಿ ಕಟ್ಟೆಚ್ಚರವನ್ನು ವಹಿಸಲಾಗಿದೆ. ಕೇರಳದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 1,11,093.

ಕೇರಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಒಂದು ವಾರಗಳ ಕಾಲ ಸರ್ಕಾರಿ ಬಸ್ ಸಂಚಾರವನ್ನು ಆರಂಭಿಸುವುದು ಬೇಡ ಎಂದು ತೀರ್ಮಾನ ಕೈಗೊಳ್ಳಲಾಗಿದೆ. ಜನರ ಆರೋಗ್ಯದ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.

11 ಗ್ರಾಮಗಳ ಹೆಸರು ಬದಲಾವಣೆ; ಕೇರಳ ಸಿಎಂಗೆ ಯಡಿಯೂರಪ್ಪ ಪತ್ರ 11 ಗ್ರಾಮಗಳ ಹೆಸರು ಬದಲಾವಣೆ; ಕೇರಳ ಸಿಎಂಗೆ ಯಡಿಯೂರಪ್ಪ ಪತ್ರ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿಯ ನೇತ್ರಾವತಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಈ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ಕರ್ನಾಟಕದಿಂದ ಕೇರಳಕ್ಕೆ ಜುಲೈ 12ರಿಂದ ಸರ್ಕಾರಿ ಬಸ್ ಸಂಚಾರ ಕರ್ನಾಟಕದಿಂದ ಕೇರಳಕ್ಕೆ ಜುಲೈ 12ರಿಂದ ಸರ್ಕಾರಿ ಬಸ್ ಸಂಚಾರ

COVID Case Raise No Bus Service Between Mangaluru Kerala For Week

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಜುಲೈ 12ರಿಂದ ಬೆಂಗಳೂರು, ಮಂಗಳೂರು, ಮೈಸೂರು ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಿಂದ ಕೇರಳ ರಾಜ್ಯದ ವಿವಿಧ ಪ್ರದೇಶಗಳಿಗೆ ಬಸ್ ಸಂಚಾರ ಆರಂಭ ಮಾಡುವುದಾಗಿ ಹೇಳಿತ್ತು.

ಕೇರಳದಲ್ಲಿ ಝೀಕಾ ವೈರಸ್: ಬಾವಲಿ ಚೆಕ್‌ಪೋಸ್ಟ್‌ನಲ್ಲಿ ತೀವ್ರ ತಪಾಸಣೆ ಕೇರಳದಲ್ಲಿ ಝೀಕಾ ವೈರಸ್: ಬಾವಲಿ ಚೆಕ್‌ಪೋಸ್ಟ್‌ನಲ್ಲಿ ತೀವ್ರ ತಪಾಸಣೆ

ಆದರೆ ಕೋವಿಡ್ ಪ್ರಕರಣಗಳು ಹೆಚ್ಚಾದ ಹಿನ್ನಲೆಯಲ್ಲಿ ಮಂಗಳೂರು-ಕೇರಳ ನಡುವೆ ಒಂದು ವಾರ ಬಸ್ ಓಡಿಸುವುದು ಬೇಡ ಎಂದು ತೀರ್ಮಾನಿಲಾಗಿದೆ. ಈ ಕುರಿತು ಅಧಿಕಾರಿಗಳಿಗೆ ಸಹ ಮಾಹಿತಿ ನೀಡಲಾಗಿದೆ.

ಸೋಮವಾರದ ವರದಿಯಂತೆ ಕೇರಳ ರಾಜ್ಯದಲ್ಲಿ 24 ಗಂಟೆಯಲ್ಲಿ 7798 ಹೊಸ ಪ್ರಕರಣ ದಾಖಲಾಗಿದೆ. 11,447 ಜನರು ಗುಣಮುಖಗೊಂಡಿದ್ದಾರೆ. 100 ಜನರು ಮೃತಪಟ್ಟಿದ್ದಾರೆ. ರಾಜ್ಯದ ಸಕ್ರಿಯ ಪ್ರಕರಣಗಳು 1,11,093.

ಕರ್ನಾಟಕ-ಕೇರಳ ನಡುವಿನ ಬಸ್ ಸಂಚಾರ ಕರ್ನಾಟಕದಲ್ಲಿ ಲಾಕ್‌ಡೌನ್ ಘೋಷಣೆ ಬಳಿಕ ಸ್ಥಗಿತವಾಗಿತ್ತು. ಈಗ ಅನ್‌ಲಾಕ್ ಘೋಷಣೆ ಬಳಿಕ ಅಂತರರಾಜ್ಯ ಬಸ್‌ ಸಂಚಾರವನ್ನು ಪುನಃ ಆರಂಭಿಸಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಈ ಕುರಿತು ಮಾತನಾಡಿದ್ದಾರೆ. "ಒಂದು ವಾರ ನಾವು ಕೋವಿಡ್ ಪರಿಸ್ಥಿತಿ ಅವಲೋಕನ ನಡೆಸುತ್ತೇವೆ. ಕಾಸರಗೋಡಿನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾದರೆ ನಾವು ಬಸ್ ಸೇವೆ ಆರಂಭಿಸುವ ಕುರಿತು ತೀರ್ಮಾನ ಕೈಗೊಳ್ಳುತ್ತೇವೆ" ಎಂದು ಹೇಳಿದ್ದಾರೆ.

ಸೋಮವಾರದ ಹೆಲ್ತ್ ಬುಲೆಟಿನ್ ಪ್ರಕಾರ ದಕ್ಷಿಣ ಕನ್ನಡದಲ್ಲಿ 126 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಜಿಲ್ಲೆಯ ಸಕ್ರಿಯ ಪ್ರಕರಣಗಳ ಸಂಖ್ಯೆ 2002.

Recommended Video

ಕ್ರಿಕೆಟ್ ಇತಿಹಾಸದ ಕಡಿಮೆ ಅವಧಿಯ ಪಂದ್ಯ:ಕೇವಲ 7 ರನ್ ಗಳಿಸಿ All out ಆದ ಟೀಮ್ | Oneindia Kannada

English summary
No bus service between Mangaluru-Kerala for one week. District-in-charge minister Kota Srinivas Poojary said we will monitor Kerala situation for week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X