ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ: 3 ತಿಂಗಳು ಸಜೆ

|
Google Oneindia Kannada News

ಬೆಳ್ತಂಗಡಿ, ಜೂ. 17: ನ್ಯಾಯಾಲಯದ ಪ್ರತಿಬಂಧಕಾಜ್ಞೆ ಉಲ್ಲಂಘಿಸಿ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಿದ ವ್ಯಕ್ತಿಗೆ 3 ತಿಂಗಳ ಸಜೆಯನ್ನು ಬೆಳ್ತಂಗಡಿ ನ್ಯಾಯಾಲಯ ಪುನರುಚ್ಚರಿಸಿದ್ದು, ಶ್ರೀ ಕ್ಷೇತ್ರಕ್ಕೆ 4.50 ಲಕ್ಷ ರು. ಪರಿಹಾರವಾಗಿ ನೀಡಬೇಕು ಎಂದು ಆದೇಶಿಸಿದ್ದಾರೆ.

ಈ ಬಗ್ಗೆ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ, ''ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಿದ ನಾಗರಿಕ ಸೇವಾ ಟ್ರಸ್ಟ್‌ ಅಧ್ಯಕ್ಷ ಕೆ. ಸೋಮನಾಥ ನಾಯಕ್‌ಗೆ ಬೆಳ್ತಂಗಡಿ ನ್ಯಾಯಾಲಯ 3 ತಿಂಗಳ ಸಜೆಯನ್ನು ಪುನರುಚ್ಚರಿಸಿದೆ,'' ಎಂದು ತಿಳಿಸಿದ್ದಾರೆ.

ಕೋವಿಡ್ ನಿಯಮ ಉಲ್ಲಂಘಿಸಿ ಧರ್ಮಸ್ಥಳ ದೇವಸ್ಥಾನ ಪ್ರವೇಶಿಸಿದ ಸಚಿವ ಲಿಂಬಾವಳಿಕೋವಿಡ್ ನಿಯಮ ಉಲ್ಲಂಘಿಸಿ ಧರ್ಮಸ್ಥಳ ದೇವಸ್ಥಾನ ಪ್ರವೇಶಿಸಿದ ಸಚಿವ ಲಿಂಬಾವಳಿ

ಈ ಹಿಂದೆ ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್‌ ಅಧ್ಯಕ್ಷ ಕೆ. ಸೋಮನಾಥ ನಾಯಕ್‌ ಹಾಗೂ ಇತರರು ಕ್ಷೇತ್ರದ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪ ಮಾಡಲಾಗಿತ್ತು. ಶ್ರೀಕ್ಷೇತ್ರದಿಂದ ದಾಖಲಿಸಲ್ಪಟ್ಟಿದ್ದ ಮೂಲ ದಾವೆ ಸಂಖ್ಯೆ 226/2013ರಲ್ಲಿ ಸೋಮನಾಥ ನಾಯಕ್ ಹಾಗೂ ಇತರರ ವಿರುದ್ಧ ಶ್ರೀಕ್ಷೇತ್ರ ಹಾಗೂ ಹೆಗ್ಗಡೆ ಮತ್ತು ಅವರ ಕುಟುಂಬ ಹಾಗೂ ಸಂಸ್ಥೆಗಳ ಗೌರವಕ್ಕೆ ಹಾನಿಯಾಗುವ ಹೇಳಿಕೆ ಆರೋಪ ಮಾಡದಂತೆ ಬೆಳ್ತಂಗಡಿ ಸಿವಿಲ್ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು.

Court Orders 3 Months Imprisonment to Man Who Mislead About Dharmasthala

ಆದರೆ ಸೋಮನಾಥ ನಾಯಕ್ ಪದೇ ಪದೆ ಈ ಆದೇಶ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮತ್ತೆ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್‌ 2 ಬಾರಿ ಸೋಮನಾಥ ನಾಯಕ್‌ಗೆ ಜೈಲು ಶಿಕ್ಷೆ ವಿಧಿಸಿ ಆದೇಶಿಸಿತ್ತು. ಈ ಆದೇಶದ ವಿರುದ್ದ ಸೋಮನಾಥ ನಾಯಕ್‌ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿ ಅರ್ಜಿಯ ಹೆಚ್ಚುವರಿ ತನಿಖೆಗೆ ಮೂಲ ಕೋರ್ಟ್‌ಗೆ ಮರುರವಾನಿಸಲ್ಪಟ್ಟಿತ್ತು.

''ಜೂ.8ರಂದು ಈ ಸಂಬಂಧ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರು ಅಂತಿಮ ಆದೇಶ ಹೊರಡಿಸಿ, ಹಿಂದಿನ ತೀರ್ಪನ್ನೇ ಪುನರುಚ್ಚರಿಸಿದ್ದಾರೆ. ಈ ಆದೇಶದಂತೆ ಸೋಮನಾಥ ನಾಯಕ್‌ಗೆ 3 ತಿಂಗಳ ಜೈಲು ಶಿಕ್ಷೆ ಜಾರಿಯಾಗಿದೆ. ಹಾಗೆಯೇ ಸ್ಥಿರಾಸ್ಥಿ ಮುಟ್ಟುಗೋಲು ಹಾಕಿ ಶ್ರೀ ಕ್ಷೇತ್ರಕ್ಕೆ 4.50 ಲಕ್ಷ ಪರಿಹಾರ ನೀಡಲು ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರು ಸೂಚಿಸಿದ್ದಾರೆ. ಪ್ರಕರಣದಲ್ಲಿ ಕೋರ್ಟ್‌ ಅವಧಿ ದುರುಪಯೋಗಪಡಿಸಿ ಮತ್ತೆ ಶ್ರೀ ಕ್ಷೇತ್ರಕ್ಕೆ ಉಪಟಳ ನೀಡಿದ ಕಾರಣಕ್ಕೆ ಹೆಚ್ಚುವರಿ ಪರಿಹಾರವಾಗಿ 2,000 ರು. ನೀಡುವಂತೆಯೂ ಕೋಟ್‌ ಆದೇಶಿಸಿದೆ,'' ಎಂದು ಪ್ರಕಟಣೆಯಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ತಿಳಿಸಿದ್ದಾರೆ.

Recommended Video

KL Rahul ಸೇರಿದಂತೆ ಈ ಐದು ಆಟಗಾರರು WTC ಪಂದ್ಯಕ್ಕೆ ಯಾಕೆ ಸೆಲೆಕ್ಟ್ ಆಗ್ಲಿಲ್ಲ? | Oneindia Kannada

(ಒನ್‌ಇಂಡಿಯಾ ಸುದ್ದಿ)

English summary
3 months imprisonment to the nagarika seva trust president K.Somanath nayak for promoting the false information about dharmasthala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X