ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪತಂಗ ಪ್ರೇಮದಿಂದ ನಗರ ಮಧ್ಯದ ಮನೆಯಲ್ಲೇ ಚಿಟ್ಟೆ ಪಾರ್ಕ್ ಮಾಡಿದ ದಂಪತಿ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜುಲೈ 28: ಈ ಸಿಟಿ ಸಹವಾಸನೇ ಬೇಡಪ್ಪಾ, ಬಿಸಿ ಗಾಳಿ, ಕಲುಷಿತ ವಾತಾವರಣ, ವಾಹನಗಳ ಶಬ್ದ ಅಂತಾ ಸಿಟಿ ಮಂದಿ ಸದಾ ಗೊಣಗುತ್ತಾರೆ. ಆದರೆ ಸಿಟಿಯಲ್ಲಿದ್ದೇ ಮನೆಯಲ್ಲಿ ಹಳ್ಳಿಯ ವಾತಾವರಣ ಸೃಷ್ಟಿಸಬಹುದು ಅನ್ನುವುದಕ್ಕೆ ಮಂಗಳೂರಿನ ವ್ಯಕ್ತಿಯೊಬ್ಬರು ಸಾಕ್ಷಿಯಾಗಿದ್ದಾರೆ.

ನೀವು ನಂಬಲು ಸಾಧ್ಯವಿಲ್ಲ, ನಗರದ ಮಧ್ಯದಲ್ಲಿರುವ ಮನೆಯ ಅಂಗಳದಲ್ಲಿ‌ 84 ಜಾತಿಯ ಚಿಟ್ಟೆಗಳ ದಾಖಲೀಕರಣವಾಗಿದೆ. ಮಂಗಳೂರು ನಗರದ ಮಧ್ಯಭಾಗದಲ್ಲಿರುವ ಮಣ್ಣಗುಡ್ಡೆಯ ನಿವಾಸಿಗಳಾದ ಗೋಪಾಲಕೃಷ್ಣ ಬಾಳಿಗಾ ಮತ್ತು ರಾಧಿಕಾ ದಂಪತಿಗಳು ತೋರಿದ ಪತಂಗ ಪ್ರೇಮದಿಂದ ಈಗ ಇವರ ಮನೆಯಂಗಳವೇ ಮಿನಿ ಚಿಟ್ಟೆ ಪಾರ್ಕ್ ಆಗಿದೆ.

Mangaluru: Couple Built Butterfly Park In Their House

ಚಿಟ್ಟೆಗಳು ಸಾಮಾನ್ಯವಾಗಿ ಎಲ್ಲಾ ಗಿಡ ಮರಗಳ ಮೇಲೆ ಕೂರುವುದಿಲ್ಲ. ಅವುಗಳಿಗೆ ಪೂರಕವಾದ ಪ್ರಭೇದಗಳ ಗಿಡಗಳು, ಹೂವುಗಳನ್ನು ಅರಸಿ ಬಂದು ಮಕರಂದ ಹೀರಿ, ಸಂತಾನೋತ್ಪತ್ತಿ ಮಾಡುತ್ತದೆ. ಹಾಗಾಗಿಯೇ ಗೋಪಾಲಕೃಷ್ಣ ಬಾಳಿಗಾ ದಂಪತಿಯು ಚಿಟ್ಟೆಗಳು ಬಂದು ಕೂರಲು ಅನುಕೂಲವಾಗುವ ಹೂವುಗಳ ಗಿಡಗಳನ್ನೇ ತಮ್ಮ ಮನೆಯಂಗಳದಲ್ಲಿ ಬೆಳೆಸಿ ಪೋಷಿಸುತ್ತಿದ್ದಾರೆ. ಈ ಕಾರಣದಿಂದಾಗಿಯೇ ಇವರ ಮನೆಯಂಗಳದಲ್ಲಿಯೇ ಈವರೆಗೆ 84 ಪ್ರಭೇದಗಳ ಚಿಟ್ಟೆಗಳ ದಾಖಲೀಕರಣ ಸಾಧ್ಯವಾಗಿದೆ.

 ವರ್ಲ್ಡ್ ಆಫ್ ಬುಕ್ ರೆಕಾರ್ಡ್ ಗೆ ಸೇರಿತು ಬೆಳುವಾಯಿ ಚಿಟ್ಟೆ ಪಾರ್ಕ್ ವರ್ಲ್ಡ್ ಆಫ್ ಬುಕ್ ರೆಕಾರ್ಡ್ ಗೆ ಸೇರಿತು ಬೆಳುವಾಯಿ ಚಿಟ್ಟೆ ಪಾರ್ಕ್

Mangaluru: Couple Built Butterfly Park In Their House

2014ರಿಂದ ಮನೆಯಂಗಳದಲ್ಲಿ ಚಿಟ್ಟೆಗಳಿಗೆ ಅನುಕೂಲಕರ ಪರಿಸರವನ್ನು ಸೃಷ್ಟಿಸುವ ಕಾರ್ಯ ಮಾಡಿದ ಗೋಪಾಲಕೃಷ್ಣ ಬಾಳಿಗಾ ದಂಪತಿ ಅದಕ್ಕಾಗಿ ಮನೆಯ ಸುತ್ತಲಿನ 1250 ಚದರ ಅಡಿ ವಿಸ್ತಿರ್ಣದ ಪ್ರದೇಶದಲ್ಲಿ ವಿವಿಧ ರೀತಿಯ ಚಿಟ್ಟೆಗಳಿಗೆ ಮಕರಂದ, ಸಂತಾನೋತ್ಪತ್ತಿಗಾಗಿ ವಿವಿಧ ಕಡೆಗಳಿಂದ ತಂದು ಗಿಡ ಮರಗಳನ್ನು ಬೆಳೆಸಲು ಆರಂಭಿಸಿದರು.

Mangaluru: Couple Built Butterfly Park In Their House

ಈ ಮಿನಿ ಪಾರ್ಕ್‌ನಲ್ಲಿ ರೆಡ್‌ ಪೀರೋಟ್, ಬ್ಲೂ ಟೈಗರ್, ಕೆನರಾ ಓಕ್‌ ಬ್ಲೂ, ಪ್ಲೈನ್ ಟೈಗರ್, ಡನಾಯ್ಡ್ ಎಗ್ ಫ್ಲೈ, ಗ್ರೇಟ್ ಎಗ್ ಫ್ಲೈ, ಪೀಕೋಕ್ ಫ್ಯಾನ್ಸಿ, ಕಾಮನ್‌ ಮರ್ಮೋನ್, ಲೈಮ್ ಸ್ವಾಲೋಟೈಲ್, ಪ್ಲೈನ್ಸ್ ಕ್ಯುಪಿಡ್, ಸೈಕ್, ಕಾಮನ್‌ ಸೇಲಿಯರ್ ಮುಂತಾದ ಬಹಳ ಅಪೂರ್ವವಾದ ಚಿಟ್ಟೆಗಳು ಆಗಮಿಸಿವೆ. ಅವುಗಳ ದಾಖಲೀಕರಣ ನಡೆಸಲಾಗಿದೆ.

English summary
Gopalakrishna Baliga and Radhika couple in Mangaluru built a mini butterfly park at their house.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X