ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಶಕ್ತರ ಮನೆಮನೆಗೆ ಕೊರೊನಾ ಲಸಿಕೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜೂನ್ 19: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟಕಡೆಯ ಜನರಿಗೂ ಕೊರೊನಾ ಲಸಿಕೆ ನೀಡಬೇಕೆಂಬ ನಿರ್ಣಯಕ್ಕೆ ಜಿಲ್ಲಾಡಳಿತ ಬಂದಿದೆ. ಜಿಲ್ಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ನೀಡುವ ಉಚಿತ ಲಸಿಕಾ ಶಿಬಿರ ಮುಂದುವರೆದಿದ್ದು, ಮುಂದಿನ ದಿನಗಳಲ್ಲಿ ಅಶಕ್ತರಿಗೂ ಉಚಿತ ಲಸಿಕೆ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ.

ಈ ಹಿನ್ನಲೆಯಲ್ಲಿ ಅನಾರೋಗ್ಯಕ್ಕೀಡಾದವರಿಗೆ ಮತ್ತು ಅಶಕ್ತ ಹಿರಿಯ ನಾಗರಿಕರು ಸೇರಿದಂತೆ ಮನೆಯಿಂದ ಹೊರ ಬಂದು ಲಸಿಕೆ ಹಾಕಿಸಿಕೊಳ್ಳಲು ಸಾಧ್ಯವಾಗದಿರುವವರ ಮನೆ ಮನೆಗೆ ಬಂದು ಲಸಿಕೆ ನೀಡಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಆದೇಶಿಸಿದ್ದಾರೆ.

ವ್ಯಾಕ್ಸಿನ್ ನಂತರ ದೇಹದಲ್ಲಿ ಅಯಸ್ಕಾಂತೀಯ ಶಕ್ತಿ ದೃಢಪಡಿಸಿದರೆ 1 ಲಕ್ಷ ರೂ. ಬಹುಮಾನವ್ಯಾಕ್ಸಿನ್ ನಂತರ ದೇಹದಲ್ಲಿ ಅಯಸ್ಕಾಂತೀಯ ಶಕ್ತಿ ದೃಢಪಡಿಸಿದರೆ 1 ಲಕ್ಷ ರೂ. ಬಹುಮಾನ

ದಕ್ಷಿಣ ಕನ್ನಡ ಜಿಲ್ಲಾಡಳಿತ, ದಕ್ಷಿಣ ಕನ್ನಡ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ, ರೋಟರಿ ಮಂಗಳೂರು ಹಾಗೂ ಬ್ಯಾಂಕ್ ಆಫ್ ಬರೋಡಾ ಇವರ ಸಹಯೋಗದೊಂದಿಗೆ ಆರೋಗ್ಯ ಕಾರ್ಯಕರ್ತರು ಮನೆಮನೆಗೆ ಬಂದು ಲಸಿಕೆ ‌ಹಾಕಲಿದ್ದಾರೆ. ಹೀಗಾಗಿ ಜಿಲ್ಲಾಡಳಿತದ ಅಧಿಕೃತ ವೆಬ್‌ಸೈಟ್ dk.nic.in ನಲ್ಲಿ ನೊಂದಾಯಿಸಬೇಕಾಗುತ್ತದೆ. ‌ನೊಂದಾವಣೆಯಾದ ಬಳಿಕ ದಿನ ನಿಗದಿಪಡಿಸಿ ಮನೆ ಮನೆಗೆ ಬಂದು ಲಸಿಕೆ ನೀಡಲಾಗುತ್ತದೆ.

Mangaluru: Corona Vaccine For Disabled People In Dakshina Kannada District

ಮನೆಮನೆಗೆ ಕೊರೊನಾ ಲಸಿಕೆ ನೀಡಲು ಲಸಿಕಾ ವಾಹನವನ್ನು ಜಿಲ್ಲಾಡಳಿತ ಸಿದ್ಧಪಡಿಸಿದೆ. ನಡೆದಾಡಲು ಅಶಕ್ತರಾದವರಿಗೆ ಲಸಿಕೆ ಇಲ್ಲ ಎಂಬ ಚಿಂತೆಯನ್ನು ಹೋಗಲಾಡಿಸಲು ಜಿಲ್ಲಾಡಳಿತ ಈ ನಿರ್ಧಾರ ಮಾಡಿದ್ದು, ಜಿಲ್ಲಾಧಿಕಾರಿ ಡಾ.ರಾಜೇಂದ್ರ. ಕೆ.ವಿ ಅವರ ನಿರ್ಧಾರಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

English summary
Free Vaccination Camps by District administration in Dakshina Kannada District continues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X