ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರಾವಳಿಯಲ್ಲಿ ಹೊಸ ದಾಖಲೆ ಬರೆಯುತ್ತಿರುವ ಮುಂಗಾರು ಮಳೆ

By ಗುರುರಾಜ ಕೆ.
|
Google Oneindia Kannada News

ಮಂಗಳೂರು, ಜುಲೈ.02: ಕಳೆದ ಮೇ ತಿಂಗಳ ಕೊನೆಯಲ್ಲಿ ಭಾರಿ ಮಳೆ ಸುರಿದು ಮಂಗಳೂರು ನಗರದಲ್ಲಿ ಕೃತಕ ಪ್ರವಾಹ ಸೃಷ್ಠಿಸಿ ಎರಡು ದಿನ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದ ಮಳೆ ಈ ಬಾರಿ ಹಲವು ದಾಖಲೆಗಳನ್ನು ಸೃಷ್ಠಿಸಿದೆ.

ಮುಂಗಾರು ಆರಂಭಕ್ಕೂ ಮುನ್ನ ಕರಾವಳಿಯಲ್ಲಿ ಎದ್ದಿದ್ದ ಎರಡೆರಡು ಚಂಡಮಾರುತಗಳ ಹಿನ್ನಲೆಯಲ್ಲಿ ಮಳೆಗಾಲ ಆರಂಭಕ್ಕೂ ಮುನ್ನವೇ ಕರಾವಳಿಯಲ್ಲಿ ಮಳೆ ಸುರಿಯಲಾರಂಭಿಸಿತ್ತು.

ಕರಾವಳಿ ಭಾಗದ ಜನರಿಗೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ ಕರಾವಳಿ ಭಾಗದ ಜನರಿಗೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಇದರಲ್ಲಿ ಮೇ.29ರಂದು ಒಂದೇ ದಿನ ದಾಖಲೆ ಪ್ರಮಾಣದಲ್ಲಿ 280 ಮಿಲಿ ಮೀಟರ್ ಮಳೆ ಸುರಿದು, ಮಂಗಳೂರಿನಲ್ಲಿ ಕೃತಕ ಪ್ರವಾಹ ಸೃಷ್ಠಿಯಾಗಿ ಮಂಗಳೂರು ಸಂಪೂರ್ಣ ಜಲಾವೃತವಾಗಿತ್ತು. ನಂತರ ಅದರ ಬೆನ್ನಿಗೆ ಆಗಮಿಸಿದ ಮುಂಗಾರು ಮಳೆ ಯಾವುದೇ ರೀತಿಯ ವಿಶ್ರಾಂತಿ ನೀಡದೇ ಸತತವಾಗಿ ಜೂನ್ ತಿಂಗಳು ಸಂಪೂರ್ಣವಾಗಿ ಸುರಿದಿದೆ.

 ಹೊಸ ದಾಖಲೆ ಸೃಷ್ಟಿ

ಹೊಸ ದಾಖಲೆ ಸೃಷ್ಟಿ

ಕರಾವಳಿಯಲ್ಲಿ ಸುರಿಯುತ್ತಿರುವ ಸತತ ಮಳೆ ಹಳೆಯ ದಾಖಲೆಗಳನ್ನು ಮುರಿದು, ಮತ್ತೆ ಹೊಸ ದಾಖಲೆ ಸೃಷ್ಟಿಸುತ್ತಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಳೆದ ವರ್ಷ ಜೂನ್‌ನಲ್ಲಿ ವಾಡಿಕೆಗಿಂತ ಶೇ.8ರಷ್ಟು ಮಳೆ ಕಡಿಮೆಯಾಗಿದ್ದು, ಈ ಬಾರಿ ಅತಿ ಹೆಚ್ಚು ಶೇ.30 ರಷ್ಟು ಹೆಚ್ಚು ಮಳೆ ಸುರಿದಿದೆ.

ಈ ಬಾರಿ ಮಂಗಳೂರು ತಾಲೂಕಿನಲ್ಲಿ ಮೊದಲ ಆರು ತಿಂಗಳು 1663 ಮಿಲಿಮೀಟರ್ ಮಳೆಯಾಗಿದೆ.

 1,223 ಮಿಲಿ ಮೀಟರ್‌ ಮಳೆ

1,223 ಮಿಲಿ ಮೀಟರ್‌ ಮಳೆ

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಜೂನ್‌ನಲ್ಲಿ ಸುರಿಯುವ ವಾಡಿಕೆ ಮಳೆಯ ಪ್ರಮಾಣ 941 ಮಿಲಿ ಮೀಟರ್‌. ಕಳೆದ ವರ್ಷ 870 ಮಿಲಿ ಮೀಟರ್‌ ಸುರಿದಿದೆ. ಈ ವರ್ಷ ಶೇ.30 ಅಂದರೆ 282 ಮಿಲಿ ಮೀಟರ್‌ ಮಳೆಯಾಗಿದೆ. ಒಟ್ಟು 1,223 ಮಿಲಿ ಮೀಟರ್‌ ಮಳೆ ಬಿದ್ದಿದೆ.

 ಕಳೆದ ವರ್ಷ ಕೊರತೆ

ಕಳೆದ ವರ್ಷ ಕೊರತೆ

ಜನವರಿಯಿಂದ ಜೂನ್‌ವರೆಗೆ ವಾಡಿಕೆಯ ಮಳೆ ಪ್ರಮಾಣ 1,176 ಮಿಲಿ ಮೀಟರ್‌. ಈ ಬಾರಿ ಶೇ.547 ಮಳೆಯಾಗಿದ್ದು, 1,723 ಮಿಲಿ ಮೀಟರ್‌ ಮಳೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ 1040 ಮಿಲಿ ಮೀಟರ್‌ ಮಳೆಯಾಗಿದ್ದು, ಶೇ 11 ರಷ್ಟು ಕೊರತೆಯಾಗಿತ್ತು.

 ಎರಡು ಪಟ್ಟು ಮಳೆ ಹೆಚ್ಚು

ಎರಡು ಪಟ್ಟು ಮಳೆ ಹೆಚ್ಚು

ಬೆಳ್ತಂಗಡಿ ತಾಲೂಕಿನಲ್ಲಿ ಜನವರಿಯಿಂದ ಜೂನ್‌ವರೆಗೆ ಆರು ತಿಂಗಳುಗಳಲ್ಲಿ ವಾಡಿಕೆಯ ಮಳೆ ಪ್ರಮಾಣ 1,208. ಈ ಬಾರಿ ಅಲ್ಲಿ 1,918 ಮಿಲಿ ಮೀಟರ್‌ ಮಳೆಯಾಗಿದೆ. ಈ ಅವಧಿಯಲ್ಲಿ ಮಂಗಳೂರಿನಲ್ಲಿ ವಾಡಿಕೆಯ ಮಳೆ 1248 ಮಿಲಿ ಮೀಟರ್‌ ಆಗಿದ್ದು, ಈ ಬಾರಿ 1,248 ಮಿಲಿಮೀಟರ್‌ ಮಳೆ ಸುರಿದಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಇಲ್ಲಿ ಎರಡು ಪಟ್ಟು ಹೆಚ್ಚು ಮಳೆಯಾಗಿದೆ.

English summary
Continuous rainfall broke down old records on the coastal side. Creating a new record again. This time more than 30 percent rainfall in Dakshina Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X