ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಫೇಲ್ ಹಗರಣದ ಪೂರ್ಣ ಮಾಹಿತಿಯುಳ್ಳ ಪುಸ್ತಕ ಹೊರತರಲಿದೆ ಕಾಂಗ್ರೆಸ್‌

|
Google Oneindia Kannada News

ಮಂಗಳೂರು, ಮಾರ್ಚ್ 08: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಫೇಲ್ ಯುದ್ದ ವಿಮಾನ ಖರೀದಿ ವಿವಾದವನ್ನು ಅಸ್ತ್ರವಾಗಿ ಬಳಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. ರಫೇಲ್ ವಿಮಾನವನ್ನೇ ಬಿಜೆಪಿ ಹಾಗೂ ಮೋದಿ ವಿರುದ್ಧ ಪ್ರಮುಖ ಆಸ್ತ್ರವಾಗಿ ಬಳಕೆ ಮಾಡಲು ಕಾಂಗ್ರೆಸ್ ಯೋಜನೆ ರೂಪಿಸಿದೆ.

ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಭ್ರಷ್ಟಾಚಾರ ನಡೆಸಿರುವ ಎಲ್ಲ ಸಾಕ್ಷಿಗಳು ಲಭ್ಯವಾಗುತ್ತಿದೆ ಎಂದು ಹೇಳುತ್ತಿರುವ ಕಾಂಗ್ರೆಸ್ ಮುಖಂಡರು ಈ ರಫೇಲ್ ಪ್ರಕರಣದ ಪೂರ್ಣ ಮಾಹಿತಿಯುಳ್ಳ ಪುಸ್ತಕವನ್ನು ಕಾಂಗ್ರೆಸ್‌ ಬಿಡುಗಡೆ ಮಾಡಲು ಮುಂದಾಗಿದ್ದಾರೆ.

ರಫೇಲ್ ಖರೀದಿ: ಮಾಧ್ಯಮಗಳು ಬೆದರಿಕೆಗೆ ಜಗ್ಗಬಾರದು ಎಂದ ಎನ್ ರಾಮ್ರಫೇಲ್ ಖರೀದಿ: ಮಾಧ್ಯಮಗಳು ಬೆದರಿಕೆಗೆ ಜಗ್ಗಬಾರದು ಎಂದ ಎನ್ ರಾಮ್

ಅಷ್ಟೇ ಅಲ್ಲದೇ, ರಫೇಲ್ ಖರೀದಿಯಲ್ಲಿ ನಡೆದಿರುವ ಭಷ್ಟಾಚಾರ ಕುರಿತ ವಿಚಾರ ಸಂಕಿರಣಗಳನ್ನು ನಡೆಸಿ ಜನರಿಗೆ ಮಾಹಿತಿ ನೀಡಲಾಗುವುದೆಂದು ಎಂದು ವಿಧಾನ ಪರಿಷತ್‌ ಸದಸ್ಯ ಐವನ್ ಡಿ'ಸೋಜಾ ತಿಳಿಸಿದ್ದಾರೆ.

Congress planning to print booklet about Rafale deal

ರಫೇಲ್ ಗೆ ಸಂಬಂಧಿಸಿದ ಮಾಹಿತಿಯನ್ನು ರಕ್ಷಣಾ ಸಚಿವಾಲಯದಿಂದ ಕಳವು ಮಾಡಲಾಗಿದೆ ಎಂದು ಕೇಂದ್ರ ಸರಕಾರ ಹೇಳಿದೆ. ಒಟ್ಟಿನಲ್ಲಿ ಪ್ರಕರಣವನ್ನು ಮುಚ್ಚಿ ಹಾಕುವ ಕೆಲಸ ಕೇಂದ್ರದಿಂದ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ .

ರಫೇಲ್ ದಾಖಲೆಗಳು ಕಳುವಾಗಿವೆ: ಸುಪ್ರೀಂಗೆ ಕೇಂದ್ರದ ಹೇಳಿಕೆರಫೇಲ್ ದಾಖಲೆಗಳು ಕಳುವಾಗಿವೆ: ಸುಪ್ರೀಂಗೆ ಕೇಂದ್ರದ ಹೇಳಿಕೆ

ಚಿಂತಕರಲ್ಲಿ ಮಾತನಾಡುವ ನೆಪದೊಂದಿಗೆ ಕೇಂದ್ರ ಗೃಹಸಚಿವರು ಮಂಗಳೂರಿಗೆ ಬರುತ್ತಿದ್ದಾರೆ. ಇದು ಜನರನ್ನು ಮೋಸ ಮಾಡುವುದು ಮತ್ತು ಹಣವನ್ನು ಲೂಟಿ ಮಾಡುವ ತಂತ್ರಗಾರಿಕೆಯ ಬಗ್ಗೆ ನಡೆಸುವ ಮಾತುಕತೆಯಾಗಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ.

English summary
Congress going to use Rafale deal controversy against BJP in Next upcoming Loksabha election. Congress planning to print booklet about Rafale deal and distribute to people
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X