ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಕ್ಷಿಣ ಕನ್ನಡ: ಬಿಜೆಪಿ-ಕಾಂಗ್ರೆಸ್ ನಡುವೆ ನಾಯಕರ ಟ್ವೀಟ್‌ ಸಮರ

|
Google Oneindia Kannada News

ಮಂಗಳೂರು, ಜನವರಿ 18 : ಲೋಕ ಸಭಾ ಚುನಾವಣೆ ಹತ್ತಿರ ವಾಗುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜಕೀಯ ಆರೋಪ ಪ್ರತ್ಯಾರೋಪ ತಾರಕಕ್ಕೇರಿದೆ. ಮಂಗಳೂರಿನ ಪಂಪ್ ವೆಲ್ ಹಾಗು ತೊಕ್ಕೊಟ್ಟು ಫ್ಲೈ ಓವರ್ ವಿಚಾರದಲ್ಲಿ ಟ್ವಿಟ್ಟರ್ ಸಮರ ಆರಂಭವಾಗಿದೆ.

ಅಮಿತ್ ಶಾ ಕುರಿತು ವಿವಾದಾತ್ಮಕ ಹೇಳಿಕೆ: 'ದಿ ಕ್ವಿಂಟ್' ವಿರುದ್ಧ ಮುಗಿಬಿದ್ದ ಟ್ವಿಟ್ಟಿಗರು ಅಮಿತ್ ಶಾ ಕುರಿತು ವಿವಾದಾತ್ಮಕ ಹೇಳಿಕೆ: 'ದಿ ಕ್ವಿಂಟ್' ವಿರುದ್ಧ ಮುಗಿಬಿದ್ದ ಟ್ವಿಟ್ಟಿಗರು

ಮಂಗಳೂರಿನ ಪಂಪ್ ವೆಲ್ ಮತ್ತು ಮಂಗಳೂರು ಹೊರವಲಯದ ತೊಕ್ಕೊಟ್ಟು ಫ್ಲೈ ಓವರ್ ಕಾಮಗಾರಿ ವಿಳಂಬದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಿರಂತರ ಟೀಕೆ ಹಾಗು ಟ್ರಾಲ್ ಗೆ ಗುರಿಯಾಗಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಟ್ವೀಟ್ಟರ್ ಮೂಲಕ ತೀಕ್ಷ್ಣ ಪ್ರತ್ಯುತ್ತರ ನೀಡಿದ್ದಾರೆ.

ಆಪರೇಷನ್ ಕಮಲದಲ್ಲಿ ಮೋದಿ, ಅಮಿತ್ ಶಾ ಕೂಡ ಭಾಗಿ: ಸಿದ್ದರಾಮಯ್ಯ ಆರೋಪಆಪರೇಷನ್ ಕಮಲದಲ್ಲಿ ಮೋದಿ, ಅಮಿತ್ ಶಾ ಕೂಡ ಭಾಗಿ: ಸಿದ್ದರಾಮಯ್ಯ ಆರೋಪ

Congress , BJP twitter war on Pumpwel flyover in Dakshin Kannada

ಮಂಗಳೂರಿನ ಮಹಾವೀರ ಸರ್ಕಲ್ ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪಂಪ್ ವೆಲ್ ಫ್ಲೈ ಓವರ್ ಮಾಗಾರಿ ಕಳೆದ 9 ವರ್ಷಗಳ ಹಿಂದೆ ಆರಂಭವಾಗಿದ್ದರೂ ಈ ವರೆಗೆ ಫೂರ್ಣಗೊಂಡಿಲ್ಲ . 600 ಮೀ ಉದ್ಧದ ಈ ಫ್ಲೈ ಓವರ್ ಕಾಮಗಾರಿ ಆಮೆ ಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಸಂಸದ ನಳಿನ್ ವಿರುದ್ದ ಸಾಮಾಜಿಕ ತಾಣಗಳಲ್ಲಿ ಟ್ರೋಲ್ ಆಗಿತ್ತು. ಫ್ಲೈ ಓವರ್ ಕಾಮಗಾರಿ ವಿಳಂಬಕ್ಕೆ ಕಾಂಗ್ರೆಸ್ ಮುಖಂಡರು ನಳಿನ್ ವಿರುದ್ಧ ಮುಗಿಬಿದ್ದು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಇದರ ವಿಳಂಬಕ್ಕೆ ಯಾರು ಕಾರಣ ಅಂತ ಚರ್ಚೆ ಮಾಡಿ ಅಂತ ನಳಿನ್ ಟ್ವೀಟ್ ಮಾಡಿದ್ದು, ತಾನು‌ ಜಿಲ್ಲೆಗಾಗಿ 1500 ಕೋಟಿ ತಂದಿದ್ದೇನೆ ಎಂದಿದ್ದಾರೆ.

'ರಾಜ್ಯದ ಮರ್ಯಾದಾ ಪುರುಷೋತ್ತಮ': ಸಿದ್ದರಾಮಯ್ಯರನ್ನು ಲೇವಡಿ ಮಾಡಿದ ಬಿಜೆಪಿ'ರಾಜ್ಯದ ಮರ್ಯಾದಾ ಪುರುಷೋತ್ತಮ': ಸಿದ್ದರಾಮಯ್ಯರನ್ನು ಲೇವಡಿ ಮಾಡಿದ ಬಿಜೆಪಿ

ನಳಿನ್ ಟ್ವಿಟ್ಟರ್ ಮೂಲಕ ಮಾಜಿ ಸಚಿವ ರಮಾನಾಥ್ ರೈ ಅವರಿಗೆ ಬಹಿರಂಗ ಸವಾಲು ಹಾಕಿದ್ದಾರೆ. ಆಡುವುದು ಮೋಸದ ಪಗಡೆಯಾಟವಲ್ಲ, ಮಾಡುವುದಾದರೆ ಧರ್ಮಯುದ್ದವನ್ನೇ ಮಾಡೋಣ ಎಂದು ಮಾಜಿ ಸಚಿವ ರಮಾನಾಥ ರೈ ಅವರಿಗೆ ಸವಾಲು ಹಾಕಿದ್ದಾರೆ.

Congress , BJP twitter war on Pumpwel flyover in Dakshin Kannada

ಅಲ್ಲದೇ ತನ್ನ ವಿರುದ್ದ ಪದೇ ಪದೇ ಆರೋಪ ಮಾಡ್ತಿರೋ ಪರಿಷತ್ ಸದಸ್ಯ ಐವನ್ ಡಿಸೋಜ ವಿರುದ್ದವೂ ಟ್ವಿಟ್ಟರ್ ಮೂಲಕ ಕಿಡಿಕಾರಿದ್ದಾರೆ. 'ಐವನ್ ಡಿಸೋಜಾರೆ, ನಾನು ಬಕೆಟ್ ಹಿಡಿದು ಹಿಂಬಾಗಿಲ ಮೂಲಕ ಅಧಿಕಾರ ಹಿಡಿದವನಲ್ಲ, ತಾಕತ್ತಿದ್ರೆ ಮುಂದಿನ ಚುನಾವಣೆಯಲ್ಲಿ ನನ್ನನ್ನು ಎದುರಿಸಿ. ಅದು ಬಿಟ್ಟು ನೀಚ ರಾಜಕಾರಣಕ್ಕೆ ಇಳಿದರೆ ಸಿಕ್ಕ ಅಧಿಕಾರವನ್ನೂ ಕಳೆದುಕೊಳ್ಳಬೇಕಾದೀತು' ಅಂತ ಟ್ವೀಟ್ ಮಾಡಿದ್ದಾರೆ.

English summary
There is a twitter war started between MP Nalin Kumar Kateel and Congress leaders on Pumpwel and Thokottu flyover issue .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X