ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಫಿ ಸಾಮ್ರಾಟ ಸಿದ್ಧಾರ್ಥ ಸಾವಿನ ತನಿಖೆಗೆ ಕರ್ನಾಟಕ ಕಾಂಗ್ರೆಸ್ ಒತ್ತಾಯ

|
Google Oneindia Kannada News

ಬೆಂಗಳೂರು, ಜುಲೈ 31: ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಅವರಿಗೆ ಸಾವಿಗೆ ನಿಜವಾದ ಕಾರಣ ಏನೆಂಬುದರ ಕುರಿತು ತನಿಖೆಯಾಗಲೇಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

ವಿಧಾನಸಭೆಯಲ್ಲಿಯೂ ಕಾಂಗ್ರೆಸ್-ಜೆಡಿಎಸ್ ಪ್ರತಿಭಟನೆಗೆ ನಿರ್ಧಾರ ಮಾಡಿವೆ. ಐಟಿ ಡಿಜಿ ಬಾಲಕೃಷ್ಣ ಅವರ ಕಿರುಕುಳದಿಂದ ಸಿದ್ಧಾರ್ಥ ಸಾವಿಗೀಡಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಲಕೃಷ್ಣನ್ ವಿರುದ್ಧ ತನಿಖೆಗೆ ಪಟ್ಟು ಹಿಡಿದು ದೋಸ್ತಿಗಳು ಪ್ರತಿಭಟನೆ ನಡೆಸಲಿದ್ದಾರೆ.

LIVE: ಚಿಕ್ಕಮಗಳೂರಿನತ್ತ ಹೊರಟ ಸಿದ್ಧಾರ್ಥ ಮೃತದೇಹ ಹೊತ್ತ ಆಂಬುಲೆನ್ಸ್LIVE: ಚಿಕ್ಕಮಗಳೂರಿನತ್ತ ಹೊರಟ ಸಿದ್ಧಾರ್ಥ ಮೃತದೇಹ ಹೊತ್ತ ಆಂಬುಲೆನ್ಸ್

ಇನ್ನೊಂದೆಡೆ ಐಟಿ ಅಧಿಕಾರಿಗಳ ಕಿರಿಕುಳದಿಂದ ಸಿದ್ಧಾರ್ಥ ಮೃತಪಟ್ಟಿದ್ದಾರೆ. ಈ ಬಗ್ಗೆ ಚರ್ಚೆ ಆಗಲೇಬೇಕು ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ಮನೀಷ್ ತಿವಾರಿ ನೋಟಿಸ್ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಇದೀಗ ಲಭ್ಯವಾಗಿದೆ.

Congress And JDS Triggers Political Row Over Siddhartha

ಮಧ್ಯೆ ಹೊಯ್ಗೆ ಬಜಾರ್ ಎಂಬಲ್ಲಿ ಮೀನುಗಾರರು ಮೀನು ಹಿಡಿಯಲೆಂದು ದೋಣಿಯಲ್ಲಿ ಹೋಗುತ್ತಿದ್ದಾಗ ಶವ ತೇಲುತ್ತಿರುವುದು ಕಂಡು ಬಂದಿತ್ತು. ಹೀಗಾಗಿ ಅವರು ಅನುಮಾನದಿಂದ ಶವವನ್ನು ದೋಣಿಯ ಬದಿಯಲ್ಲಿ ಹಿಡಿದುಕೊಂಡು ದಡ ತಲುಪಿಸಿ ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸಿದ್ಧಾರ್ಥ್ ಮೃತದೇಹ ಎಂದು ಪತ್ತೆ ಮಾಡಿದ್ದಾರೆ.

ರಾಜ್ಯದ ಖ್ಯಾತ ಉದ್ಯಮಿ ಸಿದ್ಧಾರ್ಥ ನಿಧನ: ಗಣ್ಯರ ಶೋಕದ ನುಡಿರಾಜ್ಯದ ಖ್ಯಾತ ಉದ್ಯಮಿ ಸಿದ್ಧಾರ್ಥ ನಿಧನ: ಗಣ್ಯರ ಶೋಕದ ನುಡಿ

ಸೋಮವಾರ ಮಧ್ಯಾಹ್ನ ವ್ಯವಹಾರ ನಿಮಿತ್ತ ಸಿದ್ಧಾರ್ಥ ಅವರು ತಮ್ಮ ಕಾರಿನಲ್ಲಿ ಸೋಮವಾರ ಚಿಕ್ಕಮಗಳೂರಿಗೆ ತೆರಳಿದ್ದರು. ಅಲ್ಲಿಂದ ಮಂಗಳೂರಿಗೆ ಹೋಗಿದ್ದರು. ಕೇರಳಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಜಪ್ಪಿನಮೊಗರು ಎಂಬಲ್ಲಿ ನೇತ್ರಾವತಿ ಸೇತುವೆ ಇದ್ದು, ಇಲ್ಲಿಗೆ ತಲುಪುತ್ತಿದ್ದಂತೆ ಕಾರನ್ನು ನಿಲ್ಲಿಸಲು ಚಾಲಕನಿಗೆ ಹೇಳಿದ್ದಾರೆ.

ಬಳಿಕ ನೀನು ಇಲ್ಲೇ ಕುಳಿತಿರುವ ನಾನು ಸ್ವಲ್ಪ ಸಮಯದ ನಂತರ ಬರುತ್ತೇನೆ ಎಂದು ಹೋಗಿ ಒಂದು ಗಂಟೆಯಾದರೂ ಮರಳಿರಲಿಲ್ಲ. ಬಳಿಕ ಗಾಬರಿಗೊಂಡ ಡ್ರೈವರ್ ಬಸವರಾಜ್ ಸಿದ್ಧಾರ್ಥ ಅವರ ಮಗನಿಗೆ ಕರೆ ಮಾಡಿ ವಿಷಯ ತಿಳಿಸಿದ್ದ.

ಬಳಿಕ ಪೊಲೀಸರಿಗೆ ಮಾಹಿತಿ ನೀಡಿ ಸಿದ್ಧಾರ್ಥ ಅವರನ್ನು ಹುಡುಕುವ ಕಾರ್ಯ ಮುಂದುವರೆಸಲಾಗಿತ್ತು. ಬಳಿಕ ಮಂಗಳವಾರ ರಾತ್ರಿ ಕಾರ್ಯಾಚರಣೆ ನಿಲ್ಲಿಸಲಾಗಿತ್ತು. ಬಳಿಕ ಬೆಳಗ್ಗೆ ನಾಲ್ಕರಿಂದ ಮತ್ತೆ ಆರಂಭಿಸಲಾಗಿತ್ತು. ಮೀನು ಹಿಡಿಯಲು ಹೋದ ಮೀನುಗಾರರಿಗೆ ಮೃತದೇಹ ಲಭ್ಯವಾಗಿತ್ತು.

English summary
Congress And JDS Triggers Political Row Over Siddhartha, shortly after his body was recovered on the banks of Netrvati River in Mangaluru after a search that went on for over 24 hours, an attempt to politicise the issue was made by the Karnataka unit of the Congress party
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X