ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂತಾರಾಷ್ಟ್ರೀಯ ಮ್ಯಾಗಜೀನ್ ನಲ್ಲಿ ಕುಡ್ಲ ಆಹಾರ ಸಂಸ್ಕೃತಿ ಘಮ ಘಮ

By ಗುರುರಾಜ ಕೆ.
|
Google Oneindia Kannada News

ಮಂಗಳೂರು, ಜುಲೈ.24: ಅಂತರಾಷ್ಟ್ರೀಯ ಟ್ರಾವೆಲ್ ಮ್ಯಾಗ್ ಜಿನ್ ಒಂದರಲ್ಲಿ ಮಂಗಳೂರಿನ ಉಟದ ಮೆನು ಸ್ಥಾನ ಪಡೆದುಕೊಂಡು ಈಗ ಗ್ಲೋಬಲ್ ಲೆವಲ್ ಗೆ ಸುದ್ದಿಯಾಗಿದೆ.

ಅಮೇರಿಕಾದ ನ್ಯೂಯಾರ್ಕ್ ನಿಂದ ಪ್ರಕಟವಾಗುವ ಕೊಂಡೆನಾಸ್ಟ್ ಎನ್ನುವ ಟ್ರಾವೆಲ್ ಆಂಡ್ ಲೈಫ್ ಸ್ಟೈಲ್ ಮ್ಯಾಗ್ ಜಿನ್ ನಲ್ಲಿ ಮಂಗಳೂರಿನ ಫೇಮಸ್ ಹೋಟೆಲ್ ಗಳ ಫುಡ್ ಮೆನುಗಳ ಚಿತ್ರಣ ನೀಡುವ ಜತೆಯಲ್ಲಿ ಸಸ್ಯಹಾರಿ, ಮಾಂಸಾಹಾರಿ ಜತೆಗೆ ನೆಚ್ಚಿನ ಮೀನುಗಳ ಖಾದ್ಯ ತಿನ್ನಲು ದಿ ಬೆಸ್ಟ್ ಊರು ಎನ್ನುವ ಮೂಲಕ ಅಂತರಾಷ್ಟ್ರೀಯ ಅಂಗಳದಲ್ಲಿ ಕುಡ್ಲದ ಪುಡ್ ಸಂಸ್ಕೃತಿಯನ್ನು ಅನಾವರಣ ಮಾಡಿದ್ದಾರೆ.

 ಕೊಂಡೆ ನಾಸ್ಟ್ ಟ್ರಾವೆಲ್

ಕೊಂಡೆ ನಾಸ್ಟ್ ಟ್ರಾವೆಲ್

ಕೊಂಡೆ ನಾಸ್ಟ್ ಟ್ರಾವೆಲ್. ಇದು ಲೈಫ್ ಸ್ಟೈಲ್ ಮತ್ತು ಪ್ರವಾಸೋದ್ಯಮ ವಲಯದಲ್ಲಿ ಅತಿ ಹೆಚ್ಚು ಪ್ರಸಿದ್ಧಿ ಹೊಂದಿರುವ ಅಂತರಾಷ್ಟ್ರೀಯ ಮ್ಯಾಗ್ ಜಿನ್. ಈ ಮ್ಯಾಗ್ ಜಿನ್ ನಲ್ಲಿ ಮಂಗಳೂರಿನ ಉಟದ ಬಗ್ಗೆ ಲೇಖಕ ಕಲ್ಯಾಣ ಕರ್ಮಾರ್ಕರ್ ಸವಿವರವಾದ ಲೇಖನವೊಂದನ್ನು ಬರೆದಿದ್ದು, ಮಂಗಳೂರಿನಲ್ಲಿ ದೊರೆಯುವ ಅತ್ಯುತ್ತಮ ಹೋಟೆಲ್ ಗಳ ಆಹಾರವನ್ನು ಈ ಲೇಖನದಲ್ಲಿ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ದೊರೆಯುವ ಸಸ್ಯಹಾರಿ, ಮಾಂಸಾಹಾರಿ, ಮೀನು, ಹಾಗೂ ಕೆಟಿಯಲ್ಲಿ ಫೇಮಸ್ ಆಗಿದೆ ಎನ್ನುವ ಮೂಲಕ ಆಹಾರ ಪದ್ಧತಿಗಳ ವಿಚಾರವನ್ನು ಚಿತ್ರಿಸಿದ್ದಾರೆ.

 ಲೇಖನದಲ್ಲಿ ಏನಿದೆ?

ಲೇಖನದಲ್ಲಿ ಏನಿದೆ?

ಮಂಗಳೂರು ಹೇಳಿಕೇಳಿ ಕಡಲ ತಡಿಯ ನಗರ. ಇದೇ ಕಾರಣದಿಂದ ಕರಾವಳಿಯಲ್ಲಿ ಹೆಚ್ಚು ಜನ ಮೀನು ಖಾದ್ಯದ ಕುರಿತು ಒಲವಿಟ್ಟುಕೊಂಡಿದ್ದಾರೆ. ಇದರ ಜತೆಯಲ್ಲಿ ತುಳುವರು ಚಿಕನ್ ಘೀ ರೋಸ್ಟ್, ಕೊಂಕಣಿ ಸಮುದಾಯದಲ್ಲಿ ಮಾಡುವ ಸಸ್ಯಹಾರಿ ಅಡುಗೆಗಳು ಎಲ್ಲರಿಗೂ ಇಷ್ಟವಾಗುತ್ತದೆ ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ.

ಮಂಗಳೂರಿನ ನ್ಯೂ ತಾಜ್ ಮಹಲ್ ಕೆಫೆಯಲ್ಲಿ ಸಿಗುವ ತುಪ್ಪದ ದೊಸೆ, ಹಲಸಿನ ಹಣ್ಣಿನ ಗಟ್ಟಿ, ಬಿಸ್ಕೆಟ್ ರೊಟ್ಟಿ, ತುಪ್ಪದಲ್ಲಿ ಅದ್ದಿ ತೆಗೆದ ಉಪ್ಪಿಟ್ಟು , ಬನ್ಸ್, ಅಲ್ಲಿನ ಟೀ, ಬನಾನಾ , ಬಾದಾಮ್ ಹಲ್ವಾ ಕೂಡ ಸಾಕಷ್ಟು ಗ್ರಾಹಕರಿಂದ ಪ್ರಶಂಸೆಗೊಳಪಟ್ಟಿದೆ ಎಂದು ತಿಳಿಸಿದ್ದಾರೆ.

ಆಟಿ ತಿಂಗಳಲ್ಲಿ ತುಳುನಾಡಿನ ಮನೆಗಳಲ್ಲಿ ವೈವಿಧ್ಯ ತಿನಿಸುಗಳ ಘಮಲುಆಟಿ ತಿಂಗಳಲ್ಲಿ ತುಳುನಾಡಿನ ಮನೆಗಳಲ್ಲಿ ವೈವಿಧ್ಯ ತಿನಿಸುಗಳ ಘಮಲು

 ಬಪಾತ್ ಮಸಾಲ

ಬಪಾತ್ ಮಸಾಲ

ಮೀನಿನ ಊಟಕ್ಕೆ ಮಂಗಳೂರಿನ ಮಚ್ ಲೀ ಹೋಟೆಲ್ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ವೆಲೆನ್ಸಿಯಾ ಹತ್ತಿರದಲ್ಲಿರುವ ಮಂಗಳಾ ರೆಸ್ಟೊರೆಂಟ್ ನಲ್ಲಿ ಸಿಗುವ ಫೋರ್ಕ್ ಪದಾರ್ಥ ಜೊತೆಗೆ ಗೋವಾದ ಆಹಾರ ಥಾಲಿ, ಜೊತೆಗೆ ಕರಾವಳಿಯ ಬಪಾತ್ ಮಸಾಲ ಗಳು ನಾಲಿಗೆ ರುಚಿಯನ್ನು ತಣಿಸದೇ ಬಿಡಲಾರದು ಎಂದಿದ್ದಾರೆ.

ಕೊಟ್ಟಾರದಲ್ಲಿರುವ ಕಾರ್ತಿಕ್ ಹೋಟೆಲ್ ನಲ್ಲಿ ಸಿಗುವ ಕೆಟಿಯಂತಹ ಚಹಾ ಕುರಿತು ವರ್ಣನೆ ಮಾಡಿದ್ದಾರೆ. ಅಲ್ಲದೆ ಮಂಗಳೂರಿನ ಬ್ರ್ಯಾಂಡ್ ಮಾರ್ಕ್ ಆಗಿರುವ ಪಬ್ಬಾಸ್ ಐಸ್ ಕ್ರೀಂ ನ ಮಾಹಿತಿ ಕೂಡ ಈ ಮ್ಯಾಗ್ ಜಿನ್ ಲೇಖನದಲ್ಲಿದೆ.

 ಪುಟ್ಟ ಹೋಟೆಲ್ ಗಳ ವಿವರಣೆ

ಪುಟ್ಟ ಹೋಟೆಲ್ ಗಳ ವಿವರಣೆ

ಮಂಗಳೂರಿನ ಪ್ರಸಿದ್ದ ಹೋಟೆಲ್ ಗಳಲ್ಲದೆ ಜನರಿಗೆ ಅಷ್ಟೊಂದು ಚಿರಪರಿಚಿತವಲ್ಲದ ಹೋಟೆಲ್ ಗಳ ಪಟ್ಟಿಮಾಡಿ ಅಲ್ಲಿನ ತಿನಿಸುಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಭವಂತಿ ಸ್ಟ್ರೀಟ್ ನಲ್ಲಿರುವ ಧರ್ಮಪ್ರಕಾಶ್ ಹೋಟೆಲ್, ಸುರತ್ಕಲ್ ನಲ್ಲಿರುವ ಸದಾನಂದ ಹೋಟೆಲ್, ಕುಂದಾಪುರ ಕಡೆಗೆ ಸಾಗಿದಾಗ ಸಿಗುವ ಶೆಟ್ಟೀಸ್ ಲಂಚ್ ಹೋಮ್ ಹೀಗೆ ಹತ್ತಾರು ಪುಟ್ಟ ಹೋಟೆಲ್ ಗಳ ವಿವರಣೆಯನ್ನು ಈ ಲೇಖನದಲ್ಲಿ ಲೇಖಕರು ತಿಳಿಸಿದ್ದಾರೆ.

ಒಂದು ಪ್ರಸಿದ್ಧ ಅಂತರಾಷ್ಟ್ರೀಯ ಮ್ಯಾಗ್ ಜಿನ್ ಆಗಿರುವ ಕೊಂಡೆ ನಾಸ್ಟ್ ನಲ್ಲಿ ಕುಡ್ಲದ ಪುಡ್ ಮೆನು ಕಾರ್ಡ್ ಎಂಟ್ರಿ ಪಡೆದಿರುವುದು ಕರಾವಳಿಯ ಜನತೆಗೆ ಒಂದು ಹೆಮ್ಮೆಯ ಸಂಗತಿ, ಈ ಕುಡ್ಲದ್ ಪುಡ್ ಮೆನು ಕಾರ್ಡ್ ಈಗ ಗ್ಲೋಬಲ್ ಲೆವಲ್ ನಲ್ಲಿ ಸುತ್ತಾಡುತ್ತಿದೆ.

English summary
Written about the Food culture of Mangalore in the International Magazine. Travel and Lifestyle magazine Conde Nast written about Mangalore Famous hotels and food menus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X