ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು; ಹಿಂದೂ ಮಹಿಳೆಗೆ ಬೆದರಿಕೆ, ಯುವಕರ ವಿರುದ್ಧ ಕೇಸು

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜುಲೈ, 24: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೊಯಿಲಾ ಗ್ರಾಮದಲ್ಲಿ ಕಾವ್ಯ ಎಂಬ ಹಿಂದೂ ಯುವತಿ ಮುಸ್ಲಿಂ ಗೆಳತಿ ಮನೆಗೆ ಬಿಯಾನಿ ತರಲು ಹೋಗಿದ್ದಳು. ಅದಕ್ಕೆ ಯುವಕರ ಗುಂಪೊಂದು ಮಹಿಳೆಗೆ ಕೊಲೆ ಬೆದರಿಕೆ ಹಾಕಿದೆ ಎಂಬ ಆರೋಪ ಕೇಳಿ ಬಂದಿದೆ. ಬೆದರಿಕೆ ಹಾಕಿದ್ದ ನಾಲ್ವರು ಯುವಕರು ಈಗ ಪೊಲೀಸರ ಅತಿಥಿಯಾಗಿದ್ದಾರೆ.

ಗರ್ಭಿಣಿಯಾದ ಸಹೋದರಿ ಬಯಕೆಯಂತೆ ಕಾವ್ಯ ಎಂಬ ಯುವತಿ ಮುಸ್ಲಿಂ ಗೆಳತಿಯ ಮನೆಯಲ್ಲಿ ಮಾಡಿದ ಬಿರಿಯಾನಿ ತರಲು ಹೋಗಿದ್ದಳು. ಇದಕ್ಕೆ ಹಿಂದೂ ಯುವತಿಗೆ ನಾಲ್ವರು ಕಿಡಿಗೇಡಿಗಳು ಅವ್ಯಾಚ್ಯ ಶಬ್ಧಗಳಿಂದ‌ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ.

ಕೊಯಿಲಾ ಗ್ರಾಮದಲ್ಲಿ ಶಂಶೀನಾ ಮತ್ತು ಕಾವ್ಯ ಎಂಬ ಯುವತಿ ಜೊತೆಯಲ್ಲೇ ಟೈಲರ್‌ ವೃತ್ತಿಯನ್ನು ಮಾಡುತ್ತಿದ್ದರು. ಇವರಿಬ್ಬರು ಯಾವುದೇ ಧರ್ಮ, ಜಾತಿ ಎನ್ನದೇ ಉತ್ತಮ ಸ್ನೇಹವನ್ನು ಹೊಂದಿದವರಾಗಿದ್ದರು. ಕಾವ್ಯಳ ಅಕ್ಕ ಗರ್ಭಿಣಿಯಾಗಿದ್ದು, ಅವರ ಆಸೆಯಂತೆ ಸಂಶೀನಾ ತಮ್ಮ ಮನೆಯಲ್ಲಿ‌ ಬಿರಿಯಾನಿ ತಯಾರು ಮಾಡಿದ್ದರು.

Complaint Against Group For Threatening Woman

ಬಿರಿಯಾನಿ ತೆಗೆದುಕೊಂಡು ಹೋಗಲು ಕಾವ್ಯ ಆಟೋದಲ್ಲಿ ಸಂಶೀನಾಳ ಮನೆಗೆ ಬಂದಿದ್ದಳು. ನಂತರ ಕವ್ಯ ಬಂದಿದ್ದ ಆಟೋವನ್ನೇ ಹಿಂಬಾಲಿಸಿಕೊಂಡು ಬಂದ ನಾಲ್ವರು ಯುವಕರು ಸಂಶೀನಾ ಮನೆ ಬಳಿ ದಾಂಧಲೆ ಎಬ್ಬಿಸಿದ್ದಾರೆ. ಕಾವ್ಯಗೆ ಮುಸ್ಲಿಮರ ಮನೆಗೆ ಹೋಗುತ್ತೀಯಾ ಅಂತನೂ ಪ್ರಶ್ನೆ ಹಾಕಿ ಕಿರುಕುಳ ನೀಡಿದ್ದಾರೆ. ಅಲ್ಲದೇ ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿ ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ ಎಂಬುದು ಆರೋಪ. ಈ ಹಿನ್ನೆಲೆಯಲ್ಲಿ ಹಿಂಬಾಲಿಸಿಕೊಂಡು ಬಂದು ನಿಂದಿಸಿದ್ದ ನಾಲ್ವರ ವಿರುದ್ಧ ಸಂಶೀನಾ ಕಡಬ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಆರೋಪಿಗಳನ್ನು ಸುದರ್ಶನ್ ಗಲ್ಗೊಡಿ, ಕೆ.ಪ್ರಶಾಂತ್ ಕೊಲ್ಯ, ತಮ್ಮ ಕಲ್ಕಡಿ, ಕೆ.ಪ್ರಸಾದ್ ಕೊಲ್ಯ ಅಂತ ಗುರುತಿಸಲಾಗಿದೆ. ಆರೋಪಿಗಳನ್ನು ಕಡಬ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದು, ಅವರ ವಿರುದ್ಧ ಐಪಿಸಿ ಸೆಕ್ಷನ್ 143, 147, 504, 506 ಮತ್ತು 149ರ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

Complaint Against Group For Threatening Woman

ಹೀಗೆ ಮುಸ್ಲಿಂ ಯುವತಿಯ ಮನೆಗೆ ಹಿಂದೂ ಯುವತಿ ಬಿರಿಯಾನಿ ತರಲು ಹೋಗಿದ್ದಕ್ಕೆ ದಾಳಿ ನಡೆದಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಹಾಗೂ ಬಂಧಿಸಿದ ನಾಲ್ವರು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

English summary
Dakshina Kannada district Kadaba police registered a case against a group of people who have threatened a Muslim woman after she visited Hindu woman friend house. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X