• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಾಗರ ಪಂಚಮಿ ದಿನದಂದೇ ನಡೆಯಿತು ಕುಕ್ಕೆ ಸುಬ್ರಮಣ್ಯ ದೇವಾಲಯದಲ್ಲಿ ಅಚ್ಚರಿ!

|

ಮಂಗಳೂರು, ಜುಲೈ 25: ನಾಡಿನ ಪ್ರಸಿದ್ದ ನಾಗಸನ್ನಿಧಿ ಕ್ಷೇತ್ರ ಕುಕ್ಕೆ ಸುಬ್ರಮಣ್ಯ ದೇವಾಲಯದಲ್ಲಿ ನಾಗರ ಪಂಚಮಿಯ ದಿನದಂದೇ ಅಚ್ಚರಿಯೊಂದು ನಡೆದಿದೆ.

ಕ್ಷೇತ್ರದ ಹೊರಾಂಗಣ ಮತ್ತು ಒಳಾಂಗಣದಲ್ಲಿ ನಾಗರಹಾವು ಪ್ರತ್ಯಕ್ಷವಾಗಿ, ಇಡೀ ದೇವಾಲಯಕ್ಕೆ ಪ್ರದಕ್ಷಿಣೆಯನ್ನು ಹಾಕಿದೆ. ಮೂಲ ದೇವರಿಗೆ ಪಂಚಾಮೃತ ಅಭಿಷೇಕದ ನಂತರ ನಾಗರಹಾವು ಪ್ರತ್ಯಕ್ಷವಾಗಿದೆ.

ನಾಗರಪಂಚಮಿಯಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಬಂದ್

ಕೋವಿಡ್ ಕಾರಣ, ಭಕ್ತರಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶವಿರಲಿಲ್ಲ. ಗರ್ಭಗುಡಿಯೊಳಗಿನ ಹುತ್ತದಿಂದ ನಾಗರಹಾವು ಹೊರಗೆ ಬಂದಿದ್ದು ವಿಶೇಷವಾಗಿತ್ತು. ಮೊದಲಿಗೆ ಅರ್ಚಕರ ಕಣ್ಣಿಗೆ ಬಿದ್ದಿದೆ. ನಾಗ ದೇವರೇ ಪ್ರತ್ಯಕ್ಷರಾದರು ಎನ್ನುವ ಭಾವನೆಯನ್ನು ದೇವಲಾಯದ ಅರ್ಚಕರು ವ್ಯಕ್ತ ಪಡಿಸಿದ್ದಾರೆ.

ದೇವಾಲಯದ ಪ್ರಧಾನ ಅರ್ಚಕರು ಹಾವಿಗೆ ಹಾಲನ್ನು ನೀಡಿದ ಬಳಿಕ, ಹಾವು ದೇವಸ್ಥಾನದ ಅಂಗಣದಿಂದ ಹೊರ ನಡೆದಿದೆ. ಗರ್ಭಗುಡಿಯ ಹಿಂಬಾಗದಲ್ಲಿ ಹುತ್ತವಿದ್ದು, ವರ್ಷಕ್ಕೊಮ್ಮೆ ಇಲ್ಲಿಂದ ಮೂರು ಹಿಡಿ ಮಣ್ಣನ್ನು (ಮೃತ್ತಿಕೆ) ತೆಗೆಯಲಾಗುತ್ತದೆ. ಇದು, ದೇವಾಲಯದ ಮೂಲ ಪ್ರಸಾದವಾಗಿದೆ.

ನಾಗರ ಪಂಚಮಿಯ ದಿನದಂದೇ ನಾಗರಹಾವು ದೇವಾಲಯಕ್ಕೆ ಪ್ರದಕ್ಷಿಣೆ ಹಾಕಿ, ಹಾಲು ಕುಡಿದು ಹೋಗಿರುವುದಕ್ಕೆ ದೇವಾಲಯದ ಅರ್ಚಕ ವೃಂದ ಮತ್ತು ಸಿಬ್ಬಂದಿಗಳು ಧನ್ಯತೆ ವ್ಯಕ್ತಪಡಿಸಿದ್ದಾರೆ.

ಇದೇ ಮೊದಲ ಬಾರಿಗೆ ನಾಗರಪಂಚಮಿಯಂದು ಭಕ್ತರಿಗೆ ದೇಗುಲಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗಿರಲಿಲ್ಲ. ಸಾಮಾಜಿಕ ಅಂತರ ಕಾಪಾಡಲು ಕಷ್ಟವಾಗುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿತ್ತು.

English summary
Cobra Appears In Kukke Subramanya Temple During Nagara Panchami Day,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X