ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಗ್ರರರಿಂದ ಆತಂಕ, ಕರಾವಳಿ ಕಾವಲು ಪಡೆಗೆ ಸನ್ನದ್ಧರಾಗುವಂತೆ ಸೂಚನೆ

|
Google Oneindia Kannada News

ಮಂಗಳೂರು ಏಪ್ರಿಲ್ 27 : ಶ್ರೀಲಂಕಾದಲ್ಲಿ ಸರಣಿ ಆತ್ಮಾಹುತಿ ಬಾಂಬ್‌ ಸ್ಫೋಟ ದುರಂತದ ಬೆನ್ನಲ್ಲೇ ಶ್ರೀಲಂಕಾ ಭದ್ರತಾ ಪಡೆಗಳು ಉಗ್ರರ ಬೇಟೆ ಆರಂಭಿಸಿದೆ.

ಶ್ರೀಲಂಕಾದಲ್ಲಿ ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಯುತ್ತಿರುವ ಕಾರಣ ಉಗ್ರರು ಸಮುದ್ರದ ಮೂಲಕ ದಾಳಿ ನಡೆಸುವ ಸಾಧ್ಯತೆ ಇರುವ ಕಾರಣ ಭಾರತದಲ್ಲೂ ಕಟ್ಟೆಚ್ಚರವಹಿಸಲಾಗಿದೆ.

ಶ್ರೀಲಂಕಾದಲ್ಲಿ ಬಾಂಬ್ ಸ್ಫೋಟ : ಮಂಗಳೂರಿನಲ್ಲಿ ಹೈ ಅಲರ್ಟ್ ಶ್ರೀಲಂಕಾದಲ್ಲಿ ಬಾಂಬ್ ಸ್ಫೋಟ : ಮಂಗಳೂರಿನಲ್ಲಿ ಹೈ ಅಲರ್ಟ್

ಈ ಪರಿಣಾಮ ದೇಶದ ಕರಾವಳಿಯಲ್ಲೂ ಕಟ್ಟೆಚ್ಚರ ವಹಿಸಲಾಗುತ್ತಿದೆ. ಉಗ್ರರು ಸಮುದ್ರ ಮಾರ್ಗದ ಮೂಲಕ ದಕ್ಷಿಣ ಭಾರತ ಪ್ರವೇಶಿಸುವ ಗುಪ್ತಚರ ಮಾಹಿತಿ ಇರುವ ಹಿನ್ನೆಲೆಯಲ್ಲಿ ಆಳ ಸಮುದ್ರದಲ್ಲಿ ನಡೆಯುವ ಚಟುವಟಿಕೆ ಗಳ ಮೇಲೆ ಹದ್ದಿನ ಕಣ್ಣು ಇರಿಲಾಗಿದೆ .

Coastal security police kept on High alert

ಸಮುದ್ರ ದಲ್ಲಿ ಸಂಚರಿಸುವ ಅನುಮಾನಾಸ್ಪದ ದೋಣಿಗಳನ್ನು ತಡೆದು ಶೋಧ ನಡೆಸಲಾಗುತ್ತಿದೆ . ಭಾರತೀಯ ನೌಕಾ ಪಡೆ, ತಟರಕ್ಷಣಾ ಪಡೆಯ ಹಡಗುಗಳು ರಾತ್ರಿ ಹಗಲೆನ್ನದೆ ಸಮುದ್ರದಲ್ಲಿ ಗಸ್ತು ತಿರುಗುತ್ತಿವೆ .

8 ರಾಜ್ಯದಲ್ಲಿ ಉಗ್ರರ ದಾಳಿ ಸಾಧ್ಯತೆ : ನೀಲಮಣಿ ರಾಜು ತುರ್ತು ಪತ್ರ 8 ರಾಜ್ಯದಲ್ಲಿ ಉಗ್ರರ ದಾಳಿ ಸಾಧ್ಯತೆ : ನೀಲಮಣಿ ರಾಜು ತುರ್ತು ಪತ್ರ

ಶ್ರೀಲಂಕಾ ಸರಣಿ ಸ್ಫೋಟದ ಬಳಿಕ ಇತ್ತೀಚಿನ ದಿನಗಳಲ್ಲಿ ಉದ್ಭವಿಸಿರುವ ಆತಂಕ ಪರಿಸ್ಥಿತಿಯ ಕಾರಣ ರಾಜ್ಯದ ಕರಾವಳಿ ಕಾವಲು ಪಡೆಯ ಪೊಲೀಸರಿಂದ ಸಮುದ್ರ ಗಸ್ತು ತೀವ್ರಗೊಳಿಸಲಾಗಿದೆ . ಈ ಹಿನ್ನೆಲೆಯಲ್ಲಿ ಐಎಸ್‌ಡಿ ಡಿಜಿಪಿ ಎ.ಎಂ. ಪ್ರಸಾದ್‌ ಹಾಗು ಹಿರಿಯ ಅಧಿಕಾರಿಗಳು ಉಡುಪಿ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಭಾರತ ನೀಡಿದ್ದ ಎಚ್ಚರಿಕೆಯನ್ನು ಲಂಕಾ ಗಂಭೀರವಾಗಿ ತೆಗೆದುಕೊಂಡಿದ್ದರೆ.. ಭಾರತ ನೀಡಿದ್ದ ಎಚ್ಚರಿಕೆಯನ್ನು ಲಂಕಾ ಗಂಭೀರವಾಗಿ ತೆಗೆದುಕೊಂಡಿದ್ದರೆ..

ಕರಾವಳಿಯ ಕಾವಲು ಪಡೆಯ ಇಂಟರ್‌ಸೆಪ್ಟರ್‌ ಬೋಟ್‌ ಗಳು ಸಮದ್ರದಲ್ಲಿ ಪೆಟ್ರೋಲಿಂಗ್‌ ಆರಂಭಿಸಿವೆ .

ಶ್ರೀಲಂಕಾದಲ್ಲಿ ಸಂಭವಿಸಿರುವ ಉಗ್ರರ ಆತ್ಮಾಹುತಿ ದಾಳಿ ಹಿನ್ನೆಲೆಯಲ್ಲಿ ಕರಾವಳಿ ಕಾವಲು ಪೊಲೀಸ್‌ ವತಿಯಿಂದ ಕರ್ನಾಟಕ ಕರಾವಳಿಯ ಮಂಗಳೂರಿನಿಂದ ಕಾರವಾರದ ತನಕ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

English summary
After Sri lanka serial blasts , high alert announced in coastal districts. Security tighten in coastal sensitive areas , religious places . Coastal security police force kept on high alert in coastal districts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X