ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಡಗಿನಲ್ಲಿ ಬೆಂಕಿ, 16 ವಿಜ್ಞಾನಿಗಳು ಸೇರಿ 46 ಮಂದಿ ಅಪಾಯದಿಂದ ಪಾರು

|
Google Oneindia Kannada News

ಮಂಗಳೂರು ಮಾರ್ಚ್ 16: ಭಾರತೀಯ ತಟ ರಕ್ಷಣಾ ಪಡೆ ಆಳ ಸಮುದ್ರದಲ್ಲಿನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಹಡಗಿನಲ್ಲಿದ್ದ 16 ವಿಜ್ಞಾನಿ ಗಳು ಸೇರದಂತೆ 46 ಮಂದಿಯನ್ನು ರಕ್ಷಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ . ಕಳೆದ ತಡ ರಾತ್ರಿ ಈ ಘಟನೆ ನಡೆದಿದ್ದು ಭಾರತೀಯ ತಟ ರಕ್ಷಣಾ ಪಡೆ ಕ್ಷಿಪ್ರ ಕಾರ್ಯಾಚರಣೆ ಯಿಂದ ಭಾರಿ ಅನಾಹುತವೊಂದು ತಪ್ಪಿದೆ.

ಮಂಗಳೂರು ರಸ್ತೆಗಳಲ್ಲಿ ಹರಿದ ಮೀನಿನ ತ್ಯಾಜ್ಯ ನೀರು, ಕ್ರಮಕ್ಕೆ ಮೀನಾಮೇಷ ಮಂಗಳೂರು ರಸ್ತೆಗಳಲ್ಲಿ ಹರಿದ ಮೀನಿನ ತ್ಯಾಜ್ಯ ನೀರು, ಕ್ರಮಕ್ಕೆ ಮೀನಾಮೇಷ

ಮಂಗಳೂರಿನಂದ ಕಡಲಲ್ಲಿ 35 ನಾಟಿಕಲ್ ಮೈಲ್ ದೂರದಲ್ಲಿ ಈ ಘಟನೆ ನಡೆದಿದೆ. ಕಾರ್ಪೋರೇಷನ್ ಆಫ್ ಇಂಡಿಯಾ ಒಡೆತನಕ್ಕೆ ಸೇರಿದ ಸಾಗರ ಸಂಪದ ಎಂಬ ಹೆಸರಿನ ಹಡಗಿನಲ್ಲಿ ಕಳೆದ ತಡರಾತ್ರಿ ಏಕಾಏಕಿ ಬೆಂಕಿ ಕಾಣಿಸಿಗೊಂಡಿದೆ. ಆಳ ಸಮುದ್ರದ ಬಗ್ಗೆ ಅಧ್ಯಯನ ನಡೆಸಲು ಈ ಹಡಗು ತೆರಳಿತ್ತು ಎಂದು ಹೇಳಲಾಗಿದೆ. ಬೆಂಕಿ ಕಾಣಿಸಿಕೊಂಡ ಬಗ್ಗೆ ಕೋಸ್ಟ್ ಗಾರ್ಡ್‌ಗೆ ಮಾಹಿತಿ ರವಾನಿಸಲಾಗಿತ್ತು.

Coast Guard rescue operation in deep sea

ತಕ್ಷಣ ಕೋಸ್ಟ್ ಗಾರ್ಡ್ ತನ್ನ ಐಸಿಜಿಎಸ್ ಸುಜಯ್ ಮತ್ತು ವಿಕ್ರಮ್ ನೌಕೆಯನ್ನು ಕಾರ್ಯಾಚರಣೆಗೆ ಇಳಿಸಿದೆ. ಮಧ್ಯರಾತ್ರಿ 12.20ಕ್ಕೆ ಸ್ಥಳಕ್ಕೆ ತಲುಪಿದ ಈ ಎರಡು ನೌಕೆ ಕಾರ್ಯಾಚರಣೆ ಆರಂಭಿಸಿದ್ದವು. ತಟರಕ್ಷಣಾ ಪಡೆಯ ಯೋಧರು ಸಾಗರ ಸಂಪದ ನೌಕೆ ಒಳಗಡೆ ತೆರಳಿ ಬೆಂಕಿಯನ್ನು ನಂದಿಸುವ ಕಾರ್ಯಾಚರಣೆ ನಡೆಸಿದರು. ವಿಕ್ರಮ್ ನೌಕೆ ಸಿಬ್ಬಂದಿ ಹೊರಗಡೆಯಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು.

ಆಳ ಸಮುದ್ರದಲ್ಲಿ ಅಪಾಯದಲ್ಲಿದ್ದ 15 ಮೀನುಗಾರರನ್ನು ರಕ್ಷಿಸಿದ ಭಾರತೀಯ ತಟರಕ್ಷಣಾ ಪಡೆ ಆಳ ಸಮುದ್ರದಲ್ಲಿ ಅಪಾಯದಲ್ಲಿದ್ದ 15 ಮೀನುಗಾರರನ್ನು ರಕ್ಷಿಸಿದ ಭಾರತೀಯ ತಟರಕ್ಷಣಾ ಪಡೆ

ಮುಂಜಾನೆ 1.30ರ ವೇಳೆಗೆ ಬೆಂಕಿಯನ್ನು ಸಂಪೂರ್ಣ ನಂದಿಸಲಾಯಿತು. ಹಡಗಿನಲ್ಲಿದ್ದ 16 ಮಂದಿ ವಿಜ್ಞಾನಿಗಳು ಸೇರಿದಂತೆ 30 ಮಂದಿ ಹಡಗಿನ ಸಿಬ್ಬಂದಿಗಳನ್ನು ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ರಕ್ಷಿಸಿ ನವ ಮಂಗಳೂರು ಬಂದರಿಗೆ ಕರೆ ತಂದಿದ್ದಾರೆ.

English summary
Indian Coast Guard ships Vikram and Shoor doused a major fire on board a ship, Sagar Sampada - carrying around 30 crew and 16 scientists, late night off the Mangaluru coast in Karnataka. The ship is now being brought back to Mangaluru port,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X