ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಣಂಬೂರು ಕಡಲ ತೀರಕ್ಕೆ ಬಂತು ಹೋವರ್ ಕ್ರಾಫ್ಟ್

|
Google Oneindia Kannada News

ಮಂಗಳೂರು, ಸೆ. 23 : ಕರ್ನಾಟಕದ ಕರಾವಳಿ ತೀರದ ಮೇಲೆ ಕಣ್ಗಾವಲಿಡಲು ಬಳಸುವ ಹೋವರ್ ಕ್ರಾಫ್ಟ್ ಏರ್ಕುಶನ್ ಎಚ್-916 ಮಂಗಳೂರಿನ ಪಣಂಬೂರು ಕಡಲ ಕಿನಾರೆಗೆ ಆಗಮಿಸಿದೆ. ತಣ್ಣೀರುಬಾವಿಯಲ್ಲಿ ಸುಸಜ್ಜಿತ ನಿಲ್ದಾಣ ನಿರ್ಮಾಣಗೊಳ್ಳುವ ತನಕ ಇದು ಪಣಂಬೂರಿನಲ್ಲಿಯೇ ಇರಲಿದೆ.

ಸೋಮವಾರ ಪಣಂಬೂರಿನಲ್ಲಿರುವ ಕರಾವಳಿ ರಕ್ಷಣಾ ಪಡೆಯ ಕಚೇರಿ ಸಮೀಪ ಹೋವರ್ ಕ್ರಾಫ್ಟ್‌ಅನ್ನು ಕರಾವಳಿ ರಕ್ಷಣಾ ಪಡೆಯ ಕರ್ನಾಟಕ ಕಮಾಂಡರ್ ಹಾಗೂ ಡಿಐಜಿ ರಾಜಮಣಿ ಶರ್ಮ ಸೇರಿದಂತೆ ಇತರ ಅಧಿಕಾರಿಗಳು ಸಿಬ್ಬಂದಿಗಳೊಂದಿಗೆ ಬರಮಾಡಿಕೊಂಡರು. ಲಂಡನ್ ನಿರ್ಮಿತ ಈ ಹೋವರ್ ಕ್ರಾಫ್ಟ್‌ ಕರಾವಳಿ ರಕ್ಷಣಾ ಪಡೆಗೆ ಸೇರಿಕೊಂಡು ಕೆಲವು ತಿಂಗಳು ಕಳೆದಿದೆ.

ತಣ್ಣೀರುಬಾವಿಯಲ್ಲಿ ಹೋವರ್ ಪೋರ್ಟ್ ನಿರ್ಮಾಣಗೊಳ್ಳುವ ತನಕ ಈ ಹೋವರ್ ಕ್ರಾಫ್ಟ್ ಪಣಂಬೂರಿನ ಕಡಲ ಕಿನಾರೆಯಲ್ಲಿ ಲಂಗರು ಹಾಕಲಿದ್ದು, ಕರ್ನಾಟಕ ಕರಾವಳಿ ತೀರದ ಮೇಲೆ ಕಣ್ಗಾವಲಿಡಲಿದೆ. ಹೋವರ್ ಕ್ರಾಪ್ಟ್ ಎಚ್ - 196ನೊಂದಿಗೆ ಕಮಾಂಡೆಂಟ್ ಗುಲ್ ವಿಂದರ್ ಸಿಂಗ್, ಸಹಾಯಕ ಕಮಾಂಡೆಂಟ್ ಜೆ.ಎಸ್. ಡೆಲನ್ ಸೇರಿದಂತೆ 10 ಮಂದಿ ಸಿಬ್ಬಂದಿಗಳಿದ್ದಾರೆ. ಹೋವರ್ ಕ್ರಾಪ್ಟ್ ಎಚ್ - 196ನ ಚಿತ್ರಗಳು [ಚಿತ್ರಗಳು : ಐಸಾಕ್ ರಿರ್ಚಡ್ ಮಂಗಳೂರು]

ಪಣಂಬೂರಿಗೆ ಬಂತು ಹೋವರ್ ಕ್ಟಾಫ್ಟ್‌

ಪಣಂಬೂರಿಗೆ ಬಂತು ಹೋವರ್ ಕ್ಟಾಫ್ಟ್‌

ಕರ್ನಾಟಕದ ಕರಾವಳಿ ತೀರದ ಮೇಲೆ ಕಣ್ಗಾವಲಿಡಲು ಬಳಸುವ ಹೋವರ್ ಕ್ರಾಫ್ಟ್ ಏರ್ಕುಶನ್ ಎಚ್ - 196 ಮಂಗಳೂರಿನ ಪಣಂಬೂರು ಕಡಲ ಕಿನಾರೆಗೆ ಸೋಮವಾರ ಆಗಮಿಸಿದೆ. ತಣ್ಣೀರುಬಾವಿಯಲ್ಲಿ ಇದಕ್ಕಾಗಿ ನಿಲ್ದಾಣ ನಿರ್ಮಾಣಗೊಳ್ಳುವ ತನಕ ಇದು ಪಣಂಬೂರಿನಲ್ಲಿಯೇ ಇರಲಿದೆ.

31 ಟನ್ ತೂಕವಿದೆ ಹೋವರ್ ಕ್ರಾಫ್ಟ್

31 ಟನ್ ತೂಕವಿದೆ ಹೋವರ್ ಕ್ರಾಫ್ಟ್

ಕರ್ನಾಟಕ ಕರಾವಳಿ ರಕ್ಷಣಾ ಪಡೆಗೆ ಸೇರಿರುವ ಹೋವರ್ ಕ್ರಾಫ್ಟ್‌ ಎಚ್ - 196 31 ಟನ್ ತೂಕವಿದೆ. 21 ಮೀಟರ್ ಉದ್ದದ ಇದರಲ್ಲಿ ಸ್ಟನ್‌ ಗನ್, ಪಿಸ್ತೂಲ್, ಸಣ್ಣ ದೋಣಿ ಇದೆ. ಶಸ್ತ್ರ ಸಜ್ಜಿತವಾದ ಹೋವರ್ ರಾಡಾರ್ ಮತ್ತು ಅತ್ಯಾಧುನಿಕ ಬೈನಾಕ್ಯುಲರ್ ವ್ಯವಸ್ಥೆಯನ್ನು ಹೊಂದಿದೆ.

ನೀರು ನೆಲದ ಮೇಲೆ ಚಲನೆ

ನೀರು ನೆಲದ ಮೇಲೆ ಚಲನೆ

ಈ ಹೋವರ್ ಕ್ಟಾಫ್ಟ್‌ ಎಚ್ 196 ಸಮುದ್ರದಲ್ಲಿ ಗಂಟೆಗೆ ಸುಮಾರು 90 ಕಿ.ಮೀ.ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಸಮುದ್ರ ದಂಡೆಯಲ್ಲಿ ಹಾಗೂ ಸಮತಟ್ಟಾದ ಪ್ರದೇಶದಲ್ಲಿಯೂ ಚಲಿಸುತ್ತದೆ.

ಕೆಲವು ತಿಂಗಳ ಹಿಂದೆ ಸೇರಿಕೊಂಡಿದೆ

ಕೆಲವು ತಿಂಗಳ ಹಿಂದೆ ಸೇರಿಕೊಂಡಿದೆ

ಲಂಡ್ ನಿರ್ಮಿತ ಹೋವರ್ ಕ್ರಾಫ್ಟ್ ಕೆಲವು ತಿಂಗಳ ಹಿಂದೆ ಕರ್ನಾಟಕ ಕರಾವಳಿ ರಕ್ಷಣಾ ಪಡೆಗೆ ಸೇರಿಕೊಂಡಿದೆ. ಮತ್ತೊಂದು ಹೋವರ್ ಕ್ರಾಫ್ಟ್ ಶೀಘ್ರದಲ್ಲೇ ಸೇರ್ಪಡೆಗೊಳ್ಳಲಿದೆ ಎಂದು ಕರಾವಳಿ ರಕ್ಷಣಾ ಪಡೆಯ ಕರ್ನಾಟಕ ಕಮಾಂಡರ್ ರಾಜಮಣಿ ಶರ್ಮ ಹೇಳಿದ್ದಾರೆ.

English summary
Coast Guard Hovercraft H-196 air cushion vehicle built by the UK arrived at Panambur beach, Mangalore. Modern hovercraft that has the ability to move on water as well as land will strengthen the coast guard surveillance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X