ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಲ್ಲಿಂದೆಲ್ಲಿ ನಂಟು: ಯುಪಿಯಲ್ಲಿ ಯೋಗಿ ಸ್ಪರ್ಧಿಸಿದರೆ, ಮಂಗಳೂರಿನಲ್ಲಿ ಕೆರಳುವುದು ಕುತೂಹಲ!

By ಮಂಗಳೂರು, ಪ್ರತಿನಿಧಿ
|
Google Oneindia Kannada News

ಮಂಗಳೂರು, ಜನವರಿ 15: ದೇಶದ ಚಿತ್ತ ಉತ್ತರ ಪ್ರದೇಶದತ್ತ ನೆಟ್ಟಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತೆ ಉತ್ತರ ಪ್ರದೇಶದ ಗೋರಖ್ ಪುರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಒಂದೆಡೆ ಪಕ್ಷದಿಂದ ಹೊರಹೋಗುತ್ತಿರುವ ಸಾಲು ಸಾಲು ನಾಯಕರು, ಇನ್ನೊಂದೆಡೆ ಚುನಾವಣಾ ಬಹಿರಂಗ ಪ್ರಚಾರಕ್ಕೆ ಸಿಕ್ಕಿರುವ ಕಡಿಮೆ ಅವಧಿ ಎಲ್ಲವೂ ಚುನಾವಣಾ ಲೆಕ್ಕಾಚಾರ ಯಾವುದೇ ಕ್ಷಣದಲ್ಲಿ ಬದಲಾವಣೆ ಮಾಡಬಲ್ಲವು ಎಂಬುವುದು ರಾಜಕೀಯ ಪಂಡಿತರ ಮಾತಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿರುವ ಯೋಗಿ ಆದಿತ್ಯನಾಥ್ ಭವಿಷ್ಯ ಮತ್ತು ಮುಂದಿನ ಲೋಕಸಭಾ ಚುನಾವಣೆಗೂ ಈ ಚುನಾವಣೆ ದಿಕ್ಸೂಚಿಯಾಗಲಿದೆ ಎಂದು ಹೇಳಲಾಗಿದೆ. ದೇಶದ ಜನರನ್ನು ಸೆಳೆಯುತ್ತಿರುವ ಉತ್ತರ ಪ್ರದೇಶ ಚುನಾವಣೆಗೆ ಇತ್ತ ಮಂಗಳೂರಿನಲ್ಲೂ ಕುತೂಹಲ ಗದಿಗೆದರಿದೆ. ಉತ್ತರದ ಉತ್ತರ ಪ್ರದೇಶಕ್ಕೂ ದಕ್ಷಿಣದ ಮಂಗಳೂರಿಗೂ ಏನು ಸಂಬಂಧ ಎಂಬ ಪ್ರಶ್ನೆಗೆ ಯೋಗಿಯ ಗುರು ಪರಂಪರೆಯ ಹಾದಿ ಕಾಣಸಿಗುತ್ತದೆ.

ಅಯೋಧ್ಯೆ ಸ್ಪರ್ಧೆಯಿಂದ ಅಂತರ ಕಾಯ್ದುಕೊಂಡಿದ್ದು ಏಕೆ ಯೋಗಿ ಆದಿತ್ಯನಾಥ್?ಅಯೋಧ್ಯೆ ಸ್ಪರ್ಧೆಯಿಂದ ಅಂತರ ಕಾಯ್ದುಕೊಂಡಿದ್ದು ಏಕೆ ಯೋಗಿ ಆದಿತ್ಯನಾಥ್?

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೂ ಮಂಗಳೂರಿನ ಕದ್ರಿ ಜೋಗಿ ಮಠಕ್ಕೂ ಅವಿನಾಭಾವ ನಂಟಿದೆ. ಮುಖ್ಯಮಂತ್ರಿ ಆಗುವುದಕ್ಕೂ ಮೊದಲೇ ಹಲವು ಬಾರಿ ಕದ್ರಿಯ ಜೋಗಿ ಮಠಕ್ಕೆ ಭೇಟಿ‌ ನೀಡಿದ್ದ ಯೋಗಿ ಆದಿತ್ಯನಾಥ್, ಮುಖ್ಯಮಂತ್ರಿಯಾದ ಬಳಿಕವೂ ಹಲವು ಬಾರಿ ಮಂಗಳೂರಿಗೆ ಆಗಮಿಸಿದ್ದಾರೆ.

CM Yogi Adityanath Compete in Gorakhpur; Curiosity rised in Mangalore about Uttar Pradesh Election

ಕದ್ರಿಯಲ್ಲಿರುವ ಯೋಗೇಶ್ವರ ಮಠವು ನಾಥ ಸಂಪ್ರದಾಯದ ಮಠ. ನಾಥ ಪಂಥದ ಅಧ್ಯಕ್ಷರಾದ ಯೋಗಿ ಆದಿತ್ಯನಾಥರು ಕದ್ರಿಯ ಯೋಗಿ ಮಠಕ್ಕೆ ಮುಖ್ಯಸ್ಥರನ್ನು ಆಯ್ಕೆ ಮಾಡುವುದು, ಇದೇ ಯೋಗಿ ಆದಿತ್ಯನಾಥ್ ಎನ್ನೋದು ವಿಶೇಷವಾಗಿದೆ.

ಕದಳಿ ಯೋಗೇಶ್ವರ ಮಠಕ್ಕೆ 1,000 ವರ್ಷಗಳ ಇತಿಹಾಸ

ಕದಳಿ ಯೋಗೇಶ್ವರ ಮಠಕ್ಕೆ 1,000 ವರ್ಷಗಳ ಇತಿಹಾಸ

ಮಂಗಳೂರಿನ ಕದ್ರಿ ಗುಡ್ಡದ ತುದಿಯಲ್ಲಿ ಕದಳಿ ಯೋಗೇಶ್ವರ ಮಠವಿದೆ. ಈ ಮಠಕ್ಕೆ 1000 ವರ್ಷಗಳ ಇತಿಹಾಸವಿದೆ. ಇದು ದಕ್ಷಿಣ ಭಾರತದಲ್ಲಿರುವ ನಾಥ ಪಂಥದ ಪ್ರಮುಖ ಕೇಂದ್ರ ಅಂತಾನೂ ಪ್ರಸಿದ್ಧಿಯಾಗಿದೆ. ಇಲ್ಲಿ ಪರಶುರಾಮರು ತಪಸ್ಸನ್ನಾಚರಿಸಿದ ಕುರುಹಾಗಿ ಸದಾ ಅಗ್ನಿ ಪ್ರಜ್ವಲಿಸುತ್ತಿರುವ ಪರಶುರಾಮ ಅಗ್ನಿಕುಂಡವಿದೆ. ಮಠದ ಸುತ್ತ ಇರುವ ವನವನ್ನು 'ಕದಳಿವನ' ಎನ್ನುತ್ತಾರೆ. ಇಲ್ಲಿ ಈ ಹಿಂದೆ ರಾಜರಾಗಿ ಪಟ್ಟಾಭಿಷಿಕ್ತರಾದವರ ಸಮಾಧಿಗಳನ್ನು ಕಾಣಬಹುದು. ಈ ಪೈಕಿ ಸಿದ್ದಗುರು ಜ್ವಾಲಾನಾಥರ ಸಮಾಧಿ ಅತ್ಯಂತ ಪವಿತ್ರವಾದುದು. ಇಲ್ಲಿ ಮುಕ್ತಿ ಹೊಂದುವ ಪರಿಪಾಟವಿದ್ದು ಇದನ್ನು 'ಮುಕ್ತಿವನ' ಎಂದೂ ಕರೆಯುತ್ತಾರೆ.

 ನಾಥ ಪಂಥದ ಮೂಲ ಪ್ರವರ್ತಕರ ಹಿನ್ನೆಲೆ

ನಾಥ ಪಂಥದ ಮೂಲ ಪ್ರವರ್ತಕರ ಹಿನ್ನೆಲೆ

ಮತ್ಸ್ಯೆಂದ್ರನಾಥರು ಮತ್ತು ಅವರ ಪ್ರಮುಖ ಶಿಷ್ಯ ಗೋರಕ್ಷನಾಥರು ನಾಥಪಂಥದ ಮೂಲ ಪ್ರವರ್ತಕರಾಗಿದ್ದಾರೆ. ನಾಥ ಪಂಥವು ಗುರು ಶಿಷ್ಯ ಪರಂಪರೆಯಾಗಿದ್ದು ಯೋಗದ ಮುಖೇನ ಮುಕ್ತಿ ಹೊಂದುವುದನ್ನು ಬೋಧಿಸುತ್ತದೆ. ಈ ಪರಂಪರೆ ಭಾರತದೆಲ್ಲೆಡೆ ಅಲ್ಲದೆ ನೆರೆ ರಾಷ್ಟ್ರಗಳಾದ ನೇಪಾಳ, ಟಿಬೆಟ್, ಸಿಂಹಳ, ಬರ್ಮ, ಪಾಕಿಸ್ತಾನ, ಅಫಘಾನಿಸ್ಥಾನ, ಇರಾನ್‍, ಬಲುಚಿಸ್ಥಾನಗಳಲ್ಲೂ ಪಸರಿಸಿದೆ.
ಕದಳಿ ಯೋಗೇಶ್ವರ ಮಠದ ಪೀಠಾಧಿಪತಿಗಳಿಗೆ ಕದ್ರಿ ದೇವಸ್ಥಾನದ ಜಾತ್ರೆಗಳಲ್ಲಿ ವಿಶಿಷ್ಟ ಪಾತ್ರವಿದೆ. ಕದ್ರಿ ರಥೋತ್ಸವದ ದಿನ ಪೀಠಾಧಿಪತಿಗಳು ಬ್ರಹ್ಮರಥದ ಎದುರಿನಲ್ಲಿ ಕುದುರೆಯನ್ನೇರಿ ರಥದ ಮುಂದೆ ಚಲಿಸುವ ಪದ್ಧತಿ ಇದೆ.‌‌ ಈ ಪದ್ಧತಿ ಮತ್ಸ್ಯೆಂದ್ರನಾಥ, ಗೋರಕ್ಷನಾಥರ ಸಮಯದಿಂದ ನಡೆದು ಬಂದಿರುತ್ತದೆ. ಹಾಗೆ ಕದ್ರಿ ಮಂಜುನಾಥ ದೇವಸ್ಥಾನದ ಜಾತ್ರೆ ಪ್ರಾರಂಭದ ಮುನ್ನಾದಿನ ಕದಳಿ ಪೀಠಾಧಿಪತಿಗಳು ಮಂಗಳಾದೇವಿ ದೇವಸ್ಥಾನಕ್ಕೆ ತೆರಳಿ ಫಲ, ಪುಷ್ಪ, ಸೀರೆ, ಅರ್ಪಿಸಿ ಕದ್ರಿ ದೇವಸ್ಥಾನದ ಜಾತ್ರೆ ನಿರ್ವಿಘ್ನವಾಗಿ ಜರುಗಲಿ ಎಂದು ಪ್ರಾರ್ಥಿಸುವ ಪದ್ಧತಿ ಇಂದಿಗೂ ನಡೆದು ಬಂದಿದೆ.

ಕದಳಿ ಮಠಕ್ಕೆ 12 ವರ್ಷಕ್ಕೊಮ್ಮೆ ಪೀಠಾಧಿಪತಿ ನೇಮಕ

ಕದಳಿ ಮಠಕ್ಕೆ 12 ವರ್ಷಕ್ಕೊಮ್ಮೆ ಪೀಠಾಧಿಪತಿ ನೇಮಕ

ಕದಳಿ ಮಠಕ್ಕೆ ನೂತನ ಪೀಠಾಧಿಪತಿಗಳನ್ನು ಪ್ರತಿ 12 ವರ್ಷಗಳಿಗೊಮ್ಮೆ ನೇಮಿಸಲಾಗುತ್ತದೆ. ವಿಜಯನಗರ ಸಾಮ್ರಾಜ್ಯದ ವಿವಿಧ ಅರಸರು ಶ್ರೀ ಕ್ಷೇತ್ರದ ಪೀಠಾಧಿಪತಿಗಳಿಗೆ ಸುಮಾರು 150 ಎಕರೆಗಳಷ್ಟು ಜಮೀನು ದಾನ ನೀಡಿ ಈ ಪ್ರದೇಶದ ಆಳುವಿಕೆಯನ್ನು ನಡೆಸುವಂತೆ ಕೋರಿದ ಹಿನ್ನಲೆಯಲ್ಲಿ ಪೀಠಾಧಿಪತಿಗಳನ್ನು 'ರಾಜ' ಎಂದು ಸಂಬೋಧಿಸಲಾಗುತ್ತದೆ.
ರಾಜರ ಆಯ್ಕೆ ವಾಡಿಕೆಯಂತೆ ತ್ರೈಂಬಕೇಶ್ವರ (ನಾಸಿಕ) ದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಶ್ರಾವಣ ಮಾಸದಲ್ಲಿ ಜರಗುವ ಕುಂಭ ಮೇಳದಲ್ಲಿ ನಡೆಯುತ್ತದೆ. ನಾಥಪಂಥದ 12 ಕವಲುಗಳಿಗೆ ಸೇರಿದ ಸಾಧುಗಳು ಅಖಿಲ ಭಾರತ ವರ್ಷೀಯ ಅವಧೂತ ಯೋಗಿ ಮಹಾಸಭಾ ಬೇಖ್ ಬಾರಹಪಂಥ್‍ದ ಪದಾಧಿಕಾರಿಗಳ ಸಮ್ಮುಖದಲ್ಲಿ ನೂತನ ರಾಜರ ಆಯ್ಕೆಯನ್ನು ನಡೆಸುತ್ತಾರೆ. ಗಂಗಾನಾಥ್, ನಟೇಶ್ವರಿ, ಬೈರಾಗ್ ಮತ್ತು ಕಪಲಾನಿ ಕವಲುಗಳಿಗೆ ಸೇರಿದ ಸಾಧುಗಳು ಮಾತ್ರ ಕದಳಿ ಮಠಕ್ಕೆ ರಾಜರಾಗಿ ಆಯ್ಕೆಗೊಳ್ಳಲು ಅರ್ಹರಾಗಿರುತ್ತಾರೆ. ಹೀಗೆ ಪ್ರತಿ ಕವಲಿಗೆ 48 ವರ್ಷಗಳಿಗೊಮ್ಮೆ ರಾಜರಾಗಿ ಆಯ್ಕೆಗೊಳ್ಳುವ ಅವಕಾಶ ಇರುತ್ತದೆ. ಜೋಗಿ ಮಠದ ಮುಂದಿನ ರಾಜರು ಬೈರಾಗಿ ಕವಲಿಗೆ ಸೇರಿದವರಾಗಿರುತ್ತಾರೆ.

9 ದಿನಗಳವರೆಗೂ ನಡೆಯಲಿರುವ ಜಾತ್ರಾ ಮಹೋತ್ಸವ

9 ದಿನಗಳವರೆಗೂ ನಡೆಯಲಿರುವ ಜಾತ್ರಾ ಮಹೋತ್ಸವ

ಕದಲಿ ಮಂಜುನಾಥ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ ಈ ಬಾರಿಯೂ ಮಕರ ಸಂಕ್ರಮಣದ ಮುನ್ನಾದಿನ ಕದಲಿ ಶ್ರೀ ಮಂಜುನಾಥ ಸ್ವಾಮಿ ಕ್ಷೇತ್ರದ ವತಿಯಿಂದ ಇಂದು ಮಂಗಳಾದೇವಿ ಅಮ್ಮನವರಿಗೆ, ಜೋಗಿ ಮಠದ ಪರ್ಯಾಯ ಪಟ್ಟದಲ್ಲಿರುವ ಅರಸು ನಿರ್ಮಲಾ ನಾಥ ಜೀ ಜೋಗಿ ರಾಯರು ತಮ್ಮ ಅನುಯಾಯಿಗಳೊಂದಿಗೆ ಕ್ಷೇತ್ರಕ್ಕೆ ಆಗಮಿಸಿ ಪಟ್ಟೆ-ಪೀತಾಂಬರ ವಸ್ತ್ರದೊಂದಿಗೆ ತಾಂಬೂಲ ಸಹಿತ ಕದ್ರಿ ಜಾತ್ರಾ ಮಹೋತ್ಸವಕ್ಕೆ ಆಹ್ವಾನವನ್ನಿತ್ತು ದೇವಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.
ಮಂಜುನಾಥ ಸ್ವಾಮಿಗೆ ವರ್ಷಾವಧಿ ಜಾತ್ರಾ ಜ.14ರಂದು ಆರಂಭವಾಗಿ ಒಂಭತ್ತು ದಿನಗಳ ಕಾಲ ಪರ್ಯಂತ ವರ್ಷಾವಧಿ ಉತ್ಸವ ನಡೆಯಲಿದೆ. ಜನವರಿ 21ರ ಶುಕ್ರವಾರದಂದು ಮಂಜುನಾಥ ದೇವರ ಶ್ರೀಮನ್ಮಾಹ ರಥೋತ್ಸವವು ವಿಜೃಂಭಣೆಯಿಂದ ನೆರವೇರಲಿದೆ. ಇದಕ್ಕೂ ಮೊದಲು ಮಂಗಳಾದೇವಿ ಸನ್ನಿಧಾನದಲ್ಲಿ ಶ್ರೀ ದೇವಿಗೆ ರಾಜೋಚಿತವಾಗಿ ಸ್ವತಃ ಜೋಗಿ ಅರಸರು ಪ್ರಾರ್ಥನೆಯೊಂದಿಗೆ ಗೌರವ ಸಲ್ಲಿಸಬೇಕು.
ಕದಳಿ ಯೋಗೇಶ್ವರ ಮಠದ ಪೀಠಾಧಿಪತಿಗಳಾದ ಜೋಗಿ ಅರಸರಿಗೆ ಕದ್ರಿ ದೇವಸ್ಥಾನದ ಉತ್ಸವಾದಿ ಜಾತ್ರೆಗಳಲ್ಲಿ ವಿಶಿಷ್ಟ ಪಾತ್ರವಿದೆ. ಕದಲಿ ಮಂಜುನಾಥನ ರಥೋತ್ಸವದ ದಿನದಂದು ಪೀಠಾಧಿಪತಿಗಳು ಮನ್ಮಾಹ ರಥದ ಎದುರಿನಲ್ಲಿ ರಥಕ್ಕೆ ಕಾಯಿ ಹೊಡೆದು ಕುದುರೆಯನ್ನೇರಿ ರಥದ ಮುಂದೆ ಅಶ್ವರೂಢರಾಗಿ ಚಲಿಸುವ ಪದ್ಧತಿ ಮತ್ಸ್ಯೆಂದ್ರನಾಥ, ಗೋರಕ್ಷನಾಥರ ಸಮಯದಿಂದ ನಡೆದು ಬಂದಿರುತ್ತದೆ.
ಅಲ್ಲದೆ ಕದ್ರಿ ಮಂಜುನಾಥ ದೇವಸ್ಥಾನದ ವರ್ಷಾವಧಿ ಜಾತ್ರೆಯ ಪ್ರಾರಂಭದ ಮುನ್ನಾದಿನ ಕದಳಿ ಪೀಠಾಧಿಪತಿಗಳು ಮಂಗಳಾದೇವಿಯ ದೇವಸ್ಥಾನಕ್ಕೆ ಆಗಮಿಸಿ ಫಲ ಪುಷ್ಪ, ಸೀರೆ, ಮೊದಲಾದ ಸುವಸ್ತುಗಳನ್ನು ಅರ್ಪಿಸಿ ಕದಲೀ ಮಂಜುನಾಥನ ಜಾತ್ರೆಯ ಉತ್ಸವಾದಿ ಮಹೋತ್ಸವಗಳು, ರಥ ಸವಾರಿಯು ಸಾಂಗದಿಂದ ನಿರ್ವಿಘ್ನವಾಗಿ ನಡೆಯಬೇಕೆಂದು ದೇವಿಯಲ್ಲಿ ಶರಣಾಗತರಾಗಿ ಭಕ್ತಿ ಪೂರ್ವಕವಾಗಿ ಸಂಪ್ರಾರ್ಥಿಸುವ ಪದ್ಧತಿ ಇಂದಿಗೂ ನಡೆದು ಬಂದಿದೆ. ಕದ್ರೀ ಕ್ಷೇತ್ರದ ಮೂಲಕ ನಾಥ ಪಂಥಕ್ಕೂ ಮಂಗಳಾದೇವಿಗೂ ವಿಶಿಷ್ಠ ಐತಿಹಾಸಿಕ ಪರಂಪರೆಯಿದೆ.
ಕದಲಿಯ ಯೋಗೀಶ್ವರ(ಜೋಗಿ)'ಮಠದಲ್ಲಿ ಪ್ರತಿ ಹನ್ನೆರಡು ವರ್ಷಕ್ಕೊಮ್ಮೆನಡೆಯುವ ವೈಭವದ ಪರ್ಯಾಯ ರಾಜ ಪಟ್ಟಾಭಿಷೇಕವು ನೆರವೇರುವುದು ಪದ್ದತಿಯಾಗಿದೆ. ಈ ಬಾರಿ ಕಳೆದ 2016 ರ ಮಾರ್ಚ್ 6 ಹಾಗು 7 ರಂದು ಕದ್ರಿ ಜೋಗಿ ಮಠದಲ್ಲಿ ನಡೆದು ಅರಸು ನಿರ್ಮಲಾನಾಥ್ ಅವರಿಗೆ ಪರ್ಯಾಯ ರಾಜ ಪಟ್ಟಾಭಿಷೇಕ ಮಹೋತ್ಸವವು ವಿಜೃಂಭಣೆಯಿಂದ ನಡೆದಿತ್ತು. ಕದಳಿ ಮಠಕ್ಕೆ ನೂತನ ಪೀಠಾಧಿಪತಿಗಳನ್ನು ಮುಂದಿನ 12 ವರ್ಷಗಳಿಗೊಮ್ಮೆ ನೇಮಿಸಲಾಗುತ್ತದೆ. ಐತಿಹಾಸಿಕ ಹಿನ್ನೆಲೆಯುಳ್ಳ ನಾಥ ಪಂಥದ ಮುಖ್ಯಸ್ಥರಾಗಿರುವ ಯೋಗಿ ಆದಿತ್ಯನಾಥ್ ಈ ಬಾರಿ ನಿರ್ಣಾಯಕ ಹೋರಾಟಕ್ಕೆ ಧುಮುಕಿದ್ದು, ಮಂಗಳೂರಿಗೆ ವಿಶೇಷ ನಂಟು‌ ಹೊಂದಿರುವ ಮಂಗಳೂರನಲ್ಲಿ ಕುತೂಹಲ ಗದಿಗೆದರಿದೆ.

English summary
CM Yogi Adityanath Compete in Gorakhpur; Curiosity rised in Mangalore about Uttar Pradesh Election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X