ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೊಲೀಸರನ್ನು ಬಳಸಿ ಮಾಧ್ಯಮ ನಿರ್ಬಂಧಕ್ಕೆ ಮುಂದಾದ ಮುಖ್ಯಮಂತ್ರಿ

|
Google Oneindia Kannada News

ಉಡುಪಿ, ಮೇ 01: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೋದಲ್ಲಿ ಬಂದಲ್ಲಿ ಮಾಧ್ಯಮಗಳ ಮೇಲೆ ಉರಿದು ಬೀಳುತ್ತಿದ್ದಾರೆ. ಅದರಲ್ಲೂ ಸುದ್ದಿವಾಹಿನಗಳ ಕ್ಯಾಮೆರಾ ಕಂಡರೆ ಸಿ ಎಂ ಗೆ ಎಲ್ಲಿಲ್ಲದ ಕೋಪ ಬರುತ್ತಿದೆ. ಹೋದಲೆಲ್ಲಾ ಸಿ ಎಂ ಮುಖ ಕಂಪಾಗಿಸಿಕೊಂಡು ಮಾಧ್ಯಮ ಗಳ ಮೇಲೆ ವಾಗ್ದಾಳಿ ನಡೆಸುತ್ತಿದ್ದಾರೆ.

ಎಡ-ಬಿಡದೆ ಚುನಾವಣಾ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ‌ ಮಾಜಿ‌ ಪ್ರಧಾನಿ ಎಚ್ ಡಿ‌ ದೇವೇಗೌಡ ಅವರು ಪ್ರಕೃತಿ ಚಿಕಿತ್ಸೆ ಪಡೆಯಲು ಏಪ್ರಿಲ್ 28 ರ ರಾತ್ರಿ ಉಡುಪಿಯ ಕಾಪು ಎಂಬಲ್ಲಿರುವ ಹೆಲ್ತ್ ರೆಸಾರ್ಟ್ ಗೆ ಬಂದುತಂಗಿದ್ದಾರೆ .

ಲೋಕಸಭಾ ಚುನಾವಣೆ ವಿಶೇಷ ಪುಟ

ಹೆಲ್ತ್ ರಿಸಾರ್ಟ್ ಗೆ ಬರುವ ಸಂದರ್ಭದಲ್ಲೇ ಕುಮಾರಸ್ವಾಮಿ ಮಾಧ್ಯಮಗಳ ಮೇಲೆ ತಮ್ಮ ಮುನಿಸು ತೋರಿಸಿದ್ದರು. ಬೆಂಗಳೂರಿನಲ್ಲಿ ಮಾಧ್ಯಮ ವರದಿಗಾರರ ಮೇಲೆ ತಮ್ಮ ಮುನಿಸು ಹೊರಹಾಕಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಕಾಪು ಹೆಲ್ತೆ ರೆಸಾರ್ಟ್ ಭೇಟಿಯನ್ನು ಸಂಪೂರ್ಣ ಖಾಸಗಿಯಾಗಿಯೇ ಕಳೆಯಲು ಬಯಸಿದ್ದರು. ಹಾಗಾಗಿ ರೆಸಾರ್ಟ್ ನ ಅಸುಪಾಸಿಗೂ ಯಾರೂ ಬರದಂತೆ ಪೊಲೀಸರಿಗೆ ಸೂಚಿಸಿದ್ದರು.

ಉಡುಪಿಯಲ್ಲೂ ಮಾಧ್ಯಮಗಳ ಮೇಲೆ ಮುನಿಸು ತೋರಿದ ಕುಮಾರಸ್ವಾಮಿಉಡುಪಿಯಲ್ಲೂ ಮಾಧ್ಯಮಗಳ ಮೇಲೆ ಮುನಿಸು ತೋರಿದ ಕುಮಾರಸ್ವಾಮಿ

ಅಂದು ರಾತ್ರಿ ಚಿತ್ರೀಕರಣಕ್ಕೆ ತೆರಳಿದ್ದ ಮಾಧ್ಯಮದವರಿಗೆ ಪೊಲೀಸರು ಅಡ್ಡಿಪಡಿಸಿದ್ದರು. ಮಾಧ್ಯಮ ವರದಿಗಾರರಿಗೆ ಸಾರ್ವಜನಿಕ ರಸ್ತೆಯಲ್ಲೂ ನಿಲ್ಲಲು ಅವಕಾಶ ನಿರಾಕರಿಸಿದರು. ಈ ವೇಳೆ ಪೊಲೀಸ್ ಅಧಿಕಾರಿಗಳು ಹಾಗು ಮಾದ್ಯಮ ಪ್ರತಿನಿಧಿಗೊಂದಿಗೆ ಮಾತಿನ ಚಕಮಕಿಯೂ ನಡೆದಿತ್ತು.

'ಯಾರ್ರಿ ಇವರನ್ನು ಒಳಗೆ ಬಿಟ್ಟಿದ್ದು'

'ಯಾರ್ರಿ ಇವರನ್ನು ಒಳಗೆ ಬಿಟ್ಟಿದ್ದು'

ಈ ಮೊದಲು ಏಪ್ರಿಲ್ 21 ರಂದು ಕಾಪು ಹೆಲ್ತ್ ರಿಸಾರ್ಟ್ ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅಗಮಿಸುತ್ತಿದ್ದಂತೆ ಮಾಧ್ಯಮದವರ ವಿರುದ್ಧ ಕಿಡಿಕಾರಿದ್ದರು. ರೆಸಾರ್ಟ್ ಗೆ ಆಗಮಿಸುತ್ತಿದ್ದಂತೆ ಮಾಧ್ಯಮದವರ ಕ್ಯಾಮೆರಾಗಳನ್ನು ಕಂಡು ಕೋಪಗೊಂಡ ಕಮಾರಸ್ವಾಮಿ , 'ಯಾರ್ರೀ ಇವರನ್ನ ಒಳಗೆ ಬಿಟ್ಟವರು. ಸ್ವಲ್ಪನೂ ಮ್ಯಾನರ್ಸ್ ಇಲ್ವೇನ್ರೀ ಇವರಿಗೆ. ಮಾಧ್ಯಮಗಳಿಗೆ ಮಾಹಿತಿ ಕೊಟ್ಟೋರು ಯಾರು? ಖಾಸಗಿ ಕಾರ್ಯಕ್ರಮ ಅಂತ ಗೊತ್ತಿಲ್ವಾ ನಿಮ್ಗೆ? ಕಾಮನ್ ಸೆನ್ಸ್ ಇಲ್ವಾ ನಿಮಗೆ' ಎಂದು ರೆಸಾರ್ಟ್ ಪ್ರವೇಶ ಶೂಟಿಂಗ್ ಮಾಡಿದ್ದಕ್ಕೆ ಗರಂ ಆಗಿದ್ದರು.

5 ದಿನ ಕಾಪುವಿನಲ್ಲಿ ಕುಮಾರಸ್ವಾಮಿಗೆ ಆಯುರ್ವೇದ ಚಿಕಿತ್ಸೆ5 ದಿನ ಕಾಪುವಿನಲ್ಲಿ ಕುಮಾರಸ್ವಾಮಿಗೆ ಆಯುರ್ವೇದ ಚಿಕಿತ್ಸೆ

ಪೊಲೀಸರನ್ನು ಬಳಸಿ ಮಾಧ್ಯಮದ ಮೇಲೆ ದಬ್ಬಾಳಿಕೆ

ಪೊಲೀಸರನ್ನು ಬಳಸಿ ಮಾಧ್ಯಮದ ಮೇಲೆ ದಬ್ಬಾಳಿಕೆ

ಈಗ ಮತ್ತೇ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಧ್ಯಮಗಳ ಮೇಲೆ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಪೊಲೀಸ್ ಆಧಿಕಾರಿಗಳನ್ನು ಬಳಸಿ ಮಾಧ್ಯಮಗಳ ನಿಯಂತ್ರಣಕ್ಕೆ ಮುಂದಾಗಿದ್ದಾರೆ.

ಆಯುರ್ವೇದ ಚಿಕಿತ್ಸೆ ಪಡೆಯುವುದೂ ಮೋಜಾ? : ಬಿಎಸ್ ವೈ ಹೇಳಿಕೆಗೆ ಸಾರಾ ಮಹೇಶ್ ತಿರುಗೇಟುಆಯುರ್ವೇದ ಚಿಕಿತ್ಸೆ ಪಡೆಯುವುದೂ ಮೋಜಾ? : ಬಿಎಸ್ ವೈ ಹೇಳಿಕೆಗೆ ಸಾರಾ ಮಹೇಶ್ ತಿರುಗೇಟು

ಮನೆಯವರ ಮೇಲೆ ಪೊಲೀಸರ ದಬ್ಬಾಳಿಕೆ

ಮನೆಯವರ ಮೇಲೆ ಪೊಲೀಸರ ದಬ್ಬಾಳಿಕೆ

ಕಾಪು ರಿಸಾರ್ಟ್ ಪಕ್ಕದಲ್ಲಿರುವ ಸಣ್ಣ ಮನೆ ಅಂಗಳದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಮಾಧ್ಯಮ ವರದಿಗಾರರ ಮೇಲೆ ಮುಖ್ಯಮಂತ್ರಿ ಕುಮಾರಸ್ವಾಮಿ ಕೆಂಗಣ್ಣು ಬೀರಿದ್ದಾರೆ. ಮಾಧ್ಯಮದವರಿಗೆ ಕುಡಿಯಲು ನೀರು ಕೊಟ್ಟು ಮನೆಯ ಜಗಲಿಯ ಮೇಲೆ ವಿಶ್ರಾಂತಿ ಪಡೆಯಲು ಅವಕಾಶ ನೀಡಿದ್ದ ಮನೆಯವರ ಮೇಲೆ ಪೋಲಿಸರಿಂದ ದಬ್ಬಾಳಿಕೆ ನಡೆಸಲಾಗಿದೆ. ಮಾಧ್ಯಮದವರಿಗೆ ಆಶ್ರಯ ನೀಡದಂತೆ ರಿಸಾರ್ಟ್ ಸುತ್ತಲಿನ ಮನೆಯವರಿಗೆ ಪೊಲೀಸ್ ಅಧಿಕಾರಿಗಳು ಬೆದರಿಕೆ ಹಾಕಿದ್ದಾರೆ.

ಜನರಿಗೆ ತೊಂದರೆ ಕೊಡುತ್ತಿರುವ ಪೊಲೀಸರು?

ಜನರಿಗೆ ತೊಂದರೆ ಕೊಡುತ್ತಿರುವ ಪೊಲೀಸರು?

ಮಾಧ್ಯಮದವರಿಗೆ ಆಶ್ರಯ ನೀಡದಂದೆ, ಒಂದು ವೇಳೆ ಆಶ್ರಯ ನೀಡಿದರೆ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಗೆ ನೀಡಲಾಗಿದೆ. ಮಾಧ್ಯಮ ನಿರ್ಬಂದ ಹೆಸರಿನಲ್ಲಿ ಪೋಲಿಸರಿಂದ ಪರಿಸರದ ಜನರಿಗೆ ತೊಂದರೆ ನೀಡಲಾಗುತ್ತಿದೆ. ಮಾಧ್ಯಮದವರು ಸಾರ್ವಜನಿಕ ರಸ್ತೆಯಲ್ಲೂ ನಿಲ್ಲದಂತೆ ಪೋಲಿಸರು ಒತ್ತಡ ಹೇರುತ್ತಿದ್ದಾರೆ.

ಮಾಧ್ಯಮದವರಿಗೆ ಆಶ್ರಯ ನೀಡಿದ್ದವರ ಮೇಲೆ ದರ್ಪ

ಮಾಧ್ಯಮದವರಿಗೆ ಆಶ್ರಯ ನೀಡಿದ್ದವರ ಮೇಲೆ ದರ್ಪ

ಮಾಧ್ಯಮದವರು ಜಗಲಿಯ ಮೇಲೆ ವಿಶ್ರಾತಿಗೆ ಅವಕಾಶ ನೀಡಿದ್ದ ಮನೆಗೆ ಇಂದು ಆಗಮಿಸಿದ ಕಾಪು ಪೊಲೀಸ್ ಠಾಣೆಯ ಎಸ್ ಐ ನವೀನ್ ಎಸ್ ನಾಯ್ಕ್ ನಿಮ್ಮ ಮನೆಯ ದಾಖಲೆ ಕೊಡಿ ಎಂದು ಮನೆಯವರಿಗೆ ಬೆದರಿಕೆ ಹಾಕಿದ್ದಾರೆ. ಮಧ್ಯಮ ದವರಿಗೆ ಇಲ್ಲಿ ಆಶ್ರಯ ನೀಡಬೇಡಿ ಮುಂದೆ ನಿಮ್ಮ ಮೇಲೂ ಕ್ರಮ ಆಗುತ್ತೆ ಎಂದು ಪೋಲಿಸ ಅಧಿಕಾರಿ ಬೆದರಿಕೆ ಹಾಕಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳು ಹಾಗು ಪೊಲೀಸ್ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ.

ಮಾಧ್ಯಮದವರ ಮೇಲೆ ಸಿಎಂ ಉರಿದು ಬೀಳುತ್ತಿದ್ದಾರೆ

ಮಾಧ್ಯಮದವರ ಮೇಲೆ ಸಿಎಂ ಉರಿದು ಬೀಳುತ್ತಿದ್ದಾರೆ

ಖಾಸಗಿ ಜಾಗಕ್ಕೂ ಬಂದು ಪೋಲಿಸರ ದರ್ಪ ತೋರುತ್ತಿರುವುದರ ಹಿಂದಿನ ಮರ್ಮವೇನು ? ಏನನ್ನು ಮುಚ್ಚಿಡಲು ಈ ಎಲ್ಲಾ ಕಸರತ್ತು ನಡೆಯುತ್ತಿದೆ ಎಂಬ ಪ್ರಶ್ನೆ ಪರಿಸರದಲ್ಲಿ ಮೂಡಲಾರಂಭಿಸಿದೆ. ಮುಖ್ಯಮಂತ್ರಿಗಳ ವಿಶ್ರಾಂತಿಗೆ ಭಂಗದರುವ ಯಾವ ಕಾರ್ಯಕ್ಕೂ ಮಾಧ್ಯಮ ಮರದಿಗಾರರು ಮುಂದಾಗಿಲ್ಲ. ಸಿ ಎಂ ಖಾಸಗಿ ಸಮಯದಲ್ಲೂ ಎಂಟ್ರಿ ಕೊಟ್ಟಿಲ್ಲ. ಆದರೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮಾಧ್ಯಮಗಳನ್ನು ಕಂಡರೆ ಯಾಕೆ ಉರಿದು ಬೀಳುತ್ತಾರೆ ಎಂಬುದೇ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

English summary
There is a clash between media persons and police officers near Kapu health resort were CM Kumaraswamy and former prime minister Deve gowda under going panchakarma treatment . Police officers restricting media person's to enter Kapu area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X