ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜ. 19ರಂದು ಮಂಗಳೂರು ವಿವಿಗೆ ಸಿದ್ದರಾಮಯ್ಯ ಭೇಟಿ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜನವರಿ. 18 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನವರಿ 19ರಂದು ಗುರುವಾರ ಮಂಗಳೂರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿಲಿದ್ದಾರೆ.

ರಾಜ್ಯ ಸರ್ಕಾರದ ಎರಡು ಕೋಟಿ ರೂ. ಅನುದಾನ ದಲ್ಲಿ ನಿರ್ಮಾಣವಾಗಿರುವ ಮಂಗಳೂರು ವಿವಿಯ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ ಮತ್ತು ಸಸ್ಯಶಾಸ್ತ್ರ ವಿಭಾಗದ ಹೊಸ ಕಟ್ಟಡವನ್ನು ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ.[ಮಂಜೇಶ್ವರದಲ್ಲಿ ಜ. 19ರಂದು ಡಾ. ಗೋವಿಂದಪೈ ಸ್ಮಾರಕ ಉದ್ಘಾಟನೆ]

ವಿವಿಯಲ್ಲಿ ನಿರ್ಮಿಸಿರುವ ಅಂತಾರಾಷ್ಟ್ರೀಯ ಮಟ್ಟದ ಮಾಡ್ಯುಲರ್ ಪ್ರಯೋಗಾಲಯಗಳನ್ನು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅನಾವರಣಗೊಳಿಸಲಿದ್ದಾರೆ.

CM Siddaramaiah to Inaugurate Brahmashree Narayana Guru Study Chair in Mangaluru University on jan 19th

ಇದಲ್ಲದೆ 2016-17 ನೇ ಸಾಲಿನಲ್ಲಿ ರಾಷ್ಟ್ರ ಮಟ್ಟದಲ್ಲಿ ದಾಖಲೆ ನಿರ್ಮಿಸಿದ ಮಂಗಳೂರು ವಿವಿಯ ಕ್ರೀಡಾಪಟುಗಳಿಗೆ ಬಿ.ರಮಾನಾಥ ರೈ ಸನ್ಮಾನ ಮಾಡಲಿದ್ದಾರೆ.

ಅಧ್ಯಯನ ಪೀಠದ ಬ್ರಹ್ಮಶ್ರೀ ನಾರಾಯಣ ಗುರು ಪುಸ್ತಕವನ್ನು ಶಾಸಕ ವಿನಯ್ ಕುಮಾರ್ ಸೊರಕೆ ಬಿಡುಗಡೆ ಮಾಡಲಿದ್ದಾರೆ.

CM Siddaramaiah to Inaugurate Brahmashree Narayana Guru Study Chair in Mangaluru University on jan 19th

ವಿಶ್ವ ವಿದ್ಯಾನಿಲಯ ಪ್ರಸಾರಾಂಗದ ರಜತ ಮಹೋತ್ಸವದ ಅಂಗವಾಗಿ ಪ್ರಸಾರಾಂಗ 25 ಪುಸ್ತಕಗಳನ್ನು ಪ್ರಕಟಗೊಳಿಸುವ ಗುರಿ ಇದ್ದು,

ಮೂರೂ ಆಂಗ್ಲ ಪುಸ್ತಕಗಳು ಸೇರಿದಂತೆ 19 ಪುಸ್ತಕಗಳ ಬಿಡುಗಡೆಯನ್ನು ಹಿರಿಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪಾ ಹಾಗೂ ಕನ್ನಡ ವಿಶ್ವವಿದ್ಯಾನಿಲಯ ಮತ್ತು ಕರ್ನಾಟಕ ರಾಜ್ಯ ಮುಕ್ತ ವಿವಿಯ ವಿಶ್ರಾಂತ ಕುಲಪತಿ ಪ್ರೊ.ವಿವೇಕ ರೈ ನೆರವೇರಿಸಲಿದ್ದಾರೆ.

ಅದೆ ದಿನ ಜನವರಿ 19ರಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ನಿವಾಸ ಹಾಗೂ ಗೋವಿಂದ ಪೈ ಪ್ರತಿಮೆಯನ್ನು ಮಂಜೇಶ್ವರದಲ್ಲಿ ಉದ್ಘಾಟಿಸುವರು.

English summary
Chief Minister of Karnataka Siddaramaiah will inaugurate Brahmashree Narayana Guru Study Chair on January 19. The Government of Karnataka has already given the approval for Rs 2 crores for the Chair. He will also inaugurate the new building of the Mangaluru VV Applied Botany department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X