ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ರೈತರ ಸಾಲ ಮನ್ನಾ ಮಾಡಿ ಇಲ್ಲದಿದ್ರೆ ತಕ್ಕ ಬೆಲೆ ತೆರಬೇಕಾದಿತು'

|
Google Oneindia Kannada News

ಮಂಗಳೂರು, ಜೂನ್ 13 : ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತರ ಸಾಲ ಮನ್ನಾ ಮಾಡಿ ಇಲ್ಲದಿದ್ದರೆ ಪ್ರತಿದಿನ ಪತ್ರಿಕಾಗೋಷ್ಠಿ ಕರೆದು ತರಾಟೆಗೆತ್ತಿಕೊಳ್ಳುವುದು ಅನಿವಾರ್ಯವಾದೀತು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕು ಇಲ್ಲದಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ ತಕ್ಕ ಬೆಲೆ ತೆರಬೇಕಾಗಬಹುದು ಸೂಕ್ಷ್ಮವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದರು.

ತಾಕತ್ತಿದ್ದರೆ ಬಿಜೆಪಿ ಸಿಡಿ ಬಿಡುಗಡೆ ಮಾಡಿ ಹೆಚ್ ಡಿಕೆಗೆ ಪೂಜಾರಿ ಸವಾಲ್ತಾಕತ್ತಿದ್ದರೆ ಬಿಜೆಪಿ ಸಿಡಿ ಬಿಡುಗಡೆ ಮಾಡಿ ಹೆಚ್ ಡಿಕೆಗೆ ಪೂಜಾರಿ ಸವಾಲ್

CM And PM Should Be Ashamed Of Farmers Committing Suicide says Poojary

ಸಿದ್ದರಾಮಯ್ಯ ಆಳವಾದ ನಿದ್ರೆ ಮಾತ್ರ ಮಾಡುತ್ತಾರೆ, ಅವರು ರೈತರಿಗೆ ನ್ಯಾಯ ಒದಗಿಸುವಲ್ಲಿ ವಿಫಲರಾಗಿದ್ದಾರೆ. ನಾನು ಸಚಿವನಾಗಿದ್ದಾಗ ನಾನು ರೈತರ ಸಾಲವನ್ನು ಮನ್ನಾಮಾಡುವ ಪ್ರಯತ್ನ ಮಾಡಿದ್ದೇನೆ.

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ರೈತರ ಸಾಲವನ್ನು ಮನ್ನಾ ಮಾಡುವ ಭರವಸೆ ನೀಡಿದೆ ಎಂದರು.

ರೈತರ ಆತ್ಮಹತ್ಯೆಗೆ ಸಿಎಂ ಮತ್ತು ಪ್ರಧಾನಮಂತ್ರಿಯವರು ತಲೆತಗ್ಗಿಸಬೇಕು. ಮೊದಲು ನೀವು ನಿಮಗಿರುವ ಅಧಿಕಾರ ಬಳಸಿ ರೈತರ ಸಾಲ ಮನ್ನಾ ಮಾಡಿ. ನಂತರ ಕೇಂದ್ರದ ಮೇಲೆ ಒತ್ತಾಯ ಹೇರೋಣ, ಅವರು ಒಣ ಪ್ರತಿಷ್ಠೆ ಮಾಡುತ್ತಿದ್ದಾರೆ.

ಇದರಿಂದ ರೈತರಿಗೆ ಈ ನಾಡಿಗೆ ಒಳಿತಾಗುವುದಿಲ್ಲ. ಹಾಗೆಂದು ನಾವು ಸುಮ್ಮನೆ ಕೂರುವ ಪ್ರಶ್ನೆಯೇ ಇಲ್ಲ ರೈತರಿಗೆ ಪೂರಕವಾಗುವ ಕ್ರಮಗಳನ್ನು ಕೈಗೊಳ್ಳುವ ಮೂಲಕ ಬೇರೆ ರಾಜ್ಯಗಳಿಗೂ ಮಾದರಿಯಾಗಿ ಎಂದು ಸಿದ್ದರಾಮಯ್ಯರಿಗೆ ಕಿವಿಮಾತು ಹೇಳಿದರು.

English summary
The CM of Karnataka and the PM of our country should be ashamed of the farmers committing Suicide. The Chief Minister should stop blaming the Union government to waive the loan, said Veteran Congress leader Janardhan Poojary on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X