ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು: ಫಲ್ಗುಣಿಗೆ ಶುದ್ಧೀಕರಣ ಭಾಗ್ಯ

ಕಲುಷಿತಗೊಂಡ ಫಲ್ಗುಣಿ ನದಿ ನೀರನ್ನು ಆಕ್ಸಿಡೈಜಿಂಗ್ ಏಜೆಂಟ್ ಮಾದರಿ ಬಳಸಿಕೊಂಡು ಶುದ್ಧೀಕರಣಗೊಳಿಸುವಂತೆ ಜಿಲ್ಲಾಧಿಕಾರಿ ಕೆ.ಜೆ. ಜಗದೀಶ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಇಂದಿನಿಂದ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ.

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮೇ 20: ಮಂಗಳೂರಿನ ಮರವೂರು-ಕೂಳೂರು ವ್ಯಾಪ್ತಿಯಲ್ಲಿ ಕಲುಷಿತಗೊಂಡ ಫಲ್ಗುಣಿ ನದಿ ನೀರನ್ನು ಆಕ್ಸಿಡೈಜಿಂಗ್ ಏಜೆಂಟ್ ಮಾದರಿ ಬಳಸಿಕೊಂಡು ಶುದ್ಧೀಕರಣಗೊಳಿಸುವಂತೆ ಜಿಲ್ಲಾಧಿಕಾರಿ ಕೆ.ಜೆ. ಜಗದೀಶ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಇಂದಿನಿಂದ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ.

ಕಲುಷಿತ ನೀರನ್ನು ಆಧುನಿಕ ತಂತ್ರಜ್ಞಾನ ಬಳಸಿಕೊಂಡು, ಆಕ್ಸಿಡೈಜಿಂಗ್ ಏಜೆಂಟ್ ಮಾದರಿಯಲ್ಲಿ ಶುದ್ಧೀಕರಣಗೊಳಿಸಬೇಕಾಗಿದೆ. ನೀರನ್ನು ಪಂಪ್ ಮೂಲಕ ಚಿಮುಕಿಸಿ ಶುದ್ಧೀಕರಣ ಕ್ರಿಯೆ ನಡೆಯಲಿದೆ. ಅನಿವಾರ್ಯವಾದರೆ ಪೊಟ್ಯಾಷಿಯಂ ಪರ್ಮೊಗನೇಟ್ ಬಳಸುವಂತೆ ಸೂಚನೆ ನೀಡಿದ್ದಾರೆ.[ಮಂಗಳೂರು: ಮಾಲಿನ್ಯದಿಂದ ಕಪ್ಪಾಯಿತು ಫಲ್ಗುಣಿ ನದಿ]

Cleaning process of Phalguni river has started in Mangaluru

ಇನ್ನು ಪರಿಸರದ ಕಾಳಜಿ ಜನರಿಗೆ ಮಾತ್ರವಲ್ಲ, ಕೈಗಾರಿಕೆಗಳಿಗೂ ಇರಬೇಕು. ಪರಿಸರವನ್ನು ನಾಶ ಮಾಡುವ ಯಾವ ಕೈಗಾರಿಕೆಯೂ ಅಗತ್ಯವಿಲ್ಲ. ಇನ್ನು ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ನದಿ ನೀರು ಕಲುಷಿತವಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಕಲುಷಿತವಾದರೆ ಸಂಬಂಧಪಟ್ಟ ಕಂಪನಿ ವಿರುದ್ಧ ಕ್ರಿಮಿನಲ್ ಕೇಸ್ ಹಾಕಲಾವುದು ಎಂದು ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

{promotion-urls}

English summary
Some industries discharging their industrial wastages caused pollution in Phalguni river in Mangaluru. District Commissioner of Mangaluru K.J.Jagadeesh has instructed to clean the river as soon as possible. the cleaning process has already started.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X