ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವ ಸರ್ಫಿಂಗ್ ಪ್ರಶಸ್ತಿ ಗೆದ್ದ ಮುಲ್ಕಿಯ ತನ್ವಿ ಜಗದೀಶ್

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು , ಮೇ 11: ಅಮೆರಿಕಾದ ನಾರ್ತ್ ಕರೋಲಿನಾದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಸರ್ಫಿಂಗ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಮಂಗಳೂರಿನ ಯುವತಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಏಪ್ರಿಲ್ ತಿಂಗಳಿನಲ್ಲಿ ಈ ಸ್ಪರ್ಧೆ ಜರುಗಿತ್ತು. ಇದರಲ್ಲಿ ಭಾರತವನ್ನು ಮೂಲ್ಕಿಯ ಮಂತ್ರ ಸರ್ಫಿಂಗ್ ಕ್ಲಬ್ ಸದಸ್ಯೆ, ಮೂಲ್ಕಿಯ ಕೊಳಚಿ ಕಂಬಳದ ನಿವಾಸಿ ತನ್ವಿ ಜಗದೀಶ್ ಭಾಗವಹಿಸಿ, ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

City surfer Tanvi bags 3rd at Word Class Surfing event held in North Carolina

ಎಳವೆಯಲ್ಲೇ ಉನ್ನತ ಮಟ್ಟಕ್ಕೇರುವ ಕನಸು

ಮೂಲ್ಕಿಯ ಕೊಳಚಿ ಕಂಬಳದಲ್ಲಿರುವ ಮಂತ್ರ ಸರ್ಫಿಂಗ್ ಕ್ಲಬ್ ಸದಸ್ಯೆಯಾಗಿರುವ ತನ್ವಿಯವರು ಚಿಕ್ಕಂದಿನಿಂದಲೇ ಸರ್ಫಿಂಗನತ್ತ ಆಸಕ್ತಿಯನ್ನು ವಹಿಸಿದ್ದರು. ಮೂಲ್ಕಿಯ ಕೊಳಚಿ ಕಂಬಳದ ತನ್ನ ಅಜ್ಜನ ಮನೆಯ ಪಕ್ಕದಲ್ಲಿರುವ ಮಂತ್ರ ಸರ್ಫಿಂಗ ಕ್ಲಬ್ಬಿನಲ್ಲಿ ತರಬೇತಿಯನ್ನು ಪಡೆಯುತ್ತಿದ್ದರು.

City surfer Tanvi bags 3rd at Word Class Surfing event held in North Carolina

ಅವರು ಈಗಾಗಲೇ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸರ್ಫಿಂಗನಲ್ಲಿ ಆಸಕ್ತಿಯನ್ನು ಹೊಂದಿರುವ ತನ್ವಿ ಇನ್ನು ಹೆಚ್ಚಿನ ಕಲಿಕೆಗಾಗಿ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯ ಬಳಿಕ ಇದೀಗ ಮುಂಬಯಿಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ.

City surfer Tanvi bags 3rd at Word Class Surfing event held in North Carolina

ಮೇ ತಿಂಗಳ ಅಂತ್ಯದಲ್ಲಿ ಸಸಿಹಿತ್ಲುವಿನಲ್ಲಿ ಜರಗಲಿರುವ ರಾಷ್ಟ್ರಮಟ್ಟದ ಸರ್ಫಿಂಗ್ ಸ್ಪರ್ಧೆಯಲ್ಲಿ ತನ್ವಿ ಜಗದೀಶ್ ಪಾಲ್ಗೊಳ್ಳಲಿದ್ದು ಅದರತ್ತ ತಮ್ಮ ಚಿತ್ತ ನೆಟ್ಟಿದ್ದಾರೆ.

English summary
City surfer Tanvi bags 3rd prize at word class sufring event surfing event held in North Carolina. Tanvi Jagadish becomes the first women to represent India in Stand-Up Paddling at an event in the USA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X