ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಲ್ಲಿ ಕಳೆಕಟ್ಟಿದ ಕ್ರಿಸ್ ಮಸ್ ಸಂಭ್ರಮ, ಅದ್ಧೂರಿ ಸಿದ್ಧತೆ

|
Google Oneindia Kannada News

ಮಂಗಳೂರು, ಡಿಸೆಂಬರ್ 23 : ಜಗತ್ತಿನೆಲ್ಲೆಡೆ ಕ್ರಿಸ್ ಮಸ್ ಆಚರಣೆಗೆ ಸಿದ್ಧತೆ ಆರಂಭವಾಗಿದ್ದು, ಮಂಗಳೂರಿನಲ್ಲಿಯೂ ಕ್ರಿಸ್ ಮಸ್ ಗೆ ಸಿದ್ಧತೆ ಜೋರಾಗಿಯೇ ನಡೆಯುತ್ತಿದೆ.

ಮಾರುಕಟ್ಟೆಗೆ ಬಗೆಬಗೆಯ ಅಲಂಕಾರಿಕ ಸಾಮಗ್ರಿಗಳು ಲಗ್ಗೆ ಇಟ್ಟಿದ್ದು, ನಗರದ ಅಂಗಡಿಗಳಲ್ಲಿ ಮಾರಾಟಕ್ಕಿಟ್ಟಿರುವ ನಕ್ಷತ್ರಗಳು, ಜಗಮಗಿಸುವ ಗೂಡುದೀಪಗಳು, ಕ್ರಿಬ್ಸ್ ಗೆ ಬೇಕಾದ ವಸ್ತುಗಳು, ಬೇಕರಿಗಳಲ್ಲಿ ಪ್ರದರ್ಶನಕ್ಕಿಟ್ಟಿರುವ ವಿವಿಧ ಆಕಾರದ ಕೇಕ್ ಗಳು ಹಾಗೂ ಬಗೆ-ಬಗೆಯ ತಿಂಡಿಗಳು ಯೇಸುವಿನ ಜನನದ ಆಗಮನವನ್ನು ಸಾರುತ್ತಿವೆ.

ಕ್ರಿಸ್‌ಮಸ್‌, ಹೊಸವರ್ಷಕ್ಕೆ ತರಹೇವಾರಿ ಕಲಾಕೃತಿಗಳು ಒಂದೇ ಸೂರಿನಡಿಕ್ರಿಸ್‌ಮಸ್‌, ಹೊಸವರ್ಷಕ್ಕೆ ತರಹೇವಾರಿ ಕಲಾಕೃತಿಗಳು ಒಂದೇ ಸೂರಿನಡಿ

ಮಾರುಕಟ್ಟೆಯಲ್ಲಿ ಬಗೆಬಗೆಯ ನಕ್ಷತ್ರಗಳು, ಗೋದಳಲಿಗಳು, ಬಾಲ ಏಸು, ಮೇರಿ, ಜೋಸೆಫ್, ದೇವದೂತರು, ನಾಗರಿಕರು,ಕುರಿಗಾಹಿಗಳು, ಕುರಿ, ಒಂಟೆಗಳ ಪುಟ್ಟ ಪುಟ್ಟ ಗೊಂಬೆಗಳ ಮಾರಾಟ ಮತ್ತು ಖರೀದಿಯ ಭರಾಟೆ ಬಹಳ ಜೋರಾಗಿಯೇ ನಡೆಯುತ್ತಿದೆ.

Christmas preparation in Mangaluru

ಕ್ರಿಸ್ಮಸ್ ಹಬ್ಬವನ್ನು ಬಡವರು ಶ್ರೀಮಂತರೆನ್ನದೆ ಎಲ್ಲಾ ಕ್ರಿಶ್ಚಿಯನ್ ಬಾಂಧವರು ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಆದ್ದರಿಂದ ಗೋದಳಿಯ ಸಾಮಾಗ್ರಿಗಳ ಖರೀದಿಯು ಜೋರಾಗಿ ನಡೆಯುತ್ತಿದ್ದು, ಅಂಗಡಿ ಮಾಲೀಕರು ಗ್ರಾಹಕರ ಗಮನಸೆಳೆಯುತ್ತಿದ್ದಾರೆ.

ಆಳ್ವಾಸ್ ನಲ್ಲಿ ಕ್ರಿಸ್ಮಸ್‌ ಸಂಭ್ರಮ:ವಿಭಿನ್ನ ರೀತಿಯ ದೀಪಾಲಂಕಾರಆಳ್ವಾಸ್ ನಲ್ಲಿ ಕ್ರಿಸ್ಮಸ್‌ ಸಂಭ್ರಮ:ವಿಭಿನ್ನ ರೀತಿಯ ದೀಪಾಲಂಕಾರ

ಮಂಗಳೂರಿನ ಮಾರುಕಟ್ಟೆಯಲ್ಲಿ ರೆಡಿಮೆಡ್ ಗೋದಳಿ, ಹುರುಳಿ ಗದ್ದೆ, ಹೆಸರು ಗದ್ದೆ, ಹುಲ್ಲುಗಾವಲು, ಕ್ರಿಸ್ ಮಸ್ ಟ್ರೀಗಳೆಲ್ಲವೂ ಪ್ಲಾಸ್ಟಿಕ್ ಮೋಲ್ಡ್ ರೂಪದಲ್ಲಿ ದೊರೆಯುತ್ತಿವೆ. ಹೆಚ್ಚಿನ ಶ್ರಮವಿಲ್ಲದೇ ಕಡಿಮೆ ಸಮಯದಲ್ಲಿ ಇವುಗಳನ್ನು ಸುಲಭವಾಗಿ ಜೋಡಿಸಿ ಗೋದಳಿಯನ್ನು ನಿರ್ಮಾಣ ಮಾಡಬಹುದು ಎಂಬ ಕಾರಣಕ್ಕೆ ಈ ರೆಡಿಮೆಡ್ ವಸ್ತುಗಳಿಗೆ ಬೇಡಿಕೆ ಹೆಚ್ಚಿದೆ.

Christmas preparation in Mangaluru

ಇದಲ್ಲದೆ ಸಾಂತಾ ಕ್ಲಾಸ್ ಗೊಂಬೆಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಎಲ್ಲಾ ಸಾಮಾಗ್ರಿಗಳು ಸಾಮಾನ್ಯವಾಗಿ ಕೈಗೆಟಕುವ ದರದಿಂದ ಹಿಡಿದು ದುಬಾರಿ ಬೆಲೆಗಳಲ್ಲಿಯೂ ದೊರೆಯುತ್ತವೆ.

English summary
Mangaluru catholic community started preparation for Christmas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X