ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಳ್ವಾಸ್ ನಲ್ಲಿ ಕ್ರಿಸ್ಮಸ್‌ ಸಂಭ್ರಮ:ವಿಭಿನ್ನ ರೀತಿಯ ದೀಪಾಲಂಕಾರ

|
Google Oneindia Kannada News

ಮಂಗಳೂರು, ಡಿಸೆಂಬರ್ 21 : ದ್ವೇಷ ಮತ್ತು ಧರ್ಮ ಹೀಗೆ ವಿಭಜಿಸುವ ಗೋಡೆಗಳನ್ನು ಕಿತ್ತೆಸೆದು ಮಾನವೀಯತೆ ಬೆಸೆಯುವ, ಬಂಧುತ್ವವನ್ನು ಬೆಳೆಸುವುದು ಇಂದಿನ ಅಗತ್ಯವಾಗಿದೆ. ಬಂಧುತ್ವ ಎನ್ನುವುದು ಜಾತಿ, ಮತ ಧರ್ಮದ ಎಲ್ಲೆ ಮೀರಿದ ಸಂಬಂಧವಾಗಿದೆ ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಪೀಟರ್ ಪಾವ್ಲ್ ಸಲ್ದಾನ್ಹ ಹೇಳಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಗುರುವಾರ ವಿದ್ಯಾಗಿರಿಯ ರತ್ನಾಕರವರ್ಣಿ ವೇದಿಕೆಯಲ್ಲಿ ನಡೆದ ಆಳ್ವಾಸ್ ಕ್ರಿಸ್ಮಸ್ ಸಂಭ್ರಮ 2018 ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಅವರು ನಾವೆಲ್ಲರೂ ಆತ್ಮ ಸಾಕ್ಷಿಗೆ ಸ್ಪಂದಿಸಿ ಒಳಿತನ್ನುಂಟು ಮಾಡುವ ಮತ್ತು ಆ ಮೂಲಕ ಯಾರೂ ಕಸಿದುಕೊಳ್ಳಲಾಗದ ನಿಜವಾದ ಶಾಂತಿಯನ್ನು ಬದುಕಿನಲ್ಲಿ ಅನುಭವಿಸುವವರಾಗಬೇಕು. ನಮ್ಮ ನೆಲ, ಜಲ ಸಂರಕ್ಷಣೆ, ಪರಿಸರ ಪ್ರಿತಿ, ಶುದ್ಧತೆ ಸಂರಕ್ಷಣೆ ಎಲ್ಲರ ಆದ್ಯತೆಯಾಗಲಿ ಎಂದು ಹಾರೈಸಿದರು.

ವಿಡಿಯೋ: ಮಕ್ಕಳ ಆಸ್ಪತ್ರೆಯಲ್ಲಿ ಅಚ್ಚರಿ, ಸಾಂತಾಕ್ಲಾಸ್ ಆಗಿ ಒಬಾಮಾ!ವಿಡಿಯೋ: ಮಕ್ಕಳ ಆಸ್ಪತ್ರೆಯಲ್ಲಿ ಅಚ್ಚರಿ, ಸಾಂತಾಕ್ಲಾಸ್ ಆಗಿ ಒಬಾಮಾ!

ಶಿರ್ವ ಡಾನ್ ಬೋಸ್ಕೊ ಸಿ.ಬಿ.ಎಸ್.ಸಿ ಸಂಸ್ಥೆಯ ಪ್ರಾಂಶುಪಾಲ ಮಹೇಶ್ ಡಿ'ಸೋಜ ಕ್ರಿಸ್ಮಸ್ ಸಂದೇಶ ನೀಡಿದರು. ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕ ಜೋಸೆಫ್ ಡಿ' ಸೋಜ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

Christmas celebration in Alvas

ಡಾ.ಎಂ ಮೋಹನ ಆಳ್ವ ಅಧ್ಯಕ್ಷತೆವಹಿಸಿ ಮಾತನಾಡಿ, ಆರೋಗ್ಯ ಮತ್ತು ಶಿಕ್ಷಣ ಕ್ಷೆತ್ರದಲ್ಲಿ ಕ್ರೈಸ್ತರ ಕೊಡುಗೆ ಅನನ್ಯವಾದದ್ದು. ಮದರ್ ಥೆರೆಸಾ ಅವರಂತಹ ಸಂತರ ಕೊಡುಗೆ ನಮ್ಮೆಲ್ಲರಿಗೂ ಸ್ಫೂರ್ತಿಯಾದರೆ ಶಾಂತಿ, ಪ್ರೀತಿ, ಸಹಬಾಳ್ವೆಯನ್ನು ಮಾತು ಕೃತಿಯಲ್ಲಿ ಪಾಲಿಸುತ್ತಿರುವ ಕ್ರಿಸ್ತರ ಜೀವನ ಸಂದೇಶ ಅರ್ಥಪೂರ್ಣವಾದದ್ದು ಎಂದು ಹೇಳಿದರು.

Christmas celebration in Alvas

'ಕ್ರಿಸ್ಮಸ್, ಹೊಸ ವರ್ಷ, ಸಂಕ್ರಾಂತಿ ಹೆಚ್ಚುವರಿ ರೈಲು ಬೇಕು''ಕ್ರಿಸ್ಮಸ್, ಹೊಸ ವರ್ಷ, ಸಂಕ್ರಾಂತಿ ಹೆಚ್ಚುವರಿ ರೈಲು ಬೇಕು'

ಕ್ರಿಸ್ಮಸ್ ಸಂಭ್ರಮದ ಪ್ರಯುಕ್ತ ವಿದ್ಯಾಗಿರಿಯಲ್ಲಿರುವ ನುಡಿಸಿರಿ ವೇದಿಕೆಯನ್ನು ರತ್ನಾಕರವರ್ಣಿ ನಕ್ಷತ್ರ, ವಿಭಿನ್ನ ರೀತಿಯ ವಿದ್ಯುತ್ ದೀಪಾಲಂಕಾರ, ಅಲಂಕಾರಿಕ ವಸ್ತುಗಳಿಂದ ಶೃಂಗರಿಸಲಾಗಿತ್ತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕ್ರಿಸ್ಮಸ್ ವಿಶೇಷ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

English summary
Christmas celebration in Moodbidre Alvas education institution.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X