• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕ್ರಿಶ್ಚಿಯನ್, ಮುಸ್ಲಿಮರಿಗೆ ಕಾಂಗ್ರೆಸ್ ನಿಂದ ತೊಂದರೆ: ಪ್ರಹ್ಲಾದ್ ಜೋಷಿ

By ಕಿರಣ್ ಸಿರ್ಸೀಕರ್
|

ಮಂಗಳೂರು, ಮಾರ್ಚ್ 5: "ದೇಶದಲ್ಲಿರುವ ಕ್ರಿಶ್ಚಿಯನ್ ಹಾಗೂ ಮುಸ್ಲಿಮರಿಗೆ ತೊಂದರೆಯಾಗಿರುವುದು ಕಾಂಗ್ರೆಸ್ ನಿಂದ. ಕಾಂಗ್ರೆಸ್ ನ ಕೆಟ್ಟ ತುಷ್ಟೀಕರಣ ನೀತಿಯಿಂದಾಗಿ ಮುಸ್ಲಿಮರ ಸ್ಥಿತಿ ಹೀಗಾಗಿದೆ," ಎಂದು ಸಂಸದ ಪ್ರಹ್ಲಾದ್ ಜೋಷಿ ವಾಗ್ದಾಳಿ ನಡೆಸಿದರು.

ಬಂಟ್ವಾಳದಲ್ಲಿ ಜನಸುರಕ್ಷಾ ಯಾತ್ರೆಯ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಅವರು "ದೇಶದಲ್ಲಿ

ಉಗ್ರಗಾಮಿ ಮನೋಸ್ಥಿತಿ ಬೆಳೆಯಲು ಕಾಂಗ್ರೆಸ್ ಮುಖ್ಯ ಕಾರಣ," ಎಂದು ದೂರಿದರು. ವಂದೇ ಮಾತರಂ ಹೇಳುವುದು ದೇಶದಲ್ಲಿ ವಿವಾದ ಎಂದಾಗಿರುವುದು ಕಾಂಗ್ರೆಸ್ ನೀತಿಯಿಂದಾಗಿ ಎಂದು ಅವರು ಟೀಕಿಸಿದರು.

ಸಾಮರಸ್ಯಕ್ಕೆ ಧಕ್ಕೆ ತಂದವರಿಂದಲೇ ಜನಸುರಕ್ಷಾ ಯಾತ್ರೆ: ರಮಾನಾಥ ರೈ ವ್ಯಂಗ್ಯ

"ರಾಜಕೀಯ ಕಾರಣಕ್ಕಾಗಿ ಕಮ್ಯೂನಿಷ್ಟರು ಹಿಂದೂ ಕಾರ್ಯಕರ್ತರ ಕೊಲೆ ಮಾಡುತ್ತಿದ್ದಾರೆ. ಕಮ್ಯೂನಿಸ್ಟ್ ವಿಚಾರಧಾರೆಗಳನ್ನು ಒಪ್ಪದವರನ್ನು ಕೊಲೆ ಮಾಡಲಾಗುತ್ತದೆ," ಎಂದು ಹೇಳಿದ ಅವರು, "ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಯ ಕುರಿತು ಲೋಕಸಭೆಯಲ್ಲಿ ಮಾತನಾಡುವಾಗ ಮಲ್ಲಿಕಾರ್ಜುನ ಖರ್ಗೆ ಭಾಷಣಕ್ಕೆ ಅಡ್ಡಿ ಮಾಡುತ್ತಾರೆ," ಎಂದು ಕಿಡಿಕಾರಿದರು.

ಪ್ರಶಸ್ತಿ ವಾಪಾಸು ಕೊಡುವವರು ಎಲ್ಲಿ?

ಪ್ರಶಸ್ತಿ ವಾಪಾಸು ಕೊಡುವವರು ಎಲ್ಲಿ?

"ಪ್ರಶಸ್ತಿ ವಾಪಾಸು ಕೊಡುವವರು ರಾಜ್ಯದಲ್ಲಿ 24 ಜನ ಹಿಂದೂ ಕಾರ್ಯಕರ್ತರು ಸತ್ತಾಗ ಎಲ್ಲಿ ಹೋಗಿದ್ದರು?" ಎಂದು ಪ್ರಶ್ನಿಸಿದ ಅವರು, "ದೇಶದಲ್ಲಿ ಏನೇ ಘಟನೆ ನಡೆದರೂ ಆರ್.ಎಸ್.ಎಸ್ ಕಾರಣ ಎನ್ನಲಾಗುತ್ತದೆ. ಎಂ.ಎಂ. ಕಲಬುರ್ಗಿ,ಗೌರಿ ಲಂಕೇಶ್ ಹತ್ಯೆಯ ಆರೋಪಿಗಳನ್ನು ಹಿಡಿಯುವ ಮೊದಲೇ ಕೊಲೆ ಮಾಡಿದವರು ಆರ್.ಎಸ್.ಎಸ್ ಎನ್ನುವ ತೀರ್ಪು ನೀಡುತ್ತಾರೆ," ಎಂದು ಹರಿಹಾಯ್ದರು.

ರಮಾನಾಥ ರೈ ವಿರುದ್ಧ ವಾಗ್ದಾಳಿ

ರಮಾನಾಥ ರೈ ವಿರುದ್ಧ ವಾಗ್ದಾಳಿ

"ಶರತ್ ಮಡಿವಾಳ್, ಪ್ರಶಾಂತ್ ಪೂಜಾರಿ ಹತ್ಯೆಗೆ ಪರೋಕ್ಷವಾಗಿ ಕಾರಣವಾದ ಕಾಂಗ್ರೆಸ್ ಮುಖಂಡನನ್ನು ಶಾಶ್ವತವಾಗಿ ಮನೆಗೆ ಕಳುಹಿಸಬೇಕು," ಎಂದು ಅವರು ಸೂಚ್ಯವಾಗಿ ರಮಾನಾಥ ರೈ ವಿರುದ್ಧ ಇದೇ ಸಂದರ್ಭದಲ್ಲಿ ಅಬ್ಬರಿಸಿದರು.

ತ್ರಿವಳಿ ತಲಾಖ್ ಗೆ ಕಾರಣ ಬಹಿರಂಗ

ತ್ರಿವಳಿ ತಲಾಖ್ ಗೆ ಕಾರಣ ಬಹಿರಂಗ

"ಮುಸ್ಲಿಮರಿಗೆ ಹೆಚ್ಚೆಚ್ಚು ಮದುವೆ ಮಾಡಿಸಿ ಹೆಚ್ಚು ಮಕ್ಕಳನ್ನು ಹೆಡೆದರೆ ತಮಗೆ ಮತ ಸಿಗುತ್ತದೆ ಎನ್ನುವ ಕಾರಣಕ್ಕಾಗಿ ಕಾಂಗ್ರೆಸ್‌ ತ್ರಿವಳಿ ತಲಾಕ್ ವಿರೋಧಿಸಿದೆ," ಎಂದು ದೂರಿದ ಅವರು, "ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪಕ್ಕದಲ್ಲಿ ಅತ್ಯಾಚಾರದ ಆರೋಪಿ ವೇಣುಗೋಪಾಲ್ ಇಟ್ಟುಕೊಂಡು ಅಮಿತ್ ಶಾ ಬಗ್ಗೆ ಮಾತನಾಡುವ ಯೋಗ್ಯತೆಯಿಲ್ಲ," ಎಂದು ವಾಗ್ದಾಳಿ ನಡೆಸಿದರು.

ಅರೆಕಾಲಿಕ ರಾಜಕಾರಣಿ

ಅರೆಕಾಲಿಕ ರಾಜಕಾರಣಿ

"ಲೋಕಸಭೆಗೆ ಬಂದು ಮೂರು ವರ್ಷದ ಬಳಿಕ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಮಾತನಾಡಿದ್ದಾರೆ. ಕಲಾವತಿ, ಲೀಲಾವತಿ ಎಂದು ಏನೆಲ್ಲಾ ಬಡಬಡಾಯಿಸಿದ್ದರು. ರಾಹುಲ್ ಗಾಂಧಿಯವರ ಭಾಷಣ ಅವರ ಪಕ್ಷದವರಿಗೂ ಅರ್ಥವಾಗಿಲ್ಲ. ಅವರೊಬ್ಬ ಗಂಭೀರತೆ ಇಲ್ಲದ ಅರೆಕಾಲಿಕ ರಾಜಕಾರಣಿ," ಎಂದು ಅವರು ವ್ಯಂಗ್ಯವಾಡಿದರು.

20 % ಕಮಿಷನ್

20 % ಕಮಿಷನ್

"ಕಳೆದ ಎಪ್ಪತ್ತು ವರ್ಷದಿಂದ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ 40 ಕೋಟಿ ಮಂದಿಗೆ ಒಂದು ಹೊತ್ತಿನ ಊಟಕ್ಕೂ ಗತಿಯಿರಲಿಲ್ಲ ಎನ್ನುವುದೇ ಅವರ ಸಾಧನೆ" ಎಂದು ಹೇಳಿದ ಅವರು

"ಕಾಮಗಾರಿಗಳಿಗೆ 20 % ಕಮಿಷನ್ ಎಲ್ಲಾ ಜಿಲ್ಲೆಯಿಂದ ಪಡೆಯುತ್ತಿದ್ದಾರೆ," ಎಂದು ಅರೋಪಿಸಿದರು.

ಮೂವರು ಮಾರಿಗಳು

ಮೂವರು ಮಾರಿಗಳು

ಇದೇ ಸಭೆಯಲ್ಲಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್, "ಕಾಂಗ್ರೆಸ್, ಸಿದ್ದರಾಮಯ್ಯ, ರಮಾನಾಥ್ ರೈ ಈ ಮೂವರು ರಾಜ್ಯದ ಮಾರಿಗಳಾಗಿದ್ದಾರೆ. ಈ ಮೂರು ಮಾರಿಗಳನ್ನು ಓಡಿಸಲು ಈ ಜನಸುರಕ್ಷಾ ಯಾತ್ರೆ," ಎಂದು ಹೇಳಿದರು.

 ಸಿದ್ದರಾಮಯ್ಯ ಜೈಲಿಗೆ

ಸಿದ್ದರಾಮಯ್ಯ ಜೈಲಿಗೆ

ಮುಂದಿನ ದಿನಗಳಲ್ಲಿ ಈ ಮೂವರನ್ನೂ ರಾಜ್ಯದಿಂದ ಕೇರಳಕ್ಕೆ ಓಡಿಸುವ ಕಾರ್ಯ ನಡೆಯಲಿದೆ ಎಂದು ಹೇಳಿದ ಅವರು, "ಬಿಹಾರದಲ್ಲಿ ಜಂಗಲ್ ರಾಜ ಮಾಡಿದ್ದ ಲಾಲು ಪ್ರಸಾದ್ ಯಾದವ್ ಈಗ ಜೈಲಿನಲ್ಲಿದ್ದಾರೆ. ಮುಂದೆ ಸಿದ್ದರಾಮಯ್ಯ ಕೂಡಾ ಜೈಲಿನಲ್ಲಿರುತ್ತಾರೆ," ಎಂದು ಭವಿಷ್ಯ ನುಡಿದರು.

ದತ್ತಪೀಠವನ್ನು ಇಸ್ಲಾಮೀಕರಣ ಮಾಡುವ ಹುನ್ನಾರ

ದತ್ತಪೀಠವನ್ನು ಇಸ್ಲಾಮೀಕರಣ ಮಾಡುವ ಹುನ್ನಾರ

ಮುಖ್ಯಮಂತ್ರಿ ಸಿದ್ದರಾಮಯ್ಯ ಭಯೋತ್ಪಾದಕರಾಗಿದ್ದಾರೆ. ಜನರಲ್ಲಿ ಭಯ ಹುಟ್ಟಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, "ದತ್ತಪೀಠವನ್ನೂ ಇಸ್ಲಾಮೀಕರಣಕ್ಕೆ ಪ್ರಯತ್ನ ಮಾಡುತ್ತಿರುವ ಸಿದ್ಧರಾಮಯ್ಯ, ಇದೇ ಕಾರಣಕ್ಕೆ ಭಯೋತ್ಪಾದಕರಂತೆ ಕಾಣುತ್ತಾರೆ," ಎಂದು ಕಿಡಿಕಾರಿದರು.

ಕಾಂಗ್ರೆಸ್ ಅಂತ್ಯ ಸಂಸ್ಕಾರ

ಕಾಂಗ್ರೆಸ್ ಅಂತ್ಯ ಸಂಸ್ಕಾರ

ರಮಾನಾಥ ರೈ ಮುಸ್ಲಿಮರ ಕೃಪೆಯಿಂದ ಸಚಿವನಾದೆ ಎನ್ನುತ್ತಾರೆ. ರಮಾನಾಥ ರೈಗಳು ಸಾಧ್ಯವಾದರೆ ತನಗೆ ಮುಸ್ಲಿಂ ಮತಗಳೇ ಗೆಲ್ಲಲು ಸಾಕು ಎನ್ನುವ ಫೋಷಣೆ ಮಾಡಿ ಎಂದು ಅವರು ಸವಾಲು ಹಾಕಿದರು. ಮೂರು ತಿಂಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ನ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು

English summary
"The Christian and the Muslims in the country are in trouble," said MP Prahlad Joshi in Janasuraksha Yatra in Bantwal, Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more