ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆದ 'ಚೌಕಿದಾರ್ ಶೇರ್‌ ಹೈ'

|
Google Oneindia Kannada News

ಮಂಗಳೂರು, ಮಾರ್ಚ್ 28:ವೆಕ್ಟರ್ ಕಲೆಯಲ್ಲಿ ಮೂಡಿ ಬಂದಿದ್ದ 'ವೀರ ಭಜರಂಗಿ' ಹನುಮಾನ್ ಚಿತ್ರ ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ರಾರಾಜಿಸಿತ್ತು. ಈ ವೀರ ಭಜರಂಗಿ ಚಿತ್ರ ರಚಿಸಿದ್ದ ಮಂಗಳೂರಿನ ಕಲಾವಿದ ಕರಣ್ ಆಚಾರ್ಯ ಪ್ರಧಾನಿ ನರೇಂದ್ರ ಮೋದಿಯಿಂದ ಪ್ರಶಂಸೆ ಪಡೆದಿದ್ದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಈಗ ಪ್ರಧಾನಿ ಮೋದಿ ಅವರ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಹೌದು, ಮಂಗಳೂರಿನ ಮತ್ತೊಬ್ಬ ಹವ್ಯಾಸಿ ಕಲಾವಿದ ಜೀವನ್‌ ಆಚಾರ್ಯ 'ಭಾರತ್ ಕಾ ಶೇರ್' ಶೀರ್ಷಿಕೆಯಡಿ ವೆಕ್ಟರ್ ಆರ್ಟ್ ನಲ್ಲಿ ರಾಜ ಗಾಂಭೀರ್ಯದ ಪ್ರಧಾನಿ ಮೋದಿಯ ಅರ್ಧ ಮುಖ ಹಾಗೂ ಇನ್ನರ್ಧ ಸಿಂಹ ಮುಖದ ಚಿತ್ರ ರಚಿಸಿ ಗಮನ ಸೆಳೆದಿದ್ದಾರೆ.

ಕರಣ್ ಆಚಾರ್ಯ ವಿನ್ಯಾಸದ ವಿರಾಟ ಶ್ರೀ ರಾಮನ ಹೊಸ ರೂಪ ವೈರಲ್ಕರಣ್ ಆಚಾರ್ಯ ವಿನ್ಯಾಸದ ವಿರಾಟ ಶ್ರೀ ರಾಮನ ಹೊಸ ರೂಪ ವೈರಲ್

Chowkidar Sher Hai vector art poster viral in social media

ಈ ಚಿತ್ರ ಈಗ 'ಚೌಕೀದಾರ್ ಶೇರ್‌ ಹೈ' ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈಗ 'ಚೌಕಿದಾರ್ ಶೇರ್‌ ಹೈ' ಪೋಸ್ಟರ್ ಪ್ರಧಾನಿ ನರೇಂದ್ರ ಮೋದಿ ಅಭಿಮಾನಿಗಳ ಪ್ರೊಫೈಲ್‌ ಆಗುತ್ತಿದೆ. ಈ ಚಿತ್ರ ಚುನಾವಣೆ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಲಾರಂಭಿಸಿದೆ.

 ಉಗ್ರ ರೂಪಿ ಹನುಮ ಸೃಷ್ಠಿಕರ್ತನ ಹಾಡಿ ಹೊಗಳಿದ ಮೋದಿ ಉಗ್ರ ರೂಪಿ ಹನುಮ ಸೃಷ್ಠಿಕರ್ತನ ಹಾಡಿ ಹೊಗಳಿದ ಮೋದಿ

ಕಲಾವಿದ ಜೀವನ್‌ ಆಚಾರ್ಯ ಮಂಗಳೂರಿನ ಮಹಾಲಾಸ ಸ್ಕೂಲ್‌ ಆಫ್‌ ಆರ್ಟ್‌ನಲ್ಲಿ ಪದವಿ ಪಡೆದಿದ್ದು, ಸೈಂಟ್‌ ಅಲೋಷಿಯಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಅನಿಮೇಷನ್ ಹೇಳಿಕೊಡುತ್ತಿದ್ದಾರೆ. ಹೊಸ ಭಾರತದ ಕಲ್ಪನೆ ಜೊತೆಗೆ ನರೇಂದ್ರ ಮೋದಿ ಆಗಮಿಸುವ ಭಂಗಿಯಲ್ಲಿ ಈ ಚಿತ್ರ ರಚಿಸಲಾಗಿದೆ ಎಂದು ಜೀವನ್ ಅಭಿಪ್ರಾಯ ಪಟ್ಟಿದ್ದಾರೆ.

 ವೆಕ್ಟರ್ ಆರ್ಟ್ ನಲ್ಲಿ ಮೂಡಿ ಬಂದ ತುಳುನಾಡಿನ ದೈವ ಸ್ವಾಮಿ ಕೊರಗಜ್ಜ ವೆಕ್ಟರ್ ಆರ್ಟ್ ನಲ್ಲಿ ಮೂಡಿ ಬಂದ ತುಳುನಾಡಿನ ದೈವ ಸ್ವಾಮಿ ಕೊರಗಜ್ಜ

Chowkidar Sher Hai vector art poster viral in social media

ಈ ಚಿತ್ರ ಕೇವಲ ಎರಡೇ ದಿನಗಳಲ್ಲಿ ಪೂರ್ಣಗೊಂಡಿದ್ದು ವಿಶೇಷ. ಈ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಈ 'ಚೌಕಿದಾರ್ ಶೇರ್‌ ಹೈ' ಚಿತ್ರಕ್ಕೆ ಭಾರೀ ಬೇಡಿಕೆ ವ್ಯಕ್ತವಾಗಿದೆ. ಈ ಚಿತ್ರವನ್ನು ಸ್ಟಿಕ್ಕರ್ ರೂಪದಲ್ಲಿ ನೀಡುವಂತೆ ಹಲವಾರು ಮಂದಿ ಜೀವನ್ ಅವರನ್ನು ಒತ್ತಾಯಿಸುತ್ತಿದ್ದಾರೆ.

English summary
Artist from Mangaluru Jeevan Acharya sketched Modi's Chowkidar Sher hai poster in vector art. The poster of Narendra Modi and Lion now viral in social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X