ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿಯಲ್ಲಿ ಕೆಡಿಪಿ ಸಭೆಗೂ ಮುನ್ನ ಶ್ರೀ ಕೃಷ್ಣನ ದರ್ಶನ ಪಡೆದ ಸಿಎಂ

|
Google Oneindia Kannada News

Recommended Video

ಶ್ರೀಕೃಷ್ಣ ದರ್ಶನ ಪಡೆದ ಸಿ ಎಂ. ಕುಮಾರಸ್ವಾಮಿ | Oneindia Kannada

ಮಂಗಳೂರು, ಸೆಪ್ಟೆಂಬರ್.07: ಮಂಗಳೂರು ವಿಮಾನ‌ನಿಲ್ದಾಣದಲ್ಲಿ ಪೊಲೀಸರಿಂದ ಗಾರ್ಡ್ ಆಫ್ ಆನರ್ ಪಡೆದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನೇರವಾಗಿ ಉಡುಪಿಗೆ ತೆರಳಿದ್ದಾರೆ.

ಇಂದು ಶುಕ್ರವಾರ (ಸೆ.07) ಬೆಳಗ್ಗೆ ವಿಮಾನ‌ನಿಲ್ದಾಣದಲ್ಲಿ ಇಳಿದ ಬಳಿಕ ಮುಖ್ಯಮಂತ್ರಿಗಳು ಮಾಧ್ಯಮಗಳ ಜೊತೆ ಮಾತನಾಡಲು ನಿರಾಕರಿಸಿದರು. ನಂತರ ಎಲ್ಲವನ್ನೂ ಸಂಜೆಯೇ ಮಾತನಾಡುತ್ತೇನೆ ಎಂದರು.

ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗೆ ವಿಶೇಷ ಮುತುವರ್ಜಿ: ಮುಖ್ಯಮಂತ್ರಿ ಭರವಸೆಹೈದರಾಬಾದ್ ಕರ್ನಾಟಕ ಅಭಿವೃದ್ಧಿಗೆ ವಿಶೇಷ ಮುತುವರ್ಜಿ: ಮುಖ್ಯಮಂತ್ರಿ ಭರವಸೆ

ಉಡುಪಿಯ ಜಿಲ್ಲಾ ಪಂಚಾಯತ್ ಸಂಭಾಗಣದಲ್ಲಿ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನೆ ನಡೆಸಲಿರುವ ಕುಮಾರಸ್ವಾಮಿ ಅವರು ಮಧ್ಯಾಹ್ನ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲಿದ್ದಾರೆ. ಉಡುಪಿಯಿಂದ ನೇರವಾಗಿ ಮಂಗಳೂರಿಗೆ ಆಗಮಿಸಲಿರುವ ಸಿಎಂ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ.

Chief Minister HD Kumaraswamy on Friday moved to Udupi via Mangalore

ಹುಬ್ಬಳ್ಳಿ ನಿವಾಸ ತೆರವುಗೊಳಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿಹುಬ್ಬಳ್ಳಿ ನಿವಾಸ ತೆರವುಗೊಳಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ

ಈ ವೇಳೆ ಸಿಎಂ ಜೊತೆಗೆ ವಿವಿಧ ಸಚಿವರು, ಶಾಸಕರು ,ಅಧಿಕಾರಿಗಳು ಪಾಲ್ಗೊಳ್ಳಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿ ವಿಚಾರಗಳ ಕುರಿತಂತೆ ಚರ್ಚೆ ನಡೆಸಲಿದ್ದಾರೆ. ಈ ಹಿಂದೆ ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ಸಿಎಂ ಭೇಟಿ ನೀಡಿದ್ದರು ಅದು ಅವರ ವೈಯಕ್ತಿಕ ಭೇಟಿ ಆಗಿತ್ತು. ಇದೇ ಮೊದಲ ಬಾರಿಗೆ ಆಡಳಿತಾತ್ಮಕ ವಿಚಾರದಲ್ಲಿ ಸಿಎಂ‌ ಭೇಟಿ ಇದಾಗಿದೆ.

ಉಡುಪಿಯಲ್ಲಿ 10 ಗಂಟೆಗೆ ನಿಗದಿಯಾಗಿದ್ದ ಕೆಡಿಪಿ ಸಭೆಗೆ ಆಗಮಿಸಬೇಕಿದ್ದ ಸಿಎಂ, ಕೆಡಿಪಿ ಸಭೆಗೂ ಮುನ್ನ ಶ್ರೀಕೃಷ್ಣ ನ ದರ್ಶನ ಪಡೆದಿದ್ದಾರೆ. ಕೃಷ್ಣ ಮಠಕ್ಕೆ ಆಗಮಿಸಿದ ಸಿಎಂಗೆ ಪರ್ಯಾಯ ಶ್ರೀಗಳು ಸ್ವಾಗತ ಕೋರಿದ್ದಾರೆ. ಬಳಿಕ ಕನಕನ ಕಿಂಡಿಯ ಮೂಲಕ ಸಿಎಂ ಕೃಷ್ಣ ದರ್ಶನ ಪಡೆದಿದ್ದಾರೆ.

English summary
Chief Minister HD Kumaraswamy on Friday moved to Udupi via Mangalore. In Udupi Kumaraswamy will hold a progress review meeting with the officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X