ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಲ್ಲಿ ಫೆ.1ರಿಂದ 3 ರವರೆಗೆ ಚಿಕನ್ ತಿನ್ನುವ ಸ್ಪರ್ಧೆ

|
Google Oneindia Kannada News

ಮಂಗಳೂರು, ಜನವರಿ 30: ವಿವಿಧ ಬಗೆಯ ಚಿಕನ್ ಖಾದ್ಯಗಳೆಂದರೆ ನಾನಾ ವೆಜ್ ಪ್ರಿಯರಿಗೆ ಎಲ್ಲಿಲ್ಲದ ಪ್ರೀತಿ. ಅದರಲ್ಲೂ ಸರಿಯಾಗಿ ಮಸಾಲೆ ಹಾಕಿ, ಕಾರವಿರುವ ಸ್ಪೈಸಿ ಚಿಕನ್ ಮಾಡುತ್ತಾರೆಂದರೆ ಜನ ಅದೆಷ್ಟೇ ದೂರ ಇರಲಿ, ಹುಡುಕಿಕೊಂಡು ಹೋಗಿ ತಿಂದು ಬರುತ್ತಾರೆ. ಇದನ್ನು ಗಮನಿಸಿಯೇ ಇದೀಗ ಚಿಕನ್ ಪ್ರಿಯರಿಗಾಗಿ ಚಿಕನ್ ತಿನ್ನುವ ಸ್ಪರ್ಧೆಯನ್ನು ಮಂಗಳೂರಿನಲ್ಲಿ ಆಯೋಜಿಸಲಾಗಿದೆ.

ಹೌದು, ನಗರದ ಪಾಂಡೇಶ್ವರದಲ್ಲಿರುವ ಫೋರಂ ಫಿಜ್ಜಾ ಮಾಲ್ ನಲ್ಲಿ 3 ದಿನಗಳಕಾಲ ಚಿಕನ್ ತಿನ್ನುವ ಸ್ಪರ್ಧೆ ಆಯೋಜಿಸಲಾಗಿದೆ. ಫೆಬ್ರವರಿ 1ರಿಂದ 3 ರವರೆಗೆ ಈ ಚಿಕನ್ ತಿನ್ನುವ ಸ್ಪರ್ಧೆ ಆಯೋಜಿಸಲಾಗಿದೆ.

ನಿಗದಿತ ಅವಧಿಯೊಳಗೆ ಯಾರು 4 ಕೋಳಿ ತುಂಡುಗಳನ್ನು ತಿಂದು ಮುಗಿಸುತ್ತಾರೋ ಅವರು ಈ ಸ್ಪರ್ಧೆಯ ವಿಜೇತರು ಎಂದು ಘೋಷಿಸಲಾಗುತ್ತದೆ . ಅಷ್ಟೇ ಅಲ್ಲದೇ ವಿಜಯ ಸ್ಪರ್ಧಿಗೆ 50 ಸಾವಿರ ರೂಪಾಯಿ ನಗದು ಬಹುಮಾನ ನೀಡಲು ತೀರ್ಮಾನಿಸಲಾಗಿದೆ .

Chicken eating competition organised in Managluru

ಮಂಗಳೂರಿನ ಆಹಾರ ಪ್ರಿಯರು ಈ ಆಹಾರ ಮೇಳದಲ್ಲಿ ಪಾಲ್ಗೊಳ್ಳುವಂತೆ ಮಾಲ್ ನ ಮಾರ್ಕೆಟಿಂಗ್ ಮ್ಯಾನೇಜರ್ ಸುನಿಲ್ ಕೆ.ಎಸ್.ಕರೆ ನೀಡಿದ್ದಾರೆ. ತ್ರಿ ಹಂಗ್ರಿ ಮೆನ್ ಈ ಸ್ಪರ್ಧೆಯನ್ನು ಮೊದಲ ಬಾರಿಗೆ ಫೋರಂ ಫಿಜ್ಜಾ ಮಾಲ್ ನಲ್ಲಿ ಆಯೋಜಿಸಿದೆ.

ಮಧ್ಯಾಹ್ನ 2 ಗಂಟೆಯಿಂದ ಸಂಜೆ 7 ರವರೆಗೆ ಈ ಸ್ಪರ್ಧೆ ನಡೆಯಲಿದ್ದು, ಅಂತಿಮ ಸುತ್ತಿನ ಸ್ಪರ್ಧೆ ಫೆಬ್ರುವರಿ 3 ರಂದು ನಡೆಯಲಿದೆ. ಆನ್ ಲೈನ್ ಮೂಲಕ ಟಿಕೆಟ್ ಖರೀದಿಸಲು ಅವಕಾಶ ನೀಡಲಾಗಿದೆ. ಮೊದಲು ಬಂದವರಿಗೆ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ನೀಡಲಾಗುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.

English summary
Foram Fiza Mall of Mangaluru association with 3 hungry men organised biggest Chicken eating competition on February 1 to 3.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X