ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಂದ್ರಕಲಾ ನಂದಾವರರ ‘ನನ್ನೂರು ನನ್ನ ಜೀವನ’ ಕೃತಿ ಬಿಡುಗಡೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜನವರಿ 25: ಖ್ಯಾತ ಲೇಖಕಿ ಚಂದ್ರಕಲಾ ನಂದಾವರ ಅವರ 'ನನ್ನೂರು ನನ್ನ ಜೀವನ' ಕೃತಿ ಬಿಡುಗಡೆ ಸಮಾರಂಭ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಇತ್ತೀಚೆಗೆ ಜರುಗಿತು.

ಜ.26 ರಂದು 'Narendra Modi for 2019' ಪುಸ್ತಕ ಲೋಕಾರ್ಪಣೆಜ.26 ರಂದು 'Narendra Modi for 2019' ಪುಸ್ತಕ ಲೋಕಾರ್ಪಣೆ

ಶಿವೈಕ್ಯರಾದ ಸಿಧ್ದಗಂಗಾ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು. ಪ್ರಾಸ್ತಾವಿಕವಾಗಿ ಮಾತನಾಡಿದ ಲೇಖಕಿ ಚಂದ್ರಕಲಾ ನಂದಾವರ, ತಮ್ಮ ಕೃತಿಗೆ ಹದಗೆಟ್ಟ ಪ್ರಸ್ತುತ ಸಮಾಜ,ಶಿಸ್ತು ಕಳೆದುಕೊಂಡ ಯುವ ಜನತೆಯೇ ವಸ್ತು ಎಂದು ಹೇಳಿದರು. ಕೃತಿಯ ಕುರಿತು ಮಾತನಾಡಿದ ಸಾಹಿತಿ ಅಬ್ದುಲ್ ಸಲಾಂ ಪುತ್ತಿಗೆ, ಆತ್ಮಕಥೆಯಲ್ಲಿ ಆತ್ಮ ಪ್ರಶಂಸೆಗಿಂತ ಆತ್ಮಾವಲೋಕನದ ಸೂಕ್ಷ್ಮತೆ ಅಗತ್ಯ. ಸಮಾಜ ಏನನ್ನು ಕಳೆದುಕೊಂಡಿದೆ ಎಂಬುದಕ್ಕೆ 'ನನ್ನೂರು ನನ್ನ ಜನ' ಸಾಕ್ಷಿ ಎಂದು ಅಭಿಪ್ರಾಯಪಟ್ಟರು.

 ಜನವರಿ 1ರಿಂದ ಎಆರ್ ಮಣಿಕಾಂತ್ ಹೊಸ ಪುಸ್ತಕ ನವಿಲುಗರಿ ಮಾರಾಟ ಜನವರಿ 1ರಿಂದ ಎಆರ್ ಮಣಿಕಾಂತ್ ಹೊಸ ಪುಸ್ತಕ ನವಿಲುಗರಿ ಮಾರಾಟ

ಅಧ್ಯಕ್ಷತೆ ವಹಿಸಿದ್ದ ಪೂಜನೀಯ ಬಿಷಪ್‍ ರೆ.ಫಾ. ಹೆನ್ರಿ ಡಿಸೋಜ, ಮನಸ್ಸಿನಲ್ಲಿ ಕನಸು, ಕಣ್ಣಿನಲ್ಲಿ ಕರುಣೆ, ಮುಖದಲ್ಲಿ ಕಳೆ, ಬಾಯಿಯಲ್ಲಿ ಸತ್ಯ, ಹೃದಯದಲ್ಲಿ ಪ್ರೀತಿ, ಕರಗಳಲ್ಲಿ ಸೇವೆ ಇಷ್ಟಿದ್ದರೆ ಮಾನವ ಜೀವನ ಸಾರ್ಥಕ, ಎಂದರು.

Chandrakala NandavaraNannuru Nanna Jivana book was released

ಉಪ ಪ್ರಾಂಶುಪಾಲ ಡಾ.ಹರೀಶ್‍ ಉಪಸ್ಥಿತರಿದ್ದರು. ಕವಯತ್ರಿ ಗುಲಾಬಿ ಬಿಳಿಮಲೆ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ರತ್ನಾವತಿ ವಂದನಾರ್ಪಣೆ ಮಾಡಿದರು.

English summary
Famous author Chandrakala Nandavara'Nannuru Nanna Jivana' book was released at Shivarama Karantha Sabhabhavana, Mangalore University College.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X