ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ಸಿಟಿ ಬಸ್‌ ಪ್ರಯಾಣಿಕರಿಗೆ ಸಿಹಿ ಸುದ್ದಿ: ಅದೇನು ಗೊತ್ತೇ..?

|
Google Oneindia Kannada News

ಮಂಗಳೂರು, ಫೆಬ್ರವರಿ 25:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದರಲ್ಲೂ ಮಂಗಳೂರು ನಗರದಲ್ಲಿ ಖಾಸಗಿ ಸಿಟಿ ಬಸ್ ಗಳದ್ದೇ ಕಾರುಬಾರು. ನಗರದ ಮೂಲೆ ಮೂಲೆಗೂ ಈ ಖಾಸಗಿ ಬಸ್ ಗಳ ಸಂಪರ್ಕ ಕಲ್ಪಿಸಲಾಗಿದೆ. ಮುಂಬಯಿಯಲ್ಲಿ ಲೋಕಲ್ ಟ್ರೈನ್ ಗಳು ಹೇಗೋ ಅಲ್ಲಿಯ ಜನಜೀವನದ ಜೀವನಾಡಿಯೂ ಹಾಗೆ.

ಅಂದಹಾಗೆ ಮಂಗಳೂರು ನಗರದಲ್ಲಿ ಈ ಸಿಟಿ ಬಸ್ ಗಳೇ ಜನಜೀವನದ ಲೈಫ್ ಲೈನ್. ಇದೀಗ ಈ ಸಿಟಿ ಬಸ್ ಗಳಿಗೆ ಈಗ ಹೈಟೆಕ್ ಟಚ್ ನೀಡಲಾಗಿದೆ. ದಿನನಿತ್ಯ ಮಂಗಳೂರಿನಲ್ಲಿ ಸಿಟಿ ಬಸ್‌ಗಳಲ್ಲಿ ಓಡಾಡುವವರಿಗೆ ಬಸ್‌ ಎಷ್ಟು ಗಂಟೆಗೆ ಬರುತ್ತದೆ ಎಂದು ಮಂಡೆ ಬಿಸಿ ಮಾಡಬೇಕಿಲ್ಲ.

ನೀವು ಸಂಚರಿಸಲಿರುವ ಆ ರೂಟ್ ನಂಬರ್ ನ ಬಸ್‌ ಎಲ್ಲಿ ಬರುತ್ತದೆ? ಎಷ್ಟು ಗಂಟೆಗೆ ಬರುತ್ತದೆ? ಎಂಬುವುನ್ನು ನಿಮ್ಮ ಮೊಬೈಲ್ ನಲ್ಲೇ ವಿಕ್ಷಿಸಬಹುದು. ಇದೇ ಮೊದಲ ಬಾರಿಗೆ ಮಂಗಳೂರು ಸಿಟಿ ಬಸ್‌ ಪ್ರಯಾಣಿಕರಿಗೆಂದು 'ಚಲೋ' ಎಂಬ ಆಪ್ ಪರಿಚಯಿಸುತ್ತಿದ್ದು, ಇಂದಿನಿಂದ ಕಾರ್ಯಾಚರಿಸಲಿದೆ.

ಮೈಸೂರು ಮಹಾನಗರ ಪಾಲಿಕೆಯಿಂದ 'ಮೈ ಕ್ಲೀನ್ ಸಿಟಿ' ಆಪ್ ಬಿಡುಗಡೆಮೈಸೂರು ಮಹಾನಗರ ಪಾಲಿಕೆಯಿಂದ 'ಮೈ ಕ್ಲೀನ್ ಸಿಟಿ' ಆಪ್ ಬಿಡುಗಡೆ

ದಕ್ಷಿಣ ಕನ್ನಡ ಜಿಲ್ಲಾ ಬಸ್‌ ಮಾಲೀಕರ ಸಂಘ ಮತ್ತು ಚಲೋ ಸಂಸ್ಥೆಯ ಸಹಯೋಗದೊಂದಿಗೆ ಈ ಆಪ್ ರೂಪಿಸಲಾಗಿದ್ದು, ಇಂದಿನಿಂದ ಆಪ್ ಮೂಲಕ ಬಸ್‌ಗಳ ಸಮಗ್ರ ಮಾಹಿತಿ ಪ್ರಯಾಣಿಕರಿಗೆ ಲಭ್ಯವಾಗಲಿದೆ. ಮುಂದೆ ಓದಿ...

320 ಬಸ್ ಗಳಿಗೆ ಜಿಪಿಎಸ್ ಅಳವಡಿಕೆ

320 ಬಸ್ ಗಳಿಗೆ ಜಿಪಿಎಸ್ ಅಳವಡಿಕೆ

ಮಂಗಳೂರಿನ ಬ್ಯುಸಿ ಲೈಫ್ ನಲ್ಲಿ ಸಿಟಿ ಬಸ್‌ಗಳು ಪ್ರಯಾಣಿಕರಿಗೆ ಮತ್ತಷ್ಟು ಹತ್ತಿರವಾಗಲಿವೆ. ಜಿಪಿಎಸ್ ತಂತ್ರಜ್ಞಾನದ ಮೂಲಕ ಇದು ಸಾಧ್ಯವಾಗಿದ್ದು, ನಗರದಲ್ಲಿ ಸದ್ಯ 340 ಸಿಟಿ ಬಸ್‌ಗಳ ಪೈಕಿ 320 ಬಸ್ ಗಳಿಗೆ ಈಗಾಗಲೇ ಜಿಪಿಎಸ್ ಅಳವಡಿಸಲಾಗಿದೆ.

 ಬೆಳೆಗಳ ಕೀಟ ನಿಯಂತ್ರಣ ಮಾಹಿತಿ ಪಾಂಟಿಕ್ಸ್ ಆ್ಯಪ್ ನಲ್ಲಿ ಲಭ್ಯ ಬೆಳೆಗಳ ಕೀಟ ನಿಯಂತ್ರಣ ಮಾಹಿತಿ ಪಾಂಟಿಕ್ಸ್ ಆ್ಯಪ್ ನಲ್ಲಿ ಲಭ್ಯ

ಭೋಪಾಲ್‌ನ ಸಾರಿಗೆ ವ್ಯವಸ್ಥೆಯಲ್ಲಿದೆ

ಭೋಪಾಲ್‌ನ ಸಾರಿಗೆ ವ್ಯವಸ್ಥೆಯಲ್ಲಿದೆ

ಪ್ರಯಾಣಿಕ ಸ್ನೇಹಿ ಸಾರಿಗೆ ವ್ಯವಸ್ಥೆಯ ಮೊದಲನೇ ಹೆಜ್ಜೆಯಾಗಿ ನಗರ ಸಿಟಿ ಬಸ್‌ ಅನ್ನು ಆಪ್‌ ಮೂಲಕ ಟ್ರಾಕಿಂಗ್‌ ಮಾಡುವ ಸೌಲಭ್ಯವಿರಲಿದೆ. ಬಸ್‌ಗಳಿಗೆ ಜಿಪಿಎಸ್ ಅಳವಡಿಸುವುದರಿಂದ ಪ್ರಯಾಣಿಕರ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಈಗಾಗಲೇ ಚಲೋ ಆಪ್ ಅನ್ನು ಭೋಪಾಲ್‌ನ ಸಾರಿಗೆ ವ್ಯವಸ್ಥೆಯಲ್ಲಿ ಉಪಯೋಗಿಸುತ್ತಿದೆ.

 ದೇಶದಲ್ಲೇ ಮೊದಲು: ಬೆಂಗಳೂರಲ್ಲಿ ಆಪ್ ಆಧಾರಿತ ಶ್ವಾನ ಕ್ಯಾಬ್ ದೇಶದಲ್ಲೇ ಮೊದಲು: ಬೆಂಗಳೂರಲ್ಲಿ ಆಪ್ ಆಧಾರಿತ ಶ್ವಾನ ಕ್ಯಾಬ್

ಬಸ್‌ ಲೈವ್‌ ಟ್ರ್ಯಾಕಿಂಗ್‌ ವ್ಯವಸ್ಥೆ

ಬಸ್‌ ಲೈವ್‌ ಟ್ರ್ಯಾಕಿಂಗ್‌ ವ್ಯವಸ್ಥೆ

ಈ ಚಲೋ ಆಪ್ ನಲ್ಲಿ ಬಸ್‌ನ ಲೈವ್‌ ಟ್ರ್ಯಾಕಿಂಗ್‌ ವ್ಯವಸ್ಥೆ ಇದ್ದು, ಮೊಬೈಲ್‌ ಜಿಪಿಎಸ್ ಆಧಾರದ ಮೇಲೆ ಬಸ್‌ಗಳ ನಿಖರ ಮಾಹಿತಿ ಮೊಬೈಲ್‌ನಲ್ಲಿ ದೊರಕಲಿದೆ. ಮ್ಯಾಪ್‌ನಲ್ಲಿ ಸದ್ಯ ಬಸ್‌ ಎಲ್ಲಿದೆ? ಎಷ್ಟು ಗಂಟೆಗೆ ನಿಲ್ದಾಣಕ್ಕೆ ಆಗಮಿಸುತ್ತದೆ? ಚಾಲಕ ಎಷ್ಟು ಕಿ.ಮೀಟರ್‌ ವೇಗದಲ್ಲಿ ಚಲಾಯಿಸುತ್ತಿದ್ದಾನೆ? ರೂಟ್‌ ಬದಲಾವಣೆ ಮಾಡಿದರೂ ಮಾಹಿತಿಯನ್ನು ಪಡೆಯಲು ಸಾಧ್ಯವಾಗಲಿದೆ. ಒಂದು ಕಡೆಯಿಂದ ಮತ್ತೊಂದೆಡೆ ಚಲಿಸಲು ಎಷ್ಟು ಸಮಯ ಬೇಕು? ಮುಂದಿನ ನಿಲ್ದಾಣ ಸಹಿತ ಹಲವಾರು ಮಾಹಿತಿ ಆಪ್ ನಲ್ಲಿ ಲಭ್ಯವಿದೆ.

ಎಸ್‌ ಒಎಸ್ ತಂತ್ರಜ್ಞಾನ

ಎಸ್‌ ಒಎಸ್ ತಂತ್ರಜ್ಞಾನ

ತುರ್ತು ಸಂದರ್ಭಗಳಲ್ಲಿ ಕುಟುಂಬ ಮತ್ತು ಮಿತ್ರರೊಂದಿಗೆ ತತ್‌ಕ್ಷಣ ಸೂಚನೆ ನೀಡಲು ಎಸ್‌ ಒಎಸ್ ತಂತ್ರಜ್ಞಾನ ಕೂಡ ಚಲೋ ಆಪ್ ನಲ್ಲಿದೆ. ಎಸ್‌ಒಎಸ್ ಆಯ್ಕೆಯಲ್ಲಿ ಕುಟುಂಬದವರ ಅಥವಾ ಸ್ನೇಹಿತರ ಮೊಬೈಲ್‌ ಸಂಖ್ಯೆಯನ್ನು ನಮೂದು ಮಾಡಬೇಕು.

ಒಂದು ವೇಳೆ ಅಪಾಯದಲ್ಲಿ ಸಿಲುಕಿದರೆ ಈ ಸಂಖ್ಯೆಗೆ ತುರ್ತು ಸಂದೇಶ ರವಾನೆಯಾಗುತ್ತದೆ. ಮಂಗಳೂರು ನಗರ ಸ್ಮಾರ್ಟ್‌ಸಿಟಿ ಆಗುವತ್ತ ದಾಪುಗಾಲಿಡುತ್ತಿರುವಾಗ ಇಲ್ಲಿ ಸಂಚರಿಸುವ ಸಿಟಿ ಬಸ್‌ಗಳು ಕೂಡ ಸ್ಮಾರ್ಟ್‌ ಆಗುತ್ತಿವೆ.

English summary
Chalo App an unique application being introduced in the private buses that are run in Mangaluru city. Here is the details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X