ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರಾವಳಿ ಭಾಗದ ಜನರ ಬೇಡಿಕೆ ಈಡೇರಿಸಿದ ಕೊಂಕಣ ರೈಲ್ವೆ

|
Google Oneindia Kannada News

ಮಂಗಳೂರು, ಡಿಸೆಂಬರ್ 11 : ಕರಾವಳಿ ಭಾಗದ ಜನರ ಬಹುದಿನದ ಬೇಡಿಕೆಗೆ ಕೊಂಕಣ ರೈಲ್ವೆ ಒಪ್ಪಿಗೆ ನೀಡಿದೆ. ಮಂಗಳೂರು-ಮುಂಬೈ ನಡುವೆ ರೈಲು ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಡಿಸೆಂಬರ್ 17ರಿಂದ ರೈಲು ಸಂಚಾರ ನಡೆಸಲಿದೆ.

ಮಂಗಳೂರು ಸೆಂಟ್ರಲ್-ಮುಂಬೈ ಲೋಕಮಾನ್ಯ ತಿಲಕ್ ಟರ್ಮಿನಲ್ ನಡುವೆ ಹಬ್ಬದ ವಿಶೇಷ ರೈಲು ಡಿಸೆಂಬರ್ 17 ರಿಂದ 31ರ ತನಕ ಸಂಚಾರ ನಡೆಸಲಿದೆ. ಲಾಕ್ ಡೌನ್ ಘೋಷಣೆ ಬಳಿಕ ರೈಲು ಸಂಚಾರ ಆರಂಭಿಸಬೇಕು ಎಂದು ಬೇಡಿಕೆ ಇಡಲಾಗಿತ್ತು.

ಎರ್ನಾಕುಲಂ ಜಂಕ್ಷನ್-ಓಖಾ ವಿಶೇಷ ರೈಲು; ವೇಳಾಪಟ್ಟಿ ಎರ್ನಾಕುಲಂ ಜಂಕ್ಷನ್-ಓಖಾ ವಿಶೇಷ ರೈಲು; ವೇಳಾಪಟ್ಟಿ

Mangaluru Central Lokmanyatilak Mumbai Daily Special Train From December 17

ಪ್ರತಿ ದಿನ ಮಂಗಳೂರು ಸೆಂಟ್ರಲ್-ಮುಂಬೈ ನಡುವೆ ಹಬ್ಬದ ವಿಶೇಷ ರೈಲನ್ನು ಓಡಿಸಲಾಗುತ್ತದೆ. ರೈಲು ನಂಬರ್ 02620/02619 ಉಭಯ ನಗರಗಳ ನಡುವೆ ಸಂಚಾರ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬೆಂಗಳೂರಿಗೆ ಬರಲು ಹೊಸ 12 ರೈಲು; ವೇಳಾಪಟ್ಟಿ ಬೆಂಗಳೂರಿಗೆ ಬರಲು ಹೊಸ 12 ರೈಲು; ವೇಳಾಪಟ್ಟಿ

ವೇಳಾಪಟ್ಟಿ; 02620 ಮಂಗಳೂರು-ಮುಂಬೈ ರೈಲು ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಮಧ್ಯಾಹ್ನ 2.25ಕ್ಕೆ ಹೊರಡಲಿದೆ. ಸುರತ್ಕಲ್ (3.10), ಮೂಲ್ಕಿ, ಉಡುಪಿ (3.48), ಕುಂದಾಪುರ (4.18), ಬೈಂದೂರು, ಭಟ್ಕಳ, ಮರುಡೇಶ್ವರ, ಹೊನ್ನಾವರ, ಕುಮುಟಾ, ಗೋಕರ್ಣ ರೋಡ್, ಅಂಕೋಲಾ, ಕಾರವಾರ, ಮಡಗಾಂವ್, ಕುಡಾಲ್, ರತ್ನಗಿರಿ, ಖೇಡ್, ಮನಗಾಂವ್, ಪನ್ವೇಲ್, ಥಾಣೆ ಮೂಲಕ ಲೋಕಮಾನ್ಯ ತಿಲಕ್ ಟರ್ಮಿನಲ್ ತಲುಪಲಿದೆ.

ಹುಬ್ಬಳ್ಳಿಯಿಂದ 10 ವಿಶೇಷ ರೈಲುಗಳ ಸಂಚಾರ; ವೇಳಾಪಟ್ಟಿ ಹುಬ್ಬಳ್ಳಿಯಿಂದ 10 ವಿಶೇಷ ರೈಲುಗಳ ಸಂಚಾರ; ವೇಳಾಪಟ್ಟಿ

02619 ಸಂಖ್ಯೆಯ ರೈಲು ಮುಂಬೈ ಲೋಕಮಾನ್ಯ ತಿಲಕ್ ಟರ್ಮಿನಲ್‌ನಿಂದ ಮಧ್ಯಾಹ್ನ 3.20ಕ್ಕೆ ಹೊರಡಲಿದೆ. ಬೈಂದೂರಿಗೆ ಮರುದಿನ ಮುಂಜಾನೆ 4.42ಕ್ಕೆ ಆಗಮಿಸಲಿದೆ. ಕುಂದಾಪುರ (5.10), ಉಡುಪಿ (5.45), ಸುರತ್ಕಲ್ (6.23) ಮೂಲಕ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣವನ್ನು ಬೆಳಗ್ಗೆ 7.30ಕ್ಕೆ ತಲುಪಲಿದೆ.

English summary
Konkan railway will run daily special festival train between Mangaluru Central and Lokmanyatilak (LTT) Mumbai. Train will run from December 17.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X