ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊರಬಿತ್ತು ಕಾಫೀ ಡೇ ಸಿದ್ಧಾರ್ಥ ಅಟಾಪ್ಸಿ ವರದಿ, ಅಂದು ನಡೆದಿದ್ದೇನು?

|
Google Oneindia Kannada News

Recommended Video

V G Siddhartha : ಹೊರಬಿತ್ತು ಕಾಫೀ ಡೇ ಸಿದ್ಧಾರ್ಥ ಅಟಾಪ್ಸಿ ವರದಿ, ಅಂದು ನಡೆದಿದ್ದೇನು? | Oneindia Kannada

ಮಂಗಳೂರು, ಆಗಸ್ಟ್ 26: ಕಾಫೀ ಡೇ ಮಾಲೀಕ ವಿಜಿ ಸಿದ್ಧಾರ್ಥ ಅವರ ಅನಿರೀಕ್ಷಿತ ಸಾವಿಗೆ ಸಂಬಂಧಿಸಿದ ಅಟಾಪ್ಸಿ ವರದಿ ಹೊರಬಿದ್ದಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಪಿ ಎಸ್ ಹರ್ಷಾ ಹೇಳಿದ್ದಾರೆ.

ಕೆಲವು ಮೂಲಗಳ ಪ್ರಕಾರ ಈ ವರದಿಯಲ್ಲಿ, 'ಸಿದ್ಧಾರ್ಥ ಅವರದ್ದು ಆತ್ಮಹತ್ಯೆಯೇ ಹೌದು ಎಂಬುದು ಖಚಿತವಾಗಿದೆ. ಅವರ ಶ್ವಾಸಕೋಶದಲ್ಲಿ ನೀರು ಪತ್ತೆಯಾಗಿದ್ದು, ಅವರು ನೀರಿನಲ್ಲಿ ಮುಳುಗಿಯೇ ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ' ಎನ್ನಲಾಗಿದೆ.

"ನಮಗೆ ಫೋರೆನ್ಸಿಕ್ ಲ್ಯಾಬ್ ವರದಿಯ ದೊರಕಿದ್ದು, ಅದು ಸಿದ್ಧಾರ್ಥ ಅವರದ್ದು ಆತ್ಮಹತ್ಯೆ ಎಂಬುದನ್ನು ಖಚಿತಪಡಿಸಿದೆ" ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸಿದ್ಧಾರ್ಥ ಸಾವು: ಮರಣೋತ್ತರ ಪರೀಕ್ಷೆ ಪ್ರಾಥಮಿಕ ವರದಿಯಲ್ಲೇನಿದೆ? ಸಿದ್ಧಾರ್ಥ ಸಾವು: ಮರಣೋತ್ತರ ಪರೀಕ್ಷೆ ಪ್ರಾಥಮಿಕ ವರದಿಯಲ್ಲೇನಿದೆ?

ಜುಲೈ 29 ರಂದು ಉಲ್ಲಾಲ ಬಳಿಯ ನೇತ್ರಾವತಿ ನದಿ ಸೇತುವೆಯ ಮೇಲೆ ಕಾರು ನಿಲ್ಲಿಸಿ, ಡರೈವರ್ ನನ್ನು ಮುಂದೆ ಕಳಿಸಿದ ನಂತರ ನದಿಗೆ ಹಾರಿ ಸಿದ್ಧಾರ್ಥ ಆವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಸಾಲದ ಹೊರೆ, ಕೆಲವರಿಂದ ನಿರಂತರ ಒತ್ತಡ ತಾಳಲಾರದೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಂದಾಜಿಸಲಾಗಿತ್ತು.

ತನಿಖೆಗೆ ಆಗ್ರಹ

ತನಿಖೆಗೆ ಆಗ್ರಹ

ಸಿದ್ಧಾರ್ಥ್ ಅವರ ಸಾವಿನ ನಂತರ ಈ ಘಟನೆ ಬಗ್ಗೆ ಹಲವು ಅನುಮಾನಗಳು ಎದ್ದಿದ್ದರಿಂದ ಈ ಬಗ್ಗೆ ತನಿಖೆ ನಡೆಸುವಂತೆ ಆಗ್ರಹ ವ್ಯಕ್ತವಾಗಿತ್ತು. ಘಟನೆ ನಡೆದ ಎರಡು ದಿನದ ನಂತರ ಅವರ ಶವ ನೇತ್ರಾವತಿ ನದಿಯಲ್ಲೇ ಪತ್ತೆಯಾಗಿತ್ತು. ಆದರೆ ಸಿದ್ಧಾರ್ಥ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಮನಸ್ಸಿನವರಲ್ಲ. ಆದ್ದರಿಂದ ಇದು ಆತ್ಮಹತ್ಯೆಯಲ್ಲ ಎಂದು ಅವರ ಅಭಿಮಾನಿಗಳು ಅನುಮಾನ ವ್ಯಕ್ತಪಡಿಸಿದ್ದರು.

ಮರಣೋತ್ತರ ಪರೀಕ್ಷೆ ಪ್ರಾಥಮಿಕ ವರದಿ

ಮರಣೋತ್ತರ ಪರೀಕ್ಷೆ ಪ್ರಾಥಮಿಕ ವರದಿ

ಆಗಸ್ಟ್ 02 ರಂದು ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಹೊರಬಿದ್ದಿತ್ತು. ಸಿದ್ಧಾರ್ಥ ಅವರ ದೇಹದ ಮೇಲೆ ಯಾವುದಾದರೂ ಗಾಯವಿದೆಯೇ ಎಂಬ ಬಗ್ಗೆ ಈ ವರದಿ ತಿಳಿಸಿತ್ತು. ಆದರೆ ಈ ವರದಿಯನ್ನು ಪೊಲೀಸರು ಬಹಿರಂಗ ಪಡಿಸಿರಲಿಲ್ಲ. ಅಂತಿಮ ವರದಿ ಬಂದ ನಂತರವಷ್ಟೇ ಈ ಬಗ್ಗೆ ಖಚಿತ ಮಾಹಿತಿ ನೀದಲಾಗುವುದು ಎಂದು ಪೊಲೀಸರು ತಿಳಿಸಿದ್ದರು. ಅಂತೆಯೇ ಇದೀಗ ಅಟಾಪ್ಸಿ ವರದಿ ಬಂದಿದೆಯಾದರೂ ವರದಿಯಲ್ಲಿ ಏನಿದೆ ಎಂಬ ಬಗ್ಗೆ ಅಧಿಕೃತವಾಗಿ ಪೊಲೀಸರು ಯಾವುದೇ ಹೇಳಿಕೆ ನೀಡಿಲ್ಲ.

ಉಸಿರುಗಟ್ಟಿ ಸಾವಿಗೀಡಾದರೇ ಸಿದ್ಧಾರ್ಥ?; ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಉಸಿರುಗಟ್ಟಿ ಸಾವಿಗೀಡಾದರೇ ಸಿದ್ಧಾರ್ಥ?; ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ

ಉಸಿರುಗಟ್ಟಿ ಸಾವಿಗೀಡಾದರೇ?

ಉಸಿರುಗಟ್ಟಿ ಸಾವಿಗೀಡಾದರೇ?

ಪ್ರಾಥಮಿಕ ವರದಿಯಲ್ಲಿ ಸಿದ್ಧಾರ್ಥ್ ಅವರು ಉಸಿರುಗಟ್ಟಿ ಸಾವಿಗೀಡಾದರು ಎಂಬ ಉಲ್ಲೇಖವಿದೆ ಎಮದು ಕೆಲವು ಮೂಲಗಳು ತಿಳಿಸಿದ್ದವು. ಆದರೆ ಅವರ ದೇಹದ ಮೇಲೆ ಯಾವುದೇ ಗಾಯದ ಗುರುತಿದ್ದ ಬಗ್ಗೆ ಉಲ್ಲೇಖವಿರಲಿಲ್ಲ. ನೀರಿಗೆ ಬಿದ್ದು, ದೇಹದೊಳಗೆ ನೀರು ಹೋಗಿ ಉಸಿರಾಡಲಾಗದೆ ಅವರು ಸಾವನ್ನಪ್ಪಿರಬಹುದು ಎಂದು ಪ್ರಾಥಮಿಕ ವರದಿಯಲ್ಲೂ ಅನುಮಾನ ವ್ಯಕ್ತಪಡಿಸಿಲಾಗಿತ್ತು. ಅಟಾಪ್ಸಿ ವರದಿ ಅದನ್ನು ದೃಢಪಡಿಸಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬರಬೇಕಿದೆ.

ತಿಂಗಳೊಳಗೆ ತಂದೆ ಗಂಗಯ್ಯ ಹೆಗ್ಡೆ ನಿಧನ

ತಿಂಗಳೊಳಗೆ ತಂದೆ ಗಂಗಯ್ಯ ಹೆಗ್ಡೆ ನಿಧನ

ಇತ್ತ ಸಿದ್ಧಾರ್ಥ ಅವರ ಅಟಾಪ್ಸಿ ವರದಿ ಹೊರಬರುವ ಮುನ್ನವೇ ಕೋಮಾ ಸ್ಥಿತಿಯಲ್ಲಿದ್ದ ಅವರ ತಂದೆ ಗಂಗಯ್ಯ ಹೆಗಡೆ(95) ಅವರು ಭಾನುವಾರ ನಿಧನರಾಗಿದ್ದಾರೆ. ಮಗ ನಿಧನರಾದ ಒಂದು ತಿಂಗಳಿಗೂ ಮುನ್ನವೇ ತಂದೆಯೂ ಇಹಲೋಕ ತ್ಯಜಿಸಿದಂತಾಗಿದೆ.

ಮಗ ಸತ್ತ ತಿಂಗಳೊಳಗೇ ಅಪ್ಪನ ಸಾವು; ಇಂದು ಸಿದ್ಧಾರ್ಥ ತಂದೆ ಗಂಗಯ್ಯ ಹೆಗ್ಡೆ ಅಂತ್ಯಕ್ರಿಯೆ ಮಗ ಸತ್ತ ತಿಂಗಳೊಳಗೇ ಅಪ್ಪನ ಸಾವು; ಇಂದು ಸಿದ್ಧಾರ್ಥ ತಂದೆ ಗಂಗಯ್ಯ ಹೆಗ್ಡೆ ಅಂತ್ಯಕ್ರಿಯೆ

English summary
Coffee Day owner VG Siddharatha Death case, Autopsy Report says, It is a suicide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X