ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿಂದೂ ಮಹಾಸಭಾ ಮುಖಂಡನ ಮೇಲೆ 8 ಸೆಕ್ಷನ್‌ಗಳ ಮೇಲೆ ಪ್ರಕರಣ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 19 ; ಮೈಸೂರು ದೇಗುಲ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಬಹಿರಂಗ ಬೆದರಿಕೆ ಹಾಕಿದ್ದ ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ‌ಧರ್ಮೇಂದ್ರ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.

ಕ್ಷಮೆ ಕೇಳಿದ ಬೆನ್ನಲ್ಲೇ ಸಾಲು-ಸಾಲು ಪ್ರಕರಣಗಳು ಧರ್ಮೇಂದ್ರ ಹೆಗಲೇರಿದೆ. ಮಂಗಳೂರಿನ ಬರ್ಕೆ ಠಾಣೆಯಲ್ಲಿ ಧರ್ಮೇಂದ್ರ ವಿರುದ್ಧ ಬರೋಬ್ಬರಿ 8 ಸೆಕ್ಷನ್ ಗಳನ್ನು ಹಾಕಿ ಪ್ರಕರಣ ದಾಖಲಿಸಲಾಗಿದೆ.

2814 ಅನಧಿಕೃತ ದೇವಾಲಯ ಅಧಿಕೃತಗೊಳಿಸಲು ಬಿಲ್ ಮಂಡನೆ ಮಾಡಲಿದ್ದಾರೆ ಶಾಸಕ ಎಸ್. ಎ. ರಾಮದಾಸ್‌2814 ಅನಧಿಕೃತ ದೇವಾಲಯ ಅಧಿಕೃತಗೊಳಿಸಲು ಬಿಲ್ ಮಂಡನೆ ಮಾಡಲಿದ್ದಾರೆ ಶಾಸಕ ಎಸ್. ಎ. ರಾಮದಾಸ್‌

ಮೈಸೂರಿನ‌ ನಂಜನಗೂಡಿನ ಹುಚ್ಚುಗಣಿ ಗ್ರಾಮದ ಮಾಹದೇವಮ್ಮನ ದೇವಸ್ಥಾನ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ್ದ ಹಿಂದೂ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ, "ಹಿಂದೂಗಳ ಮೇಲೆ ದಾಳಿಯಾದಾಗ ಗಾಂಧೀಜಿಯನ್ನೇ ಹತ್ಯೆ ಮಾಡೋಕೆ ಆಗುತ್ತೆ ಇನ್ನು ನಿಮ್ಮ ಬಗ್ಗೆ ಆಲೋಚನೆ ಮಾಡೋಕೆ ಸಾಧ್ಯ ಇಲ್ವಾ?" ಅಂತಾ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಬಹಿರಂಗವಾಗಿಯೇ ಬೆದರಿಕೆಯನ್ನು ಹಾಕಿದ್ದರು.

ದೇವಾಲಯ ತೆರವು; ಅಧಿಕಾರಿಗಳ ವಿರುದ್ಧ ಮತ್ತೆ ಪ್ರತಾಪ್ ಸಿಂಹ ಗುಡುಗು ದೇವಾಲಯ ತೆರವು; ಅಧಿಕಾರಿಗಳ ವಿರುದ್ಧ ಮತ್ತೆ ಪ್ರತಾಪ್ ಸಿಂಹ ಗುಡುಗು

 Case Against Hindu Mahasabha Secretary Dharmendra Under 8 Sections

ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಮತ್ತು ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದ್ದಂತೆಯೇ ಧರ್ಮೇಂದ್ರ ತನ್ನ ಹೇಳಿಕೆಯ ಬಗ್ಗೆ ಕ್ಷಮೆಯಾಚನೆ ಮಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ, "ನಾನು ಹೇಳಿರೋದೇ ಬೇರೆ, ಮಾಧ್ಯಮಗಳು ಅದನ್ನು ಬಿಂಬಿಸಿರೋದೇ ಬೇರೆ. ನಾನು ಗಾಂಧೀಜಿಯವರ ಹಿಂದುತ್ವ ವಿರೋಧ ನೀತಿಯ ಬಗ್ಗೆ ಮಾತನಾಡಿದ್ದೇನೆ. ವಾಕ್ಯ ಬಳಕೆಯಲ್ಲಿ ಹತ್ಯೆ ಎಂಬ ಶಬ್ಧ ಬಂದಿದ್ದು, ಆ ಶಬ್ಧ ಅಸಂವಿಧಾನಿಕವಾಗಿದ್ದರೆ ಕ್ಷಮೆಯಾಚಿಸುತ್ತೇನೆ" ಎಂದು ಹೇಳಿದ್ದಾರೆ.

 6 ದೇವಾಲಯ ಕಳವು ಪ್ರಕರಣ ಭೇದಿಸಿದ ರಾಮನಗರ ಪೊಲೀಸರು: 1.85 ಲಕ್ಷ ಮೌಲ್ಯದ ಸ್ವತ್ತು ವಶ 6 ದೇವಾಲಯ ಕಳವು ಪ್ರಕರಣ ಭೇದಿಸಿದ ರಾಮನಗರ ಪೊಲೀಸರು: 1.85 ಲಕ್ಷ ಮೌಲ್ಯದ ಸ್ವತ್ತು ವಶ

ಈ ನಡುವೆ ಅಖಿಲ ಭಾರತೀಯ ಹಿಂದೂ ಮಹಾಸಭಾ ಮಾತ್ರ ಧರ್ಮೇಂದ್ರ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ. ಅಖಿಲ ಭಾರತೀಯ ಹಿಂದೂ ಮಹಾಸಭಾದ ಕಾರ್ಯಕರ್ತ ಬೆಂಗಳೂರಿನ ಲೋಹಿತ್ ಕುಮಾರ್ ಸುವರ್ಣ ಎಂಬುವವರು ಧರ್ಮೇಂದ್ರ ವಿರುದ್ಧ ಮಂಗಳೂರಿನ ಬರ್ಕೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಧರ್ಮೇಂದ್ರ ಮತ್ತು ಪತ್ರಿಕಾಗೋಷ್ಠಿಯಲ್ಲಿದ್ದ ಇತರ ನಾಲ್ವರನ್ನು ಅಖಿಲ ಭಾರತೀಯ ಹಿಂದೂ ಮಹಾಸಭಾದಿಂದ ಈ ಹಿಂದೆನೇ ಉಚ್ಛಾಟಿಸಲಾಗಿದೆ. ಇವರಿಗೂ ಮಹಾಸಭಾಗೂ ಯಾವುದೇ ಸಂಬಂಧವಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಬಹಿರಂಗ ಕೊಲೆ ಬೆದರಿಕೆ ಹಾಕಿದ ಧರ್ಮೇಂದ್ರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.

ಧರ್ಮೇಂದ್ರ ವಿರುದ್ಧ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು ಸುಮಾರು ಎಂಟು ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 120(B),153(A),505(2),506,465,468,469,149 ಸೆಕ್ಷನ್ ಗಳನ್ನು ಹಾಕಿ ಪ್ರಕರಣ ದಾಖಲಿಸಲಾಗಿದೆ.

ಇನ್ನು ಧರ್ಮೇಂದ್ರ ವಿರುದ್ಧ ದೇಶದ್ರೋಹದ ಕೇಸ್ ಹಾಕಬೇಕೆಂದು ಎಸ್. ಡಿ. ಪಿ. ಐ ಆಗ್ರಹಿಸಿದೆ. ಧರ್ಮೇಂದ್ರ ಗಾಂಧೀಜಿ ಹತ್ಯೆ ಮಾಡಿರುವ ಬಗ್ಗೆ ಸಮರ್ಥನೆ ಮಾಡಿರೋದು ದೇಶದ್ರೋಹವಾಗಿದೆ. ಪೊಲೀಸರು ತಕ್ಷಣ ದೇಶದ್ರೋಹದ ಪ್ರಕರಣ ಹಾಕಿ ಬಂಧನ ಮಾಡಬೇಕೆಂದು ಒತ್ತಾಯಿಸಲಾಗಿದೆ.

ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ‌ಧರ್ಮೇಂದ್ರ ತಮ್ಮ ಹೇಳಿಕೆಗೆ ಬಗ್ಗೆ ಪ್ರತಿಕ್ರಿಯೆ ನೀಡಿ, "ಹಿಂದೂವಾಗಿ ನಮ್ಮ ಧರ್ಮದ ಶ್ರದ್ಧೆಯ ಕೇಂದ್ರ ದೇವಾಸ್ಥಾನ ಧ್ವಂಸವಾದ ಬಗ್ಗೆ ಅಸಹನೆಯಿಂದ ಮಾತನಾಡಿದ್ದೇನೆ. ಇದರ ಹಿಂದೆ ಯಾವುದೇ ಬೆದರಿಕೆ ಹಾಕುವ ದುರುದ್ದೇಶ ಇರಲಿಲ್ಲ. ಗಾಂಧೀಜಿ ಹತ್ಯೆಯ ಕಾರಣವನ್ನು ವಿವರಿಸುವ ಭರದಲ್ಲಿ ಈ ಹೇಳಿಕೆ ಬಂದಿದೆ. ಈ ಹೇಳಿಕೆ ಕುರಿತು ವಿಷಾದ ವ್ಯಕ್ತಪಡಿಸುತ್ತೇನೆ" ಎಂದು ಹೇಳಿದ್ದರು.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಧರ್ಮೇಂದ್ರ, "ಬಿಜೆಪಿಯ ನಾಯಕರು ದೇಗುಲ ಧ್ವಂಸ ಮಾಡಿರುವುದು ಸಣ್ಣ ತಪ್ಪು ಎಂದು ಹೇಳಿದ್ದಾರೆ. ಹಾಗಾದರೆ ದೊಡ್ಡ ತಪ್ಪು ಯಾವುದು?. ದೇವಾಲಯ ಮರು ನಿರ್ಮಾಣ ಮಾಡುತ್ತೇವೆ ಎಂದು ಸರ್ಕಾರ ಹೇಳುತ್ತಿದೆ?. ಯಾರ ಹಣದಲ್ಲಿ ದೇವಾಲಯ ನಿರ್ಮಾಣ ಮಾಡುತ್ತೀರಿ?. ಜನರ ತೆರಿಗೆ ಹಣದಲ್ಲಿ ದೇವಾಲಯ ಮರು ನಿರ್ಮಾಣ ಮಾಡುತ್ತೀರಾ?" ಎಂದು ಪ್ರಶ್ನಿಸಿದ್ದರು.

English summary
Mangaluru Barke police field the case against Akhila Bharatha Hindu Mahasabha secretary Dharmendra under 8 sections for his threat speech against CM Basavaraj Bommai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X