ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ಧಾರ್ಥ ಚಿತೆಗೆ ಅಗ್ನಿ ಸ್ಪರ್ಶ: ಕಣ್ಣೀರ ವಿದಾಯ, ಮಡುಗಟ್ಟಿದ ಶೋಕ

|
Google Oneindia Kannada News

ಮಂಗಳೂರು, ಜುಲೈ 31: ಕಾಫಿ ಡೇ ಮಾಲೀಕ ವಿಜಿ ಸಿದ್ಧಾರ್ಥ ಅವರ ಮೃತದೇಹ ಹೊಯಿಗ್ ಬಜಾರ್ ಎಂಬ ಪ್ರದೇಶದ ನಧಿ ಭಾಗದಲ್ಲಿ ಪತ್ತೆಯಾಗಿದೆ.

ಸೋಮವಾರ ತಡರಾತ್ರಿಯಿಂದ ಮಂಗಳವಾರ ತಡರಾತ್ರಿವರೆಗೆ ನೇತ್ರಾವತಿ ನದಿ ತಟದಲ್ಲಿ ಶೋಧ ಕಾರ್ಯ ನಡೆಸಲಾಗಿದ್ದು, ಆ ಬಳಿಕ ಸ್ಥಗಿತಗೊಳಿಸಲಾಗಿತ್ತು. ಇಂದು ಬೆಳಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಈ ಮಧ್ಯೆ ಹೊಯಿಗೆ ಬಜಾರ್ ಎಂಬ ಪ್ರದೇಶದ ನದಿಭಾಗದಲ್ಲಿ ಮೃತದೇಹ ಪತ್ತೆಯಾಗಿದೆ.

ವಿ.ಜಿ ಸಿದ್ದಾರ್ಥ ಮೃತದೇಹ ಪತ್ತೆ, ನೇತ್ರಾವತಿ ಪಾಲಾದ ಕಾಫಿ ಕಿಂಗ್ವಿ.ಜಿ ಸಿದ್ದಾರ್ಥ ಮೃತದೇಹ ಪತ್ತೆ, ನೇತ್ರಾವತಿ ಪಾಲಾದ ಕಾಫಿ ಕಿಂಗ್

ಸ್ಥಳೀಯ ಮೀನುಗಾರರು ಗಮನಿಸಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ 36 ಗಂಟೆಗಳ ನಿರಂತರ ಕಾರ್ಯಾಚರಣೆಯ ಬಳಿಕ ಇದೀಗ ಸಿದ್ಧಾರ್ಥ್ ಪತ್ತೆಯಾಗಿದ್ದಾರೆ.

Cafe Coffee Day Owner Siddhartha No More Live Updates

ಮಂಗಳಾದೇವಿ ದೇವಸ್ಥಾನದ ಹಿಂಭಾಗದಲ್ಲಿ ರಸ್ತೆಯಿದೆ. ಆ ರಸ್ತೆಯಲ್ಲಿ ಹೊಯಿಗೆ ಬಜಾರ್ ಎಂಬ ಪ್ರದೇಶವಿದೆ. ಇಲ್ಲಿ ನದಿ ಒಂದು ಕಡೆಯಿಂದ ಮಂಗಳೂರು ಬಂದರನ್ನು ತಲುಪುತ್ತದೆ. ಇನ್ನೊಂದು ಕಡೆಯಿಂದ ಸಮುದ್ರವನ್ನು ತಲುಪುತ್ತದೆ. ಈ ಪ್ರದೇಶದಲ್ಲಿ ಸಿದ್ಧಾರ್ಥ್ ಮೃತದೇಹ ಸಿಕ್ಕಿದೆ.

ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಧಾವಿಸಿದ್ದಾರೆ. ಮೃತದೇಹದ ಪರಿಶೀಲನೆ ನಡೆಸಿ, ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ಕುಟುಂಬಸ್ಥರು, ಸಂಬಂಧಿಕರು ನಿರ್ಧಾರದಂತೆ ಮರಣೋತ್ತರ ಪರೀಕ್ಷೆ ಮುಂದಿನ ಕಾರ್ಯಗಳು ನಡೆಯಲಿವೆ ಎಂದು ನಮ್ಮ ಪ್ರತಿನಿಧಿ ತಿಳಿಸಿದ್ದಾರೆ.

ಎರಡು ಕಡೆ ಪಾರ್ಥಿಕ ಶರೀರ ದರ್ಶನಕ್ಕೆ ವ್ಯವಸ್ಥೆ, ಚಿಕ್ಕಮಗಳೂರಿನಲ್ಲಿ ಮಧ್ಯಾಹ್ನ ಅಂತ್ಯಕ್ರಿಯೆ, ಎಬಿಸಿ ಕಾಫಿ ಕ್ಯೂರಿಂಗ್,ಚೇತನಹಳ್ಳಿ ಎಸ್ಟೇಟ್‌ನಲ್ಲಿ ಅಂತಿಮ ದರ್ಶನ, ಮೆನ್‌ಲಾಕ್ ಆಸ್ಪತ್ರೆಯಲ್ಲಿ ಸಿದ್ಧಾರ್ಥ್ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ.

ವೆನ್‌ಲಾಕ್ ಆಸ್ಪತ್ರೆಯಿಂದ ರಸ್ತೆ ಮೂಲಕವೇ ಚಿಕ್ಕಮಗಳೂರಿಗೆ ಸಿದ್ಧಾರ್ಥ ಮೃತದೇಹ ರವಾನೆಯಾಗಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Newest FirstOldest First
6:59 PM, 31 Jul

ಚೇತನಹಳ್ಳಿ ಎಸ್ಟೇಟ್‌ನಲ್ಲಿ ಶೋಕ ಮಡುಗಟ್ಟಿದ್ದು, ಸೂರ್ಯ ಮುಳುಗುವ ವೇಳೆ ಸಿದ್ಧಾರ್ಥ ಅವರ ಶರೀರಕ್ಕೆ ಅಗ್ನಿಗೆ ಸೋಕಿ ಆವಿಯಾಗಿ ಪಂಚಭೂತಗಳನ್ನು ಸೇರುತ್ತಿದೆ.
6:55 PM, 31 Jul

ಇಬ್ಬರು ಪುತ್ರರಿಂದ ಸಿದ್ಧಾರ್ಥ ಅವರ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಷ ಮಾಡಿದರು. ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿತು.
6:36 PM, 31 Jul

ಸಿದ್ಧಾರ್ಥ ಅವರ ಪಾರ್ಥಿವ ಶರೀರವನ್ನು ಚಿತಾವಣೆಗೆ ತರಲಾಗಿದೆ. ಚಿತಾವಣೆಗೆ ಸುಗಂಧ ದ್ರವ್ಯ, ವಸ್ತ್ರ ಮತ್ತಿತರೆಗಳನ್ನು ವಸ್ತುಗಳನ್ನು ಸಂಪ್ರದಾಯದಂತೆ ಇಡಲಾಗಿದೆ. ಕೆಲವೇ ಕ್ಷಣಗಳಲ್ಲಿ ಸಿದ್ಧಾರ್ಥ ಅವರ ಮೊದಲ ಪುತ್ರ ಅಮರ್ಥ್ಯ ಅವರು ಚಿತೆಗೆ ಅಗ್ನಿ ಸ್ಪರ್ಶ ಮಾಡಲಿದ್ದಾರೆ.
6:13 PM, 31 Jul

ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರು ಸಿದ್ಧಾರ್ಥ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
5:56 PM, 31 Jul

ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಸಿದ್ಧಾರ್ಥ ಅವರ ಅಂತಿಮ ದರ್ಶನ ಪಡೆದರು. ಅಣ್ಣಾಮಲೈ ಅವರು ಚಿಕ್ಕಮಗಳೂರಿನಲ್ಲಿ ಎಸ್‌ಪಿ ಆಗಿ ಕೆಲ ಕಾಲ ಸೇವೆ ಸಲ್ಲಿಸಿದ್ದರು. ಈಗ ಅವರು ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
4:56 PM, 31 Jul

ಸಂಜೆ 6-7 ಗಂಟೆ ವೇಳೆಗೆ ಸಿದ್ಧಾರ್ಥ ಅವರ ಅಂತ್ಯಕ್ರಿಯೆ ಚೇತನಹಳ್ಳಿ ಎಸ್ಟೇಟ್‌ನಲ್ಲಿ ನೆರವೇರಲಿದೆ, ಚಿತೆಗೆ ಶ್ರೀಗಂಧ, ಮಾವು ಇನ್ನಿತರೆ ಮರಗಳ ಬಳಕೆ ಮಾಡಲಾಗುತ್ತಿದೆ.
4:32 PM, 31 Jul

ಚೇತನಹಳ್ಳಿ ಎಸ್ಟೇಟ್‌ನತ್ತ ಸಿದ್ಧಾರ್ಥ ಪಾರ್ಥಿವ ಶರೀರ ರವಾನೆಯಾಗುತ್ತಿದೆ.
Advertisement
4:10 PM, 31 Jul

ಸಿದ್ಧಾರ್ಥ ಪಾರ್ಥಿವ ಶರೀರದೆದುರು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಕಣ್ಣೀರಿಟ್ಟಿದ್ದಾರೆ.
4:02 PM, 31 Jul

ಚೇತನಹಳ್ಳಿ ಎಸ್ಟೇಟ್‌ಗೆ ಸಿದ್ಧಾರ್ಥ್ ಪತ್ನಿ ತಾಯಿ, ಅತ್ತೆ ಪ್ರೇಮಕೃಷ್ಣ ಆಗಮನ
3:59 PM, 31 Jul

35-40 ಸಾವಿರ ಜನರಿಗೆ ಉದ್ಯೋಗ ಕೊಟ್ಟವರು ಸಿದ್ಧಾರ್ಥ , ದುರ್ದೈವ ನಾವು ಅವರನ್ನು ಕಳೆದುಕೊಂಡಿದ್ದೇವೆ, ಎಲ್ಲಾ ಸಜ್ಜನಿಕೆಯ ಪ್ರಾಮಾಣಿಕ ವ್ಯಕ್ತಿ, ಕಾಫಿ ಡೇ ಮೂಲಕ ಇಡೀ ವಿಶ್ವಕ್ಕೆ ಕಾಫಿ ಪರಿಚಯ ಮಾಡಿಕೊಟ್ಟಿದ್ದಾರೆ- ಯಡಿಯೂರಪ್ಪ
3:43 PM, 31 Jul

ಸಿದ್ಧಾರ್ಥ ಪಾರ್ಥಿವ ಶರೀರ ಇರಿಸಲಾಗಿರುವ ಎಬಿಸಿ ಕಾಫಿ ಕ್ಯೂರಿಂಗ್ ಗೆ ಮುಖ್ಯಮಂತ್ರಿ ಯಡಿಯೂರಪ್ಪ ಆಗಮಿಸಿದ್ದು ಸಿದ್ಧಾರ್ಥ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ
3:38 PM, 31 Jul

ಸಿದ್ಧಾರ್ಥ ಪಾರ್ಥಿವ ಶರೀರದ ಎದುರು ಕಣ್ಣೀರಿಟ್ಟ ಎಸ್‌ಎಂ ಕೃಷ್ಣ ದಂಪತಿ
Advertisement
3:18 PM, 31 Jul

ಅಳಿಯನ ಅಂತಿಮ ದರ್ಶನ ಪಡೆಯಲು ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ದಂಪತಿ ಚಿಕ್ಕಮಗಳೂರಿಗೆ ಆಗಮಿಸಿದ್ದಾರೆ.
3:16 PM, 31 Jul

ಮೂಡಿಗೆರೆಯ ಚೀಕನಹಳ್ಳಿ ಬಳಿ ಇರುವ ಚೇತನಹಳ್ಳಿ ಎಸ್ಟೇಟ್ ಬಳಿ ಇರುವ ಸಿದ್ಧಾರ್ಥ ನಿವಾಸದ ಎದುರೇ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ
3:03 PM, 31 Jul

ಸಿದ್ಧಾರ್ಥ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಜನಸಾಗರ ನೆರೆದಿದೆ. ಸಂಜೆ 6ಗೆ ಅಂತ್ಯಕ್ರಿಯೆ ನೆರವೇರಲಿದೆ. ಎಬಿಸಿ ಕಾಫಿ ಕ್ಯೂರಿಂಗ್ ಸೆಂಟರ್‌ನಿಂದ ಚೇತನಹಳ್ಳಿ ಎಸ್ಟೇಟ್‌ಗೆ ಪಾರ್ಥಿವ ಶರೀರ ರವಾನೆಯಾಗುತ್ತಿದೆ.
2:42 PM, 31 Jul

ಸಿದ್ಧಾರ್ಥ ಅವರ ಪಾರ್ಥಿವ ಶರೀರ ಆಂಬುಲೆನ್ಸ್‌ನಲ್ಲಿ ಚಿಕ್ಕಮಗಳೂರಿಗೆ ತಲುಪಿದೆ. ಕಾಫಿ ಕ್ಯೂರಿಂಗ್ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
2:13 PM, 31 Jul

ಇನ್ನು 15 ನಿಮಿಷಗಳಲ್ಲಿ ಎಬಿಸಿ ಕ್ಯೂರಿಂಗ್ ಆವರಣಕ್ಕೆ ಸಿದ್ಧಾರ್ಥ ಪಾರ್ಥಿವ ಶರೀರ ಬರಲಿದೆ
2:04 PM, 31 Jul

ಕಾಫಿ ಡೇ ಸಂಸ್ಥೆಯ ನೂತನ ಸಿಒಒ ಆಗಿ ನಿತಿನ್ ಬಾಗ್ಮನೆ ನೇಮಕ , ನಿರ್ದೇಶಕರ ಮಂಡಳಿ ಮಧ್ಯಂತರ ಅಧ್ಯಕ್ಷರಾಗಿ ಎಸ್. ವಿ ರಂಗನಾಥ್ ,ಕೆಫೆ ಕಾಫಿ ಡೇ ಸಂಸ್ಥೆ ಉನ್ನತಾಧಿಕಾರಿಗಳ ಸಭೆಯಲ್ಲಿ ತೀರ್ಮಾನ
1:51 PM, 31 Jul

ಸಿದ್ಧಾರ್ಥ ಅಂತಿಮ ದರ್ಶನಕ್ಕಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಚಿಕ್ಕಮಗಳೂರು ಕಡೆ ಹೊರಟಿದ್ದಾರೆ.
1:44 PM, 31 Jul

ಇದೀಗ ಸಿದ್ಧಾರ್ಥ ಅವರ ಪಾರ್ಥಿವ ಶರೀರ ಮೂಡಿಗೆರೆಯನ್ನು ತಲುಪಿದೆ, 2.30ರ ಹೊತ್ತಿಗೆ ಕಾಫಿ ಕ್ಯೂರಿಂಗ್‌ಗೆ ತಲುಪಲಿದೆ
1:31 PM, 31 Jul

ಸಿದ್ಧಾರ್ಥ ಚಿತೆಗೆ ಶ್ರೀಗಂಧ, ಮಾವು, ಹಲಸು ಸೇರಿ ವಿವಿಧ ಮರಗಳ ಬಳಕೆ ಮಾಡಲಾಗುತ್ತಿದೆ, ಸಂಜೆ 6-7 ಗಂಟೆ ವೇಳೆಗೆ ಶವ ಸಂಸ್ಕಾರ ಮಾಡಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.
1:18 PM, 31 Jul

ಸಿದ್ಧಾರ್ಥ ಪೋನ್‌ನಲ್ಲಿ ನಿರಂತರವಾಗಿ ಮಾತನಾಡುತ್ತಿದ್ದರು ಎನ್ನುವ ಮಾಹಿತಿ ಪಡೆದ ಪೊಲೀಸರು ಅವರ ಕಾಲ್‌ ಲಿಸ್ಟ್‌ ಪರಿಶೀಲನೆ ನಡೆಸುತ್ತಿದ್ದಾರೆ.
1:10 PM, 31 Jul

ಆತ್ಮಹತ್ಯೆ ಮಾಡಿಕೊಂಡು 36 ತಾಸು ಕಳೆದಿದ್ದರೂ ಮುಖದಲ್ಲಿ ರಕ್ತ ಸೋರಿಕೆ ಕುರಿತು ಪೊಲೀಸರ ತನಿಖೆ
1:03 PM, 31 Jul

ಚಾರ್ಮಾಡಿ ಘಾಟ್‌ ಬಳಿ ಹಳ್ಳಿಯಲ್ಲಿ ಆಂಬ್ಯುಲೆನ್ಸ್ ನಿಲ್ಲಿಸಿ ಸಿದ್ಧಾರ್ಥ ಅವರ ಅಂತಿಮ ದರ್ಶನಕ್ಕೆ ಅವಕಾಶಮಾಡಿಕೊಟ್ಟಿದ್ದಾರೆ.
12:57 PM, 31 Jul

ಸಿದ್ಧಾರ್ಥ ಅವರ ಟಿ ಶರ್ಟ್ ಕಾಣೆಯಾಗಿರುವ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬೆಂಗಳೂರಿನ ಎಚ್‌ಎಎಲ್‌ನಿಂದ ಎಸ್‌ಎಂ ಕೃಷ್ಣ ಕುಟುಂಬಸ್ಥರು ಹೆಲಿಕಾಪ್ಟರ್ ಮೂಲಕ ತೆರಳಿದ್ದಾರೆ.
12:44 PM, 31 Jul

ಸಿಸಿಡಿಯ ಭವಿಷ್ಯದ ಬಗ್ಗೆ ನಡೆಸಿದ್ದ ನಿರ್ದೇಶಕರ ಸಭೆ ಅಂತ್ಯಗೊಂಡಿದೆ, ಕೆಫೆ ಕಾಫಿ ಡೇಯನ್ನು ಮುಚ್ಚದಿರಲು ನಿರ್ದೇಶಕರು ತೀರ್ಮಾನಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
12:35 PM, 31 Jul

ಮೇ ತಿಂಗಳಲ್ಲಿ ಷೇರುದಾರರ ಬಳಿಕ ಕಾನ್ಫರೆನ್ಸ್ ಕಾಲ್‌ನಲ್ಲಿ ಸಿದ್ಧಾರ್ಥ ಮಾತನಾಡಿದ್ದರು, ಒಂದು ದಿನ ನಮ್ಮದೇ ಆದ ಕಾಫಿ ಸಾಮ್ರಾಜ್ಯವನ್ನು ಕಟ್ಟುತ್ತೇನೆ ಎನ್ನುವ ಮಾತನಾಡಿದ್ದರು.
12:33 PM, 31 Jul

ಮೈಸೂರಿನ ದೇವರಾಜ ಅರಸು ವೃತ್ತದಲ್ಲಿ ಮೈಸೂರಿನ ಸಾರ್ವಜನಿಕರಿಂದ ಸಿದ್ಧಾರ್ಥ ಅವರಿಗೆ ಶ್ರದ್ಧಾಂಜಲಿ
12:32 PM, 31 Jul

ಕಾಫಿ ಡೇ ಷೇರು ಶೇ. 20 ರಷ್ಟು ಕುಸಿತ, ಮಂಗಳವಾರ ಶೇ. 18 ರಷ್ಟು ಕುಸಿತ ಕಂಡಿತ್ತು, ಒಟ್ಟು 800 ಕೋಟಿಗೂ ಅಧಿಕ ನಷ್ಟವಾಗಿತ್ತು.
12:27 PM, 31 Jul

ಐಡಿ ಕಾರ್ಡ್, ಹಣ, ಸಿದ್ಧಾರ್ಥ್ ಜೇಬಿನಲ್ಲಿ ಪತ್ತೆಯಾಗಿದೆ, ಆದರೆ ಶರ್ಟ್ ಮಾತ್ರ ಇರಲಿಲ್ಲ.ಮೊಬೈಲ್‌ನಿಂದ ಮಾತನಾಡುತ್ತಾ ಕಾರಿನಿಂದ ಕೆಳಗಿಳಿದಿದ್ದರು.
READ MORE

English summary
Cafe coffee day owner Siddhartha body found in Netravati river. Body has been shifted to hospital for post mortom.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X