ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದು ಮಂಗಳೂರಿನಲ್ಲಿ ಸಿಎಎ ವಿರೋಧಿಸಿ ಬೃಹತ್ ಪ್ರತಿಭಟನೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜನವರಿ 15: ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು ವಿರೋಧಿಸಿ ಮಂಗಳೂರಿನಲ್ಲಿ ಇಂದು ಬೃಹತ್ ಪ್ರತಿಭಟನಾ ಸಮಾವೇಶಕ್ಕೆ ವೇದಿಕೆ ಸಿದ್ಧಗೊಂಡಿದೆ. ಸಕಲ ಭದ್ರತೆಗೆ 5000 ಪೊಲೀಸರ ನಿಯೋಜನೆ ಮಾಡಲಾಗಿದೆ.

ಮಂಗಳೂರಿನ ಹೊರವಲಯದಲ್ಲಿರುವ ಅಡ್ಯಾರ್ ಕಣ್ಣೂರಿನ ಮಸೀದಿ ಪಕ್ಕದಲ್ಲಿನ ಆವರಣದಲ್ಲಿ ಎಲ್ಲಾ ರೀತಿಯ ಸಿದ್ಧತೆಗಳು ನಡೆದಿದೆ. ಮಂಗಳೂರಿನ ನೆಹರೂ ಮೈದಾನದಲ್ಲಿ ಅನುಮತಿ ಸಿಗದ ಕಾರಣ ಕಣ್ಣೂರಿನಲ್ಲಿ ಪ್ರತಿಭಟನಾ ಸಮಾವೇಶ ನಡೆಯಲಿದೆ. ಡಿಸೆಂಬರ್ 19 ರಂದು ಮಂಗಳೂರಿನಲ್ಲಿ ಪ್ರತಿಭಟನೆಗೆ ಪೊಲೀಸರು ಅವಕಾಶ ನೀಡಿರಲಿಲ್ಲ.

ಕುಮಾರಸ್ವಾಮಿ ಬಿಡುಗಡೆ ಮಾಡಿದ ವಿಡಿಯೋ: ಪೊಲೀಸರ ದೌರ್ಜನ್ಯ ಸೆರೆಕುಮಾರಸ್ವಾಮಿ ಬಿಡುಗಡೆ ಮಾಡಿದ ವಿಡಿಯೋ: ಪೊಲೀಸರ ದೌರ್ಜನ್ಯ ಸೆರೆ

ನಂತರ ಲಾಠಿಚಾರ್ಜ್, ಕಲ್ಲುತೂರಾಟ, ಗೋಲಿಬಾರ್ ನಡೆದಿತ್ತು. ಅಂದಿನ ಪ್ರತಿಭಟನೆಯ ದಿನಾಂಕ ಮುಂದೂಡುತ್ತಾ ಬಂದಿದ್ದು ಕೊನೆಗೂ ಇಂದಿಗೆ ಫಿಕ್ಸ್ ಆಗಿದೆ. 1 ಲಕ್ಷಕ್ಕೂ ಹೆಚ್ಚು ಜನರು ಪ್ರತಿಭಟನೆಯಲ್ಲಿ ಜಮಾಯಿಸಲಿದ್ದಾರೆ. ಸೆಂಟ್ರಲ್ ಮುಸ್ಲಿಂ ಕಮಿಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ.

ಐದು ಸಾವಿರ ಪೊಲೀಸ್ ಭದ್ರತೆ

ಐದು ಸಾವಿರ ಪೊಲೀಸ್ ಭದ್ರತೆ

ಈ ಪ್ರತಿಭಟನೆಗೆ ಒಟ್ಟು 33 ಕ್ಕೂ ಹೆಚ್ಚು ಮುಸ್ಲಿಂ ಸಂಘಟನೆಗಳು ಸಾಥ್ ನೀಡಲಿದೆ. ಕೊಡಗು, ಮೈಸೂರು, ಹಾಸನ, ಕಾರವಾರ ಸೇರಿದಂತೆ ಹಲವಾರು ಜಿಲ್ಲೆಗಳಿಂದ ಕೂಡ ಪ್ರತಿಭಟನಾಕಾರರು ಆಗಮಿಸುವ ನಿರೀಕ್ಷೆ ಇದೆ. ಇದರಿಂದ ನಿನ್ನೆ ಮಂಗಳೂರಿಗೆ ರಾಜ್ಯದ ಹತ್ತಕ್ಕೂ ಹೆಚ್ಚು ಜಿಲ್ಲೆಯಿಂದ ಪೊಲೀಸ್ ಫೋರ್ಸ್ ಆಗಮಿಸಿದೆ.

ಚಿತ್ರದುರ್ಗ, ಧಾರವಾಡ, ವಿಜಯಪುರ, ಬಾಗಲಕೋಟೆ, ಗದಗ, ಬೆಳಗಾವಿ, ಕಲಬುರಗಿ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳಿಂದ ಪೊಲೀಸರ ಆಗಮನ‌ವಾಗಿದೆ. ಇಂದು ಪೊಲೀಸ್ ಗ್ರೌಂಡ್ ನಲ್ಲಿ ಎಲ್ಲಾ ಪೊಲೀಸ್ ಅಧಿಕಾರಿಗಳ ಪರಿವೀಕ್ಷಣೆ ನಡೆಸಲಾಯಿತು, ನಂತರ ನಾಳೆಯ ಕಾರ್ಯಕ್ರಮಗಳ ಬಗ್ಗೆ ಸೆಕ್ಯೂರಿಟಿ ಬಗ್ಗೆ ವಿವರಿಸಲಾಯಿತು.

ವಾಹನ ಸಂಚಾರದಲ್ಲಿ ಬದಲಾವಣೆ

ವಾಹನ ಸಂಚಾರದಲ್ಲಿ ಬದಲಾವಣೆ

3 ಎಡಿಜಿಪಿ, 1 ಐಜಿಪಿ, 11 ಎಸ್ಪಿ, 18 ಎಎಸ್ಪಿ, 100 ಜನ ಡಿವೈಎಸ್ಪಿ, 300 ಜನ ಇನ್ಸ್ಪೆಕ್ಟರ್, 500 ಪಿಎಸ್ಐ ಗಳಿಗೆ ರೋಲ್ ಕಾಲ್ ಮಾಡಲಾಯ್ತು. ಬಳಿಕ ಪ್ರತಿಭಟನಾ ಸ್ಥಳಕ್ಕೆ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಮತ್ತು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಂಗಳೂರು ಗೋಲಿಬಾರ್ ವಿಡಿಯೋ ಬಹಿರಂಗ: ಉಗ್ರಪ್ಪ ಏನಂದ್ರು?ಮಂಗಳೂರು ಗೋಲಿಬಾರ್ ವಿಡಿಯೋ ಬಹಿರಂಗ: ಉಗ್ರಪ್ಪ ಏನಂದ್ರು?

ಇಂದು ಅಡ್ಯಾರ್ ಗಾರ್ಡನ್ ಬಳಿ ಬರೀ ಜನರು ಜಮಾವಣೆ ಆಗಲಿದ್ದು, ಸಂಚಾರ ವ್ಯವಸ್ಥೆಯಲ್ಲಿ ಕೆಲ ವ್ಯತ್ಯಾಸಗಳನ್ನು ಮಾಡಲಾಗಿದೆ. ನಾಳೆ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಸಂಚಾರ ಬದಲಾವಣೆ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಟ್ಯಾಂಕರ್ ಗಳ ಸಂಚಾರ ನಿಷೇಧಿಸಲಾಗಿದೆ.

ಮಂಗಳೂರು ಹೊರವಲಯದಲ್ಲಿ ಪ್ರತಿಭಟನಾ ಸಮಾವೇಶ

ಮಂಗಳೂರು ಹೊರವಲಯದಲ್ಲಿ ಪ್ರತಿಭಟನಾ ಸಮಾವೇಶ

ಬೆಂಗಳೂರಿನಿಂದ ಮಂಗಳೂರಿಗೆ ಬರುವ ವಾಹನಗಳು ಮೆಲ್ಕಾರ್, ಕೊಣಾಜೆ, ತೊಕ್ಕೊಟ್ಟು ಮೂಲಕ ಮಂಗಳೂರಿಗೆ ಬರುವುದು, ಮಂಗಳೂರಿನಿಂದ ಬೆಂಗಳೂರು ಕಡೆ ಸಾಗುವ ವಾಹನಗಳು ಪಂಪ್ ವೆಲ್, ತೊಕ್ಕೊಟ್ಟು, ಕೊಣಾಜೆ, ಬಿ.ಸಿ.ರೋಡ್ ಮೂಲಕ ಬೆಂಗಳೂರು ಕಡೆಗೆ ಹೋಗುವ ಮಾರ್ಗ ತಿಳಿಸಲಾಗಿದೆ.

ಉಡುಪಿಯಿಂದ ಬೆಂಗಳೂರು ಕಡೆಗೆ ಪಡುಬಿದ್ರೆ, ಕಾರ್ಕಳ, ಧರ್ಮಸ್ಥಳ, ಶಿರಾಡಿ ಮೂಲಕ ಬೆಂಗಳೂರು ಕಡೆಗೆ, ಬಿ.ಸಿ.ರೋಡ್, ಕೈಕಂಬ, ಪೊಳಲಿ ಮೂಲಕವೂ ಮಂಗಳೂರು ಸಂಪರ್ಕಿಸಲು ಅವಕಾಶ ಮಾಡಲಾಗಿದೆ. ಮಂಗಳೂರು ಹೊರವಲಯದ ಅಡ್ಯಾರ್ ಕಣ್ಣೂರಿನ ಶಹಾ ಗಾರ್ಡನ್ ಮೈದಾನದಲ್ಲಿ ಪ್ರತಿಭಟನೆ ನಡೆಯಲಿದ್ದು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ.

ಕರಾವಳಿಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್

ಕರಾವಳಿಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್

ಪೊಲೀಸ್ ಭದ್ರತೆಯನ್ನು ಆಯೋಜಕರು ನಿರಾಕರಿಸಿದ್ದು ಆದರೂ ಪೊಲೀಸರು ಭದ್ರತೆ ನೀಡಿದರೆ ಸ್ವಾಗತಿಸುತ್ತೇವೆ ಹಾಗೂ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತೇವೆ ಅಂತ ಅಯೋಜಕರು ಹೇಳಿದ್ದಾರೆ.

ಇಂದಿನ ಪ್ರತಿಭಟನೆ ಶಾಂತಿಯುತವಾಗಿ ನಡೆಯಲಿ ಅಂತ ಪೊಲೀಸ್ ಇಲಾಖೆ ಭಾರೀ ಬಂದೋಬಸ್ತ್ ಮಾಡಿದೆ. ಮಂಗಳೂರು ಭಾಗಶಃ ಸ್ತಬ್ಧವಾಗಿದ್ದು, ಪ್ರತಿಭಟನೆ ಬೃಹತ್ ಮಟ್ಟದಲ್ಲಿ ನಡೆಯಲಿದೆ. ಡಿಸೆಂಬರ್ 19 ರಂದು ನಡೆಯಬೇಕಿದ್ದ ಪ್ರತಿಭಟನಾ ಸಮಾವೇಶ ಕಣ್ಣೂರಿನಲ್ಲಿ ನಡೆಯಲಿದೆ. ಈ ಸಮಾವೇಶಕ್ಕೆ ಸಕಲ ಸಿದ್ಧತೆಗಳು ಆಗಿದ್ದು ಕರಾವಳಿಯಲ್ಲಿ ಪೊಲೀಸ್ ಕಣ್ಗಾವಲು ನಿರ್ಮಾಣವಾಗಿದೆ. ಅದೇನೇ ಇದ್ದರೂ ಪ್ರತಿಭಟನೆ ಶಾಂತಿಯುತವಾಗಿ ನಡೆಯಲಿ ಎಂಬುದು ಎಲ್ಲರ ಆಶಯ.

English summary
The forum is set for a massive protest in Mangaluru against the Citizenship Amendment Act. 5000 policemen have been deployed to ensure security.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X