ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಸ್ ನಿಲ್ಲಿಸಿ ಓಡಿ ಹೋಗಿ ಮತದಾನ ಮಾಡಿ ಬಂದ ಬಸ್ ಚಾಲಕ

|
Google Oneindia Kannada News

ಮಂಗಳೂರು ಏಪ್ರಿಲ್ 20: ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಹೆಚ್ಚಿನ ಪ್ರಮಾಣದಲ್ಲಿ ಮತದಾನ ದಾಖಲಾಗಿದೆ. ಈ ಬಾರಿ ಜಿಲ್ಲೆಯಲ್ಲಿ ಶೇ 77.90 ದಷ್ಟು ಮತದಾನ ನಡೆದಿದೆ. ಆದರೆ ರಾಜಧಾನಿ ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರದಲ್ಲಿ ನಡೆದ ಮತದಾನದ ಪ್ರಮಾಣ ನಿರಾಶೆ ಮೂಡಿಸಿದೆ. ನಗರ ಪ್ರದೇಶದ ಜನರಿಗಿಂತ ಗ್ರಾಮೀಣ ಭಾಗದಲ್ಲಿ ಜನರಲ್ಲಿ ಮತದಾನಕ್ಕೆ ಹೆಚ್ಚಿನ ಉತ್ಸಾಹ, ಜವಾಬ್ದಾರಿ ಕಂಡುಬಂದಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಮತದಾನದ ಬಗ್ಗೆ ಎಷ್ಟು ಕಾಳಜಿ ಇದೆ ಅನ್ನೋದನ್ನು ವಿಡಿಯೋ ತುಣುಕೊಂದು ಸಾರುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಖಾಸಗಿ ಬಸ್ ಚಾಲಕರೊಬ್ಬರು ರೂಟಿನಲ್ಲಿ ಬಸ್ ಸಾಗುತ್ತಿರುವಾಗಲೇ ನಡುವೆ ರಸ್ತೆ ಬದಿ ನಿಲ್ಲಿಸಿ, ಓಡುತ್ತಾ ಹೋಗಿ ಮತ ಹಾಕಿ ಬಂದಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೆರಿಗೆಗೆ ಇನ್ನು ಕೆಲವೇ ನಿಮಿಷವಿರುವಾಗ ವೋಟ್ ಮಾಡಿದ ಗರ್ಭಿಣಿ ಹೆರಿಗೆಗೆ ಇನ್ನು ಕೆಲವೇ ನಿಮಿಷವಿರುವಾಗ ವೋಟ್ ಮಾಡಿದ ಗರ್ಭಿಣಿ

Bus driver cast vote being on duty

ಮಂಗಳೂರು - ಶಿವಮೊಗ್ಗ ಮಾರ್ಗದ ಬಸ್ಸಿನ ಚಾಲಕರಾದ ವಿಜಯ್ ಶೆಟ್ಟಿ ಅವರು ಮೂಡುಬಿದಿರೆ ಸಮೀಪ ಬೆಳುವಾಯಿ ಗ್ರಾಮದಲ್ಲಿ ತನ್ನ ಮತವನ್ನು ಚಲಾಯಿಸಿದ್ದಾರೆ . ಬಸ್ ಚಾಲಕ ವಿಜಯ್ ಶೆಟ್ಟಿ ತಮ್ಮ ಮತ ಚಲಾಯಿಸಿದ ರೀತಿ ಮಾತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಸ್ ಚಾಲಕನ ಕರ್ತವ್ಯದಲ್ಲಿರುವಾಗಲೇ ತಮ್ಮ ಮತಗಟ್ಟೆಯಲ್ಲಿ ಬಸ್ ನಿಲ್ಲಿಸಿ ಮತದಾನ ಮಾಡಲು ಓಡಿ ಹೋಗಿ ಮತದಾನ ಮಾಡಿ ಮತ್ತೆ ಓಡಿ ಬಂದು ಬಸ್ ಚಾಲನೆ ಮಾಡಿದ್ದಾರೆ. ಬಸ್ ಡ್ರೈವರ್ ವಿಜಯ್ ಶೆಟ್ಟಿ ಅವರ ಬದ್ದತೆಗೆ ಸಾಮಾಜಿ ಜಾಲತಾಣಗಳಲ್ಲಿ ಅಭಿನಂದನೆಗಳು ಹರಿದು ಬಂದಿದೆ.

Bus driver cast vote being on duty

ಬೆಂಗಳೂರಿನಂತಹ ಅತ್ಯಂತ ಸುಶಿಕ್ಷಿತರಿರುವ ನಗರದಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಮತದಾನ ದಾಖಲಾಗಿದ್ದು, ಕೆಲವರು ತಮ್ಮ ಜವಾಬ್ದಾರಿ ನಿಭಾಯಿಸುವ ಬದಲು ಪಿಕ್ ನಿಕ್, ಟೂರ್ ಹೋದವರಿಗೆ ಬಸ್ ಡ್ರೈವರ್ ವಿಜಯ್ ಶೆಟ್ಟಿ ಅವರಿಂದ ಮತದಾನದ ಮಹತ್ವ ಕಲಿಯಬೇಕಾಗಿದೆ. ಇದೇ ಏಪ್ರಿಲ್ 23 ರಂದು ರಾಜ್ಯದಲ್ಲಿ 2 ನೇ ಹಂತದ ಮತದಾನ ಪ್ರಕ್ರಿಯೆ ನಡೆಯಲಿದೆ. ಈ ಸಂದರ್ಭದಲ್ಲಿ ಬಸ್ ಡ್ರೈವರ್ ವಿಜಯ್ ಶೆಟ್ಟಿ ಅವರ ಮತದಾನದ ಮಹತ್ವ ಸಾರುವ ಈ ಪ್ರಸಂಗ ಮಾದರಿಯಾಗಲಿ.

English summary
Vijay Shetty Bus driver from Mangaluru –Shivamogga on April 18 the day of polling in Dakshina Kannada district when the bus reached Belvai he ran towards polling station to casts vote ,this video is viral in social media ,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X