ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಂಟ್ಸ್‌ಹಾಸ್ಟೆಲ್‌ ಗಣೇಶೋತ್ಸವಕ್ಕೆ ಸಂಭ್ರಮದ ತೆರೆ

|
Google Oneindia Kannada News

ಮಂಗಳೂರು, ಸೆ.1 : ಮಂಗಳೂರಿನಲ್ಲಿ ಪ್ರಸಿದ್ಧಿ ಪಡೆದಿರುವ ಬಂಟ್ಸ್ ಹಾಸ್ಟೆಲ್‍ನ 11ನೇ ವರ್ಷದ ಶ್ರೀ ಸಿದ್ದಿವಿನಾಯಕ ಸಾರ್ವಜನಿಕ ಗಣೇಶೋತ್ಸವ ಮುಕ್ತಾಯಗೊಂಡಿದೆ. ಭಾನುವಾರ ಶೋಭಾಯಾತ್ರೆ, ಭಜನೆ ಮುಂತಾದ ನಾನಾ ಕಾರ್ಯಕ್ರಮಗಳ ಮೂಲಕ ಗಣೇಶ ವಿಸರ್ಜನೆ ನಡೆಯಿತು.

ಭಾನುವಾರ ಸಂಜೆ 5.30ಕ್ಕೆ ಬಂಟ್ಸ್ ಹಾಸ್ಟೆಲ್‍ ಗಣಪತಿ ವಿಸರ್ಜನೆ ಮೆರವಣಿಗೆ ಆರಂಭವಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಭಜನಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಮಹಿಳೆಯರು, ಕಾಲೇಜು ವಿದ್ಯಾರ್ಥಿನಿಯರು, ಪುಟಾಣಿ ಮಕ್ಕಳು ಭಜನಾ ತಂಡಗಳು ಮೆರವಣಿಗೆಯಲ್ಲಿ ಸಾಗಿದರು.

ವಿಸರ್ಜನಾ ಮೆರವಣಿಗೆಗೆ ಮೊದಲು ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಆರೋಗ್ಯ ಸಚಿವ ಯು.ಟಿ.ಖಾದರ್, ಬಂಟ ಸಮಾಜದವರು ಕ್ರಿಯಾಶೀಲರು, ಸಮಾಜಕ್ಕೆ ಬಂಟರ ಕೊಡುಗೆ ಮಹತ್ತರವಾದುದು. ಜಿಲ್ಲೆಯ ಸರ್ವರಿಗೂ ಶ್ರೀ ಗಣಪತಿಯ ಆಶೀರ್ವಾದ ಇರಲಿ ಎಂದು ಹೇಳಿದರು. ಬಂಟ್ಸ್ ಹಾಸ್ಟೆಲ್ ಗಣಪತಿ ವಿಸರ್ಜನೆ ಚಿತ್ರಗಳು

11ನೇ ವರ್ಷದ ಗಣೇಶೋತ್ಸವ ಮುಕ್ತಾಯ

11ನೇ ವರ್ಷದ ಗಣೇಶೋತ್ಸವ ಮುಕ್ತಾಯ

ಮಂಗಳೂರಿನಲ್ಲಿ ಪ್ರಸಿದ್ಧಿ ಪಡೆದಿರುವ ಬಂಟ್ಸ್ ಹಾಸ್ಟೆಲ್‍ನ 11ನೇ ವರ್ಷದ ಶ್ರೀ ಸಿದ್ಧಿವಿನಾಯಕ ಸಾರ್ವಜನಿಕ ಗಣೇಶೋತ್ಸವ ಮುಕ್ತಾಯಗೊಂಡಿದೆ. ಭಾನುವಾರ ಶೋಭಾಯಾತ್ರೆ, ಭಜನೆ ಮುಂತಾದ ನಾನಾ ಕಾರ್ಯಕ್ರಮಗಳ ಮೂಲಕ ಗಣೇಶ ವಿಸರ್ಜನೆ ನಡೆಯಿತು.

ಜನರ ಗಮನ ಸೆಳೆದ ಭಜನೆ

ಜನರ ಗಮನ ಸೆಳೆದ ಭಜನೆ

ಭಾನುವಾರ ಸಂಜೆ 5.30ಕ್ಕೆ ಬಂಟ್ಸ್ ಹಾಸ್ಟೆಲ್‍ ಗಣಪತಿ ವಿಸರ್ಜನೆ ಮೆರವಣಿಗೆ ಆರಂಭವಾಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಭಜನಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಭಜನಾ ಮೆರವಣಿಗೆ ಜನರ ಗಮನ ಸೆಳೆಯಿತು.

ಮಹಾಮಾಯಿ ಕೆರೆಯಲ್ಲಿ ವಿಸರ್ಜನೆ

ಮಹಾಮಾಯಿ ಕೆರೆಯಲ್ಲಿ ವಿಸರ್ಜನೆ

ಸಂಜೆ ಆರಂಭವಾದ ಗಣೇಶ ವಿಸರ್ಜನೆ ಶೋಭಾಯಾತ್ರೆ ಬಂಟ್ಸ್ ಹಾಸ್ಟೆಲ್ ವೃತ್ತ, ಪಿವಿಎಸ್, ಡೊಂಗರಕೇರಿ, ರಥಬೀದಿ ಮೂಲಕ ಸಾಗಿ ಮಹಮಾಯಿ ದೇವಸ್ಥಾನ ಬಳಿ ಅಂತ್ಯಗೊಂಡಿತು, ದೇವಾಲಯದ ಕೆರೆಯಲ್ಲಿ ಭಕ್ತರ ಜಯಘೋಷದೊಂದಿಗೆ ಗಣೇಶನ ವಿಗ್ರಹವನ್ನು ವಿಸರ್ಜನೆ ಮಾಡಲಾಯಿತು.

ಮಕ್ಕಳು ಮಹಿಳೆಯರು ಪಾಲ್ಗೊಂಡಿದ್ದರು

ಮಕ್ಕಳು ಮಹಿಳೆಯರು ಪಾಲ್ಗೊಂಡಿದ್ದರು

ಬಂಟ್ಸ್ ಹಾಸ್ಟೆಲ್‍ ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ಮಹಿಳೆಯರು, ಕಾಲೇಜು ವಿದ್ಯಾರ್ಥಿನಿಯರು, ಪುಟಾಣಿ ಮಕ್ಕಳು ಪಾಲ್ಗೊಂಡಿದ್ದರು. ನಾಸಿಕ್ ಬ್ಯಾಂಡ್ ತಾಳಕ್ಕೆ ಹೆಜ್ಜೆ ಹಾಕಿದರು.

ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರು

ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರು

ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಸಿದ್ದಿವಿನಾಯಕ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ಅಜಿತ್ ಕುಮಾರ್ ರೈ ಮಾಲಾಡಿ , ಉತ್ಸವ ಸಮಿತಿಯ ಪದಾಧಿಕಾರಿಗಳಾದ ಶೆಡ್ಯೆ ಮಂಜುನಾಥ ಭಂಡಾರಿ, ರವಿರಾಜ ಶೆಟ್ಟಿ, ರಾಜೇಶ್ ನಾಯ್ಕ್, ದಿವಾಕರ ಸಾಮಾನಿ, ಕೆಂಚನೂರು ಸೋಮ ಶೇಖರ ಶೆಟ್ಟಿ ಮೇಘನಾಥ ಶೆಟ್ಟಿ, ಮನಮೋಹನ್ ಶೆಟ್ಟಿ, ಹೇಮನಾಥ ಶೆಟ್ಟಿ ಮುಂತಾದವರು ಮೆವರಣಿಗೆಯಲ್ಲಿ ಪಾಲ್ಗೊಂಡಿದ್ದರು.

ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಸಚಿವ ಖಾದರ್

ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಸಚಿವ ಖಾದರ್

ಗಣೇಶ ವಿಸರ್ಜನಾ ಮೆರವಣಿಗೆಗೆ ಮೊದಲು ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಆರೋಗ್ಯ ಸಚಿವ ಯು.ಟಿ.ಖಾದರ್, ಬಂಟ ಸಮಾಜದವರು ಕ್ರಿಯಾಶೀಲರು, ಸಮಾಜಕ್ಕೆ ಬಂಟರ ಕೊಡುಗೆ ಮಹತ್ತರವಾದುದು. ಜಿಲ್ಲೆಯ ಸರ್ವರಿಗೂ ಶ್ರೀ ಗಣಪತಿಯ ಆಶೀರ್ವಾದ ಇರಲಿ ಎಂದು ಹೇಳಿದರು.

ಸಂಚಾರ ಬದಲಾವಣೆ

ಸಂಚಾರ ಬದಲಾವಣೆ

ಗಣೇಶ ವಿಸರ್ಜನಾ ಮೆರವಣಿಗೆ ಹಿನ್ನಲೆಯಲ್ಲಿ ಬಂಟ್ಸ್ ಹಾಸ್ಟೆಲ್ ಮತ್ತು ಪಿವಿಎಸ್ ನಡುವಿನ ಬಸ್ ಸಂಚಾರದ ಮಾರ್ಗವನ್ನು ಬದಲಾವಣೆ ಮಾಡಲಾಗಿತ್ತು. ಆದರೆ, ಇತರ ವಾಹನಗಳು ಸಾಗುವುದಕ್ಕೆ ಸ್ಥಳಾವಕಾಶ ಕಲ್ಪಿಸಲಾಗಿತ್ತು.

English summary
Huge number of devotees participated in the grand ‘Shobha Yatra’ of Ganesha idol installed under the joint aegis of Ganeshotsav Samiti and Siddi Vinayak Prathisthana at Omkara Nagar Bunts Hostel Mangalore on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X