ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ಮುಂದೆ ಬಗ್ಗೀಸ್ ನಲ್ಲಿ ತೆರಳಿ ಪಿಲಿಕುಳ ನಿಸರ್ಗಧಾಮದ ಸೌಂದರ್ಯ ಸವಿಯಿರಿ

|
Google Oneindia Kannada News

ಮಂಗಳೂರು, ಜನವರಿ 23: ಮಂಗಳೂರು ಹೊರವಲಯದ ಪ್ರಸಿದ್ಧ ಪಿಲಿಕುಳ ನಿಸರ್ಗಧಾಮದ ಪ್ರಕೃತಿಯ ಸೊಬಗನ್ನು ಬಗ್ಗೀಸ್ ಗಳ ಮೇಲೆ ತೆರಳುತ್ತಾ ಸವಿಯಬಹುದಾಗಿದೆ.

ಮಲೆನಾಡು ಪ್ರದೇಶದ ಅಭಿವೃದ್ಧಿ ಮಂಡಳಿ ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅನುದಾನದಿಂದ ಪಿಲಿಕುಳ ನಿಸರ್ಗಧಾಮದಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಬ್ಯಾಟರಿ ಚಾಲಿತ ವಾಹನ ಬಗ್ಗೀಸ್ ಗಳನ್ನು ಖರೀದಿಸಲಾಗಿದೆ.

ಮಂಗಳೂರಿನ 'ಪಿಲಿಕುಳ ಜೈವಿಕ ಉದ್ಯಾನವನ' ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ಮಂಗಳೂರಿನ 'ಪಿಲಿಕುಳ ಜೈವಿಕ ಉದ್ಯಾನವನ' ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್

ಸುಮಾರು 1 ಕೋಟಿ ರೂಪಾಯಿ ಅನುದಾನದಲ್ಲಿ ಖರೀದಿಸಲಾದ ತಲಾ 5 ಲಕ್ಷ ರೂ.ವೆಚ್ಚದ ಒಟ್ಟು 16 ಬಗ್ಗೀಸ್ ಗಳಲ್ಲಿ ಪ್ರಸ್ತುತ ಹದಿನಾಲ್ಕು ಬಗ್ಗೀಸ್ ಗಳು ನಿನ್ನೆಯಿಂದ ಪಿಲಿಕುಳ ನಿಸರ್ಗಧಾಮದಲ್ಲಿ ಕಾರ್ಯನಿರ್ವಹಿಸಲು ಅರಂಭಿಸಿವೆ.

Buggis to take visitors in Pilikula Nisarghadhama

ಪ್ರವಾಸಿಗರು ತಮ್ಮ ವಾಹನಗಳನ್ನು ಪಾರ್ಕಿಂಗ್ ಪ್ರದೇಶದಲ್ಲಿ ನಿಲುಗಡೆ ಮಾಡಿ, ಟಿಕೆಟ್ ಪಡೆದು ಪಕ್ಕದಲ್ಲೇ ಇರುವ ಬಗ್ಗೀಸ್ ಗಳ ಮೂಲಕ ಪಿಲಿಕುಳದ ಸೊಬಗನ್ನು ಕಣ್ತುಂಬಿಕೊಳ್ಳ ಬಹುದಾಗಿದೆ. ಈ ಬಗ್ಗೀಸ್ ಗಳಲ್ಲಿ ತೆರಳಲು ವಯಸ್ಕರಿಗೆ 25 ರೂಪಾಯಿ ಹಾಗೂ ಮಕ್ಕಳಿಗೆ 10 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ.

 ದೇಶದ ಮೊದಲ 3ಡಿ ತಾರಾಲಯ ಮಂಗ್ಳೂರಲ್ಲಿ ಮಾರ್ಚ್ 2ರಿಂದ ಆರಂಭ ದೇಶದ ಮೊದಲ 3ಡಿ ತಾರಾಲಯ ಮಂಗ್ಳೂರಲ್ಲಿ ಮಾರ್ಚ್ 2ರಿಂದ ಆರಂಭ

ಈ ಬಗ್ಗೀಸ್ ವಾಹನಗಳ ಸೇವೆ ಬೆಳಗ್ಗೆ 10 ರಿಂದ ಆರಂಭವಾಗಿ ಸಂಜೆ 5.30ರವರೆಗೆ ಪ್ರವಾಸಿಗರಿಗೆ ದೊರೆಯಲಿದ್ದು, ಒಂದು ಸಲ ಟೀಕೆಟು ಪಡೆದುಕೊಂಡರೆ ಒಂದು ವಾಹನದಲ್ಲಿ ಇಳಿದು ಮತ್ತೊಂದು ವಾಹನದಲ್ಲಿ ಹತ್ತಿ ವಾಪಾಸ್ ಬರಬಹುದು ಅಥವಾ ಮತ್ತೊಂದು ಕಡೆಗೆ ಹೋಗಬಹುದುದಾಗಿದೆ.

Buggis to take visitors in Pilikula Nisarghadhama

ಪಿಲಿಕುಳ ನಿಸರ್ಗಧಾಮ ಸುಮಾರು 300 ಎಕರೆ ಪ್ರದೇಶವನ್ನು ಆವರಿಸಿಕೊಂಡಿದ್ದು, ಜೈವಿಕ ಉದ್ಯಾನವನ, ಪ್ರಾದೇಶಿಕ ವಿಜ್ಞಾನ ಕೇಂದ್ರ, ಕರಕುಶಲ ಕೇಂದ್ರ, ಗುತ್ತಿನ ಮನೆ, ಪಾರ್ಕ್‌ ಸೇರಿದಂತೆ ನಾನಾ ವೀಕ್ಷಣೀಯ ಸ್ಥಳಗಳಿವೆ . ಇವೆಲ್ಲವನ್ನು ಕಡೆಗೂ ಕ್ಲಪ್ತ ಸಮಯದಲ್ಲಿ ವೀಕ್ಷಿಸಲು ಪ್ರವಾಸಿಗರಿಗೆ ಈ ಬಗ್ಗೀಸ್ ಗಳು ಅನುಕೂಲಕಾರಿಯಾಗಲಿದೆ.

ಮುಲ್ಕಿ ಮೂಡಬಿದರೆ ಶಾಸಕ ಉಮಾನಾಥ ಕೋಟ್ಯಾನ್ ನಿನ್ನೆ ಈ ಬಗ್ಗೀಸ್ ಗಳಿಗೆ ಚಾಲನೆ ನೀಡಿದ್ದಾರೆ. ಪರಿಸರವನ್ನು ಕಾಪಾಡಿ, ನಿಸರ್ಗದ ಸೌಂದರ್ಯವನ್ನು ಪ್ರವಾಸಿಗರು ಸವಿಯಲು ಈ ವಾಹನಗಳು ಬಹಳ ಉಪಯುಕ್ತವಾಗಿದೆ. ಪಿಲಿಕುಳ ನಿಸರ್ಗಧಾಮ ರಾಷ್ಟ್ರದಲ್ಲಿಯೇ ಪ್ರತಿಷ್ಠಿತ ನಿಸರ್ಗಧಾಮವಾಗಿದೆ.

ಈ ಪ್ರದೇಶದಲ್ಲಿ ಹೊಗೆ ಮುಕ್ತ ಪರಿಸರ ನಿರ್ಮಾಣಕ್ಕೆ ಈ ವಾಹನಗಳು ನಾಂದಿಯಾಗಲಿ ಎಂದು ಅಭಿಪ್ರಾಯಪಟ್ಟಿದ್ದಾರೆ.

English summary
Buggis service stared in Pilikula Nisarghadhama. Now buggis will take visitors in Pilikula park.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X