ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಟ್ಲದಲ್ಲಿ ಅಣ್ಣನಿಂದಲೇ ನಿರಂತರ ಅತ್ಯಾಚಾರ: 13 ವರ್ಷದ ಸಹೋದರಿ ಗರ್ಭಿಣಿ

|
Google Oneindia Kannada News

ಮಂಗಳೂರು ಮಾರ್ಚ್ 09: ಬಾಲಕಿಯೊಬ್ಬಳು ತನ್ನ ಅಣ್ಣನಿಂದಲೇ ಗರ್ಭಿಣಿಯಾದ ಆಘಾತಕಾರಿ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ನಡೆದಿದೆ. ಶಾಲೆಯಲ್ಲಿ ನಡೆದ ವೈದ್ಯಕೀಯ ತಪಾಸಣೆ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, 13 ವರ್ಷದ ವಿದ್ಯಾರ್ಥಿನಿ ನಾಲ್ಕು ತಿಂಗಳ ಗರ್ಭಿಣಿ ಎಂಬುದು ಗೊತ್ತಾಗಿದೆ.

ವಿಟ್ಲ ಪರಿಸರದ ಶಾಲೆ ಒಂದರಲ್ಲಿ ಇತ್ತೀಚೆಗೆ ವಿದ್ಯಾರ್ಥಿಗಳ ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯೊಬ್ಬಳು ವಿಭಿನ್ನವಾಗಿರುವುದು ಗಮನಕ್ಕೆ ಬಂದಿತ್ತು. ಅದರಿಂದ ಅನುಮಾನಕ್ಕೆ ಒಳಗಾದ ಆರೋಗ್ಯ ಕೇಂದ್ರದ ದಾದಿ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ತಪಾಸಣೆಗೆ ತೆರಳುವಂತೆ ಸೂಚಿಸಿದ್ದರು.

ಕೆಲಸ ಕೊಡಿಸುವುದಾಗಿ ನಂಬಿಸಿ ವೃದ್ಧೆ ಮೇಲೆ ಸಾಮೂಹಿಕ ಅತ್ಯಾಚಾರಕೆಲಸ ಕೊಡಿಸುವುದಾಗಿ ನಂಬಿಸಿ ವೃದ್ಧೆ ಮೇಲೆ ಸಾಮೂಹಿಕ ಅತ್ಯಾಚಾರ

ದಾದಿ ಅವರ ಸೂಚನೆಯಂತೆ ಮಂಗಳೂರಿಗೆ ತಪಾಸಣೆಗೆ ತೆರಳಿದ್ದ ಸಂದರ್ಭದಲ್ಲಿ ಆ ಬಾಲಕಿ 4 ತಿಂಗಳ ಗರ್ಭಿಣಿ ಎಂಬ ಆಘಾತಕಾರಿ ಸಂಗತಿ ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಬಾಲಕಿಯನ್ನು ವಿಚಾರಣೆಗೆ ಒಳಪಡಿಸಿದಾಗ ಬಾಲಕಿ ಒಂದು ವರ್ಷದಿಂದ ನಿರಂತರ ಅತ್ಯಾಚಾರಕ್ಕೊಳಗಾದ ಘಟನೆ ಬೆಳಕಿಗೆ ಬಂದಿದೆ.

Brother has raped 13-year-old sister for over a year

 ಬೆಂಗಳೂರು : ಮಹಿಳೆಗೆ ಅತ್ಯಾಚಾರದ ಬೆದರಿಕೆ, ಆಟೋ ಚಾಲಕನ ಬಂಧನ ಬೆಂಗಳೂರು : ಮಹಿಳೆಗೆ ಅತ್ಯಾಚಾರದ ಬೆದರಿಕೆ, ಆಟೋ ಚಾಲಕನ ಬಂಧನ

ಆಕೆಯ 17 ವರ್ಷ ಪ್ರಾಯದ ಸಹೋದರನೇ ಇದಕ್ಕೆ ಕಾರಣ ಎಂಬುದು ಬಂಹಿರಂಗವಾಗುತ್ತಿದ್ದಂತೆ ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಬಾಲಕಿಯ ಸಹೋದರನನ್ನು ವಶಕ್ಕೆ ಪಡೆದು ಬಾಲ ನ್ಯಾಯ ಮಂಡಳಿಯ ಪಾಲನಾ ಕೇಂದ್ರಕ್ಕೆ ಕಳುಹಿಸಲಾಗಿದೆ.

English summary
Brother has raped 13-year-old sister for over a year.In connection to this case Vitla police arrested the boy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X