ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಲ್ಲಿ 2 ಲಕ್ಷಕ್ಕೂ ಅಧಿಕ ಕೃತಿಗಳ ಲಾಕ್ ದಿ ಬಾಕ್ಸ್ ಕಾರ್ಯಕ್ರಮ

|
Google Oneindia Kannada News

ಮಂಗಳೂರು, ಜುಲೈ 7: ಪೂರ್ವ ಸ್ವಾಮ್ಯದ ಕೃತಿಗಳ ಆನ್‌ಲೈನ್ ಪುಸ್ತಕ ಮಳಿಗೆಯಾಗಿರುವ ಬುಕ್‌ಚೋರ್, ''ಲಾಕ್ ದಿ ಬಾಕ್ಸ್ ಮಿನಿ'' ಎಂಬ ವಿಶೇಷ ಪುಸ್ತಕ ಮಾರಾಟವನ್ನು ಆಯೋಜಿಸಿದೆ. ಈ ವಿಶಿಷ್ಟ ರೀತಿಯ ಮಾರಾಟದಲ್ಲಿ ನೀವು ಒಂದೊಂದು ಪುಸ್ತಕಕ್ಕೆ ಇಂತಿಷ್ಟು ಎಂದು ಹಣ ಪಾವತಿಸಬೇಕಾಗಿಲ್ಲ; ಬದಲಿಗೆ, ನೀವು ಒಂದು ಬಾಕ್ಸ್‌ಗೆ ಹಣ ಪಾವತಿಸಿದರೆ ಸಾಕು. ಆ ಬಾಕ್ಸ್‌ನಲ್ಲಿ ಎಷ್ಟು ಪುಸ್ತಕಗಳು ತುಂಬುತ್ತವೆಯೋ, ಅಷ್ಟೂ ಪುಸ್ತಕಗಳನ್ನು ತುಂಬಿಸಿ ಮನೆಗೆ ಒಯ್ಯಬಹುದು.

ಹಂಪನಕಟ್ಟೆಯ ಕೆಎಂಸಿ ಮರ್ಕೆರ ಟ್ರಂಕ್ ರಸ್ತೆಯ ವಿಆರ್‌ಸಿವಿ+ಎಫ್‌ಪಿಡಬ್ಲ್ಯೂ, ಲೇಡೀಸ್ ಕ್ಲಬ್‌ನಲ್ಲಿ ಜುಲೈ 7ರಿಂದ 10ರವರೆಗೆ ಈ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕಾಲ್ಪನಿಕ, ಕಾಲ್ಪನಿಕವಲ್ಲದ, ಅಪರಾಧ, ಪ್ರಣಯ, ಯುವಜನತೆ ಮತ್ತು ಮಕ್ಕಳಿಗೆ ಬೇಕಾದ ಪುಸ್ತಕಗಳು, ಸಾಹಸ, ವೈಜ್ಞಾನಿಕ ಕಾದಂಬರಿ ಸೇರಿದಂತೆ ಅನೇಕ ಪ್ರಕಾರಗಳಿಗೆ ಸೇರಿರುವ ಸುಮಾರು 2 ಲಕ್ಷದಷ್ಟು ಕೃತಿಗಳು ಇರಲಿವೆ.

ಪುಸ್ತಕಪ್ರೇಮಿಗಳು ಈ ಕಾರ್ಯಕ್ರಮದಲ್ಲಿ ಗ್ರೀಕ್ ಪುರಾಣ ವೀರರ ಹೆಸರಿನಲ್ಲಿರುವ ಮೂರು ವಿಭಿನ್ನ ಗಾತ್ರಗಳ ಬಾಕ್ಸ್‌ಗಳಿಂದ ತಮ್ಮ ಆಯ್ಕೆಯ ಪುಸ್ತಕಗಳನ್ನು ಆಯ್ದುಕೊಳ್ಳಬಹುದು. ಅವೆಂದರೆ - ಒಡಿಸ್ಸಿಯಸ್ ಬಾಕ್ಸ್, ಪರ್ಷಿಯಸ್ ಬಾಕ್ಸ್ ಮತ್ತು ಅತಿದೊಡ್ಡ ಹಾಗೂ ಬೃಹತ್ತಾದ ಹರ್ಕ್ಯುಲಸ್ ಬಾಕ್ಸ್.

Bookchor’s ‘LockTheBox Mini ’ from 7th to 10th July in Hampankatta

ದಿ 'ಒಡಿಸ್ಸಿಯಸ್' ಬಾಕ್ಸ್: ಇದರ ದರ 1199/- ರೂಪಾಯಿಗಳು
ದಿ 'ಪರ್ಷಿಯಸ್' ಬಾಕ್ಸ್: ಇದರ ದರ 1799/- ರೂಪಾಯಿಗಳು
ದಿ 'ಹರ್ಕ್ಯುಲಸ್' ಬಾಕ್ಸ್: ಅತಿದೊಡ್ಡ ಬಾಕ್ಸ್‌ಗೆ ನಿಗದಿಪಡಿಸಲಾದ ದರ 2999/- ರೂಪಾಯಿಗಳು

ಓದುಗರು ತಮ್ಮ ಆಯ್ಕೆಯ ಎಷ್ಟು ಪುಸ್ತಕಗಳು ಬೇಕೋ ಅಷ್ಟನ್ನು ಬಾಕ್ಸ್‌ನೊಳಗೆ ತುಂಬಿಕೊಳ್ಳಬಹುದು. ಆದರೆ ಇಲ್ಲಿರುವ ಏಕೈಕ ಷರತ್ತು ಎಂದರೆ, ಬಾಕ್ಸ್ ಅನ್ನು ಸಮತಟ್ಟಾಗಿ ಮುಚ್ಚಲು ಸಾಧ್ಯವಾಗುವಂತಿರಬೇಕು. ಹೀಗಾಗಿ, ಪುಸ್ತಕಗಳ ಸಂಖ್ಯೆಗೆ ಅಕ್ಷರಶಃ ಯಾವುದೇ ಮಿತಿಯಿರುವುದಿಲ್ಲ.

ಕಾರ್ಯಕ್ರಮದ ಕುರಿತು ಮಾತನಾಡಿದ ಬುಕ್‌ಚೋರ್ ಸ್ಥಾಪಕರಾದ ವಿದ್ಯುತ್ ಶರ್ಮಾ, ''ಮಂಗಳೂರಿನಲ್ಲಿ 'ಲಾಕ್ ದಿ ಬಾಕ್ಸ್ ಮಿನಿ' ಆಯೋಜಿಸಲು ನಾವು ಉತ್ಸುಕರಾಗಿದ್ದೇವೆ. ಈಗಾಗಲೇ ಹೈದರಾಬಾದ್, ಬೆಂಗಳೂರು, ಕೋಲ್ಕತ್ತಾ, ಪುಣೆ, ಇಂದೋರ್ ಮುಂತಾದ ನಗರಗಳಲ್ಲಿ ನಮ್ಮ ಈ ಕಾರ್ಯಕ್ರಮಕ್ಕೆ ಅತ್ಯುತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಮಂಗಳೂರಿನಲ್ಲೂ ಅಂಥದ್ದೇ ಪ್ರತಿಕ್ರಿಯೆ ಬರಲಿದೆ ಎಂಬ ವಿಶ್ವಾಸವಿದೆ. ಭಾರತೀಯ ಮತ್ತು ಅಂತಾರಾಷ್ಟ್ರೀಯ ಲೇಖಕರ ವಿವಿಧ ಪ್ರಕಾರಗಳಿಗೆ ಸೇರಿರುವ ಸುಮಾರು 2 ಲಕ್ಷದಷ್ಟು ಪುಸ್ತಕಗಳಿಂದ ತಮ್ಮಿಚ್ಛೆಯ ಪುಸ್ತಕಗಳನ್ನು ಆಯ್ಕೆ ಮಾಡುವ ಅವಕಾಶವು ಪುಸ್ತಕಪ್ರೇಮಿಗಳಿಗೆ ಸಿಗಲಿದೆ. ನಾವು ಪ್ರತಿದಿನವೂ ಪುಸ್ತಕಗಳ ಮರುಪೂರಣ ಮಾಡುವ ಮೂಲಕ ಓದುಗರಿಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ ಕೃತಿಗಳು ಸಿಗುವಂತೆ ಮಾಡುತ್ತಿದ್ದೇವೆ'' ಎಂದರು.

Bookchor’s ‘LockTheBox Mini ’ from 7th to 10th July in Hampankatta

ಬುಕ್ ಚೋರ್.ಕಾಂ: ಇದು ಅಗ್ಗದ ದರದಲ್ಲಿ ಪುಸ್ತಕಗಳನ್ನು ಒದಗಿಸುವ ಮೂಲಕ ಭಾರತದ ಯುವಜನತೆಯಲ್ಲಿ ಓದುವ ಹವ್ಯಾಸವನ್ನು ಬೆಳೆಸುವ ಉದ್ದೇಶದಿಂದ 6 ವರ್ಷಗಳ ಹಿಂದೆ ಸ್ಥಾಪಿಸಲಾದ ಸ್ಟಾರ್ಟಪ್ ಆಗಿದೆ. ಲಾಕ್‌ದಿಬಾಕ್ಸ್ ಕಾರ್ಯಕ್ರಮವು 2018ರಲ್ಲಿ ದೆಹಲಿಯಲ್ಲಿ ಆರಂಭವಾಗಿದ್ದು, ಬೆಂಗಳೂರಿನಲ್ಲಿ ಮೂರನೇ ಆವೃತ್ತಿ ಇತ್ತೀಚೆಗೆ ನಡೆದಿದೆ.

ಪುಸ್ತಕ ಪ್ರೇಮಿಗಳಿಗೆ ತಮ್ಮಲ್ಲಿರುವ ಓದಿರುವ ಪುಸ್ತಕಗಳನ್ನು ಈ ಕಾರ್ಯಕ್ರಮದಲ್ಲಿ ಮಾರಾಟ ಮಾಡುವ ಅವಕಾಶವೂ ಇದೆ. ಅವರು ಆಂಡ್ರಾಯ್ಡ್ ಮತ್ತು ಐಒಎಸ್‌ಗಳಲ್ಲಿ ಬುಕ್‌ಚೋರ್‌ನ 'ಡಂಪ್' (Dump) ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಂಡು, ತಾವು ಮಾರಾಟ ಮಾಡಲು ಬಯಸುತ್ತಿರುವ ಕೃತಿಗಳ ವಿವರಗಳನ್ನು ಅಲ್ಲಿ ಅಪ್‌ಲೋಡ್ ಮಾಡಬೇಕು.

ದಿನಾಂಕ: ಜುಲೈ 7ರಿಂದ 10ರವರೆಗೆ.

ಸ್ಥಳ: ಲೇಡೀಸ್ ಕ್ಲಬ್, ವಿಆರ್‌ಸಿವಿ+ಎಫ್‌ಪಿಡಬ್ಲ್ಯೂ, ಕೆಎಂಸಿ ಮರ್ಕೆರಾ ಟ್ರಂಕ್ ರಸ್ತೆ, ಹಂಪನಕಟ್ಟೆ, ಮಂಗಳೂರು, ಕರ್ನಾಟಕ 575001

ಸಮಯ: ಬೆಳಗ್ಗೆ 10ರಿಂದ ರಾತ್ರಿ 10ರವರೆಗೆ

ಬುಕ್‌ಚೋರ್ ಕುರಿತು:

ಬುಕ್‌ಚೋರ್ ಲಿಟರರಿ ಸೊಲ್ಯೂಷನ್ಸ್ ಲಿಮಿಟೆಡ್‌ನ ಮಾಲೀಕತ್ವದ ಬುಕ್ ಚೋರ್ .ಕಾಂ ಹೊಸ ಹಾಗೂ ಹಳೆಯ ಪುಸ್ತಕಗಳನ್ನು ಆನ್‌ಲೈನ್ ಮೂಲಕ ಮಾರಾಟ ಮಾಡುವ ಸಂಸ್ಥೆಯಾಗಿದ್ದು, ವೆಬ್, ಆಂಡ್ರಾಯ್ಡ್ ಹಾಗೂ ಐಒಎಸ್‌ನಲ್ಲಿ ಲಭ್ಯವಿದೆ. ದೇಶಾದ್ಯಂತ ಸುಮಾರು 9,00,000 ಓದುಗರನ್ನು ಹೊಂದಿದ್ದು, ಗ್ರಾಹಕರ ಸಂಖ್ಯೆ ಬೆಳೆಯುತ್ತಲೇ ಹೋಗುತ್ತಿದೆ. ಅದೇ ರೀತಿ ಸುಮಾರು 100ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಆಫ್‌ಲೈನ್‌ನಲ್ಲಿಯೂ ತನ್ನ ಅಸ್ತಿತ್ವವನ್ನು ಸಾಬೀತುಪಡಿಸಿದೆ. ಬುಕ್‌ಚೋರ್, ಪುಸ್ತಕಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಕೆಲಸವನ್ನಷ್ಟೇ ಮಾಡುತ್ತಿಲ್ಲ. ಗ್ರಾಹಕರಿಗೂ ಪುಸ್ತಕಗಳನ್ನು ಮಾರಲು ವೇದಿಕೆ ಕಲ್ಪಿಸುವ ಜತೆಗೆ ಗ್ರಾಹಕರಿಂದ- ಆಸಕ್ತ ಗ್ರಾಹಕರಿಗೆ ನೇರವಾಗಿ ಪುಸ್ತಕಗಳು ಮಾರಾಟ ಮಾಡಲು ಅವಕಾಶ ಕಲ್ಪಿಸಿದೆ. ಪುಸ್ತಕಗಳು ಕಡಿಮೆ ಬೆಲೆಯಲ್ಲಿ ದೊರೆಯುವಂತೆ ಮಾಡುವ ಮೂಲಕ ಜಾಗತಿಕವಾಗಿ ಓದುವ ಹವ್ಯಾಸವನ್ನು ಹೆಚ್ಚಿಸುವ ಗುರಿಯನ್ನು ಬುಕ್‌ಚೋರ್ ಹೊಂದಿದೆ.

Recommended Video

Bhagwant Mann Singhಗೆ ಮದುವೆಯಲ್ಲಿ Kejriwal ಮುಖ್ಯ ಅತಿಥಿ | *India | OneIndia Kannada

English summary
Bookchor, an online bookstore for used books, is hosting 'LockTheBox Mini,' a one-of-a-kind book sale in which you don't have to pay for individual books; instead, you pay for a box and take home as many books as you can fit into the box.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X