ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು: ಇನ್ನೂ ಮೂರು ಬಾಂಬ್ ಇಟ್ಟಿರುವುದಾಗಿ ಬೆದರಿಕೆ

|
Google Oneindia Kannada News

ಮಂಗಳೂರು, ಜನವರಿ 20: ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆ ಆಗಿದ್ದು, ತೀವ್ರ ಆತಂಕ ಸೃಷ್ಟಿಸಿದೆ. ಬಾಂಬ್ ಅನ್ನು ನಿಷ್ಕ್ರಿಯ ಮಾಡುವ ಮೊದಲೇ ಮಂಗಳೂರಿನಲ್ಲೇ ಇನ್ನೂ ಮೂರು ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಬಂದಿದೆ.

ಮಧ್ಯಾಹ್ನ 2:50 ರ ಸುಮಾರಿಗೆ ಕರೆ ಮಾಡಿದ ಅಗಂತುಕ ಮೂರು ಕಡೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಒಡ್ಡಿದ್ದು, ಇಂಡಿಗೋ ಕ್ಯಾಬಿನ್ ಬಳಿ ಒಂದು ಬಾಂಬ್ ಇಟ್ಟಿದ್ದೇವೆ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದಾರೆ.

Live : ಮಂಗಳೂರಲ್ಲಿ ಬಾಂಬ್ ಪತ್ತೆ; ಕೆಂಜಾರು ಮೈದಾನದಲ್ಲಿ ನಿಷ್ಕ್ರಿಯLive : ಮಂಗಳೂರಲ್ಲಿ ಬಾಂಬ್ ಪತ್ತೆ; ಕೆಂಜಾರು ಮೈದಾನದಲ್ಲಿ ನಿಷ್ಕ್ರಿಯ

ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಪೊಲೀಸರು, ವಿಮಾನ ನಿಲ್ದಾಣ ಪೊಲೀಸರು ಹಾರಲು ತಯಾರಾಗಿದ್ದ ಇಂಡಿಗೋ ವಿಮಾನವನ್ನು ತಡೆದು ಪ್ರಯಾಣಿಕರ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಇಂಡಿಗೋ ವಿಮಾನ ನಿಲ್ದಾಣದ ಕ್ಯಾಬಿನ್ ಸೇರಿದಂತೆ ಇಡೀಯ ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದ್ದಾರೆ.

Bomb Threat To Mangaluru Air Port

ಮಂಗಳೂರಿನಿಂದ ಹೈದಬಾರಾದ್‌ ಗೆ ಹೊರಟಿದ್ದ ವಿಮಾನವನ್ನು ತಡೆಯಲಾಗಿದ್ದು, ಅದರಲ್ಲಿಯೂ ಒಂದು ಶಂಕಿತ ಬ್ಯಾಗ್ ದೊರೆತಿದೆ ಎನ್ನಲಾಗಿದೆ. ಬ್ಯಾಗ್ ಬಗ್ಗೆ ತನಿಖೆ ನಡೆಯುತ್ತಿದೆ.

ಇಂದು ಬೆಳಿಗ್ಗೆ ಸಿಕ್ಕ ಸಜೀವ ಬಾಂಬ್ ಅನ್ನು ಮಂಗಳೂರು ವಿಮಾನ ನಿಲ್ದಾಣ ಸಮೀಪದ ಕೆಂಜೇರು ಮೈದಾನಕ್ಕೆ ತೆಗೆದುಕೊಂಡು ಬರಲಾಗಿದ್ದು, ಬಾಂಬ್ ಅನ್ನು ಸ್ಪೋಟಿಸುವ ಕಾರ್ಯ ಜಾರಿಯಲ್ಲಿದೆ.

English summary
Another Bomb threat to Mangaluru air port. Random guy called to Mangaluru air port and said planted 3 bombs in Air port.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X