ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಮಾನ ನಿಲ್ದಾಣದಲ್ಲಿ ಸಹ ಪ್ರಯಾಣಿಕನ ಮೇಸೆಜ್‌ ನೋಡಿದ್ದಕ್ಕೆ ವಿಮಾನವೇ ನಿಲುಗಡೆ

|
Google Oneindia Kannada News

ಮಂಗಳೂರು, ಆಗಸ್ಟ್‌ 15: ತನ್ನ ಜೊತೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರ ಮೊಬೈಲ್‌ ಸಂದೇಶವನ್ನು ತಪ್ಪಾಗಿ ಅರ್ಥೈಸಿದ ಕಾರಣ ವಿಮಾನ ಪ್ರಯಾಣ ವಿಳಂಬವಾದ ಘಟನೆ ನಡೆದಿದೆ. ಮೆಸೇಜ್ ತಪ್ಪಾಗಿ ಅರ್ಥೈಸಿಕೊಂಡ ಕಾರಣ ಮಂಗಳೂರು- ಮುಂಬೈ ವಿಮಾನವು ಸುಮಾರು ಆರು ಗಂಟೆಗಳ ಕಾಲ ತಡವಾಗಿದೆ, ವಿಮಾನದ ಭದ್ರತೆಗೆ ಸಂಬಂಧಿಸಿದಂತೆ ಭಾನುವಾರದಂದು ಗೊಂದಲದ ವಾತಾವರಣ ಸೃಷ್ಟಿಯಾಗಿದ್ದು ಬೆಳಕಿಗೆ ಬಂದಿದೆ.

ಪ್ರಯಾಣಿಕರೊಬ್ಬರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಂಗಳೂರಿಗೆ ತನ್ನ ವಿಮಾನಕ್ಕಾಗಿ ಕಾಯುತ್ತಿದ್ದ ತನ್ನ ಸ್ನೇಹಿತನೊಂದಿಗೆ ಚಾಟ್ ಮಾಡುವಾಗ ಸಹ ಮಹಿಳಾ ಪ್ರಯಾಣಿಕರೊಬ್ಬರು ಅವರ ಮೊಬೈಲ್‌ನಿಂದ 'ಬಾಂಬರ್' ಎಂಬ ಪದವನ್ನು ಸಂದೇಶದಲ್ಲಿ ಓದಿದರು.

ಸಂದೇಶವನ್ನು ಓದಿದ ಆ ಪ್ರಯಾಣಿಕ ಮಹಿಳೆ ಏರ್‌ಲೈನ್ ಸಿಬ್ಬಂದಿಗೆ ಮಾಹಿತಿ ನೀಡಿದರು. ಅಲ್ಲದೆ ಅವರು ಈ ಸಮಸ್ಯೆಯನ್ನು ಪೈಲಟ್‌ನ ಗಮನಕ್ಕೂ ಕೂಡ ತಂದರು. ನಂತರ ಏರ್‌ ಟ್ರಾಫಿಕ್‌ ಕಂಟ್ರೋಲ್‌ಗೆ (ಎಟಿಸಿ)ಗೆ ಮಾಹಿತಿ ನೀಡಲಾಯಿತು. ಬಳಿಕ ವಿಮಾನವು ರನ್‌ವೇಯಿಂದ ಸ್ಟ್ಯಾಂಡ್‌ಗೆ ತೆರಳಿತು. ತಾಂತ್ರಿಕ ಅಡಚಣೆಯ ಬಗ್ಗೆ ಪ್ರಯಾಣಿಕರಿಗೆ ತಿಳಿಸಲಾಯಿತು.

Breaking: Bomb threat message, 6 hour flight delay

'ಬಾಂಬರ್' ಸಂದೇಶದ ಬಗ್ಗೆ ತಿಳಿದ ಕೂಡಲೇ ವಿಮಾನವನ್ನು ಪ್ರತ್ಯೇಕ ಸ್ಥಳಕ್ಕೆ ಕೊಂಡೊಯ್ಯಲಾಯಿತು. 'ಬಾಂಬರ್' ಮೊಬೈಲ್‌ ಸಂದೇಶವನ್ನು ಹೊಂದಿದ್ದ ಪ್ರಯಾಣಿಕನನ್ನು ಗುರುತಿಸಿ, ವಿಮಾನದಿಂದ ಹೊರಕ್ಕೆ ಕರೆ ತರಲಾಯಿತು. ಆ ಪ್ರಯಾಣಿಕರ ಹ್ಯಾಂಡ್ ಬ್ಯಾಗ್ ಮತ್ತು ಚೆಕ್-ಇನ್ ಬ್ಯಾಗೇಜ್ ಅನ್ನು ಕೂಲಂಕಷವಾಗಿ ಪರಿಶೀಲಿಸಲಾಯಿತು. ನಂತರ, ಸಂದೇಶದಿಂದ ಯಾವುದೇ ತೊಂದರೆಯಿಲ್ಲ ಎಂದು ತಿಳಿದು ಬಂದ ಬಳಿಕ ವಿಮಾನವು ಸಂಜೆ 5 ರ ಸುಮಾರಿಗೆ ಮರು ಚಾಲನೆ ಸಿದ್ಧವಾಯಿತು. ಆ ವಿಮಾನದಲ್ಲಿ ಒಟ್ಟು 186 ಪ್ರಯಾಣಿಕರಿದ್ದರು ಎಂಬ ಮಾಹಿತಿ ಸಿಕ್ಕಿದೆ.

Breaking: Bomb threat message, 6 hour flight delay

ವಿಮಾನದಲ್ಲಿದ್ದ ಪ್ರಯಾಣಿಕರು ತಾವು ಹೋಗಬೇಕಿದ್ದ ಸ್ಥಳಕ್ಕೆ ಸರಿಯಾದ ಸಮಯಕ್ಕೆ ಪ್ರಯಾಣಿಸಲು ಸಾಧ್ಯವಾಗಲಿಲ್ಲ, ಅಲ್ಲದೆ ಅನಗತ್ಯವಾಗಿ ಭದ್ರತಾ ಏಜೆನ್ಸಿ ಮತ್ತು ಪೊಲೀಸರಿಂದ ತಪಾಸಣೆ ವಿಚಾರಣೆಗೆ ಒಳಪಡಬೇಕಾಯಿತು, ಇನ್ನು ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್, 'ಇದು ಇಬ್ಬರು ಸ್ನೇಹಿತರ ನಡುವಿನ ವೈಯಕ್ತಿಕ ಮಾತುಕತೆಯಾಗಿದೆ. ಈ ಬಗ್ಗೆ ಯಾರೂ ದೂರು ದಾಖಲಿಸಿಲ್ಲ' ಎಂದು ಹೇಳಿದರು.

English summary
A Mangalore-Mumbai flight was delayed by nearly six hours after a fellow passenger's mobile message was misinterpreted on Sunday, creating confusion over the security of the flight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X