ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಲ್ಲಿ ಬಾಂಬ್ ಪತ್ತೆ; ಯಡಿಯೂರಪ್ಪ ಕಳಿಸಿದ ಸಂದೇಶವೇನು?

|
Google Oneindia Kannada News

ಬೆಂಗಳೂರು, ಜನವರಿ 21 : "ನಾಗರಿಕರು ಯಾವುದೇ ಕಾರಣಕ್ಕೂ ಆತಂಕ ಪಡಬೇಕಿಲ್ಲ" ಎಂದು ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ. ಸೋಮವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾಗಿತ್ತು.

ದಾವೋಸ್ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪ ಮಂಗಳೂರು ಘಟನೆ ಬಗ್ಗೆ ಟ್ವೀಟ್ ಮಾಡಿದ್ದಾರೆ. "ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾಗಿರುವ ಘಟನೆ ದುರದೃಷ್ಟಕರ" ಎಂದು ಹೇಳಿದ್ದಾರೆ.

ಮಂಗಳೂರು: ಬಾಂಬ್ ಪತ್ತೆಯಿಂದ ಸ್ಫೋಟದವರೆಗೆ ನಡೆದಿದ್ದೇನು?ಮಂಗಳೂರು: ಬಾಂಬ್ ಪತ್ತೆಯಿಂದ ಸ್ಫೋಟದವರೆಗೆ ನಡೆದಿದ್ದೇನು?

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಬಗ್ಗೆ ಪೊಲೀಸರ ತನಿಖೆ ಮುಂದುವರೆದಿದೆ. ಎನ್‌ಐಎ ತಂಡ ಮಂಗಳೂರಿಗೆ ಆಗಮಿಸಿದ್ದು, ಪ್ರಕರಣದ ಬಗ್ಗೆ ಮಾಹಿತಿಯನ್ನು ಸಂಗ್ರಹ ಮಾಡುತ್ತಿದೆ. ಬಾಂಬ್ ಇಟ್ಟ ವ್ಯಕ್ತಿಗಾಗಿ ಹುಡುಕಾಟ ಮುಂದುವರೆದಿದೆ.

ಮಂಗಳೂರು ಗೋಲಿಬಾರ್‌ಗೆ ಪೊಲೀಸರ ವೈಫಲ್ಯವೇ ಕಾರಣ ಮಂಗಳೂರು ಗೋಲಿಬಾರ್‌ಗೆ ಪೊಲೀಸರ ವೈಫಲ್ಯವೇ ಕಾರಣ

ಪ್ರಕರಣದ ತನಿಖೆ ಕೈಗೊಂಡಿರುವ ಪೊಲೀಸರು ಆಟೋ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮಂಗಳೂರಿ ಬೇರೆ ಪ್ರದೇಶಗಳಲ್ಲಿಯೂ ಬಾಂಬ್ ಇಡಲು ಪ್ರಯತ್ನ ನಡೆದಿತ್ತು ಎಂಬ ಸುದ್ದಿಗಳು ಹಬ್ಬಿವೆ.

ಮಂಗಳೂರು ಬಾಂಬ್ ಪತ್ತೆ: ಶೃಂಗೇರಿಯಲ್ಲಿ ಕುಮಾರಸ್ವಾಮಿ ಸ್ಪೋಟಕ ಹೇಳಿಕೆ ಮಂಗಳೂರು ಬಾಂಬ್ ಪತ್ತೆ: ಶೃಂಗೇರಿಯಲ್ಲಿ ಕುಮಾರಸ್ವಾಮಿ ಸ್ಪೋಟಕ ಹೇಳಿಕೆ

ಯಡಿಯೂರಪ್ಪ ಟ್ವೀಟ್

ಸೋಮವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾಗಿತ್ತು. ದಾವೋಸ್ ಪ್ರವಾಸದಲ್ಲಿರುವ ಮುಖ್ಯಮಂತ್ರಿಗಳು ಈ ಕುರಿತು ಟ್ವೀಟ್ ಮಾಡಿದ್ದಾರೆ.

ಸಲೂನ್‌ನಲ್ಲಿ ಬ್ಯಾಗ್ ಇಡಲು ಪ್ರಯತ್ನ

ಸಲೂನ್‌ನಲ್ಲಿ ಬ್ಯಾಗ್ ಇಡಲು ಪ್ರಯತ್ನ

ಬಾಂಬ್ ಇಟ್ಟಿದ್ದಾನೆ ಎಂದು ಶಂಕಿಸಲಾದ ವ್ಯಕ್ತಿ ಕೆಂಜಾರುವಿನಲ್ಲಿರುವ ರಾಯಲ್ ಮೆನ್ಸ್ ಸಲೂನ್‌ಗೆ ಭೇಟಿ ನೀಡಿದ್ದ. ಎರಡು ಬ್ಯಾಗ್ ತಂದಿದ್ದ ಆರೋಪಿ ಒಂದನ್ನು ಅಲ್ಲೇ ಇಟ್ಟು ಹೋಗಲು ಪ್ರಯತ್ನ ನಡೆಸಿದ್ದ. ಇದಕ್ಕೆ ಸಲೂನ್ ಮಾಲೀಕ ಒಪ್ಪಿರಲಿಲ್ಲ. ಪೊಲೀಸರು ಸಲೂನ್ ಮಾಲೀಕನ ವಿಚಾರಣೆ ನಡೆಸುತ್ತಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆ ಶಂಕಿತ ಯಾರು?ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆ ಶಂಕಿತ ಯಾರು?

ಶಂಕಿತ ವ್ಯಕ್ತಿಯ ಚಿತ್ರ ಬಿಡುಗಡೆ

ಶಂಕಿತ ವ್ಯಕ್ತಿಯ ಚಿತ್ರ ಬಿಡುಗಡೆ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಶಂಕಿತ ವ್ಯಕ್ತಿಯ ಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ವ್ಯಕ್ತಿಯ ಬಗ್ಗೆ ಮಾಹಿತಿ ಇದ್ದರೆ ನೀಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ಸ್ಫೋಟ ಪ್ರಕರಣದ ಬಗ್ಗೆ ತನಿಖೆ ಮುಂದುವರೆದಿದೆ.

ಮೂರು ತಂಡ ರಚನೆ

ಮೂರು ತಂಡ ರಚನೆ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಪ್ರಕರಣದ ತನಿಖೆಗೆ ಮೂರು ತಂಡಗಳನ್ನು ಮಂಗಳೂರು ಪೊಲೀಸರು ರಚನೆ ಮಾಡಿದ್ದಾರೆ. ಸೋಮವಾರ ಬೆಳಗ್ಗೆ ವಿಮಾನ ನಿಲ್ದಾಣದಲ್ಲಿ ಸಿಕ್ಕಿದ್ದ ಬಾಂಬ್ ಸಂಜೆ ಕೆಂಜಾರು ಮೈದಾನದಲ್ಲಿ ಸ್ಫೋಟಗೊಂಡಿತ್ತು.

English summary
Karnataka Chief Minister B.S.Yediyurappa tweet on bomb found in Mangaluru international airport on January 20, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X