ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಂಬ್ ಅನ್ನು ಸುರಕ್ಷಿತವಾಗಿ ಸ್ಫೋಟಗೊಳಿಸಿದ ಪೊಲೀಸರು

|
Google Oneindia Kannada News

ಮಂಗಳೂರು, ಜನವರಿ 20 : ಮಂಗಳೂರಿನ ಬಜ್ಪೆಯಲ್ಲಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆಯಾಗಿದೆ. ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯದಳದವಯಸ್ಥಳಕ್ಕೆ ಧಾವಿಸಿದ್ದಾರೆ.

ಸೋಮವಾರ ಬೆಳಗ್ಗೆ ಮಂಗಳೂರಿನ ಬಜ್ಪೆಯಲ್ಲಿರುವ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆಯಾಗಿದೆ. ಪ್ರಯಾಣಿಕರು ಇದರಿಂದಾಗಿ ಆತಂಕಗೊಂಡಿದ್ದಾರೆ. ಪೊಲೀಸರು ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ಕಳಿಸಿದ್ದಾರೆ.

ಮಂಗಳೂರು ಗೋಲಿಬಾರ್: ಸರ್ಕಾರದಿಂದ ವರದಿ ಕೇಳಿದ ಹೈಕೋರ್ಟ್ಮಂಗಳೂರು ಗೋಲಿಬಾರ್: ಸರ್ಕಾರದಿಂದ ವರದಿ ಕೇಳಿದ ಹೈಕೋರ್ಟ್

ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಪ್ರಯಾಣಿಕರಿಗೆ ಮೀಸಲಾದ ಜಾಗದಲ್ಲಿದ್ದ ಬ್ಯಾಗ್‌ನಲ್ಲಿ ಬಾಂಬ್ ಪತ್ತೆಯಾಗಿದೆ. ಲ್ಯಾಪ್ ಟಾಪ್ ಬ್ಯಾಗ್‌ನಲ್ಲಿ ಸಜೀವ ಬಾಂಗ್ ಇದ್ದು, ಬಾಂಬ್ ನಿಷ್ಕ್ರಿಯದಳ ಬ್ಯಾಗ್ ವಶಕ್ಕೆ ಪಡೆದುಕೊಂಡಿದೆ.

ಮಂಗಳೂರು ಗಲಭೆ: ಪೊಲೀಸರ ವಿರುದ್ಧ ಕುಮಾರಸ್ವಾಮಿ ವಿಡಿಯೋ ಬಿಡುಗಡೆಮಂಗಳೂರು ಗಲಭೆ: ಪೊಲೀಸರ ವಿರುದ್ಧ ಕುಮಾರಸ್ವಾಮಿ ವಿಡಿಯೋ ಬಿಡುಗಡೆ

Bomb Found At Mangalore Airport

ಬೆಳಗ್ಗೆ ಆಟೋದಲ್ಲಿ ಬಂದ ವ್ಯಕ್ತಿ ವಿಮಾನ ನಿಲ್ದಾಣದ ಒಳಗೆ ಬ್ಯಾಗ್ ಇಟ್ಟು ಹೋಗಿದ್ದಾನೆ ಎಂದು ಶಂಕಿಸಲಾಗಿದೆ. ವಿಮಾನ ನಿಲ್ದಾಣದ ಭದ್ರತಾ ವ್ಯವಸ್ಥೆ ಬಗ್ಗೆ ಪ್ರಯಾಣಿಕರು ಪ್ರಶ್ನೆ ಮಾಡುತ್ತಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ರಾಜ್ಯದ ಐದು ವಿಮಾನ ನಿಲ್ದಾಣಗಳಿಗೆ ಸಾಧಕರ ಹೆಸರುರಾಜ್ಯದ ಐದು ವಿಮಾನ ನಿಲ್ದಾಣಗಳಿಗೆ ಸಾಧಕರ ಹೆಸರು

Newest FirstOldest First
5:52 PM, 20 Jan

ಸ್ಫೋಟ ನಡೆದ ಜಾಗವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸ್ಫೋಟದ ತೀವ್ರತೆ ಅಳೆಯಲು ಮತ್ತು ಮುಂದಿನ ತನಿಖೆಗೆ ನೆರವಾಗುವ ಕೆಲವು ವಸ್ತುಗಳನ್ನು ಸ್ಫೋಟ ನಡೆದ ಜಾಗದಲ್ಲಿ ಪೊಲೀಸರು ಸಂಗ್ರಹ ಮಾಡುತ್ತಿದ್ದಾರೆ.
5:39 PM, 20 Jan

ಬಾಂಬ್ ಅನ್ನು ಸುರಕ್ಷಿತವಾಗಿ ರಿಮೋಟ್ ತಂತ್ರಜ್ಞಾನ ಬಳಸಿ ಪೊಲೀಸರು ಸ್ಫೋಟಗೊಳಿಸಿದ್ದಾರೆ. ಹಲವು ಮರಳು ಮೂಟೆಗಳನ್ನು ಸುತ್ತಲೂ ಇಟ್ಟು ಬಾಂಬ್ ಅನ್ನು ಸ್ಫೋಟಗೊಳಿಸಿದ್ದಾರೆ. ಶಬ್ದದೊಂದಿಗೆ ಬಾಂಬ್ ಸ್ಫೋಟಗೊಂಡು ಅಲ್ಪ ಪ್ರಮಾಣದ ಬೆಂಕಿ ಕಾಣಿಸಿಕೊಂಡಿತು.
5:36 PM, 20 Jan

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರಬಹುದಾದ ಶಂಕಿತ ವ್ಯಕ್ತಿಯ ಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಶಂಕಿತ ವ್ಯಕ್ತಿ ಮತ್ತು ಆತ ವಿಮಾನ ನಿಲ್ದಾಣಕ್ಕೆ ಬಂದ ಮತ್ತು ಹೋಗಲು ಬಳಸಿದ ಆಟೋದ ಚಿತ್ರವನ್ನೂ ಸಹ ಪೊಲೀಸರು ಬಿಡುಗಡೆ ಮಾಡಿದ್ದಾರೆ.
5:09 PM, 20 Jan

ವೈಯರ್ ಗಳನ್ನು ಬಳಸಿ ಬಾಂಬ್ ಅನ್ನು ದೂರದಿಂದಲೇ ಸ್ಪೋಟಗೊಳಿಸಲು ಸಿದ್ಧತೆ ನಡೆಯುತ್ತಿದೆ. ಬಾಂಬ್ ನಿಷ್ಕ್ರಿಯ ತಜ್ಞರು ವೈಯರ್‌ಗಳನ್ನು ಜೋಡಿಸುವ ಕಾರ್ಯ ಮಾಡುತ್ತಿದ್ದಾರೆ.
4:45 PM, 20 Jan

ಮೈಕ್ ಮೂಲಕ ದೂರ ಹೋಗುವಂತೆ ಜನರಿಗೆ ಸೂಚನೆ ನೀಡುತ್ತಿರುವ ಪೊಲೀಸ್ ಸಿಬ್ಬಂದಿ
4:42 PM, 20 Jan

ಕೆಂಜಾರು ಮೈದಾನದ ಸುತ್ತ ಸೇರಿದ್ದ ಜನರನ್ನು ಪೊಲೀಸರು ದೂರ ಕಳಿಸಿದ್ದಾರೆ. ಬಾಂಬ್‌ಗಳನ್ನು ಮರಳಿನ ಚೀಲವಿರುವ ಸ್ಥಳದಲ್ಲಿ ಇಟ್ಟು ಬರಲಾಗಿದೆ.
4:27 PM, 20 Jan

"ಮಂಗಳೂರಿನಲ್ಲಿ ಬಾಂಬ್ ಇಟ್ಟವರು ಯಾರು? ಎಂದು ಪತ್ತೆ ಹಚ್ಚುವುದು ಕಷ್ಟವೇನಲ್ಲ. ಆ ಜಾಗದಲ್ಲಿ ಸಿಸಿಟಿವಿ ಇರುತ್ತದೆ. ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ಪೊಲೀಸರು ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. 15 ದಿನ ಸಮಯ ತೆಗೆದುಕೊಂಡು ಬೇರೆ ಕಥೆ ಸೃಷ್ಟಿಸಬಾರದು. ವಾಸ್ತಾವಾಂಶವನ್ನು ಜನರ ಮುಂದಿಡಬೇಕು" ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದರು.
Advertisement
4:13 PM, 20 Jan

ಮಂಗಳೂರಿನಿಂದ ಹೈದರಾಬಾದ್‌ಗೆ ತೆರಳುತ್ತಿದ್ದ ವಿಮಾನದಲ್ಲಿ ಬಾಂಬ್ ಇದೆ ಎಂಬ ಕರೆ ಬಂದಿದೆ. ಇಂಡಿಗೋ ವಿಮಾನದಲ್ಲಿದ್ದ 126 ಪ್ರಯಾಣಿಕರನ್ನು ತಪಾಸಣೆ ನಡೆಸಲಾಗುತ್ತಿದೆ.
4:00 PM, 20 Jan

ಬಾಂಬ್ ನಿಷ್ಕ್ರಿಯದಳ ಯೋಧ ಗಂಗಯ್ಯ ಬಾಂಬ್‌ ಇರುವ ಬ್ಯಾಗ್‌ ಅನ್ನು ಮರಳು ಚೀಲಗಳಿಂದ ಸುತ್ತಿವರೆದಿರುವ ಸ್ಥಳಕ್ಕೆ ತೆಗೆದುಕೊಂಡು ಹೋಗಿದ್ದಾರೆ.
3:32 PM, 20 Jan

ಬಾಂಬ್ ನಿಷ್ಕ್ರಿಯಗೊಳಿಸುವ ಪ್ರಕ್ರಿಯೆ ಆರಂಭಿಸಿದ ಸಿಬ್ಬಂದಿ
3:16 PM, 20 Jan

ಲ್ಯಾಪ್ ಟಾಪ್ ಬ್ಯಾಗ್‌ನಲ್ಲಿ ಸ್ಟೀಲ್ ಬಾಕ್ಸ್‌ನಲ್ಲಿ ಬಾಂಬ್‌ಗಳನ್ನು ಇಡಲಾಗಿದೆ. ಎರಡು ಸ್ಟೀಲ್ ಬಾಕ್ಸ್ ಬ್ಯಾಗ್‌ನಲ್ಲಿದೆ.
3:02 PM, 20 Jan

ಮೈದಾನದ ನಿರ್ಜನ ಪ್ರದೇಶದಲ್ಲಿ ಬಾಂಬ್ ನಿಷ್ಕ್ರಿಯಗೊಳಿಸಲು ಸಿದ್ಧತೆ. ಆದ್ದರಿಂದ, ಕ್ರೈನ್ ತರಿಸಿದ ಪೊಲೀಸರು. ಮೈದಾನದಕ್ಕೆ ಸಾಗುವ ದಾರಿ ಇಳಿಜಾರಿನಿಂದ ಕೂಡಿದೆ. ಕ್ರೈನ್ ಮೂಲಕ ವಾಹನವನ್ನು ನಿಧಾನವಾಗಿ ಮೈದಾನಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ.
Advertisement
2:54 PM, 20 Jan

"ಬೆಂಗಳೂರಿನ ಜನರು ಭಯ ಪಡಬೇಕಾಗಿಲ್ಲ. ವಿಮಾನ ನಿಲ್ದಾಣಕ್ಕೆ ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆ ಭ್ರತೆ ಇದೆ" ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್ ಹೇಳಿದ್ದಾರೆ.
2:40 PM, 20 Jan

ಗೃಹ ಸಚಿವ ಬಸವರಾಜ ಬೊಮ್ಮಾಯಿ ಬಾಂಬ್ ಪತ್ತೆಯಾದ ಬಗ್ಗೆ ಹಾವೇರಿಯಲ್ಲಿ ಪ್ರತಿಕ್ರಿಯೆ ನೀಡಿದ್ದು, "ಬಾಂಬ್ ಜೊತೆಗೆ ಇಂತಹ ಶಕ್ತಿಗಳನ್ನು ನಿಷ್ಕ್ರಿಯಗೊಳಿಸಬೇಕು. ಇದರ ಹಿಂದೆ ದೊಡ್ಡ ಜಾಲವಿರುವ ಶಂಕೆ ಇದೆ. ಇದರ ಹಿಂದಿರುವವರ ಪತ್ತೆಗೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ" ಎಂದು ಹೇಳಿದ್ದಾರೆ.
2:37 PM, 20 Jan

ಸುಧಾರಿತ ಸ್ಫೋಟಕ ಸಾಧನ (ಐಇಡಿ) ಬಳಸಿ ಬಾಂಬ್ ತಯಾರು ಮಾಡಲಾಗಿದೆ ಎಂಬ ಪ್ರಾಥಮಿಕ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ.
2:34 PM, 20 Jan

ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ವ್ಯಕ್ತಿ ಬೆಳಗ್ಗೆ 8.45ರ ಸುಮಾರಿಗೆ ಬಾಂಬ್ ಇರುವ ಬ್ಯಾಗ್ ಇಟ್ಟಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
2:29 PM, 20 Jan

ಬಾಂಬ್ ಇರುವ ಬ್ಯಾಗ್‌ ಅನ್ನು ಬಾಂಬ್ ನಿಷ್ಕ್ರಿಯದಳ ಈ ವಾಹನದಲ್ಲಿ ಇಟ್ಟಿದೆ.
2:27 PM, 20 Jan

ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಬಾಂಬ್‌ನಲ್ಲಿ ಸುಮಾರು 10 ಕೆ. ಜಿ. ಸ್ಫೋಟಕಗಳನ್ನು ತುಂಬಲಾಗಿದೆ. ಒಂದು ವೇಳೆ ಸ್ಫೋಟಗೊಂಡರೆ 500 ಮೀಟರ್ ಪ್ರದೇಶದಲ್ಲಿ ಹಾನಿಯಾಗಲಿದೆ ಎಂದು ಅಂದಾಜಿಸಲಾಗಿದೆ.
2:23 PM, 20 Jan

ಸುಮಾರು 10 ಎಕರೆ ಪ್ರದೇಶದಲ್ಲಿರುವ ಕೆಂಜಾರು ಮೈದಾನದಲ್ಲಿ ಬಾಂಬ್ ನಿಷ್ಕ್ರಿಯಗೊಳಿಸಲಾಗುತ್ತದೆ.
2:18 PM, 20 Jan

ಕೆಂಜಾರು ಮೈದಾನಕ್ಕೆ ಬಾಂಬ್ ಅನ್ನು ತೆಗೆದುಕೊಂಡು ಹೋಗಲಾಗುತ್ತಿದೆ. ಬಾಂಬ್ ನಿಷ್ಕ್ರಿಯದಳ ಅಲ್ಲಿ ಅದನ್ನು ನಿಷ್ಕ್ರಿಯಗೊಳಿಸಲು ಪ್ರಯತ್ನ ನಡೆಸಲಿದೆ.
2:13 PM, 20 Jan

ಬಾಂಬ್ ನಿಷ್ಕ್ರಿಯಗೊಳಿಸುವ ವಾಹನವನ್ನು ಟ್ರಾಕ್ಟರ್ ಮೂಲಕ ತೆಗೆದುಕೊಂಡು ಹೋಗಲಾಗುತ್ತಿದೆ.
2:05 PM, 20 Jan

ವಿಮಾನ ನಿಲ್ದಾಣದಿಂದ 12 ಕಿ. ಮೀ. ದೂರದಲ್ಲಿ ಪಣಂಬೂರು ಬೀಚ್‌ ಇದೆ. ಪೊಲೀಸ್ ಭದ್ರತೆಯಲ್ಲಿ ವಾಹನವನ್ನು ತೆಗೆದುಕೊಂಡು ಹೋಗಲಾಗುತ್ತಿದೆ.
2:04 PM, 20 Jan

ಬಾಂಬ್ ನಿಷ್ಕ್ರಿಯದಳದವರು ಪಣಂಬೂರು ಬೀಚ್‌ಗೆ ವಾಹನವನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲಿ ಬಾಂಬ್ ನಿಷ್ಕ್ರಿಯಗೊಳಿಸುವ ಕಾರ್ಯಾಚರಣೆ ಸಾಧ್ಯವಾಗಿಲ್ಲ.
1:27 PM, 20 Jan

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಹಿನ್ನಲೆಯಲ್ಲಿ ಬೆಂಗಳೂರು ವಿಮಾನ ನಿಲ್ದಾಣ ಸೇರಿದಂತೆ ರಾಜ್ಯದ ಸೂಕ್ಷ್ಮ ಪ್ರದೇಶದಲ್ಲಿ ಕಟ್ಟೆಚ್ಚರ ಘೋಷಣೆ ಮಾಡಲಾಗಿದೆ.
1:08 PM, 20 Jan

ವಿಮಾನ ನಿಲ್ದಾಣಕ್ಕೆ ಆಟೋದಲ್ಲಿ ಬಂದ ಇಬ್ಬರು ಬಾಂಬ್ ಇರುವ ಬ್ಯಾಗ್ ಇಟ್ಟು ಹೋಗಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಸಿಕ್ಕಿದೆ.
1:00 PM, 20 Jan

ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆಯಾದ ಬಗ್ಗೆ ಎನ್‌ಐಎಗೆ ಮಾಹಿತಿ ನೀಡಲಾಗಿದೆ. ಎನ್‌ಐಎ ಅಧಿಕಾರಿಗಳು ಪೊಲೀಸರಿಂದ ಮಾಹಿತಿ ಸಂಗ್ರಹಣೆ ಮಾಡುತ್ತಿದ್ದಾರೆ.
12:59 PM, 20 Jan

ಬಾಂಬ್ ನಿಷ್ಕ್ರಿಯದಳದ ಅಧಿಕಾರಿಗಳು ಬಾಂಬ್ ನಿಷ್ಕ್ರಿಯಗೊಳಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ.
12:50 PM, 20 Jan

ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಮಂಗಳೂರು ವಿಮಾನ ನಿಲ್ದಾಣದ ಭದ್ರತೆಯನ್ನು ನೋಡಿಕೊಳ್ಳುತ್ತದೆ. ಸ್ಥಳೀಯ ಪೊಲೀಸರು, ಶ್ವಾನದಳದವರು ಸಹ ಇರುತ್ತಾರೆ. ಆದರೆ, ವ್ಯಕ್ತಿಯೊಬ್ಬ ನಿಲ್ದಾಣ ಪ್ರವೇಶಿಸಿ ಬ್ಯಾಗ್ ಇಟ್ಟು ಹೋಗಿದ್ದು ಹೇಗೆ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
12:48 PM, 20 Jan

ಮಂಗಳೂರು ನಗರ ಪೊಲೀಸ್ ಆಯುಕ್ತ ಪಿ. ಎಸ್. ಹರ್ಷಾ ಈ ಕುರಿತು ಮಾಹಿತಿ ನೀಡಿದ್ದು, "ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆಯಾಗಿದೆ. ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ಕಳಿಸಲಾಗಿದೆ. ಬ್ಯಾಗ್ ವಶಕ್ಕೆ ಪಡೆಯಲಾಗಿದೆ. ಪರಿಸ್ಥಿತಿ ಶಾಂತವಾಗಿದೆ" ಎಂದು ಹೇಳಿದರು.
12:43 PM, 20 Jan

ಕೆಲವು ದಿನಗಳ ಹಿಂದೆ ಮಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಭಾರಿ ಪ್ರತಿಭಟನೆ ನಡೆದಿತ್ತು.ಈ ವೇಳೆ ಹಿಂಸಾಚಾರ ನಡೆದು ಪೊಲೀಸರು ಗೋಲಿಬಾರ್‌ನಲ್ಲಿ ಇಬ್ಬರು ಮೃತಪಟ್ಟಿದ್ದರು.
READ MORE

English summary
Passengers panic after bomb found in Mangaluru international airport. Police visited the spot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X