ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು; ಬೋಟ್ ಮುಳುಗಡೆ, ನಾಲ್ವರಿಗಾಗಿ ಇನ್ನೂ ಶೋಧ

|
Google Oneindia Kannada News

ಮಂಗಳೂರು, ಡಿಸೆಂಬರ್ 02 : ಮಂಗಳೂರಿನಲ್ಲಿ ಶ್ರೀ ರಕ್ಷಾ ಹೆಸರಿನ ಮೀನುಗಾರಿಕಾ ಬೋಟ್ ಮುಳುಗಡೆಯಾಗಿದ್ದು, ಇಬ್ಬರ ಮೃತದೇಹ ಪತ್ತೆಯಾಗಿದೆ. ನಾಲ್ವರಿಗಾಗಿ ಇನ್ಣೂ ಹುಡುಕಾಟವನ್ನು ನಡೆಸಲಾಗುತ್ತಿದೆ.

ಮೀನುಗಾರಿಕೆಗಾಗಿ ಸೋಮವಾರ ಮುಂಜಾನೆ ತೆರಳಿದ್ದ ಬೋಳಾರದ ಬೋಟ್ ಕಲ್ಲಿಗೆ ಡಿಕ್ಕಿ ಹೊಡೆದು ಮುಳುಗಡೆಯಾಗಿದೆ. ಬೋಟ್‌ನಲ್ಲಿದ್ದ ಮೀನುಗಾರರ ಪೈಕಿ ಆರು ಜನರು ನಾಪತ್ತೆಯಾದ ಬಗ್ಗೆ ಮಾಹಿತಿ ಸಿಕ್ಕಿತ್ತು.

ಮಲ್ಪೆ ಬಂದರಿನಲ್ಲಿ ಹಗ್ಗ ಕಡಿದು ಜಾರಿದ ಬೋಟ್: ಟೆಂಪೋ ಸಮುದ್ರಕ್ಕೆಮಲ್ಪೆ ಬಂದರಿನಲ್ಲಿ ಹಗ್ಗ ಕಡಿದು ಜಾರಿದ ಬೋಟ್: ಟೆಂಪೋ ಸಮುದ್ರಕ್ಕೆ

ಬೊಕ್ಕಪಟ್ಣ ನಿವಾಸಿಗಳಾದ ಸುವರ್ಣ ಹಾಗೂ ಪ್ರೀತಂ ಎಂಬವವರ ಮೃತದೇಹ ಪತ್ತೆಯಾಗಿದೆ. ಕಸಬ ಬೆಂಗ್ರೆ ನಿವಾಸಿಗಳಾದ ಚಿಂತನ್, ಮೊಹಮ್ಮದ್ ಹಸೈನಾರ್, ಮೊಹಮ್ಮದ್ ಅನ್ಸಾರ್, ಝಿಯಾವುಲ್ಲ ಅವರಿಗಾಗಿ ಹುಡುಕಾಟ ಮುಂದುವರೆದಿದೆ.

ವಿಡಿಯೋ: ಬೋಟ್ ನಲ್ಲಿ 30 ಮಂದಿ ರಕ್ಷಿಸಿದ ಎನ್ ಡಿಆರ್ಎಫ್! ವಿಡಿಯೋ: ಬೋಟ್ ನಲ್ಲಿ 30 ಮಂದಿ ರಕ್ಷಿಸಿದ ಎನ್ ಡಿಆರ್ಎಫ್!

Boat Capsized In Arabian Sea Four Fishermen Missing

ಮಾಜಿ ಸಚಿವ, ಶಾಸಕ ಯು. ಟಿ. ಖಾದರ್ ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯದ ಬಗ್ಗೆ ಮಾಹಿತಿಯನ್ನು ಪಡೆದರು. ಆರು ಮೀನುಗಾರರ ಕುಟುಂಬದವರಿಗೆ ತಲಾ 10 ಲಕ್ಷ ರೂಪಾಯಿಯ ಪರಿಹಾರ ನೀಡಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ವಿಡಿಯೋ: ಕೊರೊನಾವೈರಸ್ ಸೋಂಕಿತನನ್ನು ಕರೆದೊಯ್ಯಲು ಬೋಟ್! ವಿಡಿಯೋ: ಕೊರೊನಾವೈರಸ್ ಸೋಂಕಿತನನ್ನು ಕರೆದೊಯ್ಯಲು ಬೋಟ್!

ಬೋಟ್ ಮುಳುಗಡೆ ಬಳಿಕ ನಾಪತ್ತೆಯಾದ ನಾಲ್ವರಿಗಾಗಿ ತೀವ್ರ ಶೋಧ ಕಾರ್ಯವನ್ನು ನಡೆಸಲಾಗುತ್ತಿದೆ. ಬೋಟ್ ಕಲ್ಲಿಗೆ ಡಿಕ್ಕಿ ಹೊಡೆದ ರಭಸಕ್ಕೆ ಜಖಂಗೊಂಡಿದ್ದು, ಭಾಗಶಃ ಮುಳುಗಡೆಯಾಗಿದೆ.

English summary
Two fishermen drowned after a fishing boat capsized in the Arabian Sea, Mangaluru. Four fishermen still missing, 16 rescued.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X