ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು; ಕೋಸ್ಟ್ ಗಾರ್ಡ್ ಕಾರ್ಯಾಚರಣೆ, 9 ಮಂದಿ ಪತ್ತೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮೇ 16; ತೌಕ್ತೆ ಚಂಡಮಾರುತದ ಅಬ್ಬರದ ನಡುವೆಯೂ ಭಾರತೀಯ ಕೋಸ್ಟ್ ಗಾರ್ಡ್ ಸಾಹಸಮಯ ಕಾರ್ಯಾಚರಣೆ ಮಾಡಿದೆ. ಅರಬ್ಬೀ ಸಮುದ್ರದಲ್ಲಿ ಚಂಡಮಾರುತಕ್ಕೆ ಸಿಕ್ಕಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಟಗ್ ನಲ್ಲಿದ್ದ 9 ಮಂದಿಯನ್ನು ಪತ್ತೆ ಹಚ್ಚಿದೆ.

ಎಂ. ಆರ್. ಪಿ. ಎಲ್‌ಗೆ ತೈಲ ಹೊತ್ತು ತರುವ ಹಡಗುಗಳಿಗೆ ಆಳ ಸಮುದ್ರದಲ್ಲಿ ಪೈಪ್ ಜೋಡಿಸುವ ಕೆಲಸದಲ್ಲಿ ನಿರತವಾಗಿದ್ದ ಎರಡು ಬೋಟ್ ಗಳು ಚಂಡಮಾರುತದ ಭೀಕರೆತೆಗೆ ತುತ್ತಾಗಿದ್ದು, ಒಟ್ಟು 17 ಜನರು ಸಂಕಷ್ಟಕ್ಕೆ ಸಿಲುಕಿದ್ದರು.

ತೌಕ್ತೆ ಚಂಡಮಾರುತ: ಅರಬ್ಬೀ ಸಮುದ್ರದಲ್ಲಿ ಹೆಚ್ಚಾದ ಅಲೆಗಳ ನರ್ತನತೌಕ್ತೆ ಚಂಡಮಾರುತ: ಅರಬ್ಬೀ ಸಮುದ್ರದಲ್ಲಿ ಹೆಚ್ಚಾದ ಅಲೆಗಳ ನರ್ತನ

ಒಂದು ಬೋಟ್ ನಲ್ಲಿ 8 ಮಂದಿ ಮತ್ತು ಇನ್ನೊಂದು ಬೋಟ್ ನಲ್ಲಿ 9 ಮಂದಿ ಕಾರ್ಮಿಕರಿದ್ದರು. 8 ಮಂದಿ ಇದ್ದ ಅಲಾಯನ್ಸ್ ಎಂಬ ಹೆಸರಿನ ವಿಗ್ ಬೋಟ್ ಭಾರೀ ಗಾಳಿಗೆ ಮಗುಚಿ ಬಿದ್ದತ್ತು. ಇಬ್ಬರು ಸಮುದ್ರದಲ್ಲಿ ಈಜಿಕೊಂಡೇ ದಡ ಸೇರಿದ್ದಾರೆ. ಓರ್ವನ ಮೃತದೇಹ ಪತ್ತೆಯಾಗಿದ್ದು, 5 ಮಂದಿ ಸಮುದ್ರದಲ್ಲಿ ನಾಪತ್ತೆಯಾಗಿದ್ದಾರೆ.

'ತೌಕ್ತೆ' ಅವಾಂತರಕ್ಕೆ ನಡುಗಿದ ಕರಾವಳಿ: ಆತಂಕದಲ್ಲಿ ಉತ್ತರ ಕನ್ನಡ ತೀರದ ವಾಸಿಗಳು'ತೌಕ್ತೆ' ಅವಾಂತರಕ್ಕೆ ನಡುಗಿದ ಕರಾವಳಿ: ಆತಂಕದಲ್ಲಿ ಉತ್ತರ ಕನ್ನಡ ತೀರದ ವಾಸಿಗಳು

Boat Capsized

ತೈಲ ಶುದ್ಧೀಕರಣ ಘಟಕದ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬೋಟ್ ಗಳು ಇದಾಗಿದ್ದು, 9 ಮಂದಿ ಇದ್ದ ಮತ್ತೊಂದು ಬೋಟ್ ಸಮುದ್ರದಲ್ಲಿ ಸುರಕ್ಷಿತ ವಾಗಿ ಪತ್ತೆಯಾಗಿದೆ. ಕಾರ್ಮಿಕರೂ ಸುರಕ್ಷಿತ ವಾಗಿದ್ದು, ಕೋಸ್ಟ್ ಗಾರ್ಡ್ ಕಾರ್ಮಿಕರನ್ನು ಪತ್ತೆ ಹಚ್ಚಿದೆ.

ತೌಕ್ತೆ ಚಂಡಮಾರುತ ಅಬ್ಬರ: ಭಾರೀ ಮಳೆಗೆ ದ.ಕ ಜಿಲ್ಲೆ ತತ್ತರತೌಕ್ತೆ ಚಂಡಮಾರುತ ಅಬ್ಬರ: ಭಾರೀ ಮಳೆಗೆ ದ.ಕ ಜಿಲ್ಲೆ ತತ್ತರ

ಶನಿವಾರ ರಾತ್ರಿ ಯೇ ಕೋಸ್ಟ್ ಗಾರ್ಡ್ ಪತ್ತೆ ಹಚ್ಚಿದರೂ ಭಾರೀ ಗಾಳಿ, ಮಳೆಯ ಕಾರಣದಿಂದ ರಕ್ಷಣಾ ಕಾರ್ಯಾಚರಣೆ ಗೆ ಅಡ್ಡಿಯುಂಟಾಗಿತ್ತು. ಭಾನುವಾರ ಬೆಳಗ್ಗಿನ ವೇಳೆಯಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭಿಸುವ ಬಗ್ಗೆ ಕೋಸ್ಟ್ ಗಾರ್ಡ್ ಸಿದ್ಧತೆ ಮಾಡಿಕೊಂಡಿದೆ..

ಬೋಟ್ ದುರಂತದಲ್ಲಿ ಮೊಮಿರುಲ್ಲಾ ಮುಲ್ಲಾ (34) ಮತ್ತು ಕರೀಮುಲ್ಲಾ ಶೇಖ್ (24)ಎಂಬ ಕಾರ್ಮಿಕರು ಸಮುದ್ರದ ಅಬ್ಬರದ ನಡುವೇ ಈಜಿಕೊಂಡೇ ದಡಸೇರಿದ್ದು, ಹೇಮಚಂದ್ರ ಎಂಬುವವರ ಮೃತದೇಹ ಉಡುಪಿಯ ಪಡುಬಿದ್ರೆಯಲ್ಲಿ ಪತ್ತೆಯಾಗಿದೆ.

English summary
17 people missing in Mangaluru after boat capsized in the sea on Saturday. Coast guard found 9 people and one person died.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X