ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಧೂಳಿಪಟ

|
Google Oneindia Kannada News

ಮಂಗಳೂರು ಮೇ 23: ಕರಾವಳಿಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ವಿರುದ್ದ 2.73 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೂರನೇ ಭಾರಿಗೆ ಸಂಸದರಾಗಿ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಜಯಭೇರಿ ಬಾರಿಸಿದ್ದಾರೆ.

ಮೊದಲ ಸುತ್ತಿನಲ್ಲೇ ಭಾರೀ ಮುನ್ನಡೆ ಸಾಧಿಸಿಕೊಂಡು ಬಂದಿದ್ದ ನಳಿನ್, ಬಳಿಕ ಅಂತರ ಹೆಚ್ಚಿಸಿಕೊಳ್ಳುವ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಚುನಾವಣೆಯಲ್ಲಿ ನಳಿನ್ ಕುಮಾರ್ ಕಟೀಲ್ 7,72,754 ಮತ ಪಡೆದರೆ. ಕಾಂಗ್ರೆಸ್‌ -ಜೆಡಿಎಸ್ ನ ಮೈತ್ರಿ ಅಭ್ಯರ್ಥಿ ಮಿಥುನ್ ರೈ 4,99,387 ಮತ ಪಡೆದರು. ಈ ಮೂಲಕ 2.73 ಲಕ್ಷ ಮತಗಳ ಅಂತರದಿಂದ ಸೋತು ಕಾಂಗ್ರೆಸ್ ಭಾರೀ ಮುಖಭಂಗ ಅನುಭವಿಸಿದೆ.

ಮುನ್ನಡೆಯಲ್ಲಿ ಬಿಜೆಪಿ; ಫಲಿತಾಂಶಕ್ಕೆ ಮುನ್ನವೇ ವಿಜಯೋತ್ಸವ ಮುನ್ನಡೆಯಲ್ಲಿ ಬಿಜೆಪಿ; ಫಲಿತಾಂಶಕ್ಕೆ ಮುನ್ನವೇ ವಿಜಯೋತ್ಸವ

ಇವಿಷ್ಟೇ ಅಲ್ಲದೆ, ಈ ಕ್ಷೇತ್ರದಲ್ಲಿ ನಳಿನ್ ಕುಮಾರ್ ಮೂರನೇ ಬಾರಿಗೆ ಅತ್ಯಧಿಕ ಮತಗಳಿಂದ ಚುನಾಯಿತರಾಗುವ ಮೂಲಕ ಪ್ರತಿಷ್ಠಿತ ಕರಾವಳಿ ಕ್ಷೇತ್ರದಿಂದ ಬಿಜೆಪಿ ನಿರಂತರ ಎಂಟನೇ ಬಾರಿಗೆ ಗೆಲುವು ಸಾಧಿಸಿ ತನ್ನ ಪ್ರಾಬಲ್ಯ ಮುಂದುವರಿಸಿದೆ. 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ಅಭ್ಯರ್ಥಿ ಜನಾರ್ಧನ ಪೂಜಾರಿ (ಗಳಿಸಿದ ಮತ 499,030) ಅವರನ್ನು ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ (ಗಳಿಸಿದ ಮತ 642,739) ಅವರು 143,709 ಮತಗಳ ಅಂತರದಲ್ಲಿ ಸೋಲಿಸಿದ್ದರು.

Bjp wins in Dakshina Kannada Lok Sabha constituency

ನಗರದ ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯ ಮುಂದೆ ಪಟಾಕಿ ಸಿಡಿಸುವ ಮೂಲಕ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ. ಇನ್ನೊಂದೆಡೆ ದಕ್ಷಿಣ ಕನ್ನಡದ ಕಾಂಗ್ರೆಸ್ ನಾಯಕರು ಮೌನಕ್ಕೆ ಶರಣಾಗಿದ್ದಾರೆ.

ಭಾರೀ ಅಂತರದ ಗೆಲುವು, ದಾಖಲೆ ಬರೆದ ಅನಂತ್ ಕುಮಾರ್ ಹೆಗಡೆ ಭಾರೀ ಅಂತರದ ಗೆಲುವು, ದಾಖಲೆ ಬರೆದ ಅನಂತ್ ಕುಮಾರ್ ಹೆಗಡೆ

ಗೆಲುವಿನ ಸಂಭ್ರಮದಲ್ಲಿರುವ ನಳಿನ್ ಕುಮಾರ್ ಕಟೀಲ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ದೇಶದ ಜನರು ನರೇಂದ್ರ ಮೋದಿಯವರ ಆಡಳಿತ, ಜನಪರ ಕಾರ್ಯವನ್ನು ಮೆಚ್ಚಿದ್ದಾರೆ. ಮೋದಿ ಜನಪ್ರಿಯತೆಯೇ ದೇಶದಲ್ಲಿ ಸುನಾಮಿಯಾಗಿ ಪರಿವರ್ತನೆಯಾಗಿದೆ. ದೇಶದಾದ್ಯಂತ ಕೇಸರಿ ರಾರಾಜಿಸಲು ಸಾಧ್ಯವಾಗಿದೆ ಎಂದರು.

English summary
Dakshina Kannada BJP unit workers celebrating huge victory of Nalin Kumar Kateel by bursting crackers on streets. Nalin Kumar kateel won by 2,73 lck votes against Congress candidate Mithun rai
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X