ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಯಮಾಲ ರಾಹುಲ್ ಗಾಂಧಿಗೆ ಮೊದಲು ಬಜೆ ಕಳುಹಿಸಿಕೊಡಲಿ:ಸಿಟಿ ರವಿ

|
Google Oneindia Kannada News

ಮಂಗಳೂರು, ಏಪ್ರಿಲ್ 22: ಸಚಿವೆ ಜಯಮಾಲ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು, ಜಯಮಾಲ ನನ್ನ ನಾಲಗೆಯನ್ನು ಚಪ್ಪಲಿ‌ಗೆ ಹೋಲಿಸಿದ್ದಾರೆ. ಪ್ರತಿದಿನ‌ ಹೊಲಸು ಮಾತನಾಡುವ ಕಾಂಗ್ರೆಸ್ ನಾಯಕರ ನಾಲಗೆ ಏನು? ಎಂದು ಕಿಡಿಕಾರಿದರು.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಯಮಾಲ ನನ್ನ ನಾಲಗೆಗೆ ಬಜೆ ಸರಿಯಾಗಿ ತಿಕ್ಕಿಲ್ಲ ಅಂತ ಹೇಳಿದ್ದಾರೆ. ನಾನು ಸ್ಪಷ್ಟ ಕನ್ನಡ ಮಾತನಾಡುತ್ತೇನೆ. ವಿಶ್ವೇಶ್ವರಯ್ಯ, ಕನಕದಾಸ ಹೆಸರು ಸರಿ ಹೇಳದ ರಾಹುಲ್ ಗಾಂಧಿ ನಾಲಗೆಗೆ ಬಜೆ ತಿಕ್ಕಿಸಿ. ರಾಹುಲ್ ಗಾಂಧಿ ಅವರಿಗೆ ಮೊದಲು ಬಜೆ ಕಳುಹಿಸಿಕೊಡಿ ಎಂದು ವ್ಯಂಗ್ಯವಾಡಿದರು.

ಜೆಡಿಎಸ್ ಗೆ ಸೇರುವವರು ಮೂರೂ ಬಿಟ್ಟವರು ತಾನೆ:ಶಾಸಕ ಸಿಟಿ ರವಿ ಪ್ರಶ್ನೆಜೆಡಿಎಸ್ ಗೆ ಸೇರುವವರು ಮೂರೂ ಬಿಟ್ಟವರು ತಾನೆ:ಶಾಸಕ ಸಿಟಿ ರವಿ ಪ್ರಶ್ನೆ

ಸಚಿವೆ ಜಯಮಾಲ ಕಳುಹಿಸಿದ ಪುಸ್ತಕಗಳನ್ನು ಸ್ವೀಕರಿಸುತ್ತೇನೆ ಎಂದ ರವಿ ಅವರು, ಕಾಂಗ್ರೆಸ್ ನಾಯಕರಿಗೆ ಜಯಮಾಲ ಮೊದಲು ಸಭ್ಯತೆಯ ಕ್ಲಾಸ್ ತೆಗೆದುಕೊಳ್ಳಲಿ. ಸಿಎಂ ಇಬ್ರಾಹಿಂ, ಸಿದ್ಧರಾಮಯ್ಯರನ್ನು ಕೂರಿಸಿ ಪಾಠ ಮಾಡಲಿ. ಬಣ್ಣದ ಬದುಕಿನವರದ್ದು ಒಳಗೊಂದು-ಹೊರಗೊಂದು ವೇಷ. ಜಯಮಾಲ‌ ಕ್ಲಾಸ್ ತೆಗೆದುಕೊಳ್ಳೋದಾದ್ರೆ ನಾನು ಸಂಪನ್ಮೂಲ ವ್ಯಕ್ತಿಯನ್ನು ಕಳುಹಿಸಿಕೊಡುತ್ತೇನೆ ಎಂದರು.

BJP state general secretary CT Ravi slams Congress

ಶ್ರೀಲಂಕಾದಲ್ಲಿ ಉಗ್ರರ ಅಟ್ಟಹಾಸವನ್ನು ಬಿಜೆಪಿ ಖಂಡಿಸುತ್ತದೆ. ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತು ಎಸೆಯಬೇಕಾಗಿದೆ. ದೇಶದ ಸುರಕ್ಷತೆ ಕಾಂಗ್ರೆಸ್ ಗಿಂತ ಬಿಜೆಪಿ ಸರ್ಕಾರದ ನೇತೃತ್ವದಲ್ಲಿ ಉತ್ತಮವಾಗಿದೆ. ಪ್ರಧಾನಿ ಮೋದಿ ಕೈಯ್ಯಲ್ಲಿ ದೇಶ ಸುಭದ್ರವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ್ರೋಹಿಗಳಿಗೆ ನಿಯಂತ್ರಣವಿಲ್ಲದಂತಾಗುತ್ತದೆ. ಸೈನ್ಯದ ಪರಮಾಧಿಕಾರವನ್ನು ಹಿಂಪಡೆಯುತ್ತೇವೆ ಎನ್ನುವ ಪ್ರಣಾಳಿಕೆಯನ್ನು ಕಾಂಗ್ರೆಸ್ ಹಿಂಪಡೆಯಬೇಕು. ದೇಶದ ಜನರ ಎದುರು ಕ್ಷಮೆ ಕೇಳಬೇಕು ಎಂದು ರವಿ ಒತ್ತಾಯಿಸಿದರು.

 ಕಾಂಗ್ರೆಸ್ ಗೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಬಡವರ ನೆನಪಾಗುತ್ತದೆ' ಕಾಂಗ್ರೆಸ್ ಗೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಬಡವರ ನೆನಪಾಗುತ್ತದೆ'

ಭಯೋತ್ಪಾದಕ ದಾಳಿಗೆ ಬೀದಿಗಿಳಿಯದ ಮೈತ್ರಿ ಸರ್ಕಾರ ಐಟಿ ದಾಳಿಗಾಗಿ ಬೀದಿಗಿಳಿದಿದ್ದಾರೆ. ಇದರಿಂದಲೇ ತಿಳಿಯುತ್ತೆ ಇವರ ನಿಯತ್ತು. ಭಯೋತ್ಪಾದನೆಯ ಬೇರನ್ನು ಕಿತ್ತೆಸೆಯಲು ಎಲ್ಲಾ ದೇಶಗಳು ಒಗ್ಗಟ್ಟಾಗಬೇಕು ಎಂದು ಸಿಟಿ ರವಿ ಕರೆ ನೀಡಿದರು.

English summary
In Mangaluru BJP leader CT Ravi slammed Congress over there election manifesto.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X