• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್ಐಆರ್ ದಾಖಲು

By ಐಸಾಕ್ ರಿಚರ್ಡ್, ಮಂಗಳೂರು
|

ಮಂಗಳೂರು, ಮೇ.9: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಹಿಟ್ ಅಂಡ್ ರನ್ ಕೇಸಿನಲ್ಲಿ ಸದ್ಯಕ್ಕೆ ಜಾಮೀನು ಸಿಕ್ಕು ಮನೆ ತಲುಪಿದ್ದಾರೆ. ಅದರೆ, ಕಳೆದ ಎರಡು ದಿನಗಳಿಂದ ಕರ್ನಾಟಕದ ಸಂಸದ ಹಾಗೂ ಪತ್ರಕರ್ತರೊಬ್ಬರ ನಡುವೆ ನಡೆದ ಮಾತುಕತೆ ಚರ್ಚೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಪತ್ರಕರ್ತ ಶ್ರೇಯಸ್ ಅವರು ನೀಡಿದ ದೂರಿನ ಮೇರೆಗೆ ಸಂಸದ ಪ್ರತಾಪ್ ಸಿಂಹ ಅವರ ಮೇಲೆ ಕದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಐಪಿಸಿ ಸೆಕ್ಷನ್ 504 ಹಾಗೂ 507 ಅನ್ವಯ ಎಫ್ ಐಆರ್ ಹಾಕಿದ್ದಾರೆ. [ಸಲ್ಮಾನ್ ಖಾನ್ ಜೈಲು ತಪ್ಪಿಸಿಕೊಂಡಿದ್ದೇ 'ಕಮಾಲ್']

ಸಲ್ಮಾನ್ ಖಾನ್ ಅವರ ಬಗ್ಗೆ ಇದ್ದ ಫೇಸ್ ಬುಕ್ ಪೋಸ್ಟ್ ವೊಂದನ್ನು ಪ್ರತಾಪ್ ಸಿಂಹ ಅವರು ತಮ್ಮ ಐಡಿಯಿಂದ ಹಂಚಿದ್ದರು. ಅದರಲ್ಲಿ ಸಲ್ಮಾನ್ ಅವರ ಸಾಮಾಜಿಕ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಇದರ ಆಧಾರ ಮೇಲೆ ವೆಬ್ ಸೈಟ್ ಯೊಂದರಲ್ಲಿ ಈ ಬಗ್ಗೆ ಶ್ರೇಯಸ್ ಎಚ್.ಎಸ್ ಅವರು ಲೇಖನ ಬರೆದು ಟ್ವೀಟ್ ಮಾಡಿದ್ದರು.

ಆದರೆ, ಈ ಟ್ವೀಟ್ ಗೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ ಅವರು ನಂತರ ಶ್ರೇಯಸ್ ಗೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಸದ್ಯ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಕೊಡಗಿನಲ್ಲಿ ಕುಪ್ಪಂಡ ಹಾಕಿ ಕಪ್ ಪಂದ್ಯಾವಳಿ ವೀಕ್ಷಿಸುತ್ತಿದ್ದಾರೆ. [ಹಿಟ್ ಅಂಡ್ ರನ್ ಕೇಸ್ ಟೈಮ್ ಲೈನ್]

ಶ್ರೇಯಸ್ ಎಚ್.ಎಸ್ ನೀಡಿರುವ ದೂರಿನ ಪ್ರತಿ ಇಲ್ಲಿದೆ

ಶ್ರೇಯಸ್ ಎಚ್.ಎಸ್

s/o ಶ್ರೀನಿವಾಸ್

ಪ್ರಾಯ: 26

ಪತ್ರಕರ್ತ ನ್ಯೂಸ್ ಕರ್ನಾಟಕ ಅಂತರ್ಜಾಲ ಮಾಧ್ಯಮ, ಮಂಗಳೂರು.

ವಾಸ: ಶ್ರೀ ರಕ್ಷ ನಮನ ಟವರ್ಸ್ ಹತ್ತಿರ, ಬೊಳುವಾರ್ ವೆಸ್ಟ್,ಪುತ್ತೂರು , ದಕ್ಷಿಣ ಕನ್ನಡ.

ಗೆ ,

ಠಾಣಾಧಿಕಾರಿ

ಕದ್ರಿ ಪೊಲೀಸ್ ಠಾಣೆ

ಮಂಗಳೂರು

ಮಾನ್ಯರೇ,

ವಿಷಯ: ಅವಾಚ್ಯ ಶಬ್ಧಗಳಿಂದ ಬೈದು ಜೀವ ಬೆದರಿಕೆ ಒಡ್ಡಿರುವ ಬಗ್ಗೆ.

ನಾನು, ಮೇಲ್ಗಾನಿಸಿದ ವಿಲಾಸದಲ್ಲಿ ವಾಸ ಮಾಡಿಕೊಂಡು ಬರುತ್ತಿದ್ದೇನೆ. ನಾನು ಸಮೂಹ ಮಾಧ್ಯಮ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಧರನಾಗಿದ್ದು, ಕಳೆದ ಒಂದು ವರ್ಷದಿಂದ ಪತ್ರಕರ್ತನಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. ಒಂದು ವರ್ಷ ಡೈಜಿ ವರ್ಡ್ ಎಂಬ ಸಂಸ್ಥೆಯಲ್ಲಿ ವೆಬ್ ಜರ್ನಲಿಸ್ಟ್ ಆಗಿ ಕೆಲಸ ನಿರ್ವಹಿಸಿ ಮೂರು ತಿಂಗಳ ಹಿಂದೆ ನ್ಯೂಸ್ ಕರ್ನಾಟಕ ಅಂತರ್ಜಾಲ ಮಾಧ್ಯಮಕ್ಕೆ ವರದಿಗಾರನಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. [ಪ್ರತಾಪ್ ಸಿಂಹ ವ್ಯಕ್ತಿ ಪರಿಚಯ]

ದಿನಾಂಕ 7-5-2015 ರಂದು ಸಂಜೆ 3.05 ಸಮಯಕ್ಕೆ, ಮೈಸೂರು -ಕೊಡಗು ಕ್ಷೇತ್ರದ ಸಂಸದನಾಗಿರುವ ಪ್ರತಾಪ್ ಸಿಂಹ ಇವರು ತಮ್ಮ ಫೇಸ್ ಬುಕ್ ಎಕೌಂಟ್ ನಲ್ಲಿ ಮುಂಬಯಿ ಕೋರ್ಟ್ ನಲ್ಲಿ ಶಿಕ್ಷೆಗೆ ಒಳಗಾಗಿದ್ದ ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಬಗ್ಗೆ ಬರೆಯುತ್ತಾ, ಅವರಿಗೆ ಅನುಕಂಪ ತೋರಿ ಅಭಿಪ್ರಾಯವನ್ನು ವ್ಯಕ್ತಪಡಿಸಿರುತ್ತಾರೆ.

ಈ ಹಿನ್ನೆಲೆಯಲ್ಲಿ ನಾನು ಸದ್ರಿ ಸಂಸದ ಪ್ರತಾಪ್ ಸಿಂಹ ಇವರನ್ನು ಅಂತರ್ಜಾಲ ಮಾಧ್ಯಮದಲ್ಲಿ ವರದಿಯನ್ನು ಮಾಡುವರೆ ಮತ್ತು ಅವರ ಅಭಿಪ್ರಾಯವನ್ನು ಕೇಳುವರೆ ಈ ದಿನ ದಿನಾಂಕ 8-5.2015 ರಂದು ಬೆಳಿಗ್ಗೆ 11.58 ಕ್ಕೆ ಅವರ ಮೊಬೈಲ್ ಸಂಖ್ಯೆ 94*******9 ಗೆ ನನ್ನ ಮೊಬೈಲ್ ಸಂಖ್ಯೆ 90*******4 ನಿಂದ ಸಂಪರ್ಕಿಸಲು ಪ್ರಯತ್ನಿಸಿದೆ. [ಮೈಸೂರು : ಹಳೆ ಹುಲಿಯನ್ನು ಬೇಟೆಯಾಡಿದ ಸಿಂಹ!]

ಸದ್ರಿ ಸಮಯ ಅವರು ಕರೆಯನ್ನು ಸ್ವೀಕರಿಸಲಿಲ್ಲ. ಬಳಿಕ ಮಧ್ಯಾಹ್ಮ ಸುಮಾರು 12.20 ಕ್ಕೆ ಸದ್ರಿ ಸಂಸದ ಪ್ರತಾಪ್ ಸಿಂಹ ಇವರು ದೂರವಾಣಿ ಸಂಖ್ಯೆ + 91 *********8 ನಿಂದ ನನ್ನ ಮೊಬೈಲ್ ಸಂಖ್ಯೆ 90*******4 ಗೆ ಕರೆ ಮಾಡಿ ಮಾತನಾಡಿದರು.

ಸದ್ರಿ ಸಮಯ ಸಂಸದ ಪ್ರತಾಪ್ ಸಿಂಹ ಇವರು 15 ನಿಮಿಷ ನನ್ನಲ್ಲಿ ಮಾತನಾಡಿ ತಾನು ಫೇಸ್ ಬುಕ್ ನಲ್ಲಿ ನೀಡಿರುವ ಹೇಳಿಕೆಗೆ ಸಮರ್ಥನೆಯನ್ನು ಕೊಟ್ಟರು.

ಸದ್ರಿ ಪ್ರತಾಪ್ ಸಿಂಹ ಇವರು ಸಾರ್ವಜನಿಕ ವ್ಯಕ್ತಿಯಾಗಿರುವುದರಿಂದ ಅವರ ಹೇಳಿಕೆಯ ಆಧಾರದ ಮೇಲೆ ಉಳಿದ ಗಣ್ಯ ವ್ಯಕ್ತಿಗಳ ಅಭಿಪ್ರಾಯಗಳನ್ನು ಕೇಳಿ ಒಂದು ವರದಿಯನ್ನು ತಯಾರಿಸಿ ಈ ದಿನ ಮಧ್ಯಾಹ್ಮ 2.40 ರ ಹೊತ್ತಿಗೆ "Don't hound him just coz he is Salman Khan says M P Pratap Simha in FB post" ಎಂಬ ಶಿರೋನಾಮೆ ಅಡಿಯಲ್ಲಿ ನಮ್ಮ ವೆಬ್ ಸೈಟ್ ನಲ್ಲಿ ವಿಶೇಷ ವರದಿ ಪ್ರಕಟಿಸಿದ್ದೆ. [ಬಿಜೆಪಿಗೆ ಪ್ರತಾಪ್ ಸಿಂಹ ಅಧಿಕೃತ ಸೇರ್ಪಡೆ]

ಬಳಿಕ ಅದರ ಲಿಂಕ್ ನ್ನು ಪ್ರತಾಪ್ ಸಿಂಹ ಅವರ ಟ್ವಿಟ್ಟರ್ ಅಕೌಂಟ್ ಗೆ ಟ್ವೀಟ್ ಮಾಡಿದೆ. ಸದ್ರಿ ನನ್ನ ವರದಿಯನ್ನು ಓದಿದ ಪ್ರತಾಪ್ ಸಿಂಹ ಇವರು ನನ್ನ ಟ್ವಟ್ಟರ್ ಅಕೌಂಟ್ Shreyas H S @microthinking ಇದಕ್ಕೆ ಸುಮಾರು 3.20 ಗಂಟೆಗೆ ನನಗೆ ಟ್ವೀಟ್ ಮಾಡಿ Idiot, don't spread falsehood here ಎಂದು ಮಾನ ಹಾನಿಕರವಾಗಿ ಬರೆದಿರುತ್ತಾರೆ.

ಬಳಿಕ ಅವರ ಮೊಬೈಲ್ ಸಂಖ್ಯೆ 94*******9 ನಿಂದ ಸುಮಾರು 3.22 ಸಮಯಕ್ಕೆ ನನ್ನ ಮೊಬೈಲ್ ಗೆ ಪೋನ್ ಮಾಡಿ **ಮಗನೆ ವೆಬ್ ಸೈಟ್ ನಲ್ಲಿ ಭಾರೀ ಬರೆಯುತ್ತೀಯ ನಿನ್ನ ಬರೆಯುವ ಕೈಯನ್ನು ಕಡಿಯುತ್ತೇನೆ, ಲೋ** ನಿನ್ನನ್ನು ಬೂಟು ಕಾಲಿನಿಂದ ಒದೆಯುತ್ತೇನೆ.

ಅದಕ್ಕೆ ಪ್ರತಿಕ್ರಿಯಿಸಿದ ನಾನು, ನೀವೊಬ್ಬ ಜನಪ್ರತಿನಿಧಿಯಾಗಿ ಸಭ್ಯ ಭಾಷೆಯನ್ನು ಬಳಬೇಕಾಗಿತ್ತು, ಇದು ನಿಮಗೆ ಶೋಭೆ ತರುವ ಭಾಷೆ ಅಲ್ಲ ಎಂಬ ಹೇಳಿದಾಗ, ಪ್ರತಾಪ್ ಸಿಂಹರು ಅದನೆಲ್ಲಾ ನನಗೆ ನೀನು ಕಲಿಸಲು ಬರಬೇಡ ಎಂದು ಹೇಳಿದರು. [ಸಲ್ಮಾನ್ ಮುಸ್ಲಿಂ ಆಗಿದ್ದಕ್ಕೆ ಶಿಕ್ಷೆ ಅಂದವನಿಗೆ ಟ್ವಿಟ್ಟರಲ್ಲಿ ಮಂಗಳಾರತಿ]

ಅದಕ್ಕೆ ನಾನು ಅವರಿಗೆ, ನನ್ನ ವರದಿಯ ಬಗ್ಗೆ ಆಕ್ಷೇಪವಿದ್ದರೆ ನೀವು ಕೋರ್ಟ್ ಗೆ ಹೋಗಬಹುದು ಎಂದಾಗ , ಪ್ರತಾಪ್ ಸಿಂಹರು ನೀನು ಈಗ ನನ್ನ ಎದುರುಗಡೆ ಇದ್ದರೆ ನಿನ್ನ ಕೈಕಾಲು ಕಡಿದು ಹಾಕುತ್ತಿದ್ದೆ ನೀನು ಎಲ್ಲಿದ್ದಿ ಹೇಳು, ಅಲ್ಲಿಗೆ ನನ್ನ ಕಾರ್ಯಕರ್ತರನ್ನು ಕಲುಹಿಸಿ ನಿನ್ನನ್ನು ಮುಗಿಸಿ ಬಿಡುತ್ತೇನೆ ಎಂದು ಹೇಳಿದರು. ಆಗ ನಾನು ಹೆದರಿ ಪೋನ್ ಕಟ್ ಮಾಡಿದೆ.

ಸದ್ರಿ ಪ್ರತಾಪ್ ಸಿಂಹರು ಪ್ರಸ್ತುತ ಸಂಸದರಾಗಿದ್ದು, ಪ್ರಭಾವಿ ರಾಜಕೀಯ ವ್ಯಕ್ತಿಯಾಗಿರುತ್ತಾರೆ. ಸದ್ರಿ ಅವರ ಬೆದರಿಕೆಯ ಮಾತುಗಳಿಂದ ನನಗೆ ಜೀವಭಯ ಉಂಟಾಗಿರುತ್ತದೆ. ಆದೂದರಿಂದ ನನಗೆ ಅವಾಚ್ಯ ಶಬ್ಧಗಳಿಂದ ಬೈದು ಪೋನ್ ಮುಖಾಂತರ ಕೊಲೆ ಬೆದರಿಕೆ ಒಡ್ಡಿದ ಪ್ರತಾಪ್ ಸಿಂಹರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ನನ್ನ ವಿನಮ್ರ ಪ್ರಾರ್ಥನೆ.

English summary
Kadri, Mangaluru police have filed FIR against BJP Mysuru-Kodagu MP Pratap Simha for allegedly threatening HS, Shreyas a reporter with online website from Karnataka. Topic of complaint was Bollywood Actor Salman Khan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X